Food Recipe: ಚಳಿಗಾಲದಲ್ಲಿ ರಾಗಿ ಸೂಪ್ ಉತ್ತಮ, ಇದನ್ನು 30 ನಿಮಿಷದಲ್ಲಿ ತಯಾರಿಸಿ
ಚಲಿಗಾಲದಲ್ಲಿ ನಮ್ಮ ದೇಹಕ್ಕೆ ಶಕ್ತಿ ತುಂಬಲು ಸೂಪ್‌ಗಳು ಬಹಳ ಸರಳ ವಿಧಾನಗಳಲ್ಲಿ ಒಂದಾಗಿದೆ. ಇಲ್ಲೊಂದು ವಿಶೇಷ ಪೌಷ್ಟಿದಾಯಕವಾದ ಹಾಗೂ ಅಷ್ಟೇ ರುಚಿಕರವಾದ ಸೂಪ್ ಒಂದಿದೆ. ಅದುವೇ ರಾಗಿ ಸೂಪ್. ಚಲಿಗಾಲದಲ್ಲಿ ಜ್ವರ, ಕೆಮ್ಮಿನಂತಹ ವೈರಲ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ತುಸು ಹೆಚ್ಚೆ ಇರುತ್ತದೆ.
ಈ ಚಲಿಗಾಲದಲ್ಲಿ ನಮ್ಮ ದೇಹಕ್ಕೆ ಶಕ್ತಿ ತುಂಬಲು ಸೂಪ್‌ಗಳು ಬಹಳ ಸರಳ ವಿಧಾನಗಳಲ್ಲಿ ಒಂದಾಗಿದೆ. ಇಲ್ಲೊಂದು ವಿಶೇಷ ಪೌಷ್ಟಿದಾಯಕವಾದ ಹಾಗೂ ಅಷ್ಟೇ ರುಚಿಕರವಾದ ಸೂಪ್ ಒಂದಿದೆ. ಅದುವೇ ರಾಗಿ ಸೂಪ್. ಚಲಿಗಾಲದಲ್ಲಿ ಜ್ವರ, ಕೆಮ್ಮಿನಂತಹ ವೈರಲ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ತುಸು ಹೆಚ್ಚೆ ಇರುತ್ತದೆ. ಆದ್ದರಿಂದ ರೋಗದ ವಿರುದ್ಧ ಹೋರಾಡುವ ಸಾಕಷ್ಟು ಪೋಷಕಾಂಶಗಳು ಹಾಗೂ ಜೀವಸತ್ವಗಳನ್ನು ಸೇವಿಸುವ ಮೂಲಕ ಮುಂಚಿತವಾಗಿಯೇ ನಿಮ್ಮ ರಕ್ಷಣೆಯನ್ನು ಮಾಡುವುದು ಅತ್ಯಗತ್ಯ. ಅದಕ್ಕಾಗಿ ನಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವಂತಹ ಆಹಾರವನ್ನು ಸೇವಿಸಬೇಕಾಗುತ್ತದೆ. ಅಂತಹ ಆಹಾರಗಳಲ್ಲಿ ಈ ಸೂಪ್‌ಗಳು ಕೂಡಾ ಒಂದು.
ನಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವ ಸರಳ ವಿಧಾನಗಳಲ್ಲಿ ಇದು ಕೂಡಾ ಒಂದು. ಸೂಪ್‌ಗಳು ದ್ರವ ರೂಪದಲ್ಲಿ ಇರುವುದರಿಂದ ಅದು ನಿಮ್ಮನ್ನು ದೀರ್ಘ ಕಾಲದವರೆಗೆ ಹೈಡ್ರೇಟ್ ಮಾಡುತ್ತದೆ. ಹಾಗೂ ಶಕ್ತಿಯನ್ನು ನೀಡುತ್ತದೆ. ಇಂತಹ ಶಕ್ತಿ ನೀಡುವ ಸೂಪ್‌ಗಳಲ್ಲಿ ಚಿಕನ್‌ನಿಂದ ಹಿಡಿದು ಅನೇಕ ತರಕಾರಿಗಳಿಂದ ತಯಾರಿಸುವ ವೆರೈಟಿ ಸೂಪ್‌ಗಳಿವೆ. ಈ ಸೂಪ್‌ಗಳ ಪಟ್ಟಿಗೆ ವೈವಿಧ್ಯತೆಯನ್ನು ಸೇರಿಸಲು ರುಚಿಕರವಾದ ಮತ್ತು ಪೌಷ್ಟಿದಾಯಕವಾದ ಸೂಪ್‌ನ ಪಾಕ ವಿಧಾನ ಇಲ್ಲಿದೆ. ಇದನ್ನು ರಾಗಿ ಸೂಪ್ ಎಂದು ಕರೆಯಲಾಗುತ್ತದೆ.
ಇದನ್ನು ಓದಿ: ಫಟಾಫಟ್ ಎಂದು ಸಿದ್ಧವಾಗುವ ಈ ಅಡುಗೆಗಳು ಆರೋಗ್ಯಕ್ಕೂ ಉತ್ತಮ
ರಾಗಿಯ ಪ್ರಯೋಜನಗಳು:
ಆರೋಗ್ಯ ಜಗತ್ತಿನಲ್ಲಿ ರಾಗಿ ಒಂದು ಪ್ರಮುಖ ಘಟಕಾಂಶವಾಗಿದೆ. ರಾಗಿಯನ್ನು ಸುಮಾರು 5 ಸಾವಿರ ವರ್ಷಗಳಿಂದ ಭಾರತೀಯ ಉಪಖಂಡಗಳಲ್ಲಿ ಬೆಳೆಯಲಾಗುತ್ತಿದೆ ಮತ್ತು ಆಫ್ರಿಕಾ, ಆಗ್ನೇಯ ಏಷ್ಯಾದಲ್ಲಿಯೂ ಜನಪ್ರೀಯವಾಗಿದೆ. ರಾಗಿಯು ಆಹಾರದ ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೆಸೆಮಿಕ್ ಇಂಡೆಕ್ಸ್ನಿಂದಾಗಿ ಬೊಜ್ಜು, ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ ಮತ್ತು ಮಲಬದ್ಧತೆಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.
ರಾಗಿ ಸೂಪ್ ರೆಸಿಪಿ:
ರಾಗಿ ಸೂಪ್‌ನ್ನು ತಯಾರಿಸುವ ವಿಧಾನವನ್ನು ನೋಡುವುದಾದರೆ, ಪ್ರಾರಂಭದಲ್ಲಿ ರಾಗಿಯನ್ನು ಚೆನ್ನಾಗಿ ತೊಳೆದು ಪಕ್ಕಕ್ಕೆ ಇರಿಸಿ. ಬೀಟ್ರೂಟ್, ಕ್ಯಾರೆಟ್, ಬೀನ್ಸ್ಗಳಂತಹ ತರಕಾರಿಗಳನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಕಟ್ ಮಾಡಿ ಇರಿಸಿಕೊಳ್ಳಿ. ನಂತರ ಪ್ರಶರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿಟ್ಟ ತರಕಾರಿಗಳ ಹೋಳುಗಳನ್ನು ಸೇರಿಸಿ 5 ನಿಮಿಷಗಳ ಕಾಲ ಅಂದರೆ ತರಕಾರಿಯ ಹಸಿ ಮಾವಸೆ ಹೋಗುವವರೆಗೆ ಬೇಯಿಸಿ. ಇದಾದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಮೆಣಸು ಮತ್ತು ಓರೆಗಾನೊ ಸೇರಿಸಿ ಮತ್ತೊಮ್ಮೆ 2 ನಿಮಿಷಗಳ ಕಾಲ ಬೇಯಿಸಿ. ಈಗ ತೊಳೆದಿಟ್ಟ ರಾಗಿಯನ್ನು ಹಾಕಿ ಅದಕ್ಕೆ ಒಂದುವರೆ ಕಪ್ ನೀರನ್ನು ಹಾಕಿ ಕುಕ್ಕರನ್ನು ಮುಚ್ಚಿಬಿಡಿ. 5 ಸೀಟಿ ಆಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
ರಾಗಿ ಬೆಂದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಸ್ವಲ್ಪ ಹಾಲು ಹಾಗೂ ನೀರನ್ನು ಸೇರಿಸಿ ಚೆನ್ನಾಗಿ ಮ್ಯಾಶ್ ಮಾಡಿ. ನೀವು ಎಲೆಕ್ಟಿಕ್ ಬ್ಲೆಂಡರ್ ಕೂಡಾ ಬಳಸಬಹುದು. ಕೊನೆಯಲ್ಲಿ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಹಾಗಾದರೆ ಈ ಸಿಂಪಲ್ ಆರೋಗ್ಯಕರ ರೆಸಿಪಿಯನ್ನು ನೀವು ಮನೆಯಲ್ಲಿ ಟ್ರೈ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Wed, 21 December 22