Health Tips: ಈ ಆರೋಗ್ಯ ಸಮಸ್ಯೆ ಹೊಂದಿರುವವರು ಟೊಮೆಟೊ ಸೇವನೆ ನಿರಾಕರಿಸುವುದು ಉತ್ತಮ

ನಾವು ನಿತ್ಯವೂ ಸೇವಿಸುವ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು. ಇದು ಮನುಷ್ಯನ ಯೌವನ ಕಾಪಾಡುತ್ತದೆ. ಏಕೆಂದರೆ ಟೊಮೆಟೊ ಸರಿಯಾದ ಜೀರ್ಣಶಕ್ತಿಯನ್ನು ನಿರ್ವಹಿಸುತ್ತದೆ.

Health Tips: ಈ ಆರೋಗ್ಯ ಸಮಸ್ಯೆ ಹೊಂದಿರುವವರು ಟೊಮೆಟೊ ಸೇವನೆ ನಿರಾಕರಿಸುವುದು ಉತ್ತಮ
ಟೊಮೆಟೊ (ಸಂಗ್ರಹ ಚಿತ್ರ) Image Credit source: wallpaperflare.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 24, 2022 | 7:00 AM

ನಾವು ನಿತ್ಯವೂ ಸೇವಿಸುವ ತರಕಾರಿ(Vegetables) ಗಳಲ್ಲಿ ಟೊಮೆಟೊ (tomato) ಕೂಡ ಒಂದು. ಇದು ಮನುಷ್ಯನ ಯೌವನ ಕಾಪಾಡುತ್ತದೆ. ಏಕೆಂದರೆ ಟೊಮೆಟೊ ಸರಿಯಾದ ಜೀರ್ಣಶಕ್ತಿಯನ್ನು ನಿರ್ವಹಿಸುತ್ತದೆ. ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಟೊಮೆಟೊದಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳಿವೆ. ಇವುಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಬಿ ಮತ್ತು ಪಿಷ್ಟದಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಹೆಚ್ಚುವರಿಯಾಗಿ, ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಫೋಲೇಟ್, ಕಬ್ಬಿಣ, ಸತು, ರಂಜಕದಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಹಾಗಾಗಿ ಟೊಮೆಟೊ ತಿನ್ನುವುದರಿಂದ ನಾವು ವಿವಿಧ ಪೋಷಕಾಂಶಗಳನ್ನು ಪಡೆಯಬಹುದು. ಆದರೆ, ಕೆಲವು ಜನರು ಮಾತ್ರ ಟೊಮೆಟೊವನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಅದು ಏಕೆ ಎಂದು ತಿಳಿಯಲು ಮುಂದೆ ಓದಿ.

ಟೊಮೆಟೊವನ್ನು ಯಾರು ತಿನ್ನಬಾರದು?

ಕಿಡ್ನಿ ವೈಫಲ್ಯ, ಡಯಾಲಿಸಿಸ್​ ರೋಗಿಗಳು, ಕಿಡ್ನಿ ಕಸಿಗಾಗಿ ಕಾಯುತ್ತಿರುವ ರೋಗಿಗಳು ಟೊಮೆಟೊ ಸೇವಿಸಬಾರದು. ಟೊಮೆಟೊ ದಿನನಿತ್ಯದ ಆಹಾರದ ಭಾಗವಾಗಿದ್ದರೂ, ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗದಂತೆ ಟೊಮೆಟೊಗಳನ್ನು ತಿನ್ನಬಹುದು. ಆದರೆ ಕಿಡ್ನಿ ಸ್ಟೋನ್​ ಪದೆ ಪದೇ​ ಉಂಟಾದರೆ ಟೊಮೆಟೊ ತಿನ್ನದಿರುವುದು ಉತ್ತಮ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Skin Care Tip: ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಸೂಕ್ತವಾಗಿದೆ ಈ ಸೂಪರ್ ದೇಸಿ ಫುಡ್‌ಗಳು

ಟೊಮೆಟೊ ಯಾರೆಲ್ಲಾ ತಿನ್ನಬಹುದು:

ಚರ್ಮದ ಹುಣ್ಣು, ಆಗಾಗ ಚರ್ಮದ ಬಣ್ಣ ಬದಲಾವಣೆ, ನಿರಂತರ ಹುಣ್ಣುಗಳಿಂದ ಬಳಲುತ್ತಿರುವವರು ಹೆಚ್ಚು ಟೊಮೆಟೊಗಳನ್ನು ಸೇವಿಸಬಹುದು. ವಿಟಮಿನ್ ಎ ಕೊರತೆ ಮತ್ತು ಕಣ್ಣಿನ ಸಮಸ್ಯೆ ಇರುವವರು ಟೊಮೆಟೊವನ್ನು ಆಗಾಗ ತಿನ್ನಬಹುದು. ಹೃದ್ರೋಗಿಗಳಿಗೆ ಮತ್ತು ಬೈಪಾಸ್ ರೋಗಿಗಳಿಗೆ ಟೊಮೆಟೊ ಪ್ರಯೋಜನಕಾರಿಯಾಗಿದೆ. ಟೊಮೆಟೊ ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಟೊಮೆಟೊ ಪ್ರಯೋಜನಗಳು:

ಟೊಮೆಟೊದಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಲ್ಲುಗಳು, ಒಸಡುಗಳು ಮತ್ತು ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಟೊಮೆಟೊದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ನಮ್ಮ ದೇಹದ ಜೀವಕೋಶಗಳನ್ನು ಆರೋಗ್ಯವಾಗಿರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಟೊಮೆಟೊ ತುಂಬಾ ಒಳ್ಳೆಯದು. ರಕ್ತನಾಳಗಳ ದಕ್ಷತೆಯನ್ನು ಸುಧಾರಿಸುತ್ತದೆ. ರಕ್ತದ ಹರಿವನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ.

ಇದನ್ನೂ ಓದಿ: Tulsi Benefits: ಹೃದಯ, ದೇಹ, ಮನಸ್ಸನ್ನು ಜೋಪಾನ ಮಾಡುತ್ತೆ ತುಳಸಿ, ಬಳಕೆ ಹೇಗೆ ತಿಳಿಯಿರಿ

ಒಬ್ಬ ವ್ಯಕ್ತಿ ಎಷ್ಟು ಟೊಮೆಟೊಗಳನ್ನು ತಿನ್ನಬಹುದು?

ಒಬ್ಬ ವ್ಯಕ್ತಿಯು ದಿನಕ್ಕೆ 300 ರಿಂದ 400 ಗ್ರಾಂ ತರಕಾರಿಗಳನ್ನು ತಿನ್ನಬೇಕು. ಟೊಮೆಟೊಗಳನ್ನು 100 ಗ್ರಾಂವರೆಗೆ ಸೇವಿಸಬಹುದಾಗಿದೆ. ಇದು ಎರಡು ಟೊಮೆಟೊಗಳಿಗೆ ಸಮಾನವಾಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ