AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

blood cancer: ಕೋವಿಡ್-19 ಲಸಿಕೆ ರಕ್ತದ ಕ್ಯಾನ್ಸರ್ ರೋಗಿಗಳಿಗೆ ಉತ್ತಮ: ಅಧ್ಯಯನ

ರಕ್ತದ ಕ್ಯಾನ್ಸರ್ ಹೊಂದಿರುವ ಜನರು ಸಾಮಾನ್ಯವಾಗಿ ದುರ್ಬಲ ಇಮ್ಯುನ್ ಸಿಸ್ಟಮ್ ಹೊಂದಿರುತ್ತಾರೆ. ಅಂತಹವರು ಕೋವಿಡ್-19 ನಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಇದಲ್ಲದೆ ಹಲವಾರು ಕ್ಯಾನ್ಸರ್ ಚಿಕಿತ್ಸೆಗಳು ಆ ವ್ಯಕ್ತಿಗಳ ಕೋವಿಡ್-19 ವ್ಯಾಕ್ಸಿನೇಷನ್ ನಂತರ SSARS-CoV-2 ವಿರುದ್ಧ ಸ್ವಲ್ಪ ಪ್ರಮಾಣದ ಅಥವಾ ಯಾವುದೇ ಆ್ಯಂಟಿಬಾಡಿಸ್ (ಪ್ರತಿಕಾಯಕ) ವನ್ನು ಅಭಿವೃದ್ಧಿ ಪಡಿಸಲು ಕಾರಣವಾಗುತ್ತದೆ.

blood cancer: ಕೋವಿಡ್-19 ಲಸಿಕೆ ರಕ್ತದ ಕ್ಯಾನ್ಸರ್ ರೋಗಿಗಳಿಗೆ ಉತ್ತಮ: ಅಧ್ಯಯನ
Covid-19 vaccine
TV9 Web
| Edited By: |

Updated on:Dec 24, 2022 | 2:05 PM

Share

ರಕ್ತದ ಕ್ಯಾನ್ಸರ್ ( blood cancer) ಹೊಂದಿರುವ ಜನರು ಸಾಮಾನ್ಯವಾಗಿ ದುರ್ಬಲ ಇಮ್ಯುನ್ ಸಿಸ್ಟಮ್ ಹೊಂದಿರುತ್ತಾರೆ. ಅಂತಹವರು ಕೋವಿಡ್-19 (covid 19) ನಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಇದಲ್ಲದೆ ಹಲವಾರು ಕ್ಯಾನ್ಸರ್ ಚಿಕಿತ್ಸೆಗಳು ಆ ವ್ಯಕ್ತಿಗಳ ಕೋವಿಡ್-19 ವ್ಯಾಕ್ಸಿನೇಷನ್ ನಂತರ SSARS-CoV-2 ವಿರುದ್ಧ ಸ್ವಲ್ಪ ಪ್ರಮಾಣದ ಅಥವಾ ಯಾವುದೇ ಆ್ಯಂಟಿಬಾಡಿಸ್ (ಪ್ರತಿಕಾಯಕ) ವನ್ನು ಅಭಿವೃದ್ಧಿ ಪಡಿಸಲು ಕಾರಣವಾಗುತ್ತದೆ. ಹಾಗೂ ವ್ಯಾಕ್ಸಿನೇಷನ್ T ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಇದು ಧೀರ್ಘಾವಧಿಯ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಸಹಾಯಕವಾಗಿದೆ.

ಡಾ. ಆಂಡ್ರಿಯಾ ಕೆಪ್ಲರ್-ಹಫ್ಕೆಮೆಯರ್ ಮತ್ತು ಡಾ. ಕ್ರಿಸ್ಟಿನ್ ಗ್ರೇಲ್ ಅವರ ನೇತೃತ್ವದ ವೈದ್ಯರ ತಂಡ ಹಾಗೂ ಫ್ರೀಬರ್ಗಾಂಡ್ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಫ್ರೊ. ಆಲಿವರ್ ಟಿ. ಕೆಪ್ಲರ್ ಅವರು ಕೋವಿಡ್-19ರ ವಿರುದ್ಧ ವ್ಯಾಕ್ಸಿನೇಷನ್ ಪಡೆದ ರಕ್ತ ಕ್ಯಾನ್ಸರ್ ರೋಗಿಗಳ ರೋಗ ನಿರೋಧಕ ಪ್ರಕ್ರಿಯೆಯ ಕುರಿತಾಗಿ ಮಾಡಿದ ಹಲವು ತಿಂಗಳ ಕೋರ್ಸ್​ನ್ನು ವಿವರಿಸಿದ್ದಾರೆ. ಹಾಗೂ SSARS-CoV-2 ನಿಂದ ಈ ಕ್ಯಾನ್ಸರ್ ರೋಗಿಗಳಿಗೆ ಆಗುವ ಗಂಭೀರ ಅನಾರೋಗ್ಯದ ವಿರುದ್ಧ ವ್ಯಾಕ್ಸಿನೇಷನ್ ರಕ್ಷಣೆ ನೀಡುತ್ತದೆ ಎಂದು ಅಧ್ಯಯನದ ಫಲಿತಾಂಶದಿಂದ ಕಂಡು ಬಂದಿದೆ.

ಕೋವಿಡ್-19 ವ್ಯಾಕ್ಸಿನೇಷನ್‌ಗೆ ಬಲವಾದ T ಸೆಲ್ ಪ್ರತಿಕ್ರಿಯೆ

ಅಧ್ಯಯನವನ್ನು ಬಿ-ಸೆಲ್ ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾ ಎಂಬ ಎರಡು ರೀತಿಯ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗಳ ಮೇಲೆ ಕೇಂದ್ರೀಕರಿಸಲಾಗಿತ್ತು. “ನಮ್ಮ ಫಲಿತಾಂಶವು ಬಹುತೇಕ ಎಲ್ಲಾ ಅಧ್ಯಯನಗಳಲ್ಲಿ ಭಾಗವಹಿಸುವವರು ಕೋವಿಡ್-19 ವ್ಯಾಕ್ಸಿನೇಷನ್‌ಗೆ ಬಲವಾದ T ಸೆಲ್ ಪ್ರತಿಕ್ರಿಯೆಯನ್ನು ಹೊಂದಿದ್ದಾರೆ’ ಎಂಬುದನ್ನು ತೋರಿಸುತ್ತದೆ ಎಂದು ಡಾ, ಆಂಡ್ರಿಯಾ ಕೆಪ್ಲರ್-ಹಫ್ಕೆಮೆಯರ್ ವಿವರಿಸುತ್ತಾರೆ.

ಇದನ್ನು ಓದಿ;Blood Cancer: ಈ 5 ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಂಡರೆ ಎಚ್ಚರ, ರಕ್ತದ ಕ್ಯಾನ್ಸರ್ ಇರಬಹುದು

ಫ್ರೋ. ಆಲಿವರ್ ಟಿ. ಕೆಪ್ಲರ್ ನೇತೃತ್ವದ ಸಂಶೋಧನಾ ತಂಡ ವ್ಯಾಕ್ಸಿನೇಷನ್ ನಂತರ ಪ್ರತಿಕಾಯಕಗಳ ಸಾಂದ್ರತೆಯನ್ನು ವಿಶ್ಲೇಷಿಸುವಲ್ಲಿ ಮಾತ್ರವಲ್ಲದೆ ಅವುಗಳ ಗುಣಮಟ್ಟದಲ್ಲಿಯೂ ಸಹ ಪರಿಣಿತಿಯನ್ನು ಹೊಂದಿದೆ. ಇದು ನಿರ್ಧಿಷ್ಟವಾಗಿ ಪ್ರತಿಕಾಯಕಗಳು ಮತ್ತು ವೈರಲ್ ಸ್ಪೆಕ್ ಪ್ರೋಟೀನ್ ನಡುವಿನ ಬಂಧಗಳ ಬಲವನ್ನು ಅವಲಂಬಿಸಿರುತ್ತದೆ. ಇದರ ಜೊತೆಗೆ ಜೀವ ಕೋಶದಲ್ಲಿ ವಿಭಿನ್ನ SSARS-CoV-2 ರೂಪಾಂತರಗಳನ್ನು ತಟಸ್ಥಗೊಳಿಸಲು ಪ್ರತಿಕಾಯಕಗಳ ಸಾಮರ್ಥ್ಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮುಂದಿನ ಹಂತವಾಗಿ ವಿಜ್ಞಾನಿಗಳು ಎರಡು ಹಾಗೂ ಮೂರು ಡೋಸ್ ಕೋವಿಡ್ ಲಸಿಕೆ ಪಡೆದ ನಂತರ ರಕ್ತ ಕ್ಯಾನ್ಸರ್ ರೋಗಿಗಳು ಹಾಗೂ ಆರೋಗ್ಯವಾಗಿ ಇರುವ ಜನ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಸ್ಪೆಕ್ ಪ್ರೋಟೀನ್‌ಗೆ ಪ್ರತಿಕಾಯಕಗಳು ಮತ್ತು T ಸೆಲ್ ಪ್ರತಿಕ್ರಿಯೆಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಹೋಲಿಸಿದ್ದಾರೆ.

ವಿವಿಧ SSARS-CoV-2 ರೂಪಾಂತರಗಳ ವಿರುದ್ಧದ ಉತ್ತಮ ಗುಣಮಟ್ಟದ ಆಂಟಿಬಾಡಿಸ್ (ಪ್ರತಿಕಾಯಕ)ಗಳು

ಪ್ರತಿಕಾಯಕವನ್ನು ರೂಪಿಸುವ ರೋಗಿಗಳು ನಿರ್ಧಿಷ್ಟವಾಗಿ ಉತ್ತಮ ಗುಣಮಟ್ಟದ ಪ್ರತಿಕಾಯಕಗಳನ್ನು ಉತ್ಪಾದಿಸುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಅಧ್ಯಯನಕ್ಕೆ ಒಳಗಾದವರು ಎರಡನೇ ವ್ಯಾಕ್ಸಿನೇಷನ್ ನಂತರ ಈಗಾಗಲೇ ತಟಸ್ಥಗೋಳಿಸಲು ಮತ್ತು ವಿವಿಧ SSARS-CoV-2 ರೂಪಾಂತರಗಳನ್ನು ನಿಷ್ಕಿಯಗೊಳಿಸಲು ಸಮರ್ಥರಾಗಿದ್ದಾರೆ. ಲಸಿಕೆ ಹಾಕಿದ ಆರೋಗ್ಯವಂತ ಜನರಿಗಿಂತ ರಕ್ತ ಕ್ಯಾನ್ಸರ್ ರೋಗಿಯ ಸಮೂಹದಲ್ಲಿ ಈ ಸಾಮರ್ಥ್ಯವು ಗಣನೀಯವಾಗಿ ಹೆಚ್ಚು ಸ್ಪಷ್ಟವಾಗಿದೆ.

ಕೋವಿಡ್-19 ವ್ಯಾಕ್ಸಿನೇಷನ್ ವಿವಿಧ ರೀತಿಯ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಹೆಚ್ಚಿನ ಪ್ರಬಲವಾದ ತಟಸ್ಥಗೊಳಿಸುವ ಪ್ರತಿಕಾಯಕಗಳನ್ನು ಒಳಗೊಂಡಂತೆ ಹೆಚ್ಚಿನ ಆಂಟಿವೈರಲ್ ಪ್ರತಿರಕದಷೆಯನ್ನು ಉತ್ಪಾದಿಸುತ್ತದೆ. ಎಂದು ಫ್ರೋ. ಆಲಿವರ್ ಟಿ. ಕೆಪ್ಲರ್ ವಿವರಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Sat, 24 December 22

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ