ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
Bigg Boss Kannada: ಬಿಗ್ಬಾಸ್ ಕನ್ನಡ ಮನೆಯಲ್ಲಿ ಶನಿವಾರದ ಎಪಿಸೋಡ್ ಭಾರಿ ಜಗಳಿಂದ ಕೂಡಿರುವ ನಿರೀಕ್ಷೆ ಮೂಡಿಸಿದೆ ಹೊಸದಾಗಿ ಬಿಡುಗಡೆ ಆಗಿರುವ ಪ್ರೋಮೋ. ಭವ್ಯಾ ಕಳ್ಳದಾರಿಯಲ್ಲಿ ಕ್ಯಾಪ್ಟನ್ ಆಗಲು ಸಹಾಯ ಮಾಡಿದ ರಜತ್ ವಿರುದ್ಧ ಚೈತ್ರಾ ಉರಿದು ಬಿದ್ದಿದ್ದಾರೆ. ರಜತ್ಗೆ ಖಡಕ್ ಡೈಲಾಗ್ಗಳನ್ನು ಹೊಡೆದಿರುವ ಚೈತ್ರಾ, ನಿನ್ನ ರೌಡಿಸಂ ನನ್ನ ಬಳಿ ಬೇಡ ಎಂದಿದ್ದಾರೆ.
ರಜತ್ಗೆ ಬಿಗ್ಬಾಸ್ ಮನೆಯಲ್ಲಿ ಎದುರಾಳಿಯೇ ಇಲ್ಲದಂತಾಗಿದ್ದು, ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ತಮ್ಮ ಅಗ್ರೆಸ್ಸಿವ್ ಆಟದ ಮೂಲಕ ಗಮನ ಸೆಳೆದಿದ್ದರು. ಇತರೆ ಸ್ಪರ್ಧಿಗಳ ಮೇಲೂ ಸಹ ಧಮನಕಾರಿ ರೀತಿಯಿಂದಲೇ ವರ್ತಿಸುತ್ತಿದ್ದರು. ಅವರ ಮಾತಿಗೆ ಮಾತು ಕೊಡಲಾಗದೆ ಹಲವರು ಸೋತಿದ್ದರು. ಆದರೆ ಈಗ ಚೈತ್ರಾ ಕುಂದಾಪುರ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಳ್ಳದಾರಿ ಮೂಲಕ ಭವ್ಯಾ ಅನ್ನು ಕ್ಯಾಪ್ಟನ್ ಮಾಡುವಲ್ಲಿ ರಜತ್ ಪಾತ್ರ ಇದೆಯೆಂದು ತಿಳಿದ ಮೇಲೆ ರಜತ್ ವಿರುದ್ಧ ಚೈತ್ರಾ ಹರಿಹಾಯ್ದಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ದೊಡ್ಡದಾಗಿದ್ದು, ನಿನ್ನ ರೌಡಿಸಂ ನನ್ನ ಹತ್ರ ಬೇಡವೆಂದು ಆವಾಜ್ ಹಾಕಿದ್ದಾರೆ ಚೈತ್ರಾ ಕುಂದಾಪುರ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos