Updated on:Feb 20, 2022 | 9:32 AM
ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಎಳನೀರು ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಅಲ್ಲದೆ ದೇಹದ ತೂಕ ಕಡಿಮೆ ಮಾಡುತ್ತದೆ.
ಕೆಲ ಪ್ರಯೋಜನಗಳ ನಡುವೆ ಎಳನೀರಿನಲ್ಲಿ ಕೆಲ ಅಪಾಯಗಳೂ ಇವೆ. ಎಳನೀರಿನಲ್ಲಿ ದೇಹಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳಿವೆ. ಜೊತೆಗೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಎಳನೀರು ನೀರು ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಎಳನೀರು ಎಲೆಕ್ಟ್ರೋಲೈಟ್ಗಳನ್ನು ಹೊಂದಿರುತ್ತದೆ. ಇವು ದೇಹದಲ್ಲಿ ನೀರಿನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುತ್ತವೆ. ಅಲ್ಲದೆ, ಸರಿಯಾದ ಸಮಯಕ್ಕಿಂತ ಬೇರೆ ಸಮಯದಲ್ಲಿ ಎಳನೀರು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ನೆಗಡಿ ಇರುವವರು ರಾತ್ರಿ ವೇಳೆ ಎಳನೀರನ್ನು ಕುಡಿಯಬಾರದು. ಅಲ್ಲದೆ ಹೊಟ್ಟೆಯ ಸಮಸ್ಯೆ ಇರುವವರು ಹೆಚ್ಚು ಎಳನೀರು ಕುಡಿಯಬಾರದು.
ಎಳನೀರು ಅತಿಸಾರಕ್ಕೆ ಕಾರಣವಾಗುತ್ತದೆ. ಎಳನೀರು ದೇಹವನ್ನು ತಂಪಾಗಿಸುತ್ತದೆ. ಹೀಗಾಗಿ ಶೀತದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ ಔಷಧಿ ಸೇವಿಸುವವರು ಎಳನೀರು ಹೆಚ್ಚು ಕುಡಿಯಬಾರದು.
Published On - 9:31 am, Sun, 20 February 22