Corona in India: BF.7 ಕೊರೊನಾ ತಳಿ ನಿಮ್ಮ ಬಳಿ ಸುಳಿಯದಿರಲು ವೈದ್ಯರ ಈ ಸಲಹೆ ಪಾಲಿಸಿ
ಕೋವಿಡ್‌ನ ಹೊಸ ರೂಪಾಂತರ BF.7 ತಳಿಯ ಲಕ್ಷಣಗಳು ಯಾವುವು? ಭಾರತದ ಪರಿಸ್ಥಿತಿಯು ಚೀನಾಕ್ಕೆ ಭಿನ್ನವಾಗಿದೆಯೇ ಅಥವಾ ಹೋಲುತ್ತದೆಯೇ? ಎಂಬುವುದರ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಪಂಚದ ಹಲವಾರು ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಚೀನಾದಲ್ಲಿ ಕೋವಿಡ್-19(covid-19) ಪ್ರಕರಣಗಳ ಹೆಚ್ಚಳವು ಭಾರತವನ್ನು ಆತಂಕಕ್ಕೆ ತಳ್ಳಿದೆ. ಹಾಗಾದರೆ ಕೋವಿಡ್‌ನ ಹೊಸ ರೂಪಾಂತರ BF.7 ತಳಿಯ (BF.7 covid variant) ಲಕ್ಷಣಗಳು ಯಾವುವು? ಭಾರತದ ಪರಿಸ್ಥಿತಿಯು ಚೀನಾಕ್ಕೆ ಭಿನ್ನವಾಗಿದೆಯೇ ಅಥವಾ ಹೋಲುತ್ತದೆಯೇ? ಎಂಬುವುದರ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕೆಲವು ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಚೀನದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಭಾರತವು ತನ್ನ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಟ್ಟುನಿಟ್ಟಾದ ಜಾಗರೂಕತೆಗೆ ಕರೆ ನೀಡಿದರು ಮತ್ತು ವಿಶೇಷವಾಗಿ ಅಂತರಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಕ್ರಮಗಳನ್ನು ಬಲ ಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಹಾಗೂ ‘ಸದ್ಯಕ್ಕೆ ಪರಿಸ್ಥಿತಿ ಆತಂಕಕಾರಿಯಾಗಿಲ್ಲ ಆದ್ದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ’ ಎಂದು ಭಾರತೀಯ ವೈದ್ಯಕೀಯ ಸಂಘ(ಐ.ಎA.ಎ) ಹೇಳಿದೆ. ಮ್ಯಾಕ್ಸ್ ಹೆಲ್ತ್ಕೇರ್‌ನ ಗ್ರೂಪ್ ಮೆಡಿಕಲ್ ಡೈರೆಕ್ಟರ್ ಡಾ.ಸಂದೀಪ್ ಬುಧಿರಾಜ ಅವರು ಚೀನಾಕ್ಕೆ ಹೋಲಿಸಿದರೆ ಭಾರತದ ಪರಿಸ್ಥಿತಿ ಹಾಗೂ ಭಾರತ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ಹೇಳಿದ್ದಾರೆ.
ಕೋವಿಡ್-19 ಪರಿಸ್ಥಿತಿ: ಭಾರತ Vs ಚೀನಾ
ಡಾ. ಸಂದೀಪ್ ಬುಧಿರಾಜ ಹೇಳುವಂತೆ, ನಾವು ನೋಡಿದ ಹಾಗೆ ಕೋವಿಡ್-19 ಸ್ಥಳೀಯವಾದುದಲ್ಲ. ಅದು ಹರಡುತ್ತವೆ. ಮತ್ತು ಚೀನಾವು ಶೂನ್ಯ ಕೋವಿಡ್ ನೀತಿಯನ್ನು ಹೊಂದಿತ್ತು. ಅವರು ಕಟ್ಟು ನಿಟ್ಟಾದ ಲಾಕ್‌ಡೌನ್ ಅನುಸರಿಸಿದ್ದಾರೆ. ಆದ್ದರಿಂದ ಚೀನಾದ ಜನಸಂಖ್ಯೆಯು ಕೋವಿಡ್‌ನಿಂದ ನಿರೋಧಕವಾಗಿಲ್ಲ. ಅವರು ಹೆಚ್ಚು ದುರ್ಬಲವಾಗಿದ್ದಾರೆ ಮತ್ತು ನಿರ್ಬಂಧಗಳನ್ನು ತೆಗೆದು ಹಾಕಿದ ತಕ್ಷಣ, ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಆಶಾದಾಯಕವಾಗಿ, ಇದು ಭಾರತ ಮತ್ತು ಪ್ರಪಂಚದ ಇತರ ದೇಶಗಳಲ್ಲಿ ಸಂಭವಿಸಿಲ್ಲ. ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಕೋವಿಡ್ ಕಾಯಿಲೆಗೆ ಸಮರ್ಪಕವಾಗಿ ಲಸಿಕೆಯನ್ನು ನೀಡಲಾಗುತ್ತಿದೆ. ಹಾಗಾಗಿ ಹೊಸ ರೂಪಾಂತರ ಹರಡಿದರೂ, ಅದರ ಹೆಚ್ಚಿನ ಮಟ್ಟದ ವೈರಲೆನ್ಸ್ ಹೊರತಾಗಿಯೂ ರೋಗವು ತೀವ್ರವಾಗುವುದಿಲ್ಲ. ಓಮಿಕ್ರಾನ್ ವೈರಸ್ ಭಾರತದಲ್ಲಿ ಏಕಾಏಕಿ ಆರಂಭಿಕ ಹಂತದಲ್ಲಿ ಬಂದು ಹೋದಂತೆ, ಇದು ಕೂಡಾ ಶಮನವಾಗುತ್ತದೆ.
ಕೋವಿಡ್-19 ಇತ್ತೀಚಿನ ರೂಪಾಂತರ BF.7
ಇದು ಚೀನಾದಲ್ಲಿ ವಿನಾಶವನ್ನು ಉಂಟು ಮಾಡಿದ ಇತ್ತೀಚಿನ ರೂಪಾಂತರವಾಗಿದೆ. ಮತ್ತು ಭಾರತದಲ್ಲಿಯೂ ಪ್ರಕರಣಗಳು ವರದಿಯಾಗಿವೆ. ಡಾ.ಸಂದೀಪ್ ಬುಧಿರಾಜ ಹೇಳುತ್ತಾರೆ-‘ಇಲ್ಲಿಯವರೆಗೆ ಓಮಿಕ್ರಾನ್ ರೂಪಾಂತರಗಳು ಈ ವರ್ಷದ ಆರಂಭದಲ್ಲಿ ವರದಿಯಾದ ಮೂಲ ಓಮಿಕ್ರಾನ್‌ನಂತೆ ವರ್ತಿಸುತ್ತವೆ. ಆದರೆ ವ್ಯತ್ಯಾಸವೆಂದರೆ ಇದು ಹೆಚ್ಚು ಸಾಂಕ್ರಾಮಿಕವಾಗಿದೆ. ಮರು ಸೋಂಕಿನ ಸಾಧ್ಯತೆ ಇದರಲ್ಲಿ ಹೆಚ್ಚು. ಆದರೆ ರೋಗವು ಇನ್ನೂ ಮೂಲ ಓಮಿಕ್ರಾನ್ ರೂಪಾಂತರದಂತೆ ವರ್ತಿಸುತ್ತಿದೆ. ಇದು ಕಮ್ಮಿ ಮಟ್ಟದ ಸೋಂಕುಗಳಿಗೆ ಕಾರಣವಾಯಿತು. ಆದ್ದರಿಂದ ಇದು ಒಳ್ಳೆಯ ಸುದ್ದಿ. ಈ ವೈರಸ್ ಹರಡಿದರೂ ಸಹಾ ಸೋಂಕು ಕಡಿಮೆ ಮಟ್ಟದಲ್ಲಿರುತ್ತದೆ.
ಕೋವಿಡ್-19 ರೂಪಾಂತರ BF.7 ರೋಗದ ಲಕ್ಷಣಗಳು :
ಈ ರೋಗದ ಲಕ್ಷಣಗಳು ಹೆಚ್ಚಾಗಿ ಎದೆ ಮತ್ತು ಗಂಟಲು ಭಾಗದ ಬಳಿ ಕಾಣಿಸಿಕೊಳ್ಳುತ್ತದೆ. ಜ್ವರ, ಗಂಟಲು ನೋವು, ಮೂಗಿನಲ್ಲಿ ಸ್ರವಿಸುವಿಕೆ, ಕೆಮ್ಮು ಇವೆಲ್ಲ ಇದರ ಸಾಮಾನ್ಯ ಲಕ್ಷಣವಾಗಿದೆ. ಕೆಲವೊಬ್ಬರಲ್ಲಿ ವಾಂತಿ ಮತ್ತು ಅತಿಸಾರದಂತಹ ಹೊಟ್ಟೆಗೆ ಸಂಬಂಧಿಸಿದ ರೋಗಲಕ್ಷಣಗಳು ಕಾಣಬಹುದು.
ಕೋವಿಡ್-19 ರೂಪಾಂತರ BF.7 ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:
ಡಾ. ಸಂದೀಪ್ ಬುಧಿರಾಜ್ ಸೂಚಿಸಿದಂತೆ, ಭಾರತವು ಮೂಲಭೂತ ಕೋವಿಡ್ ಪ್ರೋಟೋಕಾಲ್‌ಗಳನ್ನು ಮತ್ತೆ ಪ್ರಾರಂಭಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಮಾಸ್ಕ್ ಧರಿಸಬೇಕು, ಜನರು ದೊಡ್ಡ ಮಟ್ಟದ ಸಭೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು, ಕೈಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಸ್ಯಾನಿಟೈಸರ್‌ಗಳನ್ನು ಹಚ್ಚಬೇಕು. ಮತ್ತು ಕೋವೀಡ್ ವ್ಯಾಕ್ಸಿನ್ 1,2 ಡೋಸ್ ಜೊತೆಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sat, 24 December 22