Fibroids: ಗರ್ಭಾಶಯ ಫೈಬ್ರಾಯ್ಡ್ ಸಮಸ್ಯೆಯನ್ನು ಕಡಿಮೆ ಮಾಡಲು ಈ ಯೋಗಾಸನಗಳು ನಿಮಗೆ ಸಹಕಾರಿ
ಮಹಿಳೆಯರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಗರ್ಭಾಶಯ ಫೈಬ್ರಾಯ್ಡ್ ಕೂಡ ಒಂದಾಗಿದೆ.ಗರ್ಭಾಶಯದೊಳಗೆ ರೂಪುಗೊಳ್ಳುವ ಸ್ನಾಯುಗಳ ಗಡ್ಡೆಗಳನ್ನು ಗರ್ಭಾಶಯದ ಫೈಬ್ರಾಯ್ಡ್ಗಳು ಎಂದು ಕರೆಯಲಾಗುತ್ತದೆ.
ಮಹಿಳೆಯರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಗರ್ಭಾಶಯ ಫೈಬ್ರಾಯ್ಡ್ ಕೂಡ ಒಂದಾಗಿದೆ.ಗರ್ಭಾಶಯದೊಳಗೆ ರೂಪುಗೊಳ್ಳುವ ಸ್ನಾಯುಗಳ ಗಡ್ಡೆಗಳನ್ನು ಗರ್ಭಾಶಯದ ಫೈಬ್ರಾಯ್ಡ್ಗಳು ಎಂದು ಕರೆಯಲಾಗುತ್ತದೆ. ಗರ್ಭಾಶಯದಲ್ಲಿ ಫೈಬ್ರಾಯ್ಡ್‌ಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಯೋಗದ ಅವಶ್ಯಕತೆ ಇದೆ. ಈ ಕುರಿತು ಯೋಗ ತಜ್ಞೆ ಕಮಲಾ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ.
ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇದೆ. ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಇದು ನಿಮ್ಮ ಜೀವನದ ಮೇಲೂ ಸಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ.
ಯೋಗವು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಹಿಳೆಯರು ಸಾಮಾನ್ಯವಾಗಿ ಸಂತಾನೋತ್ಪತ್ತಿ ವ್ಯವಸ್ಥೆಗೆ ಗರ್ಭಾಶಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಾರೆ. ಕಳಪೆ ಜೀವನಶೈಲಿಯು ಸಂತಾನೋತ್ಪತ್ತಿ ಮೇಲೂ ಪರಿಣಾಮ ಬೀರುತ್ತದೆ.
ಯೋಗವು ಗರ್ಭಾಶಯದ ಫೈಬ್ರಾಯ್ಡ್‌ಗಳ ಎಂಡೊಮೆಟ್ರಿಯೊಸಿಸ್‌ನಂತಹ ಪರಿಸ್ಥಿತಿಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು. ಈ ಲಕ್ಷಣಗಳು ನಿಮ್ಮನ್ನು ಕಾಡುತ್ತಿರಬಹುದು. -ಕೆಳ ಹೊಟ್ಟೆ ಅಥವಾ ಸೊಂಟದಲ್ಲಿ ಭಾರ -ಋತುಚಕ್ರದ ಸಮಯದಲ್ಲಿ ತೀವ್ರವಾದ ನೋವು ಸೆಳೆತ -ಹಲವಾರು ದಿನಗಳವರೆಗೆ ಭಾರೀ ರಕ್ತಸ್ರಾವ -ಮುಟ್ಟಿನ ನಂತರ ಹಠಾತ್ ರಕ್ತಸ್ರಾವ -ಆಗಾಗ ಮೂತ್ರದ ಒತ್ತಡ
ಗರ್ಭಾಶಯ ಫೈಬ್ರಾಯ್ಡ್ ಸಮಸ್ಯೆಯನ್ನು ಕಡಿಮೆ ಮಾಡಬಲ್ಲ ಯೋಗಾಸನಗಳ ಕುರಿತು ಮಾಹಿತಿ ಇಲ್ಲಿದೆ.
ಬದ್ಧಕೋನಾಸನ – ಬದ್ಧ ಎಂದರೆ ಹಿಡಿಯುವುದು ಎಂದರ್ಥ ಎರಡೂ ಪಾದಗಳನ್ನು ಒಂದಕ್ಕೊಂದು ತಾಗಿಸಿ ಮಾಡುವ ಈ ಕ್ರಿಯೆಗೆ ಬದ್ಧ ಕೋನಾಸನ ಎಂದು ಹೆಸರು.
ಮೊದಲು ನೇರವಾಗಿ ಕುಳಿತುಕೊಂಡು ಎರಡು ಕಾಲುಗಳನ್ನು ಮಡಿಕೆ ಮಾಡಿ ತೊಡೆಯ ಹತ್ತಿರಕ್ಕೆ ತೆಗೆದುಕೊಳ್ಳಿ. ತೊಡೆಯ ಮೂಲದ ಹತ್ತಿರ ಹಿಮ್ಮಡಿಗಳು ಬರಬೇಕು. ಎರಡು ಪಾದಗಳ ಅಂಗಾಲುಗಳನ್ನು ಮೇಲ್ಮುಖವಾಗಿ ಇರಿಸಬೇಕು. ಎರಡು ತೊಡೆಗಳು ಮತ್ತು ಮಂಡಿಗಳು ನೆಲಕ್ಕೆ ತಾಗುವಂತಿರಬೇಕು. ಬೆನ್ನು ನೇರವಾಗಿರಿಸಿಕೊಳ್ಳಿ, ದೃಷ್ಟಿ ನೇರವಾಗಿರಬೇಕು. ನಂತರ ಕೈಗಳನ್ನು ಬಿಟ್ಟು ನಿಧಾನವಾಗಿ ಕಾಲುಗಳನ್ನು ಮುಂದೆ ಚಾಚಿ.
ಅಧಿಕ ರಕ್ತಸ್ರಾವ ಸಮಸ್ಯೆ ಇದ್ದರೆ ಕಡಿಮೆಯಾಗುವುದು, ಅಸಹಜ ಮುಟ್ಟಿನಿಂದ ಮುಕ್ತಿ ಪಡೆಯಬಹುದು. ಕಿಬ್ಬೊಟ್ಟೆ ಮತ್ತು ಕಟಿಯ ಭಾಗದಲ್ಲಿನ ಕೊಬ್ಬಿನಂಶ ಕರಗಬಹುಸು.
ಭುಜಂಗಾಸನ ಭುಜಂಗ ಎಂದರೆ ಸರ್ಪ ಎಂದರ್ಥ. ಈ ಆಸನದಲ್ಲಿ ಹೆಡೆ ಎತ್ತಿದ ಸರ್ಪದ ಆಕಾರವನ್ನು ಶರೀರವು ಹೋಲುವುದರಿಂದ, ಇದಕ್ಕೆ ಭುಜಂಗಾಸನ ಎಂದು ಕರೆಯಲಾಗುತ್ತದೆ.
ಮಾಡುವ ಕ್ರಮ: -ಎರಡೂ ಪಾದಗಳನ್ನು ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ನಿಲ್ಲಬೇಕು.
-ಕಾಲುಗಳನ್ನು ಸ್ವಲ್ಪವೂ ಬದಲಿಸದೆ ಉಸಿರನ್ನು ಒಳಕ್ಕೆ ತೆಗೆದುಕೊಳ‍್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನೇರವಾಗಿಡಬೇಕು.
-ಉಸಿರನ್ನು ಹೊರಕ್ಕೆ ಬಿಡುತ್ತಾ ಕಾಲುಗಳನ್ನು ಬಗ್ಗಿಸದೇ ಮುಂದಕ್ಕೆ ಬಗ್ಗಬೇಕು ಕೈಗಳನ್ನು ನೆಲದ ಮೇಲೆ ಇರಿಸಬೇಕು.
-ಅನಂತರ ಯಾವುದಾದರೂ ಒಂದು ಕಾಲನ್ನು ಉದಾ: ಬಲಗಾಲನ್ನು ಹಿಂದೆ ಚಾಚಿ, ಇನ್ನೊಂದು ಕಾಲನ್ನು ಎರಡು ಕೈಗಳ ಮಧ್ಯೆ ಇಟ್ಟು, ಆದಷ್ಟೂ ಸೊಂಟವನ್ನು ಕೆಳಕ್ಕೆ ಒತ್ತಿ, ಬೆನ್ನನ್ನು ಹಿಂದಕ್ಕೆ ಬಗ್ಗಿಸಿ, ತಲೆ ಎತ್ತಿ ಆಕಾಶವನ್ನು ನೋಡಬೇಕು.
-ಬಳಿಕ ಎಡಗಾಲನ್ನು ಬಲಗಾಲಿಗೆ ಸೇರಿಸಿ ಇದೇ ದೇಹವನ್ನು ನೇರವಾಗಿ ಇಡಬೇಕು.
-ಕೈ ಮತ್ತು ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಿಸದೆ ಸೂರ್ಯನಮಸ್ಕಾರ ಸ್ಥಿತಿಯಲ್ಲಿ ಕೈಗಳನ್ನು ಮಾತ್ರ ನೆಲಕ್ಕೆ ತಗಲಿಸಿ ಸಾಷ್ಟಾಂಗ ಪ್ರಣಿಪಾತಾಸನ ಮಾಡಬೇಕು.
ಆ ಮೇಲೆ ಸಾಷ್ಟಾಂಗ ಪ್ರಣಿಪಾತಾಸನದಿಂದ ಶರೀರವನ್ನು ಸ್ವಲ್ಪ ಮುಂದಕ್ಕೆ ತಂದು ಚಿತ್ರದಲ್ಲಿ ತೋರಿಸಿರುವಂತೆ ಇಡೀ ಶರೀರದ ಭಾರವನ್ನು ಅಂಗೈಗಳು ಮತ್ತು ಕಾಲ ಬೆರಳುಗಳ ಮೇಲೆ ಹೊರಿಸಿ ಬೆನ್ನನ್ನು ಸಾಧ್ಯವಾದಷ್ಟೂ ಹಿಂದಕ್ಕೆ ಬಾಗಬೇಕು. ಇದೇ ಸ್ಥಿತಿಯಲ್ಲಿ ಒಂದೆರಡು ನಿಮಿಷಗಳಾದರೂ ಇರುವಂತೆ ನೀವು ಅಭ್ಯಾಸ ಮಾಡಿದರೆ ಒಳಿತು.
ಲಾಭಗಳು: ಭುಜಂಗಾಸನದಿಂದ ಕೈಗಳು ಮತ್ತು ಸೊಂಟ ಮತ್ತಷ್ಟು ಬಲಶಾಲಿಯಾಗುತ್ತದೆ. ಸೊಂಟ ಮತ್ತು ತೊಡೆಗಳಲ್ಲಿನ ದುರ್ಬಲತೆ ಹಾಗೂ ನೋವು ದೂರವಾಗುವುದು. ಶಾಸಕೋಶದಲ್ಲಿನ ತೊಂದರೆ ನಿವಾರಣೆಯಾಗುವುದು.
ಪಶ್ಚಿಮೋತ್ತಾನಾಸನ ಪಶ್ಚಿಮೋತ್ತಾನಾಸನವನ್ನು ಹಸಿದ ಹೊಟ್ಟೆಯಲ್ಲಿಯೇ ಮಾಡಬೇಕು, ಏಕೆಂದರೆ ಹೊಟ್ಟೆಯಲ್ಲಿ ಆಹಾರವಿದ್ದರೆ ಈ ಯೋಗ ಮಾಡಲು ಕಷ್ಟವಾಗುತ್ತದೆ.
ಮಾಡುವ ಕ್ರಮ
-ಮೊದಲು ನೆಲದ ಮೇಲೆ ಕುಳಿತು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಾಬೇಕು.
-ಬಳಿಕ ಎರಡೂ ಕೈಗಳನ್ನು ಮೇಲಕ್ಕೆತ್ತಿ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಬೇಕು.
-ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮಟ್ಟಿಗೆ ಮುಂದಕ್ಕೆ ಬಗ್ಗುವಾಗ ಮಂಡಿಯು ಮೇಲಕ್ಕೆ ಎಳೆದಿರುವ ಕಡೆ ಗಮನಿಸುವುದು ಅಗತ್ಯ.
-ಅಲ್ಲದೆ ಮುಂದಕ್ಕೆ ಬಗ್ಗುವಾಗ ಕಾಲುಗಳನ್ನು ಕೈಗಳಿಂದ ಭದ್ರವಾಗಿ ಹಿಡಿದುಕೊಂಡು, ಮೊಣಕೈಗಳನ್ನು ನೆಲಕ್ಕೆ ಮುಟ್ಟಿಸುತ್ತಾ ಹಣೆಯನ್ನು ಅಥವಾ ಎದೆಯನ್ನು ಮಂಡಿಗೆ ಮುಟ್ಟಿಸುವಾಗಲೂ ಬೆನ್ನು ಗೂನಾಗದಿರುವತ್ತ ಗಮನ
ನೀಡುವುದು ಉತ್ತಮ. ಪಶ್ಚಿಮೋತ್ತಾನಾಸನವನ್ನು ಮೂರರಿಂದ ಐದು ನಿಮಿಷಗಳವರೆಗೆ ಮಾಡುವುದೂ ಉತ್ತಮ. ಲಾಭಗಳು ಪಶ್ಚಿಮೋತ್ತಾನಾಸನದ ಅಭ್ಯಾಸದಿಂದ ಜೀರ್ಣಶಕ್ತಿ ಹೆಚ್ಚುವುದು, ಮಲಬದ್ಧತೆ ನಿವಾರಣೆಯಾಗುವುದು, ಬೊಜ್ಜು ಕರಗುವುದು. .
ಜಾನು ಶಿರಸಾಸನ ಹೊಟ್ಟೆಯ ಭಾಗದ ಅಂಗಾಗಗಳನ್ನು ಅಥವಾ ಕಿಬ್ಬೊಟ್ಟೆಯ ಭಾಗದ ಅಂಗಗಳನ್ನು ಉತ್ತೇಜಿಸಲು ಉತ್ತಮ ವಿಧಾನವನ್ನು ಹುಡುಕುತ್ತಿದ್ದರೆ, ಅದಕ್ಕೆ ಯೋಗಾಸನವು ಸರಿಯಾದ ಮಾರ್ಗವಾಗಿರುತ್ತದೆ. ಅದರಲ್ಲೂ ಪರಿವೃತ್ತ ಜಾನು ಶಿರಸಾಸನ ಹೊಟ್ಟೆಯ ಭಾಗದ ಅಂಗಾಗಗಳನ್ನು ಉತ್ತೇಜಿಸಲು ಉತ್ತಮ ಆಸನವಾಗಿದೆ. ಈ ಆಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ: 1. ಮೊದಲಿಗೆ ನೆಲದ ಮೇಲೆ ಕುಳಿತು ಕಾಲುಗಳನ್ನು ಮುಂದಕ್ಕೆ ಚಾಚಿ. 2. ನಂತರ ಒಂದು ಕಾಲನ್ನು ವಿಧಾನವಾಗಿ ಮಡಿಸಿ ತೊಡೆಸಂದಲ್ಲಿ ಇರಿಸಿ. 3. ನಿಧಾನವಾಗಿ ಬಲಮಂಡಿಯನ್ನು ಸಹ ಮಡಿಸಿ ಬಲ ಸೊಂಟದ ಹತ್ತಿರ ಇರಿಸಿ. 4. ಧೀರ್ಘವಾಗಿ ಉಸಿರೆಳೆದುಕೊಂಡು, ಬಲಭಾಗದೆಡೆಗೆ ಬಾಗಿ. 5. ಪಾದದ ಕಡೆಗೆ ಬಾಗಲು ಪ್ರಯತ್ನಿಸಿ. 6. ಬಲಗಾಲಿನ ಕಾಲ್ಬೆರಳುಗಳನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳಿ. 7. ಕಾಲ್ಬೆರಳುಗಳನ್ನು ಎರಡೂ ಕೈಗಳಿಂದ ಹಿಡಿದುಕೊಂಡು, ನಿಧಾನವಾಗಿ ಮಂಡಿಯನ್ನು ನೇರವಾಗಿಸಿ. 8. ನಿಧಾನವಾಗಿ ನಿಮ್ಮ ಹೆಡಕನ್ನು ಸೂರಿನತ್ತ ಮೇಲಕ್ಕೆ ಎತ್ತಿ. 9. ಎಡಗೈಯನ್ನು ತಲೆಯ ಮೇಲಕ್ಕೆ ಚಾಚಬೇಕು. 10. ದೀರ್ಘವಾಗಿ ಉಸಿರೆಳೆದುಕೊಂಡು ಮುಂದಕ್ಕೆ ಚಾಚಿ. 11. ಇದೇ ಭಂಗಿಯಲ್ಲಿ ಸ್ವಲ್ಪ ಸಮಯ ಇರಬೇಕು. 12. ಈ ಕ್ರಮವನ್ನು ಇನ್ನೊಂದು ಕಾಲಿಗೂ ಅನುಸರಿಸಬೇಕು ವಿಪರೀತಕರಣಿ ವಿಪರೀತಕರಣಿಯನ್ನು ನೀವು ಸಾಮಾನ್ಯವಾಗಿ ನೆಲಸ ಮೇಲೆ ಮಾಡಬಹುದು. ಈ ಆಸನ ಮಾಡುವಾಗ ಬೇಕಿದ್ದರೆ ತಲೆಯ ಬಳಿ ಇಟ್ಟುಕೊಳ್ಳಬಹುದು. ನೀವು ಮಲಗಿ ಎರಡು ಕಾಲುಗಳನ್ನು ಗೋಡೆಯ ಮೇಲಿಡಿ. * ಈ ಭಂಗಿಯಲ್ಲಿ ಕೈಗಳನ್ನು ನಿಮ್ಮ ಹತ್ತಿರ ಇಡಿ. * ಉಸಿರಾಟ ಸಾಧಾರಣವಾಗಿರಲಿ * ಈ ಭಂಗಿಯಲ್ಲಿ ದೀರ್ಘ ಉಸಿರನ್ನು ತೆಗೆದು ಬಿಟ್ಟರೆ ಒಳ್ಳೆಯದು
*ನಂತರ ಏಳುವ ಮುಂಚೆ ಕಾಲುಗಳನ್ನು ಕೆಳಗೆ ಇಳಿಸಿ ಒಂದು ಬದಿಗೆ ತಿರುಗಿ ಕಾಲುಗಳನ್ನು ಹಿಡಿದು ಮಲಗಿ. ಈ ಭಂಗಿಯಲ್ಲಿ 5 ನಿಮಿಷ ಇರಿ. ನಂತರ ನಿಧಾನವಾಗಿ ಏಳಿ. ನೀವು ವಿಪರೀತಕರಣಿ 15 ನಿಮಿಷ ಮಾಡಿ. ಈ ಯೋಗಾಸನ ಖಾಲಿ ಹೊಟ್ಟೆಯಲ್ಲಿ ಮಾಡಿ.
ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Thu, 13 October 22