Winter Care: ಚಳಿಗಾಲದಲ್ಲಿ ಮಕ್ಕಳ ಆರೈಕೆ ಹೇಗಿರಬೇಕು? ಯಾವ ತಪ್ಪುಗಳನ್ನು ಪೋಷಕರು ಮಾಡಕೂಡದು ಇಲ್ಲಿದೆ ಮಾಹಿತಿ

ಚಳಿಗಾಲವು ಸಮಶೀತೋಷ್ಣ ವಾತಾವರಣಗಳಲ್ಲಿ ಶರದ್​ಕಾಲ ಹಾಗೂ ವಸಂತಕಾಲಗಳ ನಡುವೆ ಬರುವ ವರ್ಷದ ಅತ್ಯಂತ ಶೀತಲ ಋತು. ಋತುಗಳು ಬದಲಾದಂತೆ ಜನಜೀವನಶೈಲಿಯಲ್ಲೂ ಬದಲಾವಣೆಗಳು ಅಗತ್ಯ, ಬೇಸಿಗೆ ಹಾಗೂ ಮಳೆಗಾಲವನ್ನು ನಾವು ಈ ವರ್ಷ ದಾಟಿ ಚಳಿಗಾಲಕ್ಕೆ ಕಾಲಿರಿಸಿದ್ದೇವೆ. 

Winter Care: ಚಳಿಗಾಲದಲ್ಲಿ ಮಕ್ಕಳ ಆರೈಕೆ ಹೇಗಿರಬೇಕು? ಯಾವ ತಪ್ಪುಗಳನ್ನು ಪೋಷಕರು ಮಾಡಕೂಡದು ಇಲ್ಲಿದೆ ಮಾಹಿತಿ
Dr Niveditha
Follow us
| Updated By: ನಯನಾ ರಾಜೀವ್

Updated on:Dec 23, 2022 | 8:50 AM

ಚಳಿಗಾಲವು ಸಮಶೀತೋಷ್ಣ ವಾತಾವರಣಗಳಲ್ಲಿ ಶರದ್​ಕಾಲ ಹಾಗೂ ವಸಂತಕಾಲಗಳ ನಡುವೆ ಬರುವ ವರ್ಷದ ಅತ್ಯಂತ ಶೀತಲ ಋತು. ಋತುಗಳು ಬದಲಾದಂತೆ ಜನಜೀವನಶೈಲಿಯಲ್ಲೂ ಬದಲಾವಣೆಗಳು ಅಗತ್ಯ, ಬೇಸಿಗೆ ಹಾಗೂ ಮಳೆಗಾಲವನ್ನು ನಾವು ಈ ವರ್ಷ ದಾಟಿ ಚಳಿಗಾಲಕ್ಕೆ ಕಾಲಿರಿಸಿದ್ದೇವೆ.  ಎಲ್ಲಾ ಕಾಲಗಳಲ್ಲಿರುವ ತೊಂದರೆಗಳಂತೆ ಆರೋಗ್ಯ ಸಮಸ್ಯೆಗಳಂತೆ ಚಳಿಗಾಲವು ಕೂಡ ಒಂದಷ್ಟು ಸಮಸ್ಯೆಗಳನ್ನು ಹೊಂದಿರುತ್ತವೆ. ಚಳಿಗಾಲ ಬಂದ ತಕ್ಷಣ ಎಲ್ಲರಿಗೂ ಒಂದು ಸಲ ಶೀತ, ಕೆಮ್ಮು, ಜ್ವರ ಈ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತವೆ. ಹಾಗೆಯೇ ಮಕ್ಕಳಲ್ಲಿ ಕೂಡ ಸಾಮಾನ್ಯವಾಗಿ ತೊಂದರೆಗಳು ಕಂಡುಬರುತ್ತವೆ.
ಹಾಗಾದರೆ ಮಕ್ಕಳನ್ನು ಚಳಿಗಾಲದಲ್ಲಿ ಈ ಆರೋಗ್ಯ ಸಮಸ್ಯೆಗಳಿಂದ ಕಾಪಾಡುವುದು ಹಾಗೂ ಅವರ ಪೋಷಣೆಯನ್ನು ಹೇಗೆ ಮಾಡುವುದು ಎಂಬುದರ ಕುರಿತು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಸಾಮಾನ್ಯವಾದ ತೊಂದರೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು ಹಾಗೂ ಅದನ್ನು ತಡೆಗಟ್ಟುವ ವಿಧಾನಗಳೇನು ಎಂಬುದನ್ನು ತಿಳಿಯೋಣ.
ಮೊದಲನೆಯದಾಗಿ ಆದಷ್ಟು ನಾವು ಚಳಿಗಾಲದಲ್ಲಿ ತುಂಬಾ ಬೆಳಗ್ಗೆ ಅಥವಾ ಸಂಜೆಯಾದ ಬಳಿಕ ಚಳಿ ಹೆಚ್ಚಾಗುತ್ತದೆ, ಕರ್ನಾಟಕದಲ್ಲಿ ಅಷ್ಟೊಂದು ಚಳಿಯಾದ ವಾತಾವರಣ ಇಲ್ಲ ಆದರೆ ಉತ್ತರ ಭಾರತ ಅಥವಾ ಬೇರೆ ದೇಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಚಳಿ ತುಂಬಾ ಕಡಿಮೆ ಎಂದೇ ಹೇಳಬಹುದು.

ಮಕ್ಕಳು ಮೈ-ಕೈ ಮುಚ್ಚುವಂತ ಬಟ್ಟೆ ಧರಿಸಬೇಕು

ಬೆಳಗಿನ ಜಾವ ಹಾಗೂ ರಾತ್ರಿ ಸಮಯದಲ್ಲಿ ಚಳಿ ಇರುವುದರಿಂದ ಮಕ್ಕಳನ್ನು ಆದಷ್ಟು ಇಡೀ ಮೈ ಮುಚ್ಚುವಂತಹ ಬಟ್ಟೆ ಹಾಕಿ, ಕಾಲಿಗೆ ಸಾಕ್ಸ್ ಹಾಕಿ, ತಲೆಯನ್ನು ಕವರ್ ಮಾಡಿ ಮಲಗಿಸುವುದು ಉತ್ತಮದಾಯಕ.
ನವಜಾತ ಶಿಶುಗಳು ಹಾಗೂ ಸಣ್ಣ ಶಿಶುಗಳನ್ನು ಶೀತಗಾಳಿಗೆ ತೆರೆದುಕೊಳ್ಳುವಂತೆ ಮಾಡದಿರುವುದು ಒಳ್ಳೆಯದು. ತಲೆಗೆ ಕ್ಯಾಪ್, ಕೈಚೀಲ, ಕಾಲುಚೀಲಗಳನ್ನು ಹಾಕಿಯೇ ಮಲಗಿಸುವುದು ಉತ್ತಮ.
ಒಂದೊಮ್ಮೆ ಡ್ರೈ ವೆದರ್ ಇದೆ ಎಂದಾದರೆ ಮನೆಯಲ್ಲಿ ಹ್ಯುಮಿಡಿಫೈರ್ ಬಳಸಬಹುದು, ಅತಿಯಾದ ಚಳಿ ಇರುವ ಪ್ರದೇಶಗಳಲ್ಲಿ ಮನೆಯಲ್ಲಿ ಹೀಟರ್​ ಅನ್ನು ಕೂಡ ಬಳಸಬಹುದು.
ಹೀಗೆ ಮಕ್ಕಳನ್ನು ಅತಿಯಾದ ಶೀತಕ್ಕೆ, ಮೈಯನ್ನು ಒಡ್ಡುವುದನ್ನು ಕಡಿಮೆ ಮಾಡಬಹುದು.

ಆಹಾರ ಪದ್ಧತಿ

ಸಮತೋಲನೆ ಆಹಾರವನ್ನು ಮಕ್ಕಳು ತೆಗೆದುಕೊಳ್ಳಬೇಕು, ಚೆನ್ನಾಗಿ ಪೌಷ್ಟಿಕಾಂಶಯುಕ್ತ ಆಹಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಈ ಸೀಸನ್​ ಅಲ್ಲಿ ಬರುವಂತಹ ಎಲ್ಲಾ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಒಳ್ಳೆಯದು.
ಹೇಗೆ ನವಧಾನ್ಯ ಸೇರಿದಂತೆ ಇಲ್ಲಿಯವರೆಗೆ ಯಾವ ರೀತಿ ಆಹಾರ ಸೇವಿಸುತ್ತಿದ್ದೆವು ಅದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು.  ಚಳಿಗಾಲದಲ್ಲಿ ಒಣ ಹವೆ ಇರುವುದರಿಂದ ದೇಹದಲ್ಲಿ ಉತ್ತಮ ಕೊಬ್ಬುಗಳ ಅಗತ್ಯವಿರುತ್ತದೆ, ಹಾಗಾಗಿ ಚಳಿಗಾಲದಲ್ಲಿ ಮಕ್ಕಳಿಗೆ ತುಪ್ಪ, ಬೆಣ್ಣೆ ಇವುಗಳಿರುವಂತಹ ಆಹಾರವನ್ನು ಕೊಡಬಹುದು. ಅದನ್ನು ಅತಿಯಾಗಬಾರದು, ಹಿತ-ಮಿತವಾಗಿ ಬಳಕೆ ಮಾಡಬಹುದು.

ದೇಹವನ್ನು ಹೈಡ್ರೇಟ್​ ಆಗಿರಿಸಿ

ದೇಹವು ಹೆಚ್ಚಾಗಿ ಬೆವರುವುದಿಲ್ಲ, ನೀರಿನ ಅವಶ್ಯಕತೆಯೂ ಇರುವುದಿಲ್ಲ ಹಾಗಾಗಿ ತುಂಬಾ ಸಮಯದಲ್ಲಿ ಮಕ್ಕಳು ನೀರನ್ನೇ ಕುಡಿಯುವುದಿಲ್ಲ, ಪೋಷಕರಾದ ನಾವು ಆದಷ್ಟು ಮಟ್ಟಿಗೆ ಮಕ್ಕಳಿಗೆ ನೀರನ್ನು ಪದೇ ಪದೇ ಕುಡಿಸುತ್ತಿರಬೇಕು.  ಆದಷ್ಟು ಬಿಸಿಯಾದಂತಹ, ಉಗುರು ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು. ತುಂಬಾ ಮಕ್ಕಳಿಗೆ ಚಳಿಗಾಲದಲ್ಲಿ ವಿವಿಧ ಬಗೆಯ ಸೋಂಕು ತಗುಲುವ ಅಪಾಯವಿರುತ್ತದೆ.
ಇದು ಶೀತ ವಾತಾವರಣವಿರುವುದರಿಂದ ವೈರಾಣುಗಳ ಬೆಳವಣಿಗೆಗೆ ಸೂಕ್ತ ಕಾಲ ಎಂದೇ ಹೇಳಬಹುದು, ಹಾಗಾಗಿ ಮಕ್ಕಳು ಊಟ, ತಿಂಡಿ ಮಾಡುವ ಮುನ್ನ ಅಥವಾ ಶಾಲೆಯಿಂದ ಬಂದ ತಕ್ಷಣ ಕೈ-ಕಾಲು ಮುಖ ಚೆನ್ನಾಗಿ ತೊಳೆದು ತಿಂಡಿ ತಿನ್ನುವುದು ಅಥವಾ ಬೇರೆ ಕಾರ್ಯಗಳನ್ನು ಮಾಡುವುದು ಒಳ್ಳೆಯದು.

ಕೆಮ್ಮಿನ ಬಗ್ಗೆ ಜಾಗೃತಿ

ಈಗ ಎಲ್ಲಾ ಮಕ್ಕಳಿಗೆ ಶೀತ, ಕೆಮ್ಮು ಎಲ್ಲಾ ಇರುವುದರಿಂದ ಶಾಲೆಯಲ್ಲಿ ಹೇಗೆ ಕೆಮ್ಮನ್ನು ಹೇಗೆ ಕೆಮ್ಮಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಟ್ಟರೆ ಒಳ್ಳೆಯದು. ನೇರವಾಗಿ ಕೈ ಅಡ್ಡ ಇಟ್ಟು ಕೆಮ್ಮುವುದರಿಂದ ಹಾಗೂ ಆ ಕೈಯನ್ನು ಬೇರೆ ಕೆಲಸಗಳಿಗೆ ಬಳಸುವುದರಿಂದ ವೈರಸ್​ಗಳು ಸುಲಭವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಹಾಗಾಗಿ ಮಕ್ಕಳಿಗೆ ಶೀತವಾದ ಸಂದರ್ಭದಲ್ಲಿ ಕರವಸ್ತ್ರವನ್ನು ಕೊಟ್ಟು ಕಳುಹಿಸಬೇಕು, ಕೆಮ್ಮುವಾಗ ಯಾವಾಗಲೂ ಕೈಯಲ್ಲಿ ಕರವಸ್ತ್ರ ಇರಿಸಿಕೊಳ್ಳಬೇಕು ಅಥವಾ ಕೈಯಲ್ಲಿ ಮೇಲೆತ್ತಿ ಹಾಗೆಯೂ ಕೆಮ್ಮಬಹುದು ಎಂದು ತಿಳಿ ಹೇಳಬೇಕು.

ಇನ್​ಫ್ಲುಯೆನ್ಝಾ ಲಸಿಕೆ

ಕೆಮ್ಮು, ಶೀತ, ಜ್ವರ ಬರಂದತೆ ತಡೆಯಲು ಮಕ್ಕಳಿಗೆ ಇನ್​ಫ್ಲುಯೆನ್ಝಾ ವ್ಯಾಕ್ಸಿನ್ ಅಥವಾ ಫ್ಲೂ ಶಾಟ್ ಎಂದು ಹೇಳುತ್ತೇವೆ, ಇವುಗಳನ್ನು 1 ವರ್ಷದ ಮಕ್ಕಳಿಗೆ ಎರಡು ಬಾರಿ ಈ ಲಸಿಕೆಯನ್ನು ಆರು ತಿಂಗಳ ಬಳಿಕ ನೀಡಲಾಗುತ್ತದೆ ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಲಸಿಕೆ ನೀಡಲಾಗುತ್ತದೆ.
ಅದಾದ ಬಳಿಕ ಪ್ರತಿ ವರ್ಷ ತೆಗೆದುಕೊಳ್ಳಬೇಕು. ಮಗು ಈಗಾಗಲೇ ಒಂದು ವರ್ಷ ದಾಟಿದೆ ಎಂದಾದರೆ ಪ್ರತಿ ವರ್ಷ ಸೆಪ್ಟೆಂಬರ್​ನಲ್ಲಿ ಹೊಸ ಲಸಿಕೆ ಬರುತ್ತದೆ ಆಗ ಹೊಸ ಲಸಿಕೆಯನ್ನು ಕೊಡಿಸಬಹುದು, ಇದರಿಂದಲೂ ಮಕ್ಕಳಲ್ಲಿ ಆಗುವಂತಹ ಇನ್​ಫೆಕ್ಷನ್​ ಅನ್ನು ತಡೆಗಟ್ಟಬಹುದು.

ತ್ವಚೆಯ ಆರೈಕೆ ಹೇಗಿರಬೇಕು

ಸಾಮಾನ್ಯವಾಗಿ ಚಳಿಗಾಲದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ, ಮುಖ, ಕೈಕಾಲು, ಹಿಮ್ಮಡಿ ಒಡೆಯುತ್ತದೆ. ಹಾಗಾಗಿ ಎಕ್ಸಿಮ್ ತೊಂದರೆಗಳು ಮೊದಲು ಇದ್ದವರಿಗೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಈ ಸಮಸ್ಯೆಗೆ ಅಭ್ಯಂಜನ, ನಮ್ಮ ಆಯುರ್ವೇದ ಅಥವಾ ನಮ್ಮ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಬಂದಿರುವ ಎಣ್ಣೆಸ್ನಾನ ಮಾಡುವುದನ್ನು ಅನುಸರಿಸಬೇಕು. ಸ್ನಾನಕ್ಕೂ ಮುನ್ನ ಎಣ್ಣೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಬೇಕು, ದಿನಾ ಮಾಡಿದರೆ ಒಳ್ಳೆಯದು.

ಸ್ನಾನ ಹೇಗೆ ಮಾಡಬೇಕು?

ಈ ಚಳಿಗಾಲದಲ್ಲಿ ಮೈಮೇಲೆ ಎಣ್ಣೆಯ ಅಂಶ ಇರುವುದು ಒಳ್ಳೆಯದು ಹಾಗಾಗಿ ಹೆಚ್ಚು ರಾಸಾಯನಿಕಗಳನ್ನು ಬಳಸದೆ, ಸ್ವಲ್ಪ ಕಡಲೆ ಹಿಟ್ಟು ಇಲ್ಲವಾದರೆ ಹಾಗೆಯೇ ರಾಸಾಯನಿಕ ಸ್ವಲ್ಪ ಕಡಿಮೆ ಇರುವಂತಹ ಮಕ್ಕಳಿಗಾಗಿ ಸಿದ್ಧಪಡಿಸಿರುವ ಸೋಪ್​ ಅನ್ನು ಬಳಕೆ ಮಾಡಿ ಕೂಡ ಸ್ನಾನವನ್ನು ಮಾಡಬಹುದು. ಸೋಪನ್ನೆಲ್ಲಾ ಬಳಕೆ ಮಾಡದೆ ಹಾಗೆಯೇ ಕಡಲೆಹಿಟ್ಟನ್ನು ಬಳಸುವುದು ಉತ್ತಮ, ದೇಹದಲ್ಲಿ ಎಣ್ಣೆಯ ಅಂಶವಿರುವಂತೆ ಮಾಡಿಕೊಳ್ಳುವುದು ಉತ್ತಮ.
ಇನ್ನೂ ಕೆಲವರಿಗೆ ಅತಿಯಾದ ತ್ವಚೆಯ ತೊಂದರೆಗಳಿರುತ್ತವೆ, ಈ ಸಮಯದಲ್ಲಿ ಸೋರಿಯಾಸಿಸ್, ಎಕ್ಸಿಮಾ, ಇವೆಲ್ಲಾ ಹೆಚ್ಚಾಗುತ್ತದೆ, ಇದಕ್ಕೆ ಮನೆ ಮದ್ದುಗಳಿಂದ ಕಡಿಮೆಯಾಗುತ್ತಿಲ್ಲ, ಮಾಯ್ಚುರೈಸೇಷನ್ ಅಥವಾ ಕ್ರೀಮ್​ಗಳಲ್ಲಿ ಕಡಿಮೆಯಾಗುತ್ತಿಲ್ಲ ಎಂದರೆ ವೈದ್ಯರ ಬಳಿ ಒಮ್ಮೆ ತಪಾಸಣೆ ಮಾಡಿಸುವುದು ಸೂಕ್ತ.

ಮೂಗಿನಲ್ಲಿ ರಕ್ತಸ್ರಾವ

ಒಣ ಹವೆ ಮೂಗಿನಲ್ಲಿರುವ  ತೇವಾಂಶ ಕಡಿಮೆಯಾಗುತ್ತದೆ ಆಗ ಮೂಗು ಒಣಗುತ್ತದೆ, ಆಗ ರಕ್ತಸ್ರಾವವಾಗುತ್ತದೆ. ಒಂದು ಸಲ ಡ್ರೈಯಾದ ಮೇಲೆ ನಿಜವಾದ ಇಮ್ಯುನಿಟಿ ಇರುವುದಿಲ್ಲ, ಈ ಮೊದಲು ಯಾವುದೇ ವೈರಸ್​ಗಳು ಹೋಗದಂತೆ ತಡೆಗಟ್ಟುತ್ತಿತ್ತು, ಆದರೆ ಒಂದು ಸಲ ಒಣಗಿದ ಬಳಿಕ ಪ್ರೊಟೆಕ್ಟೀವ್ ಮೆಕ್ಯಾನಿಸಂ ಅದು ಹೋಗಿಬಿಡುತ್ತದೆ, ಆಗ ಮಕ್ಕಳಿಗೆ ವೈರಲ್ ಇನ್​ಫೆಕ್ಷನ್​ ಆಗುವುದು ಎಲ್ಲವೂ ಹೆಚ್ಚಾಗುತ್ತದೆ.
ಅದರಿಂದ ಇನ್​ಫೆಕ್ಷನ್ ಆದ ಮೇಲೆ ಕೂಡ ಮೂಗಿನಲ್ಲಿ ರಕ್ತಸ್ರಾವ ಹೆಚ್ಚಿರುತ್ತದೆ. ಇಂತಹ ಮಕ್ಕಳಿಗೆ ಮೂಗನ್ನು ಆದಷ್ಟು ಮಾಯಿಸ್ಟ್​ ಆಗಿಟ್ಟುಕೊಳ್ಳಬೇಕು. ನೇಸಲ್ ಡ್ರಾಪ್ಸ್​ಗಳು ಲಭ್ಯವಿರುತ್ತದೆ ಒಂದೊಮ್ಮೆ ಈ ತೊಂದರೆಗಳು ಕಂಡುಬಂದಲ್ಲಿ ಸಲೈನ್ ಡ್ರಾಪ್ಸ್​ ಅನ್ನು ಬಳಕೆ ಮಾಡುವುದು ಪ್ರಯೋಜನಕಾರಿ. ಸಲೈನ್ ಸ್ಪ್ರೇ ಕೂಡ ಲಭ್ಯವಿರುತ್ತದೆ ಇದನ್ನು ಕೂಡ ಮಕ್ಕಳು ಬಳಕೆ ಮಾಡಬಹುದು.
ಪ್ರತಿ ಸಲ ಚಳಿಗಾಲದಲ್ಲಿ ಕೆಮ್ಮು, ಶೀತ, ಜ್ವರ ಬಂದೇ ಬರುತ್ತದೆ, ಹಾಗಾಗಿ ಹೆಚ್ಚು ಸಂದರ್ಭಗಳಲ್ಲಿ ಇದು ವೈರಾಣುವಿನಿಂದ ಬಂದಿರುತ್ತದೆ ಬ್ಯಾಕ್ಟೀರಿಯಾಗಳಿಂದ ಅಲ್ಲ.

ಆ್ಯಂಟಿ ಬಯಾಟಿಕ್ಸ್ ಬಳಕೆ ಬೇಡ

ಪ್ರತಿ ಸಲ ಕೆಮ್ಮು, ಶೀತ, ಜ್ವರ ಬಂದ ತಕ್ಷಣ ಮಕ್ಕಳಿಗೆ ಆ್ಯಂಟಿ ಬಯಾಟಿಕ್ ಕೊಡುವುದು , ತಾವೇ ಫಾರ್ಮಸಿಗೆ ತೆರಳಿ ಆ್ಯಂಟಿ ಬಯಾಟಿಕ್ ತರುತ್ತಾರೆ, ಅವರೇ ಶೀತಕ್ಕೆ ಬೇಕಾದ ಮಾತ್ರೆಗಳನ್ನು ತರುತ್ತಾರೆ, , ಅವರೇ ಕೆಮ್ಮಿನ ಔಷಧಿಗಳನ್ನು ಕೇಳಿ ಪಡೆಯುತ್ತಾರೆ, ಅವರೇ ಕೊಡುತ್ತಾರೆ ಹೀಗೆ ಪ್ರತಿ ಸಲ ಈ ತರಹ ಅವಶ್ಯಕತೆ ಇಲ್ಲದೆ ವೈರಸ್​ಗಳಿಂದ ಕೂಡ ಬಂದಿರುವ ಇನ್​ಫೆಕ್ಷನ್​ಗೆ ಆ್ಯಂಟಿಬಯಾಟಿಕ್​ ಬಳಕೆ ಮಾಡುವುದರಿಂದ ಆ್ಯಂಟಿ ಬಯಾಟಿಕ್ ರೆಸಿಸ್ಟೆನ್ಸ್  ಹೆಚ್ಚಾಗುತ್ತದೆ,  ಇನ್ಯಾವುದೋ ಸಂದರ್ಭದಲ್ಲಿ  ಆ್ಯಂಟಿ ಬಯಾಟಿಕ್ಸ್ ಪ್ರಯೋಜನವಾಗುವುದಿಲ್ಲ.
ಪ್ರತಿ ಸಲ ಚಳಿಗಾಲದಲ್ಲಿ ಶೀತ, ಕೆಮ್ಮು ಆದಾಗ ಆದಷ್ಟು ಆ್ಯಂಟಿ ಬಯಾಟಿಕ್ಸ್​ಗಳನ್ನು ಮಕ್ಕಳ ವೈದ್ಯರಿಗೆ ತೋರಿಸದೆ ದಯವಿಟ್ಟು ಮನೆಯಲ್ಲಿಯೇ ಕೊಡಬೇಡಿ.

ಅಲರ್ಜಿ ಸಮಸ್ಯೆ

ಕೆಲವರ ದೇಹದಲ್ಲಿ ಅಲರ್ಜಿ ಅಂಶಗಳಿರುತ್ತವೆ, ಚಳಿಗಾಲದಲ್ಲಿ ಈ ಶೀತ ಗಾಳಿಗೆ ಮತ್ತು ಒಂದಷ್ಟು ಗಿಡಗಳ ಬೀಜಗಳು ಹರಡುತ್ತಿರುತ್ತದೆ ಇದರಿಂದ ಸ್ವಲ್ಪ ಅಸ್ತಮಾ ಅಂಶ ಅಥವಾ ಅಲರ್ಜಿ ಅಂಶ ಹೆಚ್ಚಾಗುತ್ತದೆ. ಕೆಲವು ಮಕ್ಕಳಿಗೆ ಅಸ್ತಮಅ ಮುಂಚೆಯೇ ಇರುತ್ತದೆ, ಈ ತರಃ ಮಕ್ಕಳಿಗೆ ಚಳಿಗಾಲದಲ್ಲಿ ಹೆಚ್ಚಾಗುತ್ತದೆ, ಬೆಳಗ್ಗೆ ಬೇಗ ಎದ್ದರೆ ಆ ಸಂದರ್ಭದಲ್ಲಿ ಅಸ್ತಮಾ ಹೆಚ್ಚಾಗುತ್ತದೆ.
ಹಾಗಾಗಿ ಇಂತಹ ದೇಹ ಪ್ರಕೃತಿ ಇದ್ದವರು ಮನೆಯಲ್ಲಿಯೇ ಮೆಡಿಕೇಷನ್ ಇಟ್ಟುಕೊಳ್ಳುವುದು ಒಳಿತು. ಮುಂಚೆಯಿಂದಲೇ ವೈದ್ಯರು ಇದನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದರೆ ಈ ಚಳಿಗಾಲದ ಸಮಯದಲ್ಲಿ ನಿತ್ಯ ಬಳಕೆ ಮಾಡುವುದು ಒಳ್ಳೆಯದು.

ಇನ್​ಹೇಲರ್ ಇಟ್ಟುಕೊಂಡಿರಿ

ಮನೆಯಲ್ಲಿ ಇನ್​ಹೇಲರ್​ಗಳನ್ನು ಅಥವಾ ಪದೇ ಪದೇ ತೊಂದರೆ ಇಲ್ಲದಿದ್ದರೂ ಅಪರೂಪಕ್ಕೆ ಬರುವಂತವರು ಮನೆಯಲ್ಲಿ ಇನ್​ಹೇಲರ್​ಗಳನ್ನು ಮನೆಯಲ್ಲಿಟ್ಟುಕೊಂಡು ಮೆಡಿಕೇಷನ್​ ಅನ್ನು ಸದಾ ಸಿದ್ಧವಿಟ್ಟುಕೊಳ್ಳುವುದು ಒಳ್ಳೆಯದು.

ಗಾಯಗಳಾಗುವ ಅಪಾಯ

ಚಳಿಗಾಲದಲ್ಲಿ ಸಾಮಾನ್ಯವಾಗಿ ಮಂಜಿರುತ್ತದೆ, ಆದರೆ ಕರ್ನಾಟಕದಲ್ಲಿ ಅಷ್ಟು ಮಂಜು ಇಲ್ಲದಿದ್ದರೂ ಶೀತದ ವಾತಾವರಣ ಇರುತ್ತದೆ. ತುಂಬಾ ಹಿಮ ಪ್ರದೇಶ, ಮಂಜು ಬೀಳುವ ಜಾಗದಲ್ಲಿ ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪ್ರದೇಶಗಳಲ್ಲಿ ಮಕ್ಕಳು ಆಟವಾಡುತ್ತಿದ್ದರೆ ಅವರಿಗೆ ಹೆಲ್ಮೆಟ್, ನೀ ಮತ್ತೆ ಎಲ್​ಬೋ ಗಾರ್ಡ್​ಗಳನ್ನು ಹಾಕಿ ಕಳುಹಿಸುವುದು ಒಳ್ಳೆಯದು.

ಬಿಸಿಲಿಗೆ ಮೈಯೊಡ್ಡುವಿಕೆ

ಚಳಿಗಾಲದಲ್ಲಿ ಸೂರ್ಯನ ಕಿರಣಗಳು ನಮ್ಮ ಮೈಗೆ ಬಿದ್ದಾಗ ಆಹಾ ಎನ್ನುವ ಅನುಭವಗಳಾಗುತ್ತವೆ, ಯಾಕೆಂದರೆ ನಾವು ಈ ಚಳಿಯಲ್ಲಿ ಒಂದು ಸಲ ಸೂರ್ಯನ ಕಿರಣಗಳು ಮೈಮೇಲೆ ಬಿದ್ದಾಗ ಬಹಳ ಸಂತೋಷವಾಗುತ್ತದೆ.

ಹೇಗೆ ಇದು ಬಿಸಿಯನ್ನು ನಮ್ಮ ದೇಹಕ್ಕೆ ಕೊಡುತ್ತದೆಯೋ ಹಾಗೆಯೇ ವಿಟಮಿನ್​ ಡಿ ಅನ್ನು ಕೂಡ ಕೊಡುತ್ತದೆ. ಆದಷ್ಟು ಮಕ್ಕಳನ್ನು ಅರ್ಧದಿಂದ ಒಂದು ಗಂಟೆ ಚೆನ್ನಾಗಿ ಬಿಸಿಲಿರುವ ಸಮಯದಲ್ಲಿ 11-3 ಗಂಟೆಯ ಸಮಯದಲ್ಲಿ ಆಟವಾಡಲು ಬಿಡಬೇಕು. ಅದರಿಂದ ಮಕ್ಕಳಿಗೆ ವಿಟಮಿನ್ ಡಿ ಅಂಶ ಸಿಗುತ್ತದೆ ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕೆಮ್ಮಿಗೆ ಸಲಹೆ

ಕೆಮ್ಮು, ಶೀತಕ್ಕೆ ಕೆಲವೊಮ್ಮೆ ವೈದ್ಯರನ್ನು ಭೇಟಿಯಾಗುವುದಿಲ್ಲ, ಅವರೇ ಔಷಧವನ್ನು ತೆಗೆದುಕೊಳ್ಳುತ್ತಾರೆ, ಆದಷ್ಟು ಕೆಮ್ಮು, ಶೀತಕ್ಕೆ 6  ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಕೆಮ್ಮಿನ ಔಷಧಗಳನ್ನು ಕೊಟ್ಟರೆ ಪ್ರಯೋಜನವಿಲ್ಲ ಎಂದು ಅಧ್ಯಯನ ಹೇಳುತ್ತವೆ. ಹಾಗಾಗಿ ಮನೆಯಲ್ಲಿಯೇ ಸಿಗುವಂತಹ ಕಾಳುಮೆಣಸು, ಜೇನುತುಪ್ಪ, ಜ್ಯೇಷ್ಟಮಧು, ಲವಂಗ ಇವೆಲ್ಲವನ್ನೂ ಬಳಕೆ ಮಾಡಿ ಕೆಮ್ಮನ್ನು ಕಡಿಮೆ ಮಾಡಬಹುದು.

ಇನ್​ಫೆಕ್ಷನ್​ಗಳನ್ನು ತಡೆಗಟ್ಟುವ ಬಗೆ

ಮಕ್ಕಳು ಆದಷ್ಟು ಈಗಾಗಲೇ ಇನ್​ಫೆಕ್ಷನ್ ಇರುವ ಮಕ್ಕಳು ಅಥವಾ ದೊಡ್ಡವರಿಂದ ಅಂತರ ಕಾಯ್ದುಕೊಳ್ಳಬೇಕು.  ಮಾಸ್ಕ್​ಗಳನ್ನು ಹಾಕುವುದು, ಪದೇ ಪದೇ ಕೈಯನ್ನು ತೊಳೆಯುವುದರಿಂದ ಪದೇ ಪದೇ ಇನ್​ಫೆಕ್ಷನ್ ಆಗುವುದು ಕಡಿಮೆಯಾಗುತ್ತದೆ

ಮೂಢನಂಬಿಕೆಗಳು

ಮಕ್ಕಳು ಚಳಿಯಲ್ಲಿ ಓಡಾಡಿದರೆ ಶೀತ, ಜ್ವರ ಬರುತ್ತೆ ಎಂದು ಎಲ್ಲರೂ ಹೇಳುವುದನ್ನು ಕೇಳಿರಬಹುದು, ಮಕ್ಕಳು ಚಳಿಯಲ್ಲಿ ಓಡಾಡುವುದರಿಂದ ಇನ್​ಫೆಕ್ಷನ್ ಆಗುತ್ತದೆ ಎಂಬುದು ತಪ್ಪು. ಮಕ್ಕಳು ಚಳಿಯಲ್ಲಿ ಹೋದಾಗ ತುಂಬಾ ಚಳಿಗೆ ಎಕ್ಸ್​ಪೋಸ್ ಆದಾಗ ಅವರಿಗೆ ಹೈಪೋಥರ್ಮಿಯಾ ಅಂದರೆ ಮಕ್ಕಳ ದೇಹದಲ್ಲಿರುವ ಉಷ್ಣಾಂಶ ಕಡಿಮೆಯಾಗಬಹುದು, ಇನ್ನೂ ಅತಿಯಾಗಿ ಹಿಮ ಬೀಳುವ ಪ್ರದೇಶದಲ್ಲಿ ಫ್ರಾಸ್ ಬೈಟ್ ಆ ತರಹದ ಸಮಸ್ಯೆಯಾಗುತ್ತೆ ವಿನಃ ಕೆಮ್ಮು, ಶೀತ, ಜ್ವರ ಸಾಮಾನ್ಯವಾಗಿ ವೈರಸ್, ಬ್ಯಾಕ್ಟೀರಿಯಾಗಳಿಂದ ಆಗುತ್ತದೆ ಅದು ಚಳಿಗೆ ಹೋಗುವುದರಿಂದ ಆಗುವುದಿಲ್ಲ.
ಔಷಧಿಗಳನ್ನು ದಿನ ತೆಗೆದುಕೊಳ್ಳುವುದರಿಂದ ಮಕ್ಕಳಿಗೆ ಇನ್​ಫೆಕ್ಷನ್ ಆಗುವುದಿಲ್ಲ ಎಂದು ಹೇಳುತ್ತಾರೆ, ವಿಟಮಿನ್ ಸಿ, ಮಲ್ಟಿವಿಟಮಿನ್​ಗಳು ಆಗಿರಬಹುದು ಇದರ ಅವಶ್ಯಕತೆ ನಿಜವಾಗಿ ಇಲ್ಲ, ಮಕ್ಕಳು ಇದನ್ನು ತೆಗೆದುಕೊಂಡರೇನೆ ಇನ್​ಫೆಕ್ಷನ್ ಆಗಲ್ಲ ಅಂತೇನಿಲ್ಲ, ದೇಹದಲ್ಲಿಯೇ ಸಮತೋಲನವಾದ ಆಹಾರ ತೆಗೆದುಕೊಂಡರೆ ಆ ಕಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿದರೆ ನಮ್ಮಲ್ಲಿ ರೋಗವನ್ನು ನಿರೋಧಕ ಶಕ್ತಿ ನೈಸರ್ಗಿಕವಾಗಿ ಬರುತ್ತದೆ, ಇದಕ್ಕಾಗಿ ಪ್ರತ್ಯೇಕ ಔಷಧಿಗಳನ್ನು ಸೇವಿಸುವ ಅಗತ್ಯವಿಲ್ಲ.
ಶೀತಕಾಲದಲ್ಲಿ ಆಹಾರದಲ್ಲಿ ತುಪ್ಪ ಬೆರೆಸಿ ತಿನ್ನಬಾರದು, ಕೆಮ್ಮು ಬರುತ್ತದೆ, ಮೊಸರು ತಿಂದರೆ ಶೀತವಾಗುತ್ತದೆ ಎನ್ನುವುದೆಲ್ಲವೂ ತಪ್ಪು ತಿಳಿವಳಿಕೆ, ಮೊಸರು ಪ್ರೋಬಯಾಟಿಕ್ ಎಂದು ಹೇಳುತ್ತೇವೆ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ, ಈ ಬ್ಯಾಕ್ಟೀರಿಯಾದಿಂದ ಬರುವ ಇನ್​ಫೆಕ್ಷನ್​ಗಳು ಕಡಿಮೆಯಾಗುತ್ತದೆ.
ಎಲ್ಲಾ ರೋಗಕ್ಕೂ ಗಟ್​ ಹೆಲ್ತ್ ಕಾರಣ, ಯಾವಾಗ ಹೊಟ್ಟೆಯ ಆರೋಗ್ಯ ಹಾಳಾಗುತ್ತೋ ಎಲ್ಲಾ ರೋಗಗಳೂ ಬರಲು ಶುರುವಾಗುತ್ತದೆ. ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಫ್ಲೂ ಇಂಜೆಕ್ಷನ್

ಫ್ಲೂ ಇಂಜೆಕ್ಷನ್ ಕೊಟ್ಟರೆ ಅದರಿಂದಲೇ ಇನ್​ಫೆಕ್ಷನ್ ಬರುತ್ತೆ ಎಂದುಕೊಂಡಿರುತ್ತಾರೆ, ಅದು ಕಿಲ್ಡ್​ ಲಸಿಕೆಯಾಗಿದ್ದು, ಅದರಲ್ಲಿ ಸತ್ತಿರುವ ವೈರಸ್​ ಬಳಕೆ ಮಾಡಿರುವ ಕಾರಣ ಯಾವುದೇ ತೊಂದರೆಯಾಗುವುದಿಲ್ಲ.

ವೈದ್ಯರ ಕೊನೆಯ ಮಾತು

ಮಕ್ಕಳು ಲವಲವಿಕೆಯಿಂದ ಇದ್ದರೆ ಮನೆಯಲ್ಲಿ ಎಲ್ಲರಿಗೂ ಸಂತೋಷ, ರೋಗ ರುಜಿನೆಗಳಿಲ್ಲದೆ ಮಕ್ಕಳು ಆರೋಗ್ಯವಾಗಿದ್ದರೆ ಪೋಷಕರಿಗೆ ನಿಶ್ಚಿಂತೆ, ಹಾಗಾಗಿ ಈ ವರ್ಷ ಎಲ್ಲಾ ಮಕ್ಕಳು, ಆರೋಗ್ಯದಿಂದ ಸಂತೋಷವಾಗಿ, ಸಂಭ್ರಮಿಸುವಂತೆ ಈ ಚಳಿಗಾಲವು ಇರಲಿ ಎಂದು ಹಾರೈಸುತ್ತೇನೆ, ಸರ್ವೇ ಜನಾಃ ಸುಖಿನೋ ಭವಂತು.
ಮಾಹಿತಿ: ಮಕ್ಕಳ ತಜ್ಞೆ ಡಾ. ಎಚ್​.ವಿ. ನಿವೇದಿತಾ
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:48 am, Fri, 23 December 22

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ