AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kashi Halwa: ಉಡುಪಿಯ ಪ್ರಸಿದ್ಧ ಕಾಶಿ ಹಲ್ವಾ ಮಾಡುವ ವಿಧಾನ ಇಲ್ಲಿದೆ

ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವಷ್ಟು ರುಚಿಕರವಾದ ಈ ಸೌತ್​ ಇಂಡಿಯನ್​ ರಿಚ್​ ಕಾಶಿ ಹಲ್ವಾ ರೆಸಿಪಿ ಮತ್ತು ಮಾಡುವ ವಿಧಾನ ಇಲ್ಲಿದೆ.

Kashi Halwa: ಉಡುಪಿಯ ಪ್ರಸಿದ್ಧ ಕಾಶಿ ಹಲ್ವಾ ಮಾಡುವ ವಿಧಾನ ಇಲ್ಲಿದೆ
ಉಡುಪಿಯ ಪ್ರಸಿದ್ಧ ಕಾಶಿ ಹಲ್ವಾ Image Credit source: Luscious Food Tales
TV9 Web
| Updated By: ಅಕ್ಷತಾ ವರ್ಕಾಡಿ|

Updated on:Dec 21, 2022 | 4:12 PM

Share

ಬಾಯಲ್ಲಿ ಇಟ್ಟಾಗಲೇ ಕರಗುವ ರುಚಿಯಲ್ಲಿ ಯಾವುದೇ ಬೇರೆ ಸಿಹಿ ತಿಂಡಿಯನ್ನು ಮೀರಿಸಲಾಗದಷ್ಟು ರುಚಿಯನ್ನು ಹೊಂದಿರುವ ಕರ್ನಾಟಕದ ಉಡುಪಿಯ ಪ್ರಸಿದ್ಧ ಕಾಶಿ ಹಲ್ವಾ (Ash Gourd Halwa) ರೆಸಿಪಿ ಇಲ್ಲಿದೆ. ನೀವು ಮನೆಯಲ್ಲಿಯೇ ಮಾಡಿದಾಗಲೂ ಅದೇ ರುಚಿ ಬರುತ್ತಿಲ್ಲ ಎಂಬ ಚಿಂತೆ ನಿಮ್ಮಲ್ಲಿದ್ದರೆ ಈ ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಿ. ಇದು ಉಡುಪಿಯ ಜನಪ್ರಿಯ ಪಾಕಪದ್ಧತಿಯಿಂದ ಬಂದಿದ್ದು, ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ತಯಾರಿಸಲಾಗುತ್ತದೆ. ಹಬ್ಬದ ಊಟದ ಸಮಯದಲ್ಲಿ ಅಥವಾ ಉಪಾಹಾರದ ಸಮಯದಲ್ಲಿ ಬಡಿಸಲಾಗುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವಷ್ಟು ರುಚಿಕರವಾದ ಈ ಸೌತ್​ ಇಂಡಿಯನ್​ ರಿಚ್​ ಕಾಶಿ ಹಲ್ವಾ ರೆಸಿಪಿ ಮತ್ತು ಮಾಡುವ ವಿಧಾನ ಇಲ್ಲಿದೆ.

ಕಾಶಿ ಹಲ್ವಾ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

1 ಕಪ್ ತುರಿದ ಬೂದು ಕುಂಬಳಕಾಯಿ ಅರ್ಧ ಕಪ್ ಸಕ್ಕರೆ ಒಂದು ಚಿಟಕೆಯಷ್ಟು ಕೇಸರಿ ಒಂದು ಚಿಟಕೆಯಷ್ಟು ಉಪ್ಪು 4 ಚಮಚ ತುಪ್ಪ ಅರ್ಧ ಕಪ್ ಡ್ರೈ ಫ್ರೂಟ್ಸ್ ಒಂದು ಚಮಚ ಏಲಕ್ಕಿ ಪುಡಿ

ಕಾಶಿ ಹಲ್ವಾ ಮಾಡುವ ವಿಧಾನ: 

ಹಂತ 1. ಒಂದು ಕಡಾಯಿಯನ್ನು ತೆಗೆದುಕೊಂಡು ಅದಕ್ಕೆ ತುರಿದ ಬೂದು ಕುಂಬಳಕಾಯಿಯನ್ನು ಸೇರಿಸಿ.

ಹಂತ 2. ಅದರಲ್ಲಿನ ಹೆಚ್ಚುವರಿ ನೀರು ಆವಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.

ಹಂತ 3. ಚೆನ್ನಾಗಿ ಬೇಯಿಸಿದ ಬೂದು ಕುಂಬಳಕಾಯಿಗೆ ಸಕ್ಕರೆ ಮತ್ತು ಕೇಸರಿ ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸಮಯದ ನಂತರ, ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ. ನೀವು ಕೇಸರಿ ಬದಲಿಗೆ ಆಹಾರ ಬಣ್ಣವನ್ನು ಕೂಡ ಸೇರಿಸಬಹುದು.

ಹಂತ 4. ಸಕ್ಕರೆ ಸಂಪೂರ್ಣವಾಗಿ ಕರಗಿದಾಗ, ಅದಕ್ಕೆ ತುಪ್ಪವನ್ನು ಸೇರಿಸಿ ಮತ್ತು ನಿರಂತರವಾಗಿ ಬೆರೆಸಿ. ನಂತರ ಒಂದು ಚಮಚ ತುಪ್ಪವನ್ನು ಹಾಕಿ.

ಇದನ್ನೂ ಓದಿ: ದಾಸವಾಳ ಮತ್ತು ತೆಂಗಿನಕಾಯಿಯ ಸೂಪರ್ ರೆಸಿಪಿ ಪ್ರಯತ್ನಿಸಿ

ಹಂತ 5. ಉಳಿದಿರುವ 1 ಚಮಚ ತುಪ್ಪವನ್ನು ಪ್ಯಾನ್‌ಗೆ ಸೇರಿಸಿ ಮತ್ತು ಡ್ರೈ ಫ್ರೂಟ್ಸ್ ಫ್ರೈ ಮಾಡಿ.

ಹಂತ 6. ಡ್ರೈ ಫ್ರೂಟ್ಸ್ ಮತ್ತು ಏಲಕ್ಕಿ ಪುಡಿಯನ್ನು ಹಲ್ವಾಗೆ ಸೇರಿಸಿ ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ಈಗ ರುಚಿಯಾದ ಸುವಾಸನೆ ಭರಿತ ಉಡುಪಿಯ ಪ್ರಸಿದ್ಧ ಕಾಶಿ ಹಲ್ವಾ ಸಿದ್ದವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:47 am, Wed, 21 December 22