Brain Health: ನಿಮ್ಮ ಮೆದುಳಿನ ಆರೋಗ್ಯಕ್ಕೆ ವಿಟಮಿನ್ ಡಿ ಅತ್ಯಂತ ಅವಶ್ಯಕ

ಮಿಟಮಿನ್ ಡಿ ಯು ದೇಹದಲ್ಲಿ ಕಡಿಮೆಯಾಗುತ್ತಾ ಹೋದ ಹಾಗೇ ನಿಮ್ಮ ಮೆದುಳಿನ ಕಾರ್ಯಗಳು ನಿಧಾನವಾಗುತ್ತಾ ಹೋಗುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರದಲ್ಲಿ ಮಿಟಮಿನ್ ಡಿ ಪ್ರಮಾಣ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಿ.

Brain Health: ನಿಮ್ಮ ಮೆದುಳಿನ ಆರೋಗ್ಯಕ್ಕೆ ವಿಟಮಿನ್ ಡಿ ಅತ್ಯಂತ ಅವಶ್ಯಕ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷತಾ ವರ್ಕಾಡಿ

Updated on:Dec 21, 2022 | 5:56 PM

ಆರೋಗ್ಯ(Health)ವನ್ನು ಕಾಪಾಡಿಕೊಳ್ಳವಲ್ಲಿ ವಿಟಮಿನ್ ಡಿ(Vitamin D)  ಉತ್ತಮ ಮೂಲವಾಗಿದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿನ ಮೂಳೆಗಳನ್ನು ಬಲಪಡಿಸಲು, ಹಲ್ಲುಗಳು ಮತ್ತು ಸ್ನಾಯುಗಳನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಪೋಷಕಾಂಶಗಳು ಅವಶ್ಯಕವಾಗಿದೆ. ನಿಮಗೆ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಮೆದುಳಿನ ಆರೋಗ್ಯವನ್ನು ಸಾಕಷ್ಟು ವರ್ಷಗಳ ವರೆಗೆ ಹಾಗೆಯೇ ಉಳಿಸಲು ವಿಟಮಿನ್ ಡಿ ಅತ್ಯಂತ ಅಗತ್ಯ ಎಂದು ಅಮೇರಿಕಾದ ಟಫ್ಟ್ಸ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ತಿಳಿದುಬಂದಿದೆ. ಈ ಸಂಶೋಧನೆಯು ಬುದ್ಧಿಮಾಂದ್ಯತೆ ಮತ್ತು ಅದರ ಕಾರಣವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.

2050 ರ ಹೊತ್ತಿಗೆ, ಜಾಗತಿಕವಾಗಿ ಬುದ್ಧಿಮಾಂದ್ಯತೆಯ ಹರಡುವಿಕೆಯು 150 ಮಿಲಿಯನ್ ಮೀರುವ ನಿರೀಕ್ಷೆಯಿದೆ. ಆದ್ದರಿಂದ ಬುದ್ಧಿಮಾಂದ್ಯತೆಯ ಹೊರೆಯನ್ನು ಕಡಿಮೆ ಮಾಡಲು ತಡೆಗಟ್ಟುವ ತಂತ್ರಗಳ ತುರ್ತು ಅವಶ್ಯಕತೆಯಿದೆ ಎಂದು ಆಲ್ಝೈಮರ್ನ ಜರ್ನಲ್​ನಲ್ಲಿ ಡಿಸೆಂಬರ್ 7 ರಂದು ಪ್ರಕಟವಾದ ಅಧ್ಯಯನವು ಹೇಳಿದೆ.

ಆಲ್‌ಝೈಮರ್‌‌ನ ಕಾಯಿಲೆ/ಅಲ್ಜಿಮರ್ (AD ) ಎಂಬುದು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಇದನ್ನು ಆಲ್‌ಝೈಮರ್‌‌ ಕಾಯಿಲೆ/ಅಲ್ಜಿಮರ್ , ಸಿನೈಲ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ (SDAT ), ಪ್ರೈಮರಿ ಡೀಜನರೇಟಿವ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ ,ಅಥವಾ ಆಲ್‌ಝೈಮರ್‌‌ನ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.

ಇದನ್ನೂ ಓದಿ: ಜ್ವರ ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ನಿಮಗಿದೆಯಾ?

ಆಲ್‌ಝೈಮರ್​ನ್ನು ಮೊದಲ ಬಾರಿಗೆ ಜರ್ಮನಿಯಲ್ಲಿ 1906 ರಲ್ಲಿ ಅಲೋಯಿಸ್  ಗುರುತಿಸಿದರು ಮತ್ತು ಇದು ದುರ್ಬಲ ಮೆದುಳಿನ ಕಾರ್ಯನಿರ್ವಹಣೆಯ ಸಾಮಾನ್ಯ ಪದವಾದ ಬುದ್ಧಿಮಾಂದ್ಯತೆಯಾಗಿದೆ .ಮಿಟಮಿನ್ ಡಿ ಯು ದೇಹದಲ್ಲಿ ಕಡಿಮೆಯಾಗುತ್ತಾ ಹೋದ ಹಾಗೇ ನಿಮ್ಮ ಮೆದುಳಿನ ಕಾರ್ಯಗಳು ನಿಧಾನವಾಗುತ್ತಾ ಹೋಗುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರದಲ್ಲಿ ಮಿಟಮಿನ್ ಡಿ ಪ್ರಮಾಣ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಸಂತಾನೋತ್ಪತ್ತಿಗೆ ಸಹಾಯಕವಾಗುವ ಯೋಗಾಸನದ ಭಂಗಿಗಳು ಇಲ್ಲಿವೆ

ವಿಟಮಿನ್ ಡಿ ದೇಹಕ್ಕೆ ಬಹಳ ಮುಖ್ಯವಾಗಿದೆ. ಆಹಾರದ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯುವುದು ಕಷ್ಟ. ಸೂರ್ಯನ UVB ವಿಕಿರಣದಿಂದ 7-ಡಿಹೈಡ್ರೊಕೊಲೆಸ್ಟರಾಲ್ ವಿಭಜನೆಯಾದಾಗ ಜೈವಿಕವಾಗಿ ಉಪಯುಕ್ತವಾದ ವಿಟಮಿನ್ D ರೂಪುಗೊಳ್ಳುತ್ತದೆ. ಇದು ನಮ್ಮ ದೇಹಕ್ಕೆ ಅತಿ ಅಗತ್ಯವಾದ ವಿಟಮಿನ್‌ ಆಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:53 pm, Wed, 21 December 22

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ