Women Health: ಮೈಯೊಮೆಕ್ಟಮಿ ಚಿಕಿತ್ಸೆಯ ನಂತರ ಗರ್ಭಧರಿಸುವಿಕೆ
ಫೈಬ್ರಾಯ್ಡ್ಗಳು ರೋಗ ಲಕ್ಷಣ ಅಥವಾ ಲಕ್ಷಣ ರಹಿತವಾಗಿರಬಹುದು. ನಾಲ್ಕು ಮಹಿಳೆಯರಲ್ಲಿ ಒಬ್ಬರು ಈ ರೋಗ ಲಕ್ಷಣ ಹೊಂದಿರಬಹುದು. ರೋಗ ಲಕ್ಷಣದ ಮಹಿಳೆಯಲ್ಲಿ, ಈ ಫೈಬ್ರಾಯ್ಡ್ಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡುವುದಿಲ್ಲ.
ಫೈಬ್ರಾಯ್ಡ್(Fibroids)ಗಳು ಅನುವಂಶಿಕ ಅಂಶಗಳು. ಇವುಗಳು ಸ್ಥೂಲಕಾಯತೆ ಅಥವಾ ಈಸ್ಟೊಜೆನ್‌ನಂತಹ ಹಾರ್ಮೋನ್‌ಗಳಿಂದ ಉಂಟಾಗುವ ಕ್ಯಾನ್ಸರ್‌ಯುಕ್ತವಲ್ಲದ ಗಡ್ಡೆಗಳಾಗಿವೆ. ಹೆರಿಗೆಯ ವಯಸ್ಸಿನ ಮಹಿಳೆಯರಲ್ಲಿ ಈ ಸ್ಥಿತಿ ಸಾಮಾನ್ಯವಾಗಿದೆ. ೫೦ ವರ್ಷ ವಯಸ್ಸಿನ ಶೇಕಡಾ 70ರಷ್ಟು ಮಹಿಳೆಯರಲ್ಲಿ ಈ ಸ್ಥಿತಿಯು ಕಂಡು ಬರುತ್ತದೆ. ಋತು ಬಂಧನಕ್ಕೆ ಬರುವ ಸಣ್ಣ ಯಯಸ್ಸಿನ ಮಹಿಳೆಯರಲ್ಲಿ ಈ ಹಾರ್ಮೋನ್‌ಗಳ ಉತ್ಪಾದನೆಯು ಕಡಿಮೆಯಾಗಿರುವುದರಿಂದ ಇದು ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನಗಳು ತಿಳಿಸುತ್ತವೆ.
ಫೈಬ್ರಾಯ್ಡ್ಗಳು ರೋಗ ಲಕ್ಷಣ ಅಥವಾ ಲಕ್ಷಣ ರಹಿತವಾಗಿರಬಹುದು. ನಾಲ್ಕು ಮಹಿಳೆಯರಲ್ಲಿ ಒಬ್ಬರು ಈ ರೋಗ ಲಕ್ಷಣ ಹೊಂದಿರಬಹುದು. ರೋಗ ಲಕ್ಷಣದ ಮಹಿಳೆಯಲ್ಲಿ, ಈ ಫೈಬ್ರಾಯ್ಡ್ಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡುವುದಿಲ್ಲ. ಆದರೆ ಅವು ಬಂಜೆತನ, ಮುಟ್ಟಿನ ಅಧಿಕ ರಕ್ತಸ್ರಾವ, ಮುಟ್ಟಿನ ಸಮಯದಲ್ಲಿ ನೋವು, ಹೊಟ್ಟೆಯ ಕೆಳ ಭಾಗದಲ್ಲಿ ಎಳೆದಂತಾಗುವ ಸಂವೇದನೆ, ಮಲಬದ್ಧತೆಗೆ ಕಾರಣವಾಗಬಹುದು. ಮತ್ತು ಇದು ಜರಾಯು ಬೇರ್ಪಡುವಿಕೆ, ಭ್ರೂಣದ ಬೆಳವಣಿಗೆಯ ತಡೆಯುವಿಕೆ, ಅವಧಿ ಪೂರ್ವ ಹೆರಿಗೆಗೆ ಕಾರಣವಾಗಬಹುದು.
ಫೈಬ್ರಾಯ್ಡ್ಗಳನ್ನು ಶಸ್ತ ಚಿಕಿತ್ಸೆಯಿಂದ ತೆಗೆದ ನಂತರ ಗರ್ಭ ಧರಿಸುವ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಇದೆ. ಒಂದು ಬಾರಿ ಮೈಯೊಮೆಕ್ಟಮಿ ನಂತರ ಗರ್ಭಿಣಿಯಾಗುವ ಸಾಧ್ಯತೆ ಸುಮಾರು ಶೇಕಡಾ 34ರಷ್ಟಿದೆ. ಆದರೆ ಎರಡು ಬಾರಿ ಮೈಯೊಮೆಕ್ಟಮಿಗೆ ಒಳಗಾದ ನಂತರ ಗರ್ಭಿಣಿಯಾಗಲು ಮತ್ತು ಆರೋಗ್ಯಕರ ಮಗುವಿನ ಹೆರಿಗೆ ಮಾಡಲು ಸಾಧ್ಯ ಎಂದು ಹಲವಾರು ಪ್ರಕರಣಗಳು ಸಾಬೀತುಪಡಿಸಿವೆ. ಮೈಯೋಮೆಕ್ಟಮಿಯ ಬಳಿಕ 40 ವರ್ಷಗಳ ನಂತರ ಮಹಿಳೆಯು ಗರ್ಭಿಣಿಯಾಗಲು ಅವಕಾಶಗಳಿವೆ. ಒಂದು ವೇಳೆ ಭವಿಷ್ಯದಲ್ಲಿ ಗರ್ಭ ಧರಿಸಲು ಫಲವತ್ತಾಗಿಲ್ಲದ ಗರ್ಭವನ್ನು ತೆಗೆದು ಹಾಕುವ ವಿಧಾನವೂ ಇದೆ.
ಇದನ್ನೂ ಓದಿ: ಒತ್ತಡವು ದೇಹದ ಮೇಲೆ ಪರಿಣಾಮ ಬೀರುತ್ತದೆ, ಅದನ್ನು ಪರಿಹಾರ ಮಾಡುವ ಉಪಾಯ ಇಲ್ಲಿದೆ
ಫೈಬ್ರಾಯ್ಡ್ಗಳು ಗರ್ಭಧರಿಸುವಲ್ಲಿ ಮುಖ್ಯ ಅಡಚಣೆಯಾಗಿರುವುದರಿಂದ ಅವುಗಳನ್ನು ತೆಗೆದುಹಾಕುವ ಮೂಲಕ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು. ತಾಂತ್ರಿಕ ಪ್ರಗತಿ ಮತ್ತು ವೈದ್ಯಕೀಯ ವಿಜ್ಞಾನದಿಂದ ಇದನ್ನು ಸಾಧಿಸಬಹುದು. ಜನರು ಟೆಕ್ನಿಕಲ್ ಡೆವೆಲಪ್‌ಮೆಂಟ್ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿರುವುದರಿಂದ ವೈದ್ಯರು ಲ್ಯಾಪರೋಸ್ಕೋಪಿಕ್ ಶಸ್ತ ಚಿಕಿತ್ಸೆಗೆ ಒಳಗಾಗುವಂತೆ ಪೇಷೆಂಟ್‌ಗಳನ್ನು ಪ್ರೋತ್ಸಾಹಿಸುತ್ತಾರೆ. ಫೈಬ್ರಾಯ್ಡ್ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಓಪನ್ ಸರ್ಜರಿ ಉತ್ತಮವಾಗಿದೆ ಎಂಬುದು ಜನರಲ್ಲಿರುವ ಹಿಂದಿನಿಂದಲೂ ಬಂದ ನಂಬಿಕೆಯಾಗಿದೆ. ಆದರೆ ಲ್ಯಾಪರೋಸ್ಕೋಪಿಕ್ ಚಿಕಿತ್ಸೆಯ ಸಮಯದಲ್ಲಿ ಫೈಬ್ರಾಯ್ಡ್ಗಳನ್ನು ನಾಲ್ಕು ಪಟ್ಟು ಹೆಚ್ಚು ಸ್ಪಷ್ಟವಾಗಿ ನೋಡಬಹುದಾದ್ದರಿಂದ ಇದು ಉತ್ತಮವಾಗಿದೆ. ಅಲ್ಲದೆ ಇದು ವೇಗವಾಗಿ ಚೇತರಿಸಿಕೊಳ್ಳಬಹುದಾದ ಪರಿಣಾಮಕಾರಿ ಚಿಕಿತ್ಸಾ ತಂತ್ರವಾಗಿದೆ. ರೋಗಿಗಳನ್ನು ಕೇವಲ 24 ಗಂಟೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಅವರು ತಮ್ಮ ದೈನಂದಿನ ದಿನಚರಿಗಳನ್ನು ಕೇವಲ ಎರಡು ಮೂರು ದಿನಗಳಲ್ಲಿ ಪುನರಾರಂಭಿಸಬಹುದಾಗಿದೆ.
ಯೋಗ, ನಿಯಮಿತ ವ್ಯಾಯಾಮ ಮತ್ತು ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಆರೋಗ್ಯಕರ ಆಹಾರದೊಂದಿಗೆ ಸರಿಯಾದ ಜೀವನ ಶೈಲಿಯನ್ನು ಪಾಲಿಸಲು ವೈದ್ಯರು ಸಲಹೆ ನೀಡುತ್ತಾರೆ. ಅನಿಯಮಿತ ಋಕು ಚಕ್ರದ ಸಂದರ್ಭದಲ್ಲಿ ಮತ್ತು ಅಧಿಕ ರಕ್ತ ಸ್ರಾವದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ರೋಗಗಳ ಆರಂಭಿಕ ಗುಣ ಲಕ್ಷಣಗಳನ್ನು ಪತ್ತೆ ಮಾಡಲು ಸಹಾಯಕವಾಗಿದೆ.
ಇದನ್ನೂ ಓದಿ: ಜ್ವರ ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ನಿಮಗಿದೆಯಾ?
ಫಾಲೋಪಿಯನ್ ಟ್ಯೂಬ್‌ನ ಸ್ಥಿತಿಯನ್ನು ಪರೀಕ್ಷಿಸಲು ಶಸ್ತ ಚಿಕಿತ್ಸೆಯ ಮೂರು ತಿಂಗಳ ಬಳಿಕ ಟ್ಯೂಬಲ್ ಪೇಟೆನ್ಸಿ ಪರೀಕ್ಷೆಯನ್ನು ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಮೈಯೋಮೆಕ್ಟಮಿಯ ನಂತರ ಗರ್ಭಾವಸ್ಥೆಯ ಚಿಹ್ನೆಗಳು ಗರ್ಭಾವಸ್ಥೆಯ ಸಾಮಾನ್ಯ ಚಿಹ್ನೆಗಳಂತೆ ಇರುತ್ತದೆ. ಅದು ನಿಮ್ಮ ಗರ್ಭಾಶಯವನ್ನು ಗುಣ ಪಡಿಸಲು 3 ರಿಂದ 4 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:47 pm, Thu, 22 December 22