Lockdown Babies: ಲಾಕ್ಡೌನ್ನಲ್ಲಿ ಹುಟ್ಟಿರುವ ಶಿಶುಗಳು ಬೇರೆ ಶಿಶುಗಳಿಗಿಂತ ಭಿನ್ನ ಹೇಗೆ? ಅಧ್ಯಯನ ಹೇಳುವುದೇನು?
ಹೊರಗಡೆ ಸುತ್ತಾಟವಿಲ್ಲ, ಮನೆಗೆ ಸ್ನೇಹಿತರು, ಬಂಧುಗಳು, ಹಿರಿಯರ ಆಗಮನವಿಲ್ಲ, ಮಗುವಿಗೆ ತಂದೆ ತಾಯಿ ಬಿಟ್ಟು ಬೇರೆಯವರ ಪರಿಚಯವೇ ಇಲ್ಲ.
ಹೊರಗಡೆ ಸುತ್ತಾಟವಿಲ್ಲ, ಮನೆಗೆ ಸ್ನೇಹಿತರು, ಬಂಧುಗಳು, ಹಿರಿಯರ ಆಗಮನವಿಲ್ಲ, ಮಗುವಿಗೆ ತಂದೆ ತಾಯಿ ಬಿಟ್ಟು ಬೇರೆಯವರ ಪರಿಚಯವೇ ಇಲ್ಲ. ತಂದೆ-ತಾಯಿಯಾದರೂ ಮಗುವಿನ ಜತೆ ಎಷ್ಟು ಹೊತ್ತು ಮಾತನಾಡಲಾದೀತು. ಹೀಗಾಗಿ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಹುಟ್ಟಿದ ಶಿಶುಗಳು ಇತರೆ ಶಿಶುಗಳಿಗಿಂತ ಭಿನ್ನವಾಗಿದೆ ಎಂದು ಅಧ್ಯಯನ ಹೇಳಿದೆ.
ಶಿಶುವಿನ ಸಂವಹನವು ತೀರಾ ಕಳಪೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಮನೆಗೊಂದು ಶಿಶು ಬಂದಿದೆ ಎಂದ ತಕ್ಷಣ ಅಕ್ಕಪಕ್ಕದ ಮನೆಯವರು, ನೆಂಟರಿಷ್ಟರು, ಹಿರಿಯರು, ಸ್ನೇಹಿತರು, ಮಕ್ಕಳು ಒಬ್ಬರಲ್ಲಾ ಒಬ್ಬರು ಸುಮಾರು ಒಂದು ವರ್ಷದವರೆಗೂ ಮನೆಯಲ್ಲೇ ಜತೆಯಲ್ಲೇ ಇರುತ್ತಾರೆ.
ಶಿಶು ನಿದ್ರೆ ಮಾಡಿದ ಅವಧಿಯೊಂದು ಬಿಟ್ಟು ಇಡೀ ದಿನವು ಮಗುವಿಗೆ ಅರ್ಥವಾಗುತ್ತೋ ಬಿಡುತ್ತೋ ಆದರೆ ಮಗುವಿನ ಜತೆ ಮಾತನಾಡುತ್ತಲೇ ಇರುತ್ತಾರೆ. ಹಾಗಾಗಿ ಮಕ್ಕಳು ಬೇಗ ಮಾತನಾಡಲು ಕಲಿಯುತ್ತಾರೆ. ಆದರೆ ಲಾಕ್ಡೌನ್ ಎಂಬುದು ನವಜಾತ ಶಿಶುಗಳ ಮೇಲೆ ಪರಿಣಾಮ ಬೀರಿದೆ, ಅವು ಉತ್ತಮ ಸಂವಹನ ಮಾಡುವಲ್ಲಿ ಸೋತಿವೆ.
ಹಾಗಾಗಿ ಮಗು ವರ್ಷ ಕಳೆದರೂ ಪೋಷಕರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಿಲ್ಲ. ಮಾತನಾಡುವುದು ಕೂಡ ತಡವಾಗಿದೆ ಎಂದು ಸಂಶೋಧನೆ ಹೇಳಿದೆ. ಮಾರ್ಚ್ ಮತ್ತು ಮೇ 2020 ರ ನಡುವೆ ಮೂರು ತಿಂಗಳ ಅವಧಿಯಲ್ಲಿ ಜನಿಸಿದ 309 ಮಕ್ಕಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.
ಹೆಜ್ಜೆ ಹಾಕುವುದು, ತಾವೇ ಎದ್ದು ನಿಲ್ಲುವುದು, ವಸ್ತುಗಳನ್ನು ಹಿಡಿದುಕೊಳ್ಳುವುದು, ಆಹಾರ ಸೇವನೆ, ತಮ್ಮದೇ ಹೆಸರನ್ನು ತಿಳಿದುಕೊಳ್ಳುವುದು, ವಸ್ತುಗಳನ್ನು ಗುರುತಿಸುವುದು ಇವೆಲ್ಲದರಿಂದ ಸ್ವಲ್ಪ ಹಿಂದಿರುವುದಾಗಿ ತಿಳಿದುಬಂದಿದೆ.
ಹೆಚ್ಚು ಹೊತ್ತು ನೆಲದ ಮೇಲೆ ಮಗುವನ್ನು ಮಲಗಿಸುವುದರಿಂದ ಮಗು ತೆವಳುತ್ತಾರೆ, ಎದ್ದು ನಿಲ್ಲಲು ಸಾಧ್ಯವಾಗುವುದಿಲ್ಲ ಎನ್ನುತ್ತೆ ಅಧ್ಯಯನ.
ಮಾಸ್ಕ್ ಧರಿಸುವುದು, ಮಕ್ಕಳಿಂದ ಅಂತರ ಕಾಯ್ದುಕೊಳ್ಳುವುದು ಮಕ್ಕಳ ಮಾನಸಿಕತೆ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳು ಜನರನ್ನು ಬಹುಬೇಗ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಲಾಕ್ಡೌನ್ ಸಮಯದಲ್ಲಿ ಜನಿಸಿರುವ ಶಿಶುಗಳು ತುಂಬಾ ಜನರು ಸೇರಿರುವ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ತುಂಬಾ ಜನರು ಒಟ್ಟೊಟ್ಟಿಗೆ ಮಾತನಾಡುತ್ತಿದ್ದರೆ ಭಯ ಬೀಳುತ್ತಾರೆ.
ಏನು ಮಾಡಬೇಕು? -ಮಗುವು ಬೇರೆಯವರೊಂದಿಗೆ ಸಂವನ ಮಾಡಲು ಹೆದರುತ್ತಿದೆ ಎಂದಾದರೆ ಕ್ರಮೇಣವಾಗಿ ನಿಮ್ಮ ಸ್ನೇಹಿತರನ್ನು ಪರಿಚಯಿಸಿ, ಹೆಚ್ಚು ಜನರಿರುವ ಪ್ರದೇಶಗಳಿಗೆ ಆಗಾಗ ಕರೆದುಕೊಂಡು ಹೋಗುತ್ತಿರಿ, ಕ್ರಮೇಣವಾಗಿ ಅವರ ಮನಸ್ಥಿತಿ ಬದಲಾಗುತ್ತದೆ.
-ಮೊಬೈಲ್ ಅಥವಾ ಟಿವಿಯಲ್ಲಿ ನಿಮ್ಮ ಕುಟುಂಬದವರು ಅಥವಾ ನಿಮ್ಮ ಸ್ನೇಹಿತರ ಫೋಟೊವನ್ನು ಆಗಾಗ ತೋರಿಸುತ್ತಿರಿ, ಒಂದೊಮ್ಮೆ ಸ್ನೇಹಿತರು ಸಿಕ್ಕಾಗ ಅವರಿಗೆ ಬಹುಬೇಗ ಮಕ್ಕಳು ಹೊಂದಿಕೊಳ್ಳುತ್ತಾರೆ.
-ಮಗುವನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿ ಸುತ್ತಮುತ್ತಲ ಪರಿಸರ, ಜನರನ್ನು ನೋಡಿ ಕ್ರಮೇಣವಾಗಿ ಬೇರೆ ಮಕ್ಕಳಂತೆ ಸಹಜವಾಗಿ ವರ್ತಿಸುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ