Mental Health: ಯುವ ಪೀಳಿಗೆಯಲ್ಲೇ ಹೆಚ್ಚುತ್ತಿದೆ ಆತ್ಮಹತ್ಯೆ ರೋಗ; ಇದಕ್ಕೆ ಚಿಕಿತ್ಸೆಯೇನು?

|

Updated on: Aug 26, 2024 | 6:14 PM

Health Tips: ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೂ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆಘಾತಕಾರಿ ವಿಷಯವೇನೆಂದರೆ ಇವರ ಪೈಕಿ ಯುವಪೀಳಿಗೆಯವರೇ ಹೆಚ್ಚಾಗಿದ್ದಾರೆ. ಹಾಗಾದರೆ, ಯುವಜನರಲ್ಲಿ ಈ ರೀತಿಯ ಆತ್ಮಹತ್ಯೆಯ ಮನೋಭಾವಕ್ಕೆ ಕಾರಣವೇನು? ಇದಕ್ಕೆ ಚಿಕಿತ್ಸೆ ಇದೆಯೇ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Mental Health: ಯುವ ಪೀಳಿಗೆಯಲ್ಲೇ ಹೆಚ್ಚುತ್ತಿದೆ ಆತ್ಮಹತ್ಯೆ ರೋಗ; ಇದಕ್ಕೆ ಚಿಕಿತ್ಸೆಯೇನು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇಂದಿನ ಯುವ ಪೀಳಿಗೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಮಾನಸಿಕ ಆರೋಗ್ಯವೋ? ಅಥವಾ ನಮ್ಮ ಜೀವನ ಶೈಲಿಯೋ? ಎಂಬುದು ಅನೇಕರ ಪ್ರಶ್ನೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದಾಗ ಅಥವಾ ವ್ಯಕ್ತಿಯು ಜೀವನದಲ್ಲಿ ದುಸ್ಥಿತಿಯನ್ನು ತಲುಪಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಸಂಗಗಳು ನಮ್ಮ ಕಣ್ಣ ಮುಂದೆ ಇವೆ. ಇನ್ನು ಕೆಲವು ಪ್ರಕರಣಗಳಲ್ಲಿ ತೀರಾ ಚಿಕ್ಕ ವಿಷಯವೂ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣವಾಗಬಹುದು. ನಿಮಗೆ ತಿಳಿದಿರಲೇಬೇಕಾದ ವಿಷಯವೇನೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿಯೂ ಒಂದು ರೋಗ. ಹಾಗಾದರೆ ಏನಿದು ಆತ್ಮಹತ್ಯೆ ಕಾಯಿಲೆ? ಇದಕ್ಕಿರುವ ಚಿಕಿತ್ಸೆಗಳೇನು? ಎಂಬ ಬಗ್ಗೆ ತಜ್ಞ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

ಆತ್ಮಹತ್ಯೆ ಕಾಯಿಲೆಯನ್ನು ವೈದ್ಯಕೀಯವಾಗಿ ಟ್ರೈಜಿಮಿನಲ್ ನ್ಯೂರಾಲ್ಜಿಯಾ (TN) ಎಂದು ಕರೆಯಲಾಗುತ್ತದೆ. ಟ್ರೈಜಿಮಿನಲ್ ನರದ ಮೇಲೆ ಒತ್ತಡ ಉಂಟಾದಾಗ ಈ ಕಾಯಿಲೆಯು ಸೃಷ್ಟಿಯಾಗುತ್ತದೆ. ಇತ್ತೀಚಿನ ವರದಿಗಳನ್ನು ಆಧರಿಸಿ ನೋಡಿದರೆ ವ್ಯಕ್ತಿಯು ಬಹಳ ಸಂಕಟದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಹೆಚ್ಚಿವೆ. ಅತೀ ಕಡಿಮೆ ವಯಸ್ಸಿನ ಹಾಗೂ ಕೇವಲ 6 ವರ್ಷದ ಮಗುವಿಗೂ ಕೂಡ ಈ ಸಮಸ್ಯೆ ತಪ್ಪಿದ್ದಲ್ಲ. ಈ ಕಾಯಿಲೆಯು ಕೈ ಕಾಲು ಕತ್ತರಿಸುವ ವೇಳೆ ಅಥವಾ ಹೆರಿಗೆ ವೇಳೆ ಎದುರಾಗುವ ನೋವಿಗೆ ಸಮನಾದದ್ದು ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್‌ ಡಾ. ಪ್ರಥಮ್ ಬೈಸಾನಿ ಹೇಳಿದ್ದಾರೆ.

ಆತ್ಮಹತ್ಯೆ ಕಾಯಿಲೆ ಎಂಬುದು ಮಾನಸಿಕವಾಗಿ ವಿಪರೀತ ನೋವನ್ನು ಹೊಂದಿರುವ ವ್ಯಕ್ತಿಯ ನರಗಳ ಮೇಲೆ ಪ್ರಭಾವ ಬೀರುತ್ತದೆ. ನೋವನ್ನು ತುಂಬಿಕೊಂಡ ವ್ಯಕ್ತಿಯಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತವೆ. ಇದರಿಂದ ತೀವ್ರ ಮಾನಸಿಕ ಯಾತನೆಗೆ ಒಳಗಾಗುತ್ತಾರೆ. ಈ ರೀತಿಯ ಸಮಸ್ಯೆಗೆ ಒಳಗಾದವರು ಆಗಾಗ ಮುಖ ಹಾಗೂ ಕತ್ತಿನ ಕೆಳಗೆ ಹೆಚ್ಚು ನೋವಿನಿಂದ ಬಳಲುತ್ತಿರುತ್ತಾರೆ. ಸಣ್ಣದೊಂದು ಸ್ಪರ್ಶ ಅಥವಾ ಚಳಿಯಿಂದಲೂ ಅವರು ಉದ್ವೇಗಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ಮೈಗ್ರೇನ್‌ ಅಥವಾ ಮುಖಕ್ಕೆ ಸಂಬಂಧಿಸಿದ ನೋವುಗಳು ಕಂಡುಬರುತ್ತವೆ. ಈ ಕಾಯಿಲೆಯನ್ನು ಬೇಗನೆ ಪತ್ತೆ ಹಚ್ಚುವುದು ಕಷ್ಟದ ಸಂಗತಿ.

ಏನಿದು ಟ್ರೈಜಿಮಿನಲ್ ನ್ಯೂರಾಲ್ಜಿಯಾ?:

ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎನ್ನುವುದು ಟ್ರೈಜಿಮಿನಲ್ ನರದ ಮೇಲೆ ಬೀಳುವ ಒತ್ತಡದ ಸಮಸ್ಯೆ. ಕಿವಿ, ಮುಖ, ಗಲ್ಲ, ದವಡೆ, ತುಟಿ ಮತ್ತು ಮೂಗಿನ ಸುತ್ತ ಈ ನರವು ಹಬ್ಬಿರುತ್ತದೆ. ವ್ಯಕ್ತಿಯು ಸಂಕಟಕ್ಕೆ ಒಳಗಾದಾಗ ಟ್ರೈಜಿಮಿನಲ್‌ ನರದ ಮೇಲೆ ಪ್ರಭಾವ ಬೀರುತ್ತದೆ. ಆಗ ವ್ಯಕ್ತಿಯ ಮುಖದ ಕೆಳಗೆ, ಮೇಲೆ ಅಥವಾ ಮುಂಭಾಗ ನೋವು ಕಾಣಿಸಿಕೊಳ್ಳಬಹುದು ಅಥವಾ ಮುಖದ ಎರಡೂ ಬದಿಯಲ್ಲೂ ನೋವು ಉಂಟಾಗಬಹುದು. ಈ ರೀತಿಯ ನೋವು ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ಅಮೇರಿಕನ್ ಅಸೋಸಿಯೇಷನ್ ಆಫ್ ನ್ಯೂರೋಲಾಜಿಕಲ್ ಸರ್ಜನ್ಸ್ ಹೇಳುವ ಪ್ರಕಾರ ಯುಎಸ್‌ಎಯಲ್ಲಿ ವಾರ್ಷಿಕವಾಗಿ ಸುಮಾರು 1,50,000 ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Viral Video: ಗಂಡ ಬೈದಿದ್ದಕ್ಕೆ ಮೂರನೇ ಮಹಡಿಯಿಂದ ಜಿಗಿದು ಪತ್ನಿ ಆತ್ಮಹತ್ಯೆ; ವಿಡಿಯೋ ವೈರಲ್​​​​​

ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬ ಸಮಸ್ಯೆಯು ವ್ಯಕ್ತಿಯ ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಆತ ಸಾಮಾಜಿಕವಾಗಿ ಬೆರೆಯುವುದು ಮತ್ತು ಇತರರೊಂದಿಗೆ ಊಟ ಮಾಡುವುದು ಅಥವಾ ಮಾತನಾಡುವುದಕ್ಕೆ ಹಿಂದೇಟು ಹಾಕುತ್ತಾ ಹೋಗುತ್ತಾನೆ. ಈ ಸಮಸ್ಯೆಯುಳ್ಳ ಅನೇಕ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದ ಹಂತಕ್ಕೆ ತಲುಪಿರುವುದು ವರದಿಯಾಗಿದ್ದು, ಸಮಸ್ಯೆಯ ತೀವ್ರತೆಯನ್ನು ಬಿಂಬಿಸುತ್ತದೆ. ಈ ಸಮಸ್ಯೆಯ ರೋಗಲಕ್ಷಣಗಳು ಸಂಕ್ಷಿಪ್ತ, ತೀವ್ರವಾದ ನೋವಿನಿಂದ (TN1) ಹಿಡಿದು ದೀರ್ಘಕಾಲದ ನೋವಿನವರೆಗೆ (TN2) ತಲುಪಬಹುದು.

ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ ಬೆಳಕು ನೋಡಿದಾಗ, ಜೋರಾದ ಧ್ವನಿ ಕೇಳಿದಾಗ ಕಿರಿಕಿರಿಯಾಗುವುದು ಮತ್ತು ವಾಕರಿಕೆ ಹಾಗೂ ವಾಂತಿಯಂತಹ ಸೂಕ್ಷ್ಮತೆಗಳಿಂದಲೂ ಬಳಲುತ್ತಾರೆ. ಹೀಗಾಗಿ ಟ್ರೈಜಿಮಿನಲ್ ನರಶೂಲೆಯ ರೋಗನಿರ್ಣಯವು ನಿರ್ಮೂಲನ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಕೇವಲ ಒಂದು ಪರೀಕ್ಷೆಯ ಮೂಲಕ ಟ್ರೈಜಿಮಿನಲ್‌ ನ್ಯೂರಾಲ್ಜಿಯಾ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ದೈಹಿಕ ಮತ್ತು ನರವೈಜ್ಞಾನಿಕ ಪರೀಕ್ಷೆಗಳ ಜೊತೆಗೆ ಎಂಆರ್‌ಐ ಸ್ಕ್ಯಾನಿಂಗ್‌ ಮೂಲಕ ಟ್ರೈಜಿಮಿನಲ್‌ ನರಗಳ ಮೇಲೆ ಒತ್ತಡ ಬೀರುವ ಟ್ಯೂಮರ್‌ಗಳನ್ನು ಪತ್ತೆಹಚ್ಚಲಾಗುತ್ತದೆ. ರೋಗಗ್ರಸ್ಥ ಔಷಧಿಗಳು ಅಥವಾ ಟ್ರೈಸೈಕ್ಲಿಕ್‌ ಖಿನ್ನತೆ ಶಮನಕಾರಿಗಳ ಮೂಲಕವೂ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಅನ್ನು ಪರೀಕ್ಷಿಸಲಾಗುತ್ತದೆ ಎಂದು ವಾಸವಿ ಆಸ್ಪತ್ರೆಯ‌ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Shocking News: ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ; ಶಾಕಿಂಗ್ ವಿಡಿಯೋ ವೈರಲ್

ಈ ರೋಗಕ್ಕೆ ಚಿಕಿತ್ಸೆ ಇದೆಯೇ?:

ಟ್ರೈಜಿಮಿನಲ್ ನ್ಯೂರಾಲ್ಜಿಯಾ ಅನ್ನು ನಿರ್ವಹಿಸಲು ಹಲವಾರು ಚಿಕಿತ್ಸಾ ವಿಧಾನಗಳು ಲಭ್ಯವಿವೆ. ಕಾರ್ಬಮಾಜೆಪೈನ್ ಮತ್ತು ಗ್ಯಾಬಪೆಂಟಿನ್‌ನಂತಹ ಆಂಟಿಕನ್ವಲ್ಸೆಂಟ್ ಔಷಧಿಗಳ ಬಳಕೆಯ ಮೂಲಕ ನರಗಳ ಉರಿ ನಿಯಂತ್ರಣ ಮಾಡಬಹುದು. ಟ್ರೈಸೈಕ್ಲಿಕ್ ಖಿನ್ನತೆ-ಶಮನಕಾರಿಗಳಾದ ಅಮಿಟ್ರಿಪ್ಟಿಲೈನ್‌ನಂತಹ ಔಷಧಿಗಳನ್ನು ಬಳಸಿ ನೋವು ನಿವಾರಣೆಗೆ ಮಾಡಬಹುದು. ಔಷಧಿಗಳಿಂದ ಗುಣಮುಖರಾಗದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾದ ಅಗತ್ಯತೆ ಎದುರಾಗುತ್ತದೆ.‌ ನರ ದೌರ್ಬಲ್ಯ ಅಥವಾ ತೀವ್ರ ನೋವಿಗೆ ಒಳಗಾಗಿದ್ದಲ್ಲಿ ಗ್ಲಿಸರಾಲ್ ಚುಚ್ಚುಮದ್ದು ಮತ್ತು ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್‌ನಂತಹ ಪೆರ್ಕ್ಯುಟೇನಿಯಸ್ ಕಾರ್ಯವಿಧಾನಗಳ ಮೂಲಕ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದು. ಸ್ಟೀರಿಯೊಟಾಕ್ಟಿಕ್ ರೇಡಿಯೊ ಸರ್ಜರಿಯಲ್ಲಿ ವಿಕರಣಗಳನ್ನು ಬಳಸುವ ಮೂಲಕ ನೋವನ್ನು ತಡೆಗಟ್ಟಬಹುದು. ಅಲ್ಲದೆ, ನೋವನ್ನು ಪಸರಿಸುವ ನರಗಳ ಬ್ರಾಂಚಸ್‌ಗಳನ್ನು ಕತ್ತರಿಸುವ ಮೂಲಕವೂ ನೋವು ನಿಯಂತ್ರಣ ಮಾಡಬಹುದು. ಈ ಎಲ್ಲಾ ವಿಧಾನಗಳು ತಾತ್ಕಾಲಿಕ ಉಪಶಮನವನ್ನು ನೀಡುತ್ತದೆ. ಆದರೆ, ಈ ಸಮಸ್ಯೆ ಇರುವವರಲ್ಲಿ ಕ್ರಮೇಣ ನೋವು ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪರಿಣಾಮಕಾರಿ ಚಿಕಿತ್ಸೆಗಳೇನು?:

ಮೈಕ್ರೋವಾಸ್ಕುಲರ್ ಡಿಕಂಪ್ರೆಶನ್ (MVD) ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿ ದೀರ್ಘಕಾಲೀನ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಈ ಪ್ರಕ್ರಿಯೆಯು ತಲೆಬುರುಡೆಯಲ್ಲಿ ಕಂಡುಬರುವ ಟ್ರೈಜಿಮಿನಲ್ ನರವನ್ನು ಗುರುತಿಸಿ, ನರ ಮತ್ತು ರಕ್ತನಾಳದ ನಡುವೆ ಟೆಫ್ಲಾನ್ನ ಕುಶನ್ ಅನ್ನು ಇರಿಸುವುದನ್ನು ಒಳಗೊಂಡಿರುತ್ತದೆ. ಮೈಕ್ರೋವಾಸ್ಕುಲರ್ ಡಿಕಂಪ್ರೆಶನ್ ಚಿಕಿತ್ಸೆ ಯಿಂದ ಮುಖ ಮರಗಟ್ಟುವಿಕೆ ತೊಂದರೆ ಕಾಣಿಸಿಕೊಂಡರೂ ಕೂಡ ದೀರ್ಘಕಾಲದ ನೋವಿನಿಂದ ಮುಕ್ತಿ ಪಡೆಯಬಹುದು. ಕಿವಿ ಕೇಳಿಸದಿರುವುದು, ಮುಖ ಮರಗಟ್ಟುವಿಕೆ, ಅತೀ ವಿರಳ ಪ್ರಕರಣಗಳಲ್ಲಿ ಹೃದಯಾಘಾತದಂತಹ ಅಡ್ಡ ಪರಿಣಾಮಗಳು ಕಂಡುಬರುವ ಸಾಧ್ಯತೆಗಳಿದ್ದಾಗಲೂ ಕೂಡ ಮೈಕ್ರೋವಾಸ್ಕುಲರ್ ಡಿಕಂಪ್ರೆಶನ್ ಚಿಕಿತ್ಸೆಯು ಸುರಕ್ಷಿತ ಎಂದು ಹೇಳಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ