AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Tips: ಸ್ನಾನದ ನಂತರ ನೀವು ಮಾಡುವ ಈ ತಪ್ಪುಗಳು ಗ್ರಹ ದೋಷಕ್ಕೆ ಕಾರಣವಾಗಬಹುದು!

ಸ್ನಾನದ ನಂತರ ತಕ್ಷಣ ನಿದ್ದೆ, ಕೊಳಕು ಸ್ನಾನಗೃಹ, ಉದುರಿದ ಕೂದಲು, ಸ್ನಾನ ಮಾಡುವಾ ಚಪ್ಪಲಿ ಧರಿಸುವುದು ಮತ್ತು ಒದ್ದೆ ಕೂದಲಿಗೆ ಸಿಂಧೂರ ಹಚ್ಚುವುದು ಇವು ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಅಶುಭ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಈ ಅಭ್ಯಾಸಗಳನ್ನು ತಪ್ಪಿಸುವುದರಿಂದ ಗ್ರಹ ದೋಷಗಳಿಂದ ಪಾರಾಗಬಹುದು ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು.

Vasthu Tips: ಸ್ನಾನದ ನಂತರ ನೀವು ಮಾಡುವ ಈ ತಪ್ಪುಗಳು ಗ್ರಹ ದೋಷಕ್ಕೆ ಕಾರಣವಾಗಬಹುದು!
ತಲೆ ಸ್ನಾನ
ಅಕ್ಷತಾ ವರ್ಕಾಡಿ
|

Updated on: Aug 13, 2025 | 11:56 AM

Share

ಸ್ನಾನವು ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸುತ್ತದೆ. ಆದರೆ ಸ್ನಾನದ ನಂತರ ನೀವು ಮಾಡುವ ಕೆಲ ತಪ್ಪುಗಳು ಗ್ರಹ ದೋಷಕ್ಕೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಆದರಿಂದ ಸ್ನಾನದ ನಂತರ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸ್ನಾನ ಮಾಡಿದ ತಕ್ಷಣ ನಿದ್ರೆಗೆ ಜಾರುವುದು:

ಅನೇಕ ಜನರು ಸ್ನಾನ ಮಾಡಿದ ತಕ್ಷಣ ನಿದ್ರೆಗೆ ಜಾರುತ್ತಾರೆ, ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನ ಮಾಡಿದ ತಕ್ಷಣ ಮಲಗುವುದು ಸೂರ್ಯ ದೋಷಕ್ಕೆ ಕಾರಣವಾಗಬಹುದು. ಜಾತಕದಲ್ಲಿ ಸೂರ್ಯ ದುರ್ಬಲ ಸ್ಥಾನದಲ್ಲಿದರೆ, ವ್ಯಕ್ತಿಯ ಜೀವನದಲ್ಲಿ ಸೋಮಾರಿತನ ಮತ್ತು ಆಯಾಸ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಕೊಳಕು ಸ್ನಾನಗೃಹ:

ಅನೇಕ ಜನರು ಸ್ನಾನ ಮಾಡಿ ಬಂದ ನಂತರ ಕೊಳಕು ನೀರು, ಕೊಳಕು ಬಟ್ಟೆ ಇತ್ಯಾದಿಗಳನ್ನು ಬಕೆಟ್‌ನಲ್ಲಿ ಅಲ್ಲೇ ಬಿಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಎಂದಿಗೂ ಮಾಡಬಾರದು. ಈ ಕ್ರಿಯೆಗಳಿಂದಾಗಿ ರಾಹು ಮತ್ತು ಕೇತುವಿನಂತಹ ಗ್ರಹಗಳು ಕೋಪಗೊಳ್ಳುತ್ತವೆ. ಈ ಗ್ರಹಗಳ ಕೆಟ್ಟ ನೆರಳು ನಿಮ್ಮನ್ನು ಕಷ್ಟಕ್ಕೆ ತಳ್ಳಬಹುದು.

ಸ್ನಾನ ಗೃಹದಲ್ಲೇ ಉದುರಿದ ಕೂದಲು:

ಸ್ನಾನದ ನಂತರ ಉದುರಿದ ಕೂದಲನ್ನು ಸ್ನಾನಗೃಹದಲ್ಲಿ ಹಾಗೆಯೇ ಬಿಟ್ಟು ಬರುವ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸ ಶನಿ ಮತ್ತು ಮಂಗಳ ಗ್ರಹಗಳ ಅಶುಭ ಫಲಿತಾಂಶಕ್ಕೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಕಂಡುಬರುವ ಬಾಲಾರಿಷ್ಟ ದೋಷಕ್ಕೆ ಸರಳ ಪರಿಹಾರ ಇಲ್ಲಿದೆ

ಸ್ನಾನಗೃಹದಲ್ಲಿ ಚಪ್ಪಲಿ ಬಳಸುವುದು:

ಅನೇಕ ಜನರು ಸ್ನಾನಗೃಹದಲ್ಲಿಯೂ ಸಹ ಚಪ್ಪಲಿಗಳನ್ನು ಬಳಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಚಪ್ಪಲಿಗಳನ್ನು ಧರಿಸಿ ಸ್ನಾನ ಮಾಡಬಾರದು. ಹೀಗೆ ಮಾಡುವುದರಿಂದ ರಾಹು ಮತ್ತು ಕೇತುವಿನ ಕೆಟ್ಟ ದೃಷ್ಟಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಸ್ನಾನ ಮಾಡಿದ ತಕ್ಷಣ ಸಿಂಧೂರ ಹಚ್ಚುವುದು:

ಮಹಿಳೆಯರು ಸ್ನಾನ ಮಾಡಿದ ತಕ್ಷಣ ಒದ್ದೆ ಕೂದಲಿನ ಮೇಲೆ ಸಿಂಧೂರ ಹಚ್ಚುವುದು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ತಲೆ ಕೂದಲಿನ ನೀರಿನೊಂದಿಗೆ ಸಿಂಧೂರವೂ ಹರಿದು ಹೋಗುತ್ತದೆ. ಆದ್ದರಿಂದ, ಸ್ನಾನ ಮಾಡಿದ ನಂತರ, ನಿಮ್ಮ ಕೂದಲನ್ನು ಚೆನ್ನಾಗಿ ಒಣಗಿಸಿ ಮತ್ತು ನಂತರ ಸಿಂಧೂರವನ್ನು ಹಚ್ಚಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!