AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care Tip: ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಸೂಕ್ತವಾಗಿದೆ ಈ ಸೂಪರ್ ದೇಸಿ ಫುಡ್‌ಗಳು

ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯ. ಚಳಿಗಾಲದಲ್ಲಿ ಸೂಕ್ಷ್ಮವಾಗಿರುವ ಮುಖದ ಚರ್ಮವು ಹೊಳಪು ಮತ್ತು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುವ ಮತ್ತು ಪ್ರಯೋಜನಕಾರಿಯಾದ ಸೂಪರ್ ಫುಡ್‌ಗಳು ಇಲ್ಲಿವೆ.

Skin Care Tip: ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಸೂಕ್ತವಾಗಿದೆ ಈ ಸೂಪರ್ ದೇಸಿ ಫುಡ್‌ಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Dec 23, 2022 | 12:16 PM

Share

ಚಳಿಗಾಲದಲ್ಲಿ ಚರ್ಮ(Skin)ಸಮಸ್ಯೆಗಳು ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯ. ಚಳಿಗಾಲದಲ್ಲಿ ಸೂಕ್ಷ್ಮವಾಗಿರುವ ಮುಖದ ಚರ್ಮವು ಹೊಳಪು ಮತ್ತು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುವ ಮತ್ತು ಪ್ರಯೋಜನಕಾರಿಯಾದ ಸೂಪರ್ ಫುಡ್‌ಗಳು ಇಲ್ಲಿವೆ. ಚಳಿಗಾಲದ ಋತುವಿನಲ್ಲಿ ಕೆಮ್ಮು, ನೆಗಡಿ, ಜ್ವರ ಇತ್ಯಾದಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದು ನಮ್ಮ ಚರ್ಮ ಮತ್ತು ತುಟಿಗಳ ಮೇಲು ಪರಿಣಾಮವನ್ನು ಬೀರುತ್ತದೆ. ಚಳಿಗಾಲ ಬಂತೆಂದರೆ ನಮ್ಮ ಮುಖ ಹೊಳಪು ಮತ್ತು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಚರ್ಮವು ಚಪ್ಪಟೆಯಾಗುತ್ತದೆ. ತುಟಿಗಳು ಬಿರುಕು ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಹೈಡ್ರಿಟ್ ಅಗಿ ಇರಿಸಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶ ಹೊರ ಹೋಗುತ್ತವೆ.

ಇದು ರಕ್ತವನ್ನು ಶುಧ್ಧೀಕರಿಸುತ್ತದೆ. ಮತ್ತು ಇದು ಚರ್ಮದ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ವಿವಿಧ ಅಧ್ಯಯನಗಳು ಸಾಬೀತು ಪಡಿಸಿವೆ. ಇದರ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪೋಷಕಾಂಶಗಳನ್ನು ಪಡೆಯಲು ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಮುಖ್ಯವಾಗಿದೆ.

ಚಳಿಗಾಲದಲ್ಲಿ ಆರೋಗ್ಯಕರ ಚರ್ಮವನ್ನು ಪಡೆಯುವುದು ಹೇಗೆ? ಇಲ್ಲಿದೆ ಸಲಹೆ ಮತ್ತು ತಂತ್ರಗಳು:

ನ್ಯೂಟ್ರೀಷನಿಸ್ಟ್ ರೂಪಾಲಿ ದತ್ತ ಅವರು ಪೌಷ್ಟಿಕಾಂಶ ಹಾಗೂ ಒಟ್ಟಾರೆ ಆರೋಗ್ಯ ಪ್ರಯೋಜನಗಳಿಗಾಗಿ ಆರೋಗ್ಯಕರ ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಹಣ್ಣುಗಳು ಮತ್ತು ತರಕಾರಿಗಳು ಉತ್ಕರ್ಷಣ ನಿರೋಧಕ(ಆ್ಯಂಟಿಒಕ್ಸಿಡೆಂಟ್) ಅಂಶಗಳಿಂದ ಸಮೃದ್ಧವಾಗಿದೆ. ಅವು ಚರ್ಮದ ಕೋಶಗಳನ್ನು ಹಾನಿಗೊಳಗಾಗದಂತೆ ರಕ್ಷಿಸುತ್ತವೆ.

ಇದನ್ನು ಓದಿ:Skin Care Tips: ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು ಇಲ್ಲಿದೆ ಮನೆ ಮದ್ದು

ಆರೋಗ್ಯಕ ಹೊಳೆಯುವ ಚರ್ಮಕ್ಕಾಗಿ ಐದು ದೇಸಿ ಸೂಪರ್ ಫುಡ್‌ಗಳು:

1. ಕ್ಯಾರೆಟ್ : ಕ್ಯಾರೆಟ್ ಆ್ಯಂಟಿಒಕ್ಸಿಡೆಂಟ್, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಸೇರಿದಂದೆ ಹೆಚ್ಚಿನ ಪೋಷಕಾಂಶಗಳಿಂದ ತುಂಬಿದೆ. ಈ ಪೋಷಕಾಂಶಗಳು ಜೀವಾಣುಗಳನ್ನು ಹೊರ ಹಾಕಲು, ಕೊಲೆಜಿನ್‌ನ್ನು ಉತ್ಪಾದಿಸಲು ಮತ್ತು ಚರ್ಮವನ್ನು ಬಲ ಪಡಿಸಲು ಸಹಾಯ ಮಾಡುತ್ತದೆ. ಮತ್ತು ಒಳಗಿನಿಂದ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಕ್ಯಾರೆಟನ್ನು ತಾಜಾ ಅಥವಾ ಜ್ಯೂಸ್ ರೂಪದಲ್ಲಿ, ಸಲಾಡ್ ರೂಪದಲ್ಲೂ ಸೇವಿಸಬಹುದು.

2. ಪಾಲಕ್: ಪಾಲಕ್ ಎಲೆಗಳಲ್ಲಿ ಹಸಿರು ಪೋಷಕಾಂಶಗಳು ಹೇರಳವಾಗಿದೆ. ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ ಅಂಶಗಳಿವೆ. ಇದು ಚರ್ಮವನ್ನು ವಯಸ್ಸಾಗುವಿಕೆ, ಶುಷ್ಕತೆ, ಕಪ್ಪು ಕಲೆಗಳಿಂದ ರಕ್ಷಿಸುತ್ತದೆ. ಮತ್ತು ಇದು ಉರಿಯೂತಗಳಿಂದ ರಕ್ಷಣೆ ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪಾಲಕ್‌ನ್ನು ಸಬ್ಜಿ, ಪಾಲಕ್ ಪರಾಟಾ, ಸ್ಮೂದಿ, ಪಲ್ಯದ ರೂಪದಲ್ಲಿ ಸೇವಿಸಬಹುದು.

3. ದಾಳಿಂಬೆ : ದಾಳಿಂಬೆ ನಮ್ಮ ಚರ್ಮದ ಮೇಲೆ ಆಚಿಟಿಮೈಕ್ರೋಬಿಯಲ್ ಪರಿಣಾಮವನ್ನು ಬೀರುತ್ತವೆ ಎಂದು ತಿಳಿದು ಬಂದಿದೆ. ಇದು ಮೊಡವೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ದೇಹದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಚರ್ಮದ ಎಣ್ಣೆಯ ಅಂಶವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

4. ಕಿತ್ತಲೆ ಹಣ್ಣು: ಈ ಹಣ್ಣಿನಲ್ಲಿ ಆ್ಯಂಟಿಒಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಚಲಿಗಾಲದಲ್ಲಿ ಸೇವಿಸಲು ಪರ್ಫೆಕ್ಟ್ ಹಣ್ಣು. ಇದು ವಿಟಮಿನ್ ಸಿ ಅಂಶಗಳಿಂದ ಕೂಡಿದ್ದು, ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

5. ಪೇರಳೆ(ಸೀಬೆ ಹಣ್ಣು) : ಪೇರಳೆ ಹಣ್ಣು ವಿಟಮಿನ್ ಎ, ಸಿ, ಬೀಟಾ ಕ್ಯಾರೋಟಿನ್ ಮತ್ತು ಲೈಕೋಪೀನ್ ಪೋಷಕಾಂಶಗಳಿಂದ ಕೂಡಿವೆ. ಈ ಪೋಷಕಾಂಶಗಳು ದೆಹದಲ್ಲಿ ಕೊಲಾಜಿನ್ ಅಂಶವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಚರ್ಮವನ್ನು ನೈಸರ್ಗಿಕವಾಗಿ ಬಿಗಿಗೊಳಿಸುತ್ತದೆ. ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಈ ರುಚಿಕರವಾದ ಹಣ್ಣು ಮತ್ತು ತರಕಾರಿಗಳ ಪ್ರಯೋಜನಗಳನ್ನು ತಿಳಿದಿದ್ದೀರಿ. ಈ ಚಳಿಗಾಲದಲ್ಲಿ ಈ ರುಚಿಕರವಾದ ಹಣ್ಣು ತರಕಾರಿಗಳನ್ನು ತಿಂದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

.

Published On - 12:16 pm, Fri, 23 December 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್