AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dry ginger powder: ಚಳಿಗಾಲದಲ್ಲಿ ದೇಹಕ್ಕೆ ಅಮೃತ ಒಣ ಶುಂಠಿ ಪುಡಿಯ ನೀರು

ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ಎಲ್ಲ ರೀತಿಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಜ್ವರ, ಶೀತದಂತಹ ರೋಗಗಳು ನಮ್ಮ ದೇಹವನ್ನು ಪ್ರವೇಶ ಮಾಡುತ್ತದೆ. ಅದಕ್ಕಾಗಿ ಈ ಎಲ್ಲ ರೋಗಕ್ಕೂ ಒಂದು ಪರಿಹಾರಬೇಕು ಅದಕ್ಕೆ ತಜ್ಞರು ತಿಳಿಸುವುದು ಒಣ ಶುಂಠಿ ಪುಡಿಯ ನೀರು. ಇದು ನಮ್ಮ ದೇಹವನ್ನು ಡ್ರೈ ಆಗುವುದನ್ನು ತಡೆಯುತ್ತದೆ. ಹಾಗೂ ನಾವು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.ಅದಲ್ಲೂ ಇದು ಮಹಿಳೆ ತುಂಬಾ ಅದ್ಭುತ ಔಷಧಿಯಾಗಿದೆ. ಮಹಿಳೆಯರಲ್ಲಿ ಕಾಣುವ ಈ ಸಮಸ್ಯೆ ಇದು ಪರಿಹಾರ. ಆ ಸಮಸ್ಯೆಯಾವುದು ಹಾಗೂ ಇದನ್ನು ಕುಡಿಯುವುದರಿಂದ ಉಂಟಾಗುವ ಲಾಭಗಳೇನು? ಇಲ್ಲಿದೆ ನೋಡಿ

Dry ginger powder: ಚಳಿಗಾಲದಲ್ಲಿ ದೇಹಕ್ಕೆ ಅಮೃತ ಒಣ ಶುಂಠಿ ಪುಡಿಯ ನೀರು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 28, 2024 | 4:04 PM

Share

ಚಳಿಗಾಲಕ್ಕೆ ದೇಹದ ಭಾಗಗಳು ಒಣಗುವುದು ಸಹಜ. ಇದು ದೇಹದ ಮೇಲೆ ತುಂಬಾ ಪರಿಣಾಮಗಳನ್ನು ಉಂಟು ಮಾಡಬಹುದು. ಚಳಿಗಾಲದಲ್ಲಿ ದೇಹ ಡ್ರೈ ಆಗುತ್ತದೆ. ಆಗ ನಮ್ಮ ದೇಹದ ಆರೋಗ್ಯದಲ್ಲೂ ಏರುಪೇರು ಆಗುತ್ತದೆ. ಚಳಿಗಾಲದಲ್ಲಿ ನೆಗಡಿ, ಕೆಮ್ಮು ಮತ್ತು ಜ್ವರ ಸಾಮಾನ್ಯ. ಈ ಸಮಯದಲ್ಲಿ ನಮ್ಮ ದೇಹಕ್ಕೆ ಅಮೃತ ಆಗುವುದು ನಮ್ಮ ಅಡುಗೆ ಕೊಣೆಯಲ್ಲಿರುವ ಪದಾರ್ಥಗಳು. ಅದರಲ್ಲೂ ಈ ಚಳಿಗೆ ಒಣ ಶುಂಠಿ ಪುಡಿ ಉತ್ತಮ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಇದನ್ನು ಕುಡಿಯಬೇಕು. ಇದನ್ನು ನಿಮ್ಮ ಆಹಾರದಲ್ಲೂ ಸೇರಿಸಿಕೊಳ್ಳಬಹುದು. ಇದು ದೇಹವನ್ನು ಚಟುವಟಿಕೆಯಿಂದ, ರೋಗಗಳಿಂದ ಮುಕ್ತಿ ನೀಡುತ್ತದೆ. ಪೌಷ್ಟಿಕತಜ್ಞ ರೂಪಾಲಿ ದತ್ತಾ ಈ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಒಣ ಶುಂಠಿ ಪುಡಿ ನೀರಿನ ಆರೋಗ್ಯ ಪ್ರಯೋಜನಗಳು:

  • ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ: ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಸಾಮಾನ್ಯ ಶೀತಗಳು ಮತ್ತು ಕೆಮ್ಮುಗಳಿಗೆ ಉತ್ತಮವಾಗಿರುತ್ತದೆ.
  • ತೂಕ ನಷ್ಟ: ಚಳಿಗಾಲದಲ್ಲಿ, ನಾವು ಸಾಮಾನ್ಯಕ್ಕಿಂತ ಹೆಚ್ಚು ತಿನ್ನುತ್ತೇವೆ. ಇದು ಹೆಚ್ಚುವರಿ ಕ್ಯಾಲೋರಿಗಳ ಸೇವನೆಗೆ ಕಾರಣವಾಗಬಹುದು, ಇದರ ಪರಿಣಾಮವಾಗಿ ತೂಕ ಹೆಚ್ಚಾಗುತ್ತದೆ. ಆಗಾ ಒಂದು ವೇಳೆ ತೂಕ ಕಡಿಮೆ ಮಾಡಬೇಕೆಂದರೆ ಒಣ ಶುಂಠಿ ಪುಡಿ ನೀರನ್ನು ಸೇವನೆ ಮಾಡಿ.
  • ಜೀರ್ಣಕಾರಿ ಆರೋಗ್ಯಕ್ಕೆ: ಈ ನೀರು ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಉತ್ತಮವಾಗಿದೆ. ಶುಂಠಿಯ ಪುಡಿಯು ಜಿಂಜರಾಲ್‌ಗಳು ಮತ್ತು ಶೋಗೋಲ್‌ಗಳಂತಹ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಜೀರ್ಣಕಾರಿ ರಸವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಅದರ ನೀರನ್ನು ಕುಡಿಯುವುದರಿಂದ ಉಬ್ಬುವುದು, ಗ್ಯಾಸ್ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
  • ಕೀಲುಗಳನ್ನು ಗಟ್ಟಿಗೊಳಿಸುತ್ತದೆ: ಶೀತ ವಾತಾವರಣವು ಚಳಿಗಾಲದಲ್ಲಿ ನಮ್ಮ ಕೀಲುಗಳನ್ನು ಗಟ್ಟಿಗೊಳಿಸಬಹುದು.ಇದರಿಂದ ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ ಎಂದು ಪೌಷ್ಟಿಕತಜ್ಞ ರುಜುತಾ ದಿವೇಕರ್ ವಿವರಿಸುತ್ತಾರೆ.
  • ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಒಣ ಶುಂಠಿಯ ಪುಡಿ ಮುಟ್ಟಿನ ಸೆಳೆತದಿಂದ ಪರಿಹಾರವನ್ನು ನೀಡುತ್ತದೆ. ಫಲಿತಾಂಶವು ತಕ್ಷಣವೇ ಇಲ್ಲದಿದ್ದರೂ, ನಿಯಮಿತವಾಗಿ ಸೇವಿಸುವುದರಿಂದ ನೀವು ಪ್ರತಿ ತಿಂಗಳು ಅನುಭವಿಸುವ ನೋವನ್ನು ಕ್ರಮೇಣ ಕಡಿಮೆ ಮಾಡಬಹುದು. ಆದ್ದರಿಂದ, ಮಾತ್ರೆಗಳನ್ನು ಅವಲಂಬಿಸುವ ಬದಲು ಇದನ್ನು ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ 

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು