Blue fever: ಪೋಷಕರೇ ಎಚ್ಚರ ಎಚ್ಚರ..! ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡ್ರೆ ಬೇಡ ನಿರ್ಲಕ್ಷ್ಯ

ಇದೇ ಬ್ಲೂ ಫೀವರ್ ಗಂಭೀರ ಸ್ವರೂಪ ಪಡೆದಾಗ ಮೈ, ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

Blue fever: ಪೋಷಕರೇ ಎಚ್ಚರ ಎಚ್ಚರ..! ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡ್ರೆ ಬೇಡ ನಿರ್ಲಕ್ಷ್ಯ
ಪೋಷಕರೇ ಎಚ್ಚರ ಎಚ್ಚರ..! ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡ್ರೆ ಬೇಡ ನಿರ್ಲಕ್ಷ್ಯ
Follow us
| Updated By: ಸಾಧು ಶ್ರೀನಾಥ್​

Updated on: Dec 14, 2022 | 10:53 AM

ಬೆಂಗಳೂರು: ರಾಜಧಾನಿ ಸೇರಿದಂತೆ ಸುತ್ತಮುತ್ತಲ ಹವಾಮಾನ ನಿಜಕ್ಕೂ ಗಾಬರಿ ಬೀಳಿಸುವಂತಿದೆ. ಮಳೆ ಎಂಬುದು ಬೆಂಗಳೂರಿಗೆ ಸಾಮಾನ್ಯವೇ ಆಗಿದ್ದರೂ ಈ ಪರಿ ಹವಾಮಾನ ವೈಪರೀತ್ಯಕ್ಕಿಟ್ಟುಕೊಂಡು, ಮಳೆ ಸುರಿಯುತ್ತಿವುದು ನಿಜಕ್ಕೂ ಜನರನ್ನು ಆತಂಕಕ್ಕೆ ದೂಡಿದೆ. ಅದೂ ಚಳಿಗಾಲದ ಡಿಸೆಂಬರ್​ ತಿಂಗಳಲ್ಲಿ ಹೀಗೆ ಮಳೆ, ಜೊತೆಗೆ ಶೀತಗಾಳಿ ಆಗುತ್ತಿರುವುದು ಜನರನ್ನು ಹೈರಾಣಗೊಳಿಸಿದೆ. ಅದರಲ್ಲೂ ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಅವರ ಫಜೀತಿ (health) ಆ ದೇವರಿಗೇ ಪ್ರೀತಿ ಎಂಬಂತಾಗಿದೆ. ಮನೆಗೊಬ್ಬರಂತೆ ಜ್ವರ, ಅದೂ ಇದೂ ಅಂತಾ ಮಲಗಿರುವುದೇ ಹೆಚ್ಚಾಗಿ. ಅದಕ್ಕೇ ಹೇಳಿದ್ದು ಮಕ್ಕಳಲ್ಲಿ ಜ್ವರ (fever) ಕಾಣಿಸಿಕೊಂಡ್ರೆ ಬೇಡ ನಿರ್ಲಕ್ಷ್ಯ ಎಂದು. ಮಕ್ಕಳಲ್ಲಿ  ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ ನಿರ್ಲಕ್ಷ್ಯ ಬೇಡವೇ ಬೇಡ. ಏಕೆಂದರೆ ರಾಜಧಾನಿಯಲ್ಲಿ ಶುರುವಾಗಿದೆ ಆತಂಕಕಾರಿ ಬ್ಲೂ ಫೀವರ್ ಭೀತಿ (blue fever -acute infectious disease).

ಏನಿದು ಬ್ಲೂ ಫೀವರ್ ಭೀತಿ?

ಶೀತ ಕೆಮ್ಮು ಎಂದು ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಮಕ್ಕಳು ಬೆಂಗಳೂರಿನಲ್ಲಿ ಜಾಸ್ತಿಯಾಗಿದ್ದಾರೆ. ಸೈಕ್ಲೋನ್ ಎಫೆಕ್ಟ್ ನಿಂದ ಮಾಮೂಲಿ ಶೀತ ಜ್ವರ ಭಾದೆ ಕಾಣಿಸಿಕೊಂಡಿದೆ ಎಂದು ಜನ ಯಾಮಾರುತ್ತಿದ್ದಾರೆ. ಥಂಡಿ ಗಾಳಿಗೆ, ಬಿಡದ ಮಳೆಯಿಂದ ಮಕ್ಕಳಲ್ಲಿ‌ ವೈರಲ್ ಇನ್ಫೆಕ್ಷನ್ ಇರಬಹುದು ಎಂದು ಸುಮ್ಮನಾಗುತ್ತಿದ್ದಾರೆ. ಆದರೆ ವೈರಲ್ ಇನ್ಫೆಕ್ಷನ್ ಮಧ್ಯೆ ಮತ್ತೊಂದು ಹೊಸ ರೋಗ ಕಾಲಿಟ್ಟಿದೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ.

ರಾಜಧಾನಿಯಲ್ಲಿ ಮಕ್ಕಳಲ್ಲಿ ಕಾಣಿಸ್ತಿದೆ ಬ್ಲೂ ಫೀವರ್. ರಾಕಿ ಮೌಂಟೇನ್ ಸ್ಪಾಟೆಡ್ ಫೀವರ್ ಎಂದು ಕರೆಸಿಕೊಳ್ಳುವ ಈ ಬ್ಲೂ ಫೀವರ್ ಅಮೆರಿಕಾ, ಕೆನಾಡದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಪ್ರಾಣಿಗಳ ಉಣ್ಣೆಯಿಂದ ಇದು ಹರಡುವ ಸಾಧ್ಯತೆಯಿರುತ್ತದೆ. ನಾಯಿಗಳ ಟಿಕ್ ಫೀವರ್​​ನಿಂದ (tick-borne bacterium Rickettsia rickettsii) ಸೋಂಕು ಹರಡುವ ಸಾಧ್ಯತೆಯಿದೆ.

ಬ್ಲೂ ಫೀವರ್ ಗುಣಲಕ್ಷಣಗಳು ಏನು ಅಂದರೆ 1. ತಲೆ ನೋವು 2. ಜ್ವರ 3. ಸುಸ್ತು 4. ಶೀತ 5. ಕಣ್ಣು ಕೆಂಪು 6. ಮೈ ಕೈ ನೋವು 7. ಮಂಡಿ ನೋವು

ಇದನ್ನೂ ಓದಿ:  Bengaluru Weather Today: ಬೆಂಗಳೂರಿನಲ್ಲಿ ಇಂದು ಕೂಡ ವರುಣನ ಅಬ್ಬರ; ನಾಳೆಯಿಂದ ಮಳೆ ಕ್ಷೀಣ

ನಂತರ, ಇದೇ ಬ್ಲೂ ಫೀವರ್ ಗಂಭೀರ ಸ್ವರೂಪ ಪಡೆದಾಗ ಮೈ, ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರಾದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕರಾದ ಡಾ. ಸಂಜಯ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕರಾದ ಡಾ ನಾಗರಾಜ್ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ