Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಯನ್ಸ್ ಸಾಮ್ರಾಜ್ಯ ಕಟ್ಟಿದ ಧೀರೂಭಾಯಿ ಅಂಬಾನಿ ಸಾಗಿ ಬಂದ ಹಾದಿ ಹೇಗಿತ್ತು? ಇಲ್ಲಿದೆ ಕುತೂಹಲಕಾರಿ ಸಂಗತಿ

Dhirubhai Ambani Birth Anniversary 2024:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯ ವಾಣಿಜ್ಯ ಸಾಮ್ರಾಜ್ಯಗಳಲ್ಲಿ ಒಂದಾಗಿದೆ. ಅಂದು, 500 ರೂಪಾಯಿಯೊಂದಿಗೆ ತನ್ನ ಕನಸನ್ನು ನನಸಾಗಿಸಲು ಮತ್ತು ವ್ಯಾಪಾರ ಜಗತ್ತಿನಲ್ಲಿ ತನ್ನ ಸಾಮ್ರಾಜ್ಯವನ್ನು ನಿರ್ಮಿಸಲು ಮುಂಬೈ ಹೊರಟು ನಿಂತರು. ತದನಂತರದಲ್ಲಿ ಧೀರೂಭಾಯಿ ಅಂಬಾನಿ ಯಾರು ಕೂಡ ಊಹೆ ಮಾಡದ ಮಟ್ಟಿಗೆ ಬೆಳೆದು ಅಚ್ಚರಿ ಮೂಡಿಸಿದ್ದರು. ಧೀರೂಭಾಯಿ ಅಂಬಾನಿ ಅವರು 28 ಡಿಸೆಂಬರ್ 1932 ರಂದು ಜುನಾಗಢದಲ್ಲಿ ಜನಿಸಿದರು. ಇಂದು ಧೀರೂಭಾಯಿ ಅಂಬಾನಿ ಅವರ 92 ನೇ ಜನ್ಮದಿನವಾಗಿದೆ. ರಿಲಯನ್ಸ್ ಸಾಮ್ರಾಜ್ಯವನ್ನು ಧೀರುಭಾಯಿ ಕಟ್ಟಿದ್ದು ಹೇಗೆ? ಅವರ ಸಾಧನೆಯ ಹಾದಿ ಹೇಗಿತ್ತು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಿಲಯನ್ಸ್ ಸಾಮ್ರಾಜ್ಯ ಕಟ್ಟಿದ ಧೀರೂಭಾಯಿ ಅಂಬಾನಿ ಸಾಗಿ ಬಂದ ಹಾದಿ ಹೇಗಿತ್ತು? ಇಲ್ಲಿದೆ ಕುತೂಹಲಕಾರಿ ಸಂಗತಿ
ಧೀರೂಭಾಯಿ ಅಂಬಾನಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2024 | 10:28 AM

ಭಾರತೀಯ ಉದ್ಯಮ ರಂಗದಲ್ಲಿ ಬಹುದೊಡ್ಡ ಸಂಸ್ಥೆಯಾಗಿ ಬೆಳೆದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಈ ಸಂಸ್ಥೆಯನ್ನು ಪ್ರಾರಂಭಿಸಿದ್ದೆ ಧೀರೂಭಾಯಿ ಅಂಬಾನಿ. ಆದರೆ ಇಂದು ಅಧಿಕ ಮಾರುಕಟ್ಟೆ ಬಂಡವಾಳ ಹೊಂದಿರುವ ಈ ಬೃಹತ್ ಕಂಪನಿಯ ವ್ಯವಹಾರವು ಹಲವು ವಲಯಗಳಲ್ಲಿ ವಿಸ್ತರಿಸಿಕೊಂಡಿದೆ. ಹೌದು, 1932ರ ಡಿಸೆಂಬರ್‌ 28ರಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಹುಟ್ಟಿದ್ದರು. ಇಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆಯ ಸ್ಥಾಪಕ ಧೀರೂಭಾಯಿ ಅಂಬಾನಿಯವರ ಜನ್ಮದಿನವಾಗಿದೆ.

ಹೌದು, ಧೀರೂಭಾಯಿ ಅಂಬಾನಿ ಅವರ ಪೂರ್ಣ ಹೆಸರು ಧೀರಜ್‌ಲಾಲ್‌ ಧೀರೂಭಾಯಿ ಹೀರಾಚಂದ್‌ ಅಂಬಾನಿ. ಇವರ ತಂದೆ ಗೋವರ್ಧನ್‌ಭಾಯಿ ಅಂಬಾನಿ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ತಾಯಿ ಜಮ್ನಾಬೆನ್‌. ಕಣ್ಣಲ್ಲಿದ್ದ ಕನಸು ಬಡತನದ ಹಸಿವಿನೊಂದಿಗೆ 17 ವರ್ಷದವನಿದ್ದಾಗ ಯಮೆನ್‍ಗೆ ಹೋಗಿ ಅಲ್ಲಿನ ಪೆಟ್ರೋಲ್ ಬಂಕೊಂದರಲ್ಲಿ ಸಹಾಯಕನಾಗಿ ಸೇರಿಕೊಂಡರು. ನಂತರದಲ್ಲಿ ಅಡೆನ್ನಲ್ಲಿನ ‘ಎ.ಬೆಸ್ಸೆ ಅಂಡ್ಡ್ ಕಂಪನಿ’ ಯಲ್ಲಿ ರವಾನೆ ಗುಮಾಸ್ತ ಕೆಲಸವು ಸಿಕ್ಕಿತು. ಎರಡು ವರ್ಷಗಳಲ್ಲಿ ‘ಶೆಲ್’ ಉತ್ತನ್ನಗಳ ವಿತರಕರಾಗಿ ಕಂಪನಿ ರೂಪುಗೊಂಡಾಗ ಕಂಪನಿಯಲ್ಲಿ ಬಂದರಿನಲ್ಲಿ ತೈಲ ತುಂಬುವ ಘಟಕದ ಉಸ್ತುವಾರಿ ಕೆಲಸವು ಸಿಕ್ಕಿತು.

ತೈಲ ಕಂಪೆನಿಯೊಂದರಲ್ಲಿ ಕ್ಲರ್ಕ್‌ ಆಗಿ ಕೆಲಸಕ್ಕೆ ಸೇರಿದ ಧೀರೂಭಾಯಿಗೆ ಆಗಿನ್ನೂ 26 ವರ್ಷ ಅಷ್ಟೇ. ಆದಾಗಲೇ ಹಣ ಮಾಡುವ ಕಲೆ ಮತ್ತು ಸಾಮರ್ಥ್ಯ ತನ್ನಲ್ಲಿದೆ ಅವರಿಗೆ ಎನ್ನುವುದು ಮನವರಿಕೆಯಾಗಿತ್ತು. ಸದಾ ಕನಸು ಕಾಣುತ್ತಿದ್ದ ತನ್ನೆಲ್ಲಾ ಕನಸುಗಳನ್ನು ನನಸು ಮಾಡಬೇಕೆಂದು ಕೊಳ್ಳುತ್ತಿದ್ದರು. 500 ರೂಪಾಯಿಯೊಂದಿಗೆ ಮುಂಬೈಗೆ ಹೊರಟ ಧೀರೂ ಅಂಬಾನಿಯವರು ಗಟ್ಟಿ ಧೈರ್ಯ ಮಾಡಿ ರಿಲಯನ್ಸ್‌ ಟ್ರೇಡಿಂಗ್‌ ಕಾರ್ಪೋರೇಶನ್‌ ಸಂಸ್ಥೆಯನ್ನು ಸ್ಥಾಪಿಸಿಯೇ ಬಿಟ್ಟರು. ಆ ಬಳಿಕ ರಿಲಯನ್ಸ್‌ ಟೆಕ್ಸ್‌ಟೈಲ್‌ಸ್‌ ಕಾರ್ಪೊರೇಶನ್‌ ಎಂದಿದ್ದನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಎನ್ನುವುದಾಗಿ ನಾಮಕರಣ ಮಾಡಲಾಯಿತು.

1958ರಲ್ಲಿ ಧೀರೂಭಾಯಿ 50, 000 ರೂಪಾಯಿಯೊಂದಿಗೆ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದರು. ಹೀಗಿರುವಾಗ ಮೊದಲ ಬಾರಿಗೆ ಸಣ್ಣ ಹೂಡಿಕೆದಾರರನ್ನು ತನ್ನ ಕಂಪೆನಿಯ ತೆಕ್ಕೆಗೆ ಒಳಪಡಿಸಿಕೊಂಡು ಶೇರು ವ್ಯವಹಾರಕ್ಕೂ ಕೈ ಹಾಕಿದರು.1978ರ ರಿಲಯನ್ಸ್‌ ಶೇರುಗಳು ಮುಂಬಯಿ ಮತ್ತು ಅಹ್ಮದಾಬಾದ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಆದವು. 1976-77ರಲ್ಲೇ ರಿಲಯನ್ಸ್‌ ವಾರ್ಷಿಕ ವಹಿವಾಟು 70 ಕೋಟಿ ರೂ ತಲುಪಿತ್ತು.. ಆ ವೇಳೆಗೆ ವಿಮಲ್‌ ಬ್ರಾಂಡ್‌ ಉತ್ಪನ್ನ ರಿಲಯನ್ಸ್‌ನ ಹೆಸರನ್ನು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸಿತ್ತು.

ಇದನ್ನೂ ಓದಿ: ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಯುವ ಪೀಳಿಗೆಗೆ ಮಾದರಿ ಯಾಕೆ? ರತನ್ ಅವರ ಸಾಧನೆಯ ಹಾದಿಯ ಚಿತ್ರಣ ಇಲ್ಲಿದೆ

ಹೀಗೆ ಉದ್ಯಮವನ್ನು ವಿಸ್ತರಿಸುತ್ತ 1990ರ ದಶಕದಲ್ಲಿ ಧೀರೂಭಾಯಿ ಪೆಟ್ರೋಕೆಮಿಕಲ್ಸ್‌, ತೈಲ ಸಂಸ್ಕರಣೆ, ದೂರಸಂಪರ್ಕ ಮತ್ತು ಹಣಕಾಸು ಸೇವಾ ರಂಗ ಈ ಕ್ಷೇತ್ರಕ್ಕೂ ಲಗ್ಗೆ ಇಟ್ಟರು. ರಿಲಯನ್ಸ್‌ ಇಂಡಸ್ಟ್ರೀಸ್‌ ಮೂಲಕ ಛಾಪು ಮೂಡಿಸಿದ ಧೀರೂಭಾಯಿ ಅವರು 2002ರ ಜುಲೈ 6ರಂದು ಮುಂಬಯಿಯಲ್ಲಿ ನಿಧನರಾದರು. ಇದೀಗ ಅವರ ಮಕ್ಕಳಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ತಂದೆ ನಿರ್ಮಿಸಿದ ಬೃಹತ್ ವ್ಯಾಪಾರ ಸಾಮ್ರಾಜ್ಯದ ಜವಾಬ್ದಾರಿಯನ್ನು ಹೊತ್ತುಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ