Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಭಾರತದಲ್ಲಿನ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಜ್ಞರ ಸಲಹೆ

ಚೀನಾದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರತಿದಿನ ಸರಾಸರಿ 5,000 ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಪ್ರತಿದಿನ ವರದಿಯಾಗುತ್ತಿರುವ ಸರಾಸರಿ ಸೋಂಕು ಪ್ರಕರಣಗಳು 10 ಲಕ್ಷ ದಾಟಿದೆ. ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಭಾರತ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಲು ಮುಂದಾಗಿದೆ.

ಚೀನಾದಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಭಾರತದಲ್ಲಿನ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಜ್ಞರ ಸಲಹೆ
ಡಾ ಗಗನ್‌ದೀಪ್ ಕಾಂಗ್Image Credit source: HT
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 23, 2022 | 7:41 PM

ಚೀನಾದಲ್ಲಿ (china) ಕೊವಿಡ್ (covid)ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರತಿದಿನ ಸರಾಸರಿ 5,000 ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಪ್ರತಿದಿನ ವರದಿಯಾಗುತ್ತಿರುವ ಸರಾಸರಿ ಸೋಂಕು ಪ್ರಕರಣಗಳು 10 ಲಕ್ಷ ದಾಟಿದೆ. ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಭಾರತ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಲು ಮುಂದಾಗಿದೆ. ಭಾರತದಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧಗಳ ಕುರಿತು ಯೂರೋಲೊಜಿಸ್ಟ್ ಡಾ ಗಗನ್‌ದೀಪ್ ಕಾಂಗ್ ನೀಡಿರುವ ಸಲಹೆಗಳು ಇಲ್ಲಿವೆ.

  1. ಭಾರತದಲ್ಲಿ ಯಾವುದೇ ನಿರ್ಬಂಧಗಳ ಅಗತ್ಯವಿಲ್ಲ ಆದರೆ ಮನ್ನೆಚ್ಚರಿಕೆಯನ್ನು ವಹಿಸಬೇಕಿದೆ ಎಂದು ಡಾ ಗಗನ್‌ದೀಪ್ ಕಾಂಗ್ ಹೇಳಿದ್ದಾರೆ.
  2. ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ತಡೆಯುವ ಸಾಧ್ಯತೆ ಇದೆ. ಕೊವಿಡ್ ನಿರ್ಮೂಲನೆ ಮಾಡುವಲ್ಲಿ ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಪ್ರಯಾಣದ ನಿರ್ಬಂಧಗಳ ಅಗತ್ಯವಿರುವುದಿಲ್ಲ. ಆದರೆ ಚೀನಾವು ಇಂತಹ ವೈರಾಣುಗಳಿಂದ ಹೊರಬರಲು ಸಾಧ್ಯವಿಲ್ಲ ಎಂದು ಹೇಳಿದರು.
  3. 2021 ಎಪ್ರಿಲ್-ಮೇ ಮತ್ತು 2022ರ ಜನವರಿಗೆ ಹೋಲಿಸಿದರೆ ಭಾರತವು ಕೋವಿಡ್ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
  4. ಕೊವಿಡ್ ರೂಪಾಂತರಿಗಳು ನಡುವೆ ಚೀನಾದ ವೈರಾಣುಗಳು ಭಾರತದಲ್ಲಿ ಉಲ್ಬಣವನ್ನು ನಿರೀಕ್ಷಿಸುವುದಿಲ್ಲ ಎಂದು ಹೇಳಿದರು.
  5. ಇದೀಗಾ ಸಾಕಷ್ಟು ಭಾರತೀಯರಲ್ಲಿ ಆತಂಕವು ಸೃಷ್ಟಿಯಾಗಿದೆ. ಪ್ರಯಾಣ ಬೆಳೆಸುವುದು ಎಷ್ಟು ಸೂಕ್ತ? ಭಾರತ ಸರ್ಕಾರ ಸದ್ಯದಲ್ಲಿಯೇ ನಿರ್ಬಂಧವನ್ನು ಹೇರಬಹುದು ಎಂಬ ಆತಂಕ ಸಾಮಾನ್ಯರಲ್ಲಿದೆ. ಆದರೆ ಭಾರತದಲ್ಲಿ ಹೊಸ ಅಲೆಯ ಸೂಚನೆ ಇಲ್ಲ ಯಾವುದೇ ಪ್ರಯಾಣ ನಿರ್ಬಂಧಗಳ ಅಗತ್ಯವಿಲ್ಲ ಎಂದು ಗಗನ್‌ದೀಪ್ ಕಾಂಗ್ ಹೇಳಿದ್ದಾರೆ.
  6. ಚೀನಾ ದೇಶವನ್ನು ಬಿಟ್ಟು ಉಳಿದ ದೇಶಗಳಿಗೆ ಮಾಸ್ಕ್ ಧರಿಸಿ ಪ್ರಯಾಣ ಮಾಡಬಹುದು ಎಂದು ಹೇಳುತ್ತಾರೆ.
  7. ಚೀನಾದಲ್ಲಿ ಪ್ರತಿಯೊಬ್ಬರಿಗೂ 2ಡೋಸ್ ಲಸಿಕೆಯನ್ನು ನೀಡಿದರೂ ಸಹ ಅದು ಅಲ್ಲಿನ ಜನರ ಮರಣದ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ.
  8. ಚೀನೀ ಲಸಿಕೆಗಳು ತೀವ್ರವಾದ ರೋಗ ಮತ್ತು ಮರಣವನ್ನು ತಡೆಗಟ್ಟಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಆದರೆ ಅವು ಎಂಆರ್‌ಎನ್‌ಎ ಲಸಿಕೆಗಳಿಗಿಂತ ಕಡಿಮೆ ಪರಿಣಾಮಕಾರಿ.
  9.  ಚೀನಾದಲ್ಲಿನ ಬಹಳಷ್ಟು ಜನರು ಅನಾರೋಗ್ಯಕ್ಕೆ ಒಳಗಾದಾಗ, ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡಂತೆ ಕಳಪೆ ಆರೈಕೆಯನ್ನು ನೀಡಲಾಗಿತ್ತು. ಅಂದರೆ ಅಲ್ಲಿನ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಸಿಬ್ಬಂದಿಗಳ ಕೊರತೆಯನ್ನು ಕೂಡ ಅನುಭವಿಸಿದೆ. ಇದರಿಂದಾಗಿ ಇಲ್ಲಿ ಸೋಂಕು ಹೆಚ್ಚಾಗುತ್ತಾ ಹೋಗುತ್ತದೆ.
  10. ಚೀನಾದ ಸರ್ಕಾರವು ವ್ಯಾಕ್ಸಿನೇಷನ್‌ಗಳನ್ನು ನಿರ್ಲಕ್ಷಿಸುತ್ತಿದ್ದು, ಇವಾಗಿನ ಈ ಸ್ಥಿತಿಗೆ ನೇರವಾಗಿ ಕಾರಣವಾಗಿದೆ.
  11. ನಿಮ್ಮಲ್ಲಿ ಶೀತ ಕೆಮ್ಮಿನಂತಹ ಸೋಂಕುಗಳು ಕಂಡುಬಂದಲ್ಲಿ ಆದಷ್ಟು ಮನೆಯೊಳಗೆಯೇ ವಿಶಾಂತ್ರಿ ಪಡೆದುಕೊಳ್ಳಿ.
  12. ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳಿ. ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ನಿಮ್ಮ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ನಿಮ್ಮದು ಎಂದು ಹೇಳುತ್ತಾರೆ.
  13. ಯುವಕರು ಆದಷ್ಟು ಲಸಿಕೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದೆ. ಭಾರತದ ಸುರಕ್ಷತೆಯನ್ನು ಕಾಪಾಡುವಲ್ಲಿ ಯುವಜನತೆಯ ಪಾತ್ರವಹಿಸಬೇಕಿದೆ ಎಂದು ಹೇಳಿದರು.

Published On - 7:38 pm, Fri, 23 December 22

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !