AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾರಸಿಟಮಾಲ್ ಓವರ್ ಡೋಸ್ ನಿಂದ ಮಹಿಳೆ ಸಾವು

ಲಂಡನ್‌ನಲ್ಲಿ 30 ವರ್ಷದ ಲಾರಾ ಹಿಗ್ಗಿಸನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಪ್ಯಾರಸಿಟಮಾಲ್‌ನ ಅಧಿಕ ಪ್ರಮಾಣದಿಂದ ಸಾವನ್ನಪ್ಪಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಕೇವಲ 40 ಕೆಜಿ ತೂಕವಿದ್ದ ಈಕೆಗೆ 1 ಗ್ರಾಂ ಪ್ಯಾರಸಿಟಮಾಲ್ ಮೂರು ಬಾರಿ ನೀಡಲಾಗಿತ್ತು. ಅಧಿಕ ಪ್ರಮಾಣದ ಔಷಧಿ ಸೇವನೆಯು ಸಾವಿಗೆ ಕಾರಣವೆಂದು ಪರಿಗಣಿಸಲಾಗಿದೆ. ಪ್ಯಾರಸಿಟಮಾಲ್ ಸುರಕ್ಷಿತವಾಗಿದ್ದರೂ, ಅದರ ಅತಿಯಾದ ಬಳಕೆಯು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ಪ್ಯಾರಸಿಟಮಾಲ್ ಓವರ್ ಡೋಸ್ ನಿಂದ ಮಹಿಳೆ ಸಾವು
Woman Dies After Paracetamol Overdose
ಅಕ್ಷತಾ ವರ್ಕಾಡಿ
|

Updated on:Dec 29, 2024 | 10:45 AM

Share

ಲಂಡನ್: ಮಹಿಳೆಯೊಬ್ಬಳು ಪ್ಯಾರಸಿಟಮಾಲ್ ಮಾತ್ರೆಯ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿರುವ ಘಟನೆ ಬ್ರಿಟನ್ ನ ವಿಡ್ನೆಸ್ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಲಾರಾ ಹಿಗ್ಗಿಸನ್ (30) ಎಂದು ಗುರುತಿಸಲಾಗಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಮಹಿಳೆ ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯರು ಇಂಟ್ರಾವೆನಸ್ ಟ್ಯೂಬ್ ಮೂಲಕ ಮೂರು ಬಾರಿ 1 ಗ್ರಾಂ ಪ್ರಮಾಣದಲ್ಲಿ ಪ್ಯಾರಾಸಿಟಿಮಲ್ ನೀಡಿದ್ದರು. ಕೇವಲ 40 ಕೆಜಿ ತೂಕವಿದ್ದ ಮಹಿಳೆಗೆ ಇಷ್ಟು ಪ್ರಮಾಣದಲ್ಲಿ ಪ್ಯಾರಾಸಿಟಿಮಲ್ ನೀಡಿರುವುದು ಆಕೆಯ ಸಾವಿಗೆ ಕಾರಣವಾಗಿದೆ.

ಲಾರಾ ಅವರ ಸಾವಿಗೆ ಕಾರಣವೆಂದರೆ ಸೆಪ್ಸಿಸ್, ಸಿರೋಸಿಸ್ ಮತ್ತು ಪ್ಯಾಂಕ್ರಿಯಾಟೈಟಿಸ್‌ನೊಂದಿಗೆ ಅಂಗಾಂಗ ವೈಫಲ್ಯ ಎಂದು ತಿಳಿದುಬಂದಿದೆ. ಚಿಕಿತ್ಸೆ ವೇಳೆ ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯಿಂದಾಗಿ ಲಾರಾ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಆಡಳಿತವು ಕಂಡುಹಿಡಿದಿದೆ. 19 ಏಪ್ರಿಲ್ 2017 ರಂದು ನಡೆದ ಈ ಘಟನೆಯ ಇತ್ತೀಚೆಗೆ ಬೆಳಕಿಗೆ ಬಂದಿವೆ.

ಇದನ್ನೂ ಓದಿ: ತಂದೆ, ಚಿಕ್ಕಪ್ಪ, ಅಜ್ಜನಿಂದ ಬಾಲಕಿ ಮೇಲೆ ಅತ್ಯಾಚಾರ, ಆಕೆ ಈಗ ಎರಡು ತಿಂಗಳ ಗರ್ಭಿಣಿ

ಪ್ಯಾರಸಿಟಮಾಲ್ ಅಪಾಯಕಾರಿಯೇ?

ಸಾಮಾನ್ಯವಾಗಿ ತಲೆನೋವು ಮತ್ತು ಜ್ವರಕ್ಕೆ ವೈದ್ಯರು ಪ್ಯಾರೆಸಿಟಮಾಲ್ ಪೂರಕಗಳನ್ನು ಶಿಫಾರಸು ಮಾಡುತ್ತಾರೆ. ಮಿತ ಪ್ರಮಾಣದಲ್ಲಿ ತೆಗೆದುಕೊಂಡಾಗ ಇವುಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇವುಗಳ ಅತಿಯಾದ ಅಥವಾ ದೀರ್ಘಾವಧಿಯ ಬಳಕೆಯು ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ವಾಕರಿಕೆ ಮತ್ತು ಕಿಬ್ಬೊಟ್ಟೆಯ ನೋವಿನಂತಹ ಅಡ್ಡಪರಿಣಾಮಗಳು ಸಂಭವಿಸಬಹುದು. ಕೆಲವು ಜನರು ತುರಿಕೆ, ಊತ, ಉಸಿರಾಟದ ತೊಂದರೆ ಮುಂತಾದ ಅಲರ್ಜಿಯ ಪ್ರತಿಕ್ರಿಯೆಗಳನ್ನು ಸಹ ಅನುಭವಿಸುತ್ತಾರೆ. ಪ್ಯಾರೆಸಿಟಮಾಲ್ ಮಿತಿಮೀರಿದ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಪ್ಯಾರೆಸಿಟಮಾಲ್ ಥ್ರಂಬೋಸೈಟೋಪೆನಿಯಾ, ಲ್ಯುಕೋಪೆನಿಯಾ ನಂತಹ ರಕ್ತದ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:44 am, Sun, 29 December 24

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ