AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಕೋಶ ಇಲ್ಲದ ಯುವತಿಗೆ ಯೋನಿ ಪುನರ್​​ ರಚನೆ ಚಿಕಿತ್ಸೆ ಯಶಸ್ವಿ

ಬೆಂಗಳೂರಿನಲ್ಲಿ ಅಪರೂಪದ ಪ್ರಕರಣವೊಂದು ವರದಿಯಾಗಿದೆ. 28 ವರ್ಷದ ಯುವತಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಗರ್ಭಕೋಶವಿಲ್ಲದಿರುವುದು ಕಂಡುಬಂದಿತು. ಲ್ಯಾಪ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಯೋನಿಯನ್ನು ಪುನರ್ನಿರ್ಮಿಸಲಾಗಿದೆ. ಅವರು ಅಂಡಾಶಯ ಹೊಂದಿರುವುದರಿಂದ ಬಾಡಿಗೆ ತಾಯ್ತನದ ಮೂಲಕ ತಾಯಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಗರ್ಭಕೋಶ ಇಲ್ಲದ ಯುವತಿಗೆ ಯೋನಿ ಪುನರ್​​ ರಚನೆ ಚಿಕಿತ್ಸೆ ಯಶಸ್ವಿ
ಗರ್ಭಕೋಶ ಇಲ್ಲದ ಯುವತಿಗೆ ಯೋನಿ ಪುನರಚನೆ ಚಿಕಿತ್ಸೆ ಯಶಸ್ವಿ
TV9 Web
| Edited By: |

Updated on:Dec 28, 2024 | 5:52 PM

Share

ಸಾಮಾನ್ಯವಾಗಿ ಬಹುತೇಕ ಮಹಿಳೆಯರಿಗೆ (Woman) ಗರ್ಭಕೋಶ ಮತ್ತು ಯೋನಿ ಮಾರ್ಗದಲ್ಲಿ ಸಮಸ್ಯೆ ಇರುವುದು ಗೊತ್ತೇ ಇರುವುದಿಲ್ಲ. ಈ ಸಮಸ್ಯೆಯು ಆಕೆಯ ಲೈಂಗಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಪ್ರಕರಣವೊಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದೆ.

28 ವರ್ಷದ ಯುವತಿ ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ವೈದ್ಯರನ್ನು ಸಂಪರ್ಕಿಸಿದಳು. ಬಳಿಕ ಆಕೆಯನ್ನು ಪರೀಕ್ಷಿಸಿದ ವೈದ್ಯರು ಯುವತಿಯಲ್ಲಿ ಅಂಡಾಶಯವಿದ್ದು, ಯೋನಿ ಮಾರ್ಗದಲ್ಲಿ ಸಮಸ್ಯೆ ಮತ್ತು ಗರ್ಭಕೋಶವಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮಾಹಿತಿ ನೀಡಿದ ಬೆಂಗಳೂರಿನ ವಾಸವಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ನಿಶಾ ಬುಚಾಡೆ, ಹೀಗೆ ಗರ್ಭಕೋಶವೇ ಬೆಳೆಯದಿರುವುದಕ್ಕೆ ಮುಲೇರಿಯನ್ ಏಜೆನಿಸಿಸ್ ಎನ್ನಲಾಗುತ್ತದೆ. ಇದೊಂದು ಅತೀ ವಿರಳವಾದ ಪ್ರಕರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Dry ginger powder: ಚಳಿಗಾಲದಲ್ಲಿ ದೇಹಕ್ಕೆ ಅಮೃತ ಒಣ ಶುಂಠಿ ಪುಡಿಯ ನೀರು

ಯುವತಿಯ ಸಮಸ್ಯೆ ಆಲಿಸಿದ ವೈದ್ಯರು ಎಂಆರ್​ಐ ಪರೀಕ್ಷೆ ನಡೆಸಿದರು. ತದನಂತರ ಕೂಲಂಕುಶವಾಗಿ ವರದಿಯನ್ನು ಪರೀಕ್ಷಿಸಿದಾಗ, ಯೋನಿ ಇರಬೇಕಾದ ಜಾಗದಲ್ಲಿ ದೊಡ್ಡದಾದ ಗಡ್ಡೆಯಿತ್ತು ಇದರಿಂದಾಗಿ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ ಯುವತಿಯಲ್ಲಿ ಗರ್ಭಾಶಯ ಮತ್ತು ಯೋನಿ ಇಲ್ಲದಿರುವುದು ಎಂಆರ್​​ಐನಲ್ಲಿ ಖಚಿತವಾಯಿತು. ತದನಂತರ ಯುವತಿಯ ಹೊಟ್ಟೆ ನೋವಿಗೆ ಕಾರಣವಾದ ದೊಡ್ಡದಾದ ಗಡ್ಡೆಯನ್ನು ಲ್ಯಾಪ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಯಿತು. ಬಳಿಕ ಆ ಜಾಗದಲ್ಲಿ ಯೋನಿ ಪುನರ್ ರಚನೆ ಮಾಡಲಾಯಿತು ಎಂದು ಡಾ. ನಿಶಾ ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನ ಪ್ರಯಾಣಕ್ಕೆ ಕಠಿಣ ನಿಯಮ: ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅವಕಾಶ

ಇದೊಂದು ವಿರಳ ಪ್ರಕರಣ ಎಂದು ಹೇಳಲಾಗುತ್ತಿದ್ದು, ವೈದ್ಯಕೀಯ ಭಾಷೆಯಲ್ಲಿ ಈ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ನಂತರ ಯುವತಿಯು ಎಲ್ಲಾ ಮಹಿಳೆಯರಂತೆ ಯೋನಿಯನ್ನು ಹೊಂದಿದ್ದು, ಸಾಮಾನ್ಯ ಸಂವೇದನೆಯೊಂದಿಗೆ ಚೇತರಿಕೆ ಕಾಣುತ್ತಿದ್ದಾಳೆ. ಅಲ್ಲದೆ ಯುವತಿಯು ಅಂಡಾಶಯ ಹೊಂದಿರುವುದರಿಂದ, ತನ್ನದೇ ಮಗುವನ್ನ ಪಡೆಯಲು ಸಶಕ್ತಳಾಗಿದ್ದಾಳೆ. ಆದರೆ ಗರ್ಭಕೋಶವಿಲ್ಲದಿರುವ ಕಾರಣ ಬಾಡಿಗೆ ತಾಯ್ತನದ ಮೂಲಕ ಆಕೆ ಮಗುವನ್ನು ಹೊಂದಬಹುದು ಎಂದು ಡಾ.ನಿಶಾ ಬುಚಾಡೆ ಹೇಳಿದ್ದಾರೆ.

ಮತ್ತಷ್ಟು ಜೀವನಶೈಲಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:31 pm, Sat, 28 December 24