AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಯುವ ಪೀಳಿಗೆಗೆ ಮಾದರಿ ಯಾಕೆ? ರತನ್ ಅವರ ಸಾಧನೆಯ ಹಾದಿಯ ಚಿತ್ರಣ ಇಲ್ಲಿದೆ

Ratan Tata Birth Anniversary 2024: ರತನ್ ಟಾಟಾರವರು ಕೇವಲ ಉದ್ಯಮಿಯಷ್ಟೇ ಅಲ್ಲ, ತನ್ನ ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದರು. 1937ರ ಡಿಸೆಂಬರ್‌ 28 ರಂದು ಮುಂಬೈನಲ್ಲಿ ನೇವಲ್‌ ಟಾಟಾ ಮತ್ತು ಸೂನಿ ಪುತ್ರನಾಗಿ, ಟಾಟಾ ಸಮೂಹದ ಸ್ಥಾಪಕ ಜೆಮ್‌ ಶೆಡ್‌ ಜೀ ಟಾಟಾ ಮೊಮ್ಮಗನಾಗಿ ರತನ್ ಟಾಟಾ ಜನಿಸಿದರು. ಡಿಸೆಂಬರ್ 28 ರಂದು ರತನ್ ಟಾಟಾರವರ ಹುಟ್ಟಿದ ದಿನವಾಗಿದ್ದು, ಟಾಟಾ ಗ್ರೂಪ್ ಅಧ್ಯಕ್ಷರಾಗಿ ಯಶಸ್ವಿಯಾಗಿ ಉದ್ಯಮ ನಡೆಸಿ, ಯುವಕರಿಗೆ ಸ್ಫೂರ್ತಿಯ ಸೆಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ರತನ್ ಟಾಟಾರವರ ಜೀವನದ ಹಾದಿ ಹೇಗಿತ್ತು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಯುವ ಪೀಳಿಗೆಗೆ ಮಾದರಿ ಯಾಕೆ? ರತನ್ ಅವರ ಸಾಧನೆಯ ಹಾದಿಯ ಚಿತ್ರಣ ಇಲ್ಲಿದೆ
ರತನ್ ಟಾಟಾ
ಸಾಯಿನಂದಾ
| Edited By: |

Updated on:Dec 27, 2024 | 6:55 PM

Share

ಶ್ರೀಮಂತ ಉದ್ಯಮಿಯಾಗಿದ್ದರೂ ರತನ್ ಟಾಟಾ ಅತ್ಯಂತ ಸರಳ ವ್ಯಕ್ತಿತ್ವದಿಂದ ಗುರುತಿಸಿಕೊಂಡವರು. ತನ್ನ ಮಾತು, ನೇರ ನುಡಿ, ಬೆರೆಯುವ ಗುಣಗಳಿಂದಲೇ ಎಲ್ಲರಿಗೂ ಕೂಡ ಹತ್ತಿರವಾಗಿದ್ದರು. ಅವರ ಜೀವನದ ಹಾದಿ ಯುವ ಪೀಳಿಗೆಗೆ ಸ್ಫೂರ್ತಿಯ ದಾರಿದೀಪ. ಡಿಸೆಂಬರ್ 28 ಖ್ಯಾತ ಉದ್ಯಮಿ ರತನ್ ಟಾಟಾರವರ ಹುಟ್ಟಿದ ದಿನ. ಮುಂಬೈನಲ್ಲಿ ನೇವಲ್‌ ಟಾಟಾ ಮತ್ತು ಸೂನಿ ಪುತ್ರನಾಗಿ ಹುಟ್ಟಿದರಾದರೂ,1948 ರಲ್ಲಿ ಟಾಟಾರವರ ತಂದೆ ತಾಯಿಯೂ ಬೇರ್ಪಟ್ಟರು. ಹೀಗಾಗಿ ಅಜ್ಜಿ ನವಾಜಬಾಯಿ ಟಾಟಾರವರ ಆಶ್ರಯದಲ್ಲಿಯೇ ಬೆಳೆದರು. ಉದ್ಯಮ ಕ್ಷೇತ್ರದಲ್ಲಿ ಇಡೀ ವಿಶ್ವವೇ ತಿರುಗುವಂತೆ ಸಾಧನೆ ಮಾಡಿ ರತನ್ ಟಾಟಾ ಅವರಿಗೆ ಸಲ್ಲುತ್ತದೆ.

ಅಜ್ಜಿಯ ಆಶ್ರಯದಲ್ಲಿ ಬೆಳೆದ ಟಾಟಾರವರು ಮುಂಬೈನಲ್ಲೇ ಕಾಲೇಜು ಶಿಕ್ಷಣ ಪಡೆದಿದ್ದ ರತನ್ ಟಾಟಾ ಅಮೆರಿಕಾದ ಕಾರ್ನೆಲ್ ಯೂನಿವರ್ಸಿಟಿಯ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. 1961ರಲ್ಲಿ ತಮ್ಮ ಮುತ್ತಜ್ಜ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ಟಾಟಾ ಸಂಸ್ಥೆಗೆ ಸೇರಿಕೊಂಡ ಸಂದರ್ಭದಲ್ಲಿ ಟಾಟಾ ಸ್ಟೀಲ್​ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದರೆ ನಿಜಕ್ಕೂ ನಂಬಲೇಬೇಕು. 1962ರಲ್ಲಿ ರತನ್ ಟಾಟಾರವರು ಸಹಾಯಕರಾಗಿ ನೇಮಕಗೊಂಡರು. 1974ರಲ್ಲಿ ಟಾಟಾ ಸನ್ಸ್​ ಡೈರೆಕ್ಟರ್ ಸ್ಥಾನವನ್ನು ಅಲಂಕರಿಸಿದರು. ಅದಲ್ಲದೇ 21ವರ್ಷಗಳ ಟಾಟಾ ಗ್ರೂಪ್​ನ ಮುನ್ನಡೆಸುವ ಮೂಲಕ ರತನ್ ಟಾಟಾ, ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಲಾಭವನ್ನು ತಂದು ಕೊಟ್ಟರು.

ಹೀಗೆ ಹಂತಹಂತವಾಗಿ ಬೆಳೆದ ರತನ್ ಟಾಟಾ 1991ರಲ್ಲಿ ಟಾಟಾ ಗ್ರೂಪ್‌ನ ಚೇರ್ಮನ್‌ ಆಗಿ ಆಯ್ಕೆಯಾದರು. ಆದಾದ ಬಳಿಕ ರತನ್ ಟಾಟಾ ಉಸ್ತುವಾರಿಯಲ್ಲಿ ಟಾಟಾ ಸಮೂಹ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿತು. ಹೀಗಿರುವಾಗಲೇ 2012ರಲ್ಲಿ ಟಾಟಾ ಸನ್ಸ್‌ನಿಂದ ಹೊರಬಂದಿದ್ದ ರತನ್‌ ಟಾಟಾ ಪೇಟಿಎಂ, ಓಲಾ ಎಲೆಕ್ಟ್ರಿಕ್, ಅರ್ಬನ್ ಕಂಪನಿ ಹೀಗೆ, ಹತ್ತು ಹಲವು ಸ್ಟಾರ್ಟಪ್‌ ಕಂಪನಿಗಳಿಗೆ ಹೂಡಿಕೆ ಮಾಡುವತ್ತ ಗಮನ ಹರಿಸಿದರು.

ಇದನ್ನೂ ಓದಿ: ಫುಡ್ ಸ್ಟಾರ್ಟ್ ಅಪ್ ಕಂಪೆನಿ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಾಜಿ ಇಂಜಿನಿಯರ್ ಬ್ರಿಜಿತ್ ಕೃಷ್ಣ, ಕೇರಳದ ಯಶಸ್ವಿ ಉದ್ಯಮಿ

ಅದರೊಂದಿಗೆ ಭಾರತೀಯ ಆರ್ಥಿಕತೆಯ ಉದಾರೀಕರಣ ವೇಳೆಯಲ್ಲಿ ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ವೆಚ್ಚದ ಕಾರು ದೊರೆಯುವಂತೆ ಮಾಡಿದ್ದರು. ಹೌದು, ಟಾಟಾ ನ್ಯಾನೋ ಮತ್ತು ಟಾಟಾ ಇಂಡಿಕಾ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೀರ್ತಿಗೆ ಇವರಿಗೆ ಸಲ್ಲುತ್ತದೆ. ಆ ವೇಳೆಯಲ್ಲಿ ಈ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಅದಲ್ಲದೇ ರತನ್ ಟಾಟಾರವರು ಟಾಟಾ ಟೀ, ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಸ್ಥಾಪಿಸಿದ್ದರು. ಉದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ಸಮಾಜ ಮುಖಿ ಕೆಲಸಗಳಿಗೆ ಕೇಂದ್ರ ಸರ್ಕಾರವು ಪದ್ಮಭೂಷಣ, ಪದ್ಮ ವಿಭೂಷಣ ನೀಡಿ ಪ್ರಶಸ್ತಿ ನೀಡಿ ಗೌರವಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Fri, 27 December 24

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ