Coronavirus cases in India: ದೇಶದಲ್ಲಿ ಕೊರೊನಾವೈರಸ್ ಪ್ರಕರಣ ಇಳಿಕೆ; ಇಂದು 2.09 ಲಕ್ಷ ಹೊಸ ಕೊವಿಡ್ ಪ್ರಕರಣ ದಾಖಲು

ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,62,628 ಜನರು ವೈರಲ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ, ಇದುವರೆಗಿನ ಒಟ್ಟು ಚೇತರಿಕೆಯ ಸಂಖ್ಯೆಯನ್ನು 3,89,76,122 ಆಗಿದ್ದು ಪ್ರಸ್ತುತ ಚೇತರಿಕೆಯ ಪ್ರಮಾಣವು ಶೇ 94.37 ರಷ್ಟಿದೆ.

Coronavirus cases in India: ದೇಶದಲ್ಲಿ ಕೊರೊನಾವೈರಸ್ ಪ್ರಕರಣ ಇಳಿಕೆ; ಇಂದು 2.09 ಲಕ್ಷ ಹೊಸ ಕೊವಿಡ್ ಪ್ರಕರಣ ದಾಖಲು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 31, 2022 | 10:33 AM

ದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 2.09 ಲಕ್ಷ ಹೊಸ ಕೊವಿಡ್ -19  (Covid-19) ಪ್ರಕರಣಗಳನ್ನು ವರದಿ ಮಾಡಿದೆ. ಇದು ಭಾನುವಾರಕ್ಕಿಂತ ಕಡಿಮೆ. ಭಾನುವಾರ ದೇಶದಲ್ಲಿ 2.34 ಲಕ್ಷ ಕೊರೊನಾವೈರಸ್ (Coronavirus) ಸೋಂಕು ಪ್ರಕರಣ ವರದಿ ಆಗಿದೆ.ಅದೇ ವೇಳೆ 959 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದು  ಸಾವಿಗೀಡಾದವರ ಸಂಖ್ಯೆ 4,95,050 ಆಗಿದೆ. ಕಳೆದ 24 ಗಂಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ವರದಿಯಾಗಿದ್ದು, ಸೋಮವಾರದ ಎಣಿಕೆಗೆ ಕೇರಳ 374 ಬ್ಯಾಕ್‌ಲಾಗ್ ಸಾವುಗಳನ್ನು ಸೇರಿಸಲಾಗಿದೆ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ದೈನಂದಿನ ಕೊವಿಡ್ -19 ಪ್ರಕರಣಗಳು ಕಡಿಮೆಯಾಗುತ್ತಿವೆ, ಇದು ಒಮಿಕ್ರಾನ್ (Omicron) ರೂಪಾಂತರದಿಂದುಂಟಾದ ಸಾಂಕ್ರಾಮಿಕದ ಮೂರನೇ ಅಲೆ ಕಡಿಮೆ ಮಾಡುವ ಸಂಕೇತವಾಗಿ ಕಾಣಬಹುದು. ಸೋಮವಾರದ ದೈನಂದಿನ ಕೊವಿಡ್ -19 ಪ್ರಕರಣಗಳಲ್ಲಿ  24,363 ಸೋಂಕುಗಳ ಕುಸಿತವನ್ನು ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 18,31,268 ರಷ್ಟಿದೆ. ಆದರೆ ಚೇತರಿಕೆ ದರ 94.37 ಶೇಕಡಾಕ್ಕೆ ಏರಿದೆ. ಸಾಪ್ತಾಹಿಕ ಮತ್ತು ದೈನಂದಿನ ಧನಾತ್ಮಕ ದರಗಳು ಕ್ರಮವಾಗಿ 15.77 ಮತ್ತು 15.75 ಶೇಕಡಾ ಆಗಿದೆ. ದೈನಂದಿನ ಮತ್ತು ಸಾಪ್ತಾಹಿಕ ಧನಾತ್ಮಕ ದರಗಳು ಭಾನುವಾರದಂದು ಕ್ರಮವಾಗಿ 14.5 ಶೇಕಡಾ ಮತ್ತು 16.4 ಶೇಕಡಾ ಆಗಿತ್ತು.

ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,62,628 ಜನರು ವೈರಲ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ, ಇದುವರೆಗಿನ ಒಟ್ಟು ಚೇತರಿಕೆಯ ಸಂಖ್ಯೆಯನ್ನು 3,89,76,122 ಆಗಿದ್ದು ಪ್ರಸ್ತುತ ಚೇತರಿಕೆಯ ಪ್ರಮಾಣವು ಶೇ 94.37 ರಷ್ಟಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ನಡೆಯುತ್ತಿರುವ ಕೊರೊನಾವೈರಸ್ ಲಸಿಕೆ ಡ್ರೈವ್ ಅಡಿಯಲ್ಲಿ, ಇದುವರೆಗೆ 166.03 ಕೋಟಿ ಲಸಿಕೆ ಡೋಸ್‌ಗಳನ್ನು ನಿರ್ವಹಿಸಲಾಗಿದೆ.

ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಭೌತಿಕ ರ್ಯಾಲಿಗಳ ಮೇಲಿನ ನಿಷೇಧವನ್ನು ಮುಂದುವರಿಸಬೇಕೆೇ ಎಂದು ನಿರ್ಧರಿಸಲು ಚುನಾವಣಾ ಆಯೋಗವು ಸೋಮವಾರ ಸಭೆ ಸೇರಲಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಭೌತಿಕ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಹೊಸತಾಗಿ ಸಡಿಲಿಕೆಗಳನ್ನು ವಿಸ್ತರಿಸಬಹುದೇ ಎಂಬುದರ ಕುರಿತು ಆಯೋಗವು ನಿರ್ಧರಿಸಬಹುದು. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಕ್ಕೆ ಜನವರಿ 31 ರವರೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದಾಗ ಚುನಾವಣಾ ಸಮಿತಿಯು ಭೌತಿಕ ರ್ಯಾಲಿಗಳು ಮತ್ತು ರೋಡ್‌ಶೋಗಳಿಗೆ ನಿಷೇಧ ಹೇರಿತ್ತು.

ಚುನಾವಣಾ ಆಯೋಗದ ಸಭೆ ಇಂದು

ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಭೌತಿಕ ರ್ಯಾಲಿಗಳ ಮೇಲಿನ ನಿಷೇಧವನ್ನು ಮುಂದುವರಿಸಬೇಕೆ ಎಂದು ನಿರ್ಧರಿಸಲು ಚುನಾವಣಾ ಆಯೋಗವು ಸೋಮವಾರ ಸಭೆ ಸೇರಲಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಭೌತಿಕ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಲ್ಲಿ  ಹೊಸತಾಗಿ ಸಡಿಲಿಕೆಗಳನ್ನು ವಿಸ್ತರಿಸಬಹುದೇ ಎಂಬುದರ ಕುರಿತು ಆಯೋಗವು ನಿರ್ಧರಿಸಬಹುದು. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಕ್ಕೆ ಜನವರಿ 31 ರವರೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದಾಗ ಚುನಾವಣಾ ಸಮಿತಿಯು ಭೌತಿಕ ರ್ಯಾಲಿಗಳು ಮತ್ತು ರೋಡ್‌ಶೋಗಳಿಗೆ ನಿಷೇಧ ಹೇರಿತ್ತು.

ದೆಹಲಿಯಲ್ಲಿ  ಕೊವಿಡ್ ಪ್ರಕರಣಗಳು ಇಳಿಕೆ

ಸ್ಥಿರವಾದ ಕುಸಿತವನ್ನು ಕಾಯ್ದುಕೊಂಡು, ದೆಹಲಿಯು ಭಾನುವಾರ 3,674 ಕೊವಿಡ್ ಪ್ರಕರಣಗಳನ್ನು ಶೇ 6.37 ನಷ್ಟು ಧನಾತ್ಮಕ ದರದಲ್ಲಿ ವರದಿ ಮಾಡಿದೆ. ತಜ್ಞರ ಪ್ರಕಾರ ಪ್ರಕರಣಗಳಿಗೆ ಹೋಲಿಸಿದರೆ ಸುಮಾರು 2 ವಾರಗಳ ಹಿಂದೆ ಇರುವ ಸಾವಿನ ಸಂಖ್ಯೆ ಇನ್ನೂ 30 ರಷ್ಟಿದೆ. ಪ್ರಕರಣಗಳಲ್ಲಿ ಕುಸಿತ ಕಂಡಿರುವುದರಿಂದ ದೆಹಲಿಯಲ್ಲಿ ಕೆಟ್ಟ ಪರಿಸ್ಥಿತಿ ಮುಗಿದಿದೆ ಎಂದು  ಎಂದು ದೆಹಲಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ವಿಶ್ವಾಸದ್ರೋಹದ ದಿನ ಆಚರಿಸುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್​ ಘೋಷಣೆ; ಕೇಂದ್ರದ ವಿರುದ್ಧ ಮತ್ತೆ ಸಿಡಿಮಿಡಿ

Published On - 10:22 am, Mon, 31 January 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್