ಫಿಫಾ ವಿಶ್ವಕಪ್ ಸೆಮಿಪೈನಲ್: ಬೆಂಗಳೂರಿನಲ್ಲಿ ಬಾರ್ & ರೆಸ್ಟೋರೆಂಟ್, ಪಬ್ಗಳ ಅವಧಿ ವಿಸ್ತರಣೆ
ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಾರ್ & ರೆಸ್ಟೋರೆಂಟ್, ಪಬ್ಗಳ ಅವಧಿ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು: ಫಿಫಾ ವಿಶ್ವಕಪ್ ಸೆಮಿಪೈನಲ್ (Fifa world cup 2022 )ಹಿನ್ನಲೆ ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ(Bar and Restaurant) ಅವಧಿ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 14 ಹಾಗೂ 15 ರಂದು ಬೆಳಗಿನ ಜಾವ 3.30 ರ ತನಕ ತೆರೆಯಲು ಅವಕಾಶ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Karnataka Rain:ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇನ್ನೂ 5 ದಿನ ಮಳೆ
ಇದುವರೆಗೆ ಮಧ್ಯರಾತ್ರಿ 1 ತನಕ ತೆರೆಯಲು ಮಾತ್ರ ಅವಕಾಶವಿತ್ತು. ಆದ್ರೆ, ಇದೀಗ ಫಿಫಾ ವಿಶ್ವಕಪ್ ಸೆಮಿಪೈನಲ್ ನಡೆಯುವ ಹಿನ್ನಲೆ ಎರೆಡು ದಿನ ಅವಧಿ ವಿಸ್ತರಿಸಲಾಗಿದೆ. ಅವಧಿ ವಿಸ್ತರಿಸುವಂತೆ ಪೆಡರೇಷನ್ ಆಫ್ ಕ್ಲಬ್ಸ್ ಕರ್ನಾಟಕ ಮನವಿ ಮಾಡಿದ್ದರು. ಮನವಿ ಮೇರೆಗೆ ಎರೆಡು ದಿನ ಅವಧಿ ವಿಸ್ತರಣೆ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಮಂಗಳವಾರ ತಡರಾತ್ರಿ 12.30ಕ್ಕೆ ಅರ್ಜೆಂಟೀನಾ ಹಾಗೂ ಕ್ರೊವೇಷ್ಯಾ ಮಧ್ಯೆ ಮೊದಲ ಸೆಮೀಸ್ ನಡೆಯಲಿದ್ದು, ಬುಧವಾರ ಫ್ರಾನ್ಸ್ ಮತ್ತು ಮೊರೊಕ್ಕೋ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಕತಾರ್ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ. ಒಟ್ಟು 32 ತಂಡಗೊಂದಿಗೆ ನವೆಂಬರ್ 20ರಂದು ಟೂರ್ನಿ ಆರಂಭಗೊಂಡಿದ್ದು, ಇದೀಗ ನಾಲ್ಕು ತಂಡಗಳು ಕಣದಲ್ಲಿವೆ. ಅರ್ಜೆಂಟೀನಾ-ಕ್ರೊವೇಷ್ಯಾ ಮೊದಲ ಸೆಮೀಸ್ನಲ್ಲಿ ಎದುರಾಗಲಿದ್ದು, 2ನೇ ಸೆಮಿಫೈನಲ್ನಲ್ಲಿ ಫ್ರಾನ್ಸ್-ಮೊರೊಕ್ಕೋ ತಂಡಗಳ ನಡುವೆ ಅಂತಿಮ ನಾಲ್ಕರ ಘಟ್ಟದಲ್ಲಿ ಪರಸ್ಪರ ಎದುರಾಗಲಿವೆ. ಸೆಮಿಫೈನಲ್ನಲ್ಲಿ ಹೊರಬೀಳುವ ತಂಡಗಳು ಇದೇ ಶನಿವಾರ 3ನೇ ಸ್ಥಾನಕ್ಕೆ ಕಾದಾಡಲಿವೆ.
Published On - 9:19 pm, Tue, 13 December 22