Vitamin D: ಮೊದಲು ವಿಟಮಿನ್ ಡಿ ಟೆಸ್ಟ್ ಮಾಡಿಸಿಕೊಳ್ಳಿ, ದೇಹದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಇದರ ಪಾತ್ರ ಬಹುಮುಖ್ಯ! ಹೇಗೆ?

ವಿಟಮಿನ್ ಡಿ ಪಾತ್ರವು ತೂಕ ನಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಟಮಿನ್ ಡಿ ಕೊರತೆಯು ದುರ್ಬಲ ರೋಗನಿರೋಧಕ ಶಕ್ತಿ, ದುರ್ಬಲ ಮೂಳೆಗಳಂತಹ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಖಿನ್ನತೆ, ಸ್ನಾಯುವಿನ ನಷ್ಟ, ಅಥವಾ ಕ್ಯಾನ್ಸರ್​ ಅಂತಹ ದೀರ್ಘಕಾಲದ ವ್ಯತಿರಿಕ್ತ ಪರಿಸ್ಥಿತಿಗಳು ಎದುರಿಸಬೇಕಾಗುತ್ತದೆ.

Vitamin D: ಮೊದಲು ವಿಟಮಿನ್ ಡಿ ಟೆಸ್ಟ್ ಮಾಡಿಸಿಕೊಳ್ಳಿ, ದೇಹದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಇದರ ಪಾತ್ರ ಬಹುಮುಖ್ಯ! ಹೇಗೆ?
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ವಿಟಮಿನ್ ಡಿ ಪಾತ್ರ ಬಹುಮುಖ್ಯ! ಹೇಗೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 08, 2022 | 2:50 PM

ವಿಟಮಿನ್ ಡಿ ಅಂದರೆ ಕ್ಯಾಲ್ಸಿಫೆರಾಲ್ ಎಂದು ಕರೆಯುವ ಕೊಬ್ಬನ್ನು ಕರಗಿಸುವ ವಿಟಮಿನ್ (Vitamin D) ಇದಾಗಿದ್ದು, ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಇರುತ್ತದೆ. ವಿಟಮಿನ್ ಡಿ – ತೂಕ ನಷ್ಟಕ್ಕೆ ಅತ್ಯಂತ ಪ್ರಮುಖವಾದ ವಿಟಮಿನ್.

ನಮ್ಮಲ್ಲಿ ಹೆಚ್ಚಿನವರು ನಮ್ಮ ದೇಹ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು (weight loss) ಬಹಳಷ್ಟು ಕಸರತ್ತು ಮಾಡುತ್ತಾರೆ. ಅದು ಜಿಮ್​ಗೆ (gym) ಹೋಗುವುದರಲಿ ಅಥವಾ ಶುದ್ಧ ಆಹಾರ ಕ್ರಮವನ್ನು ಅನುಸರಿಸುವುದಾಗಲಿ ಸಾಮಾನ್ಯವಾಗಿ ಮಾಡುತ್ತಿರುತ್ತಾರೆ. ಕೆಲವೊಮ್ಮೆ, ಉದ್ಯೋಗ ತಾಪತ್ರಯದಿಂದಾಗಿ ಅಥವಾ ಮತ್ಯಾವುದೋ ಅಂತಹುದೆ ತೊಡಕಿನಿಂದಾಗಿ ಯೋಜಿತ ರೀತಿಯಲ್ಲಿ ವ್ಯಾಯಾಮ ಮಾಡುವುದಿಲ್ಲ. ಹಾಗಾಗಿ ದೇಹ ತೂಕವನ್ನು ಕರಗಿಸಲು ಹೆಣಗಾಡುತ್ತೇವೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ದೇಹ ತೂಕ ಕಡಿಮೆ ಮಾಡಿಕೊಳ್ಳಲು (fat soluble vitamin) ಆಗದೇ ಹೋದಾಗ ಮತ್ತಷ್ಟು ಹೆಣಗಾಡುತ್ತೇವೆ.

ಮೊದಲು ವಿಟಮಿನ್ ಡಿ ಟೆಸ್ಟ್ ಮಾಡಿಸಿಕೊಳ್ಳಿ

ಇದರ ಹೊರತಾಗಿ ವಿಟಮಿನ್ ಡಿ ಕೊರತೆಯಿಂದಲೂ ದೇಹ ತೂಕ ಕಡಿಮೆ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅಂದರೆ ದೇಹದಲ್ಲಿ ವಿಟಮಿನ್ ಡಿ ಕಡಿಮೆ ಪ್ರಮಾಣದಲ್ಲಿದ್ದಾಗ (Vitamin D deficiency) ದೇಹದ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ದುರಾದೃಷ್ಟವೆಂದರೆ, ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿದಿಲ್ಲ.

ನಿಮಗಿದು ಗೊತ್ತೆ? ಬಹುಪಾಲು ಭಾರತೀಯರು ವಿಟಮಿನ್ ಡಿ ಕೊರತೆ ಹೊಂದಿದ್ದಾರೆ!

ನಮ್ಮಲ್ಲಿ ಹೆಚ್ಚಿನವರು ನಮ್ಮ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಎಷ್ಟಿದೆ ಎಂಬುದನ್ನು ಎಂದಿಗೂ ಪರೀಕ್ಷಿಸುವುದಿಲ್ಲ. ಮತ್ತು ನಮಗೆ ಅದರ ಕೊರತೆಯಿದೆ ಎಂದು ನಾವು ಎಂದಿಗೂ ತಿಳಿದಿರುವುದಿಲ್ಲ!

ವಿಟಮಿನ್ ಡಿ ನಮ್ಮ ದೇಹದಲ್ಲಿನ ಹಾರ್ಮೋನುಗಳ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ತೂಕ ನಷ್ಟವನ್ನು ಹೆಚ್ಚಿಸಲು ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ನೀವು ತೂಕವನ್ನು ಕಳೆದುಕೊಂಡಾಗ, ವಿಟಮಿನ್ ಡಿ ಅನ್ನು ಹೀರಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಆದ್ದರಿಂದ, ಒಂದು ರೀತಿಯಲ್ಲಿ, ನೀವು ವಿಟಮಿನ್ ಡಿ ಯ ಸರಿಯಾದ ಪ್ರಮಾಣವನ್ನು ಹೊಂದಲು ಪ್ರಾರಂಭಿಸಿದ ನಂತರ ನಿಮ್ಮ ದೇಹದಲ್ಲಿ ಅದು ಹೀರಿಕೊಳ್ಳುವಿಕೆಯ ಪ್ರಮಾಣವೂ ಹೆಚ್ಚಾಗುತ್ತದೆ.

ವಿಟಮಿನ್ ಡಿ ಪಾತ್ರವು ತೂಕ ನಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಟಮಿನ್ ಡಿ ಕೊರತೆಯು ದುರ್ಬಲ ರೋಗನಿರೋಧಕ ಶಕ್ತಿ, ದುರ್ಬಲ ಮೂಳೆಗಳಂತಹ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಖಿನ್ನತೆ, ಸ್ನಾಯುವಿನ ನಷ್ಟ, ಅಥವಾ ಕ್ಯಾನ್ಸರ್​ ಅಂತಹ ದೀರ್ಘಕಾಲದ ವ್ಯತಿರಿಕ್ತ ಪರಿಸ್ಥಿತಿಗಳು ಎದುರಿಸಬೇಕಾಗುತ್ತದೆ.

ಹಾಗಾದರೆ ದೈನಂದಿನ ಡೋಸ್ ಪ್ರಮಾಣದಲ್ಲಿ ವಿಟಮಿನ್ ಡಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗ ಯಾವುದು?

ಸರಳವಾಗಿ ಹೊರಗೆ ಹೋಗಿ ಪ್ರತಿದಿನ 10 ನಿಮಿಷಗಳ ಕಾಲ ಸೂರ್ಯನ ಕಿರಣಗಳನ್ನು ಹೀರಿಕೊಳ್ಳಿ. ಇದು ನಿಮ್ಮ ದೈನಂದಿನ ಅಗತ್ಯಕ್ಕೆ ತಕ್ಕಂತೆ ವಿಟಮಿನ್ ಡಿ ಪ್ರಮಾಣವನ್ನು ಪೂರೈಸುತ್ತದೆ.

ಈ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ನಿಮಗೆ ವಿಟಮಿನ್ ಡಿ ಮಾತ್ರೆಗಳ ಅಗತ್ಯವಿಲ್ಲ. ನೀವು 10 ನಿಮಿಷಗಳ ಕಾಲ ಸೂರ್ಯನ ಕಿರಣಗಳಲ್ಲಿ ಹೋಗಬಹುದಾದರೆ ವಾರದಲ್ಲಿ 3 ದಿನಗಳ ಕಾಲ ಬೆಳಿಗ್ಗೆ ಅಥವಾ ಸಂಜೆ ಕಾಲದಲ್ಲಿ ಇದು ನಿಮ್ಮ ದೈನಂದಿನ ಡೋಸೇಜ್ ವಿಟಮಿನ್ ಡಿ (ದಿನಕ್ಕೆ 400-600 IU) ನೀಡುತ್ತದೆ.

ವಿಟಮಿನ್ ಡಿ ನಿಮ್ಮ ದೈನಂದಿನ ಪ್ರಮಾಣವನ್ನು ಪಡೆಯಲು ಇತರೆ ಅನೇಕ ಮಾರ್ಗಗಳಿವೆ. ಮೊಟ್ಟೆಗಳು, ಮಾಂಸದಂತಹ ನೈಸರ್ಗಿಕ ಆಹಾರಗಳು, ಅಣಬೆಗಳು, ಕಾಡ್ ಲಿವರ್ ಎಣ್ಣೆ ಇತ್ಯಾದಿ.

Published On - 4:33 pm, Wed, 5 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ