Tea Side Effects: ದಿನಕ್ಕೆ ಎಷ್ಟು ಬಾರಿ ಟೀ ಕುಡಿಯುತ್ತೀರಿ, ಹಾಗಾದ್ರೆ ದುಷ್ಪರಿಣಾಮಗಳೂ ತಿಳಿದಿರಬೇಕಲ್ಲವೇ ?

| Updated By: ಅಕ್ಷತಾ ವರ್ಕಾಡಿ

Updated on: Dec 23, 2022 | 9:56 AM

ಪ್ರತಿದಿನ 3-4 ಕಪ್‌ಗಳಿಗಿಂತ ಹೆಚ್ಚು ಟೀ ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆ ತಿಳಿಸಿದೆ.

Tea Side Effects: ದಿನಕ್ಕೆ ಎಷ್ಟು ಬಾರಿ ಟೀ ಕುಡಿಯುತ್ತೀರಿ, ಹಾಗಾದ್ರೆ ದುಷ್ಪರಿಣಾಮಗಳೂ ತಿಳಿದಿರಬೇಕಲ್ಲವೇ ?
ಸಾಂದರ್ಭಿಕ ಚಿತ್ರ
Image Credit source: india.com
Follow us on

ಅತಿಯಾದರೆ ಅಮೃತವು ವಿಷ ಎಂಬ ಮಾತಿದೆ. ಪ್ರತಿ ದಿನ ಚಹಾ ಕುಡಿಯುವ ಅಭ್ಯಾಸ ನಿಮಗಿದ್ದರೆ ನೀವು ಎಷ್ಟು ಬಾರಿ ಕುಡಿಯುತ್ತೀರಿ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಯಾಕೆಂದರೆ ಪ್ರತಿದಿನ 3-4 ಕಪ್‌ಗಳಿಗಿಂತ ಹೆಚ್ಚು ಟೀ ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆ ತಿಳಿಸಿದೆ. ಚಹಾ ಕುಡಿಯುವ ಅಭ್ಯಾಸ ಒಳ್ಳೆಯದು. ಇದು ಒತ್ತಡದಿಂದ ಆರಾಮದಾಯಕ ಫೀಲ್​ನ್ನು ನೀಡಬಹುದು. ಆದ್ದರಿಂದ ದಿನದಲ್ಲಿ ಒಂದು ಅಥವಾ ಎರಡು ಬಾರಿ ಟೀ ಕುಡಿಯಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಪ್ರಪಂಚದ ಅತ್ಯಂತ ಜನಪ್ರಿಯ ಪಾನೀಯವೆಂದರೆ ಚಹಾ.  ಹಾಲು ಮತ್ತು ಸಕ್ಕರೆಯ ಒಳ್ಳೆಯತನದಿಂದ ತುಂಬಿರುತ್ತದೆ ಮತ್ತು ಇದನ್ನು ಚಾಯ್ ಎಂದೂ ಕರೆಯಲಾಗುತ್ತದೆ. ಚಿಕ್ಕ ಜ್ವರ ಅಥವಾ ನೆಗಡಿಗೆ ಚಿಕಿತ್ಸೆ ನೀಡಲು ಚಹಾವನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಚಹಾ ಕುಡಿಯುವುದರಿಂದ ಮನಸ್ಸಿಗೆ ಸಾಕಷ್ಟು ಉಲ್ಲಾಸವನ್ನು ನೀಡುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಚಹಾವನ್ನು ಅತಿಯಾಗಿ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಚಹಾದ ದುಷ್ಪರಿಣಾಮಗಳು:

1. ಆತಂಕ ಮತ್ತು ಒತ್ತಡ: ಕೆಫೀನ್ ಚಹಾ ಎಲೆಗಳ ಸಾವಯವ ಅಂಶವಾಗಿದೆ. ಕೆಫೀನ್​ನ್ನು ಅತಿಯಾಗಿ ಸೇವಿಸುವುದರಿಂದ ಉದ್ವೇಗ, ಆತಂಕ ಮತ್ತು ಚಡಪಡಿಕೆಯ ಭಾವನೆಗಳನ್ನು ಉಲ್ಬಣಗೊಳಿಸಬಹುದು.

2. ಮಲಬದ್ಧತೆ:

ಚಹಾವು ಥಿಯೋಫಿಲಿನ್ ಎಂಬ ವಸ್ತುವನ್ನು ಹೊಂದಿರುತ್ತದೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

3. ಎದೆಯುರಿ :

ಚಹಾದಲ್ಲಿರುವ ಕೆಫೀನ್ ಅಂಶವು ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ನೀವು ಹೆಚ್ಚಾಗಿ ಟೀ ಕುಡಿದಂತೆಲ್ಲಾ ಹೊಟ್ಟೆಯಲ್ಲಿನ ಆಮ್ಲದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಇದು ಎದೆಯುರಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ನಿಮ್ಮ ಮೆದುಳಿನ ಆರೋಗ್ಯಕ್ಕೆ ವಿಟಮಿನ್ ಡಿ ಅತ್ಯಂತ ಅವಶ್ಯಕ

4.ನಿದ್ರಾಹೀನತೆ :

ಮಾನವನ ದೇಹದಲ್ಲಿ ನಿದ್ದೆಯು ಪ್ರಮುಖವಾಗಿರುತ್ತದೆ. ನಿದ್ದೆಯೂ ಕಡಿಮೆಯಾದಂತೆ ಆತನ ಮಾನಸಿಕ ಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಹೆಚ್ಚಾಗಿ ಟೀ ಕುಡಿದಂತೆಲ್ಲಾ ನಿದ್ದೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

5. ಗರ್ಭಾವಸ್ಥೆಯ ತೊಡಕುಗಳು:

ಚಹಾವು ಗರ್ಭಪಾತ ಅಥವಾ ಶಿಶು ಜನನ ತೂಕದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಚಹಾವನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: