ಇಂದಿನ ದಿನಗಳಲ್ಲಿ ಯುವ ಜನತೆಯಿಂದ ಹಿಡಿದು ಮಧ್ಯ ವಯಸ್ಸಿನ ಜನರಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಒತ್ತಡ. ವೃತ್ತಿ, ಕೌಟುಂಬಿಕ ಕಾರಣ ಹೀಗೆ ಕೆಲವು ಕಾರಣಗಳಿಗೆ ಜನರು ಹೆಚ್ಚಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ಹೀಗೆ ಬಿಟ್ಟರೆ ಕಾಲ ಕ್ರಮೇಣ ದೇಹಕ್ಕೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ. ಇದು ಆಗಾಗ್ಗೆ ತಲೆನೋವು, ಆಯಾಸ, ಕೋಪ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ನಾವೆಲ್ಲರೂ ನಮ್ಮ ದೈನಂದಿನ ಜೀವನದಲ್ಲಿ ಒತ್ತಡದ ಪರಿಸ್ಥಿತಿಯಲ್ಲೇ ಜೀವನ ಸಾಗಿಸುತ್ತೇವೆ. ಹಾಗೇ ಧೀರ್ಘಕಾಲದ ಒತ್ತಡವು ಕೆಲವು ಗಂಭಿರವಾದ ಭಾವನಾತ್ಮಕ ಮತ್ತು ದೈಹಿಕ ಪರಿಣಾಮಗಳನ್ನು ಉಂಟು ಮಾಡಬಹುದು. ಹಾಗಾಗಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬಹುದು ಅಥವಾ ಪೂರ್ವಭಾವಿಯಾಗಿ ಕೆಲವೊಂದು ಪ್ರಯತ್ನಗಳನ್ನು ಮಾಡಬಹುದು.
ಸಂದರ್ಭಕ್ಕೆ ಅನುಗುಣವಾಗಿ ಒತ್ತಡದ ಪರಿಸ್ಥಿತಿಯನ್ನು ನಾವೆಲ್ಲರು ಅನುಭವಿಸುತ್ತೇವೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಪ್ರಕ್ರಿಯೆಯಾಗಿದೆ. ಯೇಲ್ ವಿಶ್ವವಿದ್ಯಾನಿಲಯದ ಸಂಶೋಧಕರು ‘ಒತ್ತಡವು ಸ್ವಯಂ ನಿಯಂತ್ರಣಕ್ಕೆ ಕಾರಣವಾದ ಮೆದುಳಿನ ಪ್ರದೇಶದಲ್ಲಿನ ಬೂದು ಬಣ್ಣದ ದ್ರವ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ’ ಎಂಬುವುದನ್ನು ಕಂಡು ಹಿಡಿದಿದ್ದಾರೆ. ಇದರರ್ಥ ಒತ್ತಡವನ್ನು ಅನುಭವಿಸುವುದು ಭವಿಷ್ಯದಲ್ಲಿ ಒತ್ತಡವನ್ನು ನಿಭಾಯಿಸಲು ಕಷ್ಟವಾಗಬಹುದು ಏಕೆಂದರೆ ಅದು ಪರಿಸ್ಥಿತಿಯ ನಿಯಂತ್ರಣವನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಒತ್ತಡವನ್ನು ಕಂಟ್ರೋಲ್ ಮಾಡುವುದು ಮುಖ್ಯವಾಗಿದೆ.
ಏಷ್ಯನ್ ಆಸ್ಪತ್ರೆಯ ಸೈಕರಯಾಟ್ರಿಯಾ ಸಹ ನಿರ್ದೇಶಕರಾದ ಡಾ. ಮೀನಾಕ್ಷಿ ಮಂಚಂದ ಅವರ ಪ್ರಕಾರ, ಒತ್ತಡವನ್ನು ಕಂಟ್ರೋಲ್ ಮಾಡುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಏಕೆಂದರೆ ಇದು ಹಾನಿಯುಂಟು ಮಾಡುವ ಅನಿರೀಕ್ಷಿತ ಒತ್ತಡವನ್ನು ತಡೆಯುತ್ತದೆ.
ಒತ್ತಡವು ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರಬಹುದು. ನಾವು ಒತ್ತಡವನ್ನು ನಿಭಾಯಿಸಬಹುದಾದರೂ, ಅದು ಒಂದು ಹಂತವನ್ನು ಮೀರಿ ಹೋದಾಗ ವಿವಿಧ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮೆದುಳಿನ ಹೈಪೋಥಾಲಮಸ್ ಭಾಗ ಪಿಟ್ಯುಟರಿ ಗ್ರಂಥಿಯ ಸಮಸ್ಯೆಗಳನ್ನು ಸಕ್ರೀಯವಾಗಿ ನಿಭಾಯಿಸುತ್ತದೆ. ಒತ್ತಡ ಒಂಟಾದಾಗ ಅದು ಕಾರ್ಟಿಸೋಲ್‌ನಂತಹ ರಾಸಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಜಗಳ ಅಥವಾ ಹಾರಟದ ಪ್ರತಿಕ್ರಿಯೆ ಇರುತ್ತದೆ. ಸಾಕಷ್ಟು ಪ್ರಮಾಣದ ಕಾರ್ಟಿಸೋಲ್ ಉತ್ಪತ್ತಿಯಾದರೆ, ನಾವು ಆ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಅದನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಮೆದುಳು ಹಾರಟ (ಉದ್ವೇಗ)ದ ಪ್ರಕಿಯೆಗೆ ಹೋಗುತ್ತದೆ’ ಎಂದು ಡಾ. ಮೀನಾಕ್ಷಿ ಮಂಚಂದ ಅವರು ಹೇಳಿದ್ದಾರೆ.
ಉಸಿರಾಟದ ವ್ಯಾಯಾಮಗಳು: ದೇಹ ಮತ್ತು ಸ್ನಾಯುಗಳನ್ನು ಶಾಂತಗೊಳಿಸಲು ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಮಸಾಜ್, ಧ್ಯಾನ, ಯೋಗ, ಸಂಗೀತ ಚಿಕಿತ್ಸೆ, ಅರೋಮಾ ಥೆರಪಿ ಮುಂತಾದ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ. ಸಾಮಾಜಿಕ ಸಂವಹನವನ್ನು ಹೆಚ್ಚಿಸಿ: ಒತ್ತಡವನ್ನು ಅನುಭವಿಸುವಾಗ ಸಂವಹನ ನಡೆಸಿ. ನಿಮ್ಮ ಸಮಸ್ಯೆಗಳ ಬಗ್ಗೆ ಅಥವಾ ಸಂತೋಷದ ಕ್ಷಣಗಳ ಬಗ್ಗೆ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ, ಆಪ್ತರೊಂದಿಗೆ ಹಂಚಿಕೊಳ್ಳಿ.
ಇದನ್ನು ಓದಿ:Health Tips: ಸೂರ್ಯೋದಯಕ್ಕೆ ಮುಂಚೆಯೇ ಏಳುವ ಅಭ್ಯಾಸ ರೂಢಿಸಿಕೊಳ್ಳಿ, ಪ್ರಯೋಜನಗಳ ತಿಳಿಯಿರಿ
ಹವ್ಯಾಸಗಳು : ನಿಮ್ಮ ಹವ್ಯಾಸಗಳು ಏನೆಂದು ತಿಳಿದುಕೊಳ್ಳಿ ಮತ್ತು ಅವುಗಳನ್ನು ಮಾಡಿ. ಏಕೆಂದರೆ ಈ ಚಟುವಟಿಕೆಗಳು ನಿಮ್ಮ ಒತ್ತಡದ ಪರಿಸ್ಥಿತಿಯನ್ನು ಮರೆತು ನಿಮ್ಮ ಮೆದುಳಿನ ಹೊರೆಯನ್ನು ಕಮ್ಮಿ ಮಾಡಿ ವಿಶ್ರಾಂತಿ ನೀಡುತ್ತದೆ. ಸಮತೋಲಿನ ಆಹಾರ ಮತ್ತು ನಿದ್ದೆ : ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ ಹಾಗೇನೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದು ಮುಖ್ಯ ಮತ್ತು ದಿನಕ್ಕೆ ಕನಿಷ್ಟ 7-8 ಗಂಟೆಗಳ ಕಾಲ ನಿದ್ದೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Thu, 22 December 22