ಊಟ ಮಾಡುವಾಗ ಬೆವರು ಬರುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಲಕ್ಷಣ?

ಊಟ ಮಾಡುತ್ತಿರುವಾಗ ಬೆವರು ಬರುವುದು ಸಾಮಾನ್ಯ. ಹವಾಮಾನ ಯಾವುದೇ ಇರಲಿ ಈ ರೀತಿಯಾಗುವುದು ಸಾಮಾನ್ಯ. ಆದರೆ ಒಬ್ಬ ವ್ಯಕ್ತಿ ಊಟ ಮಾಡುವಾಗ ಬೆವರುವುದಕ್ಕೆ ಕಾರಣವೇನು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದು ಅನಾರೋಗ್ಯದ ಸಂಕೇತವೇ ಎಂಬ ಗೊಂದಲ ನಿಮಗೂ ಇದ್ದಲ್ಲಿ ಅಥವಾ ಈ ರೀತಿ ಅನುಭವ ನಿಮಗೂ ಆಗಿದ್ದಲ್ಲಿ ನೀವು ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ವಿಷಯವಾಗಿ ತಜ್ಞರು ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಊಟ ಮಾಡುವಾಗ ಬೆವರು ಬರುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಲಕ್ಷಣ?
Sweating While Eating

Updated on: Feb 03, 2026 | 9:18 PM

ಊಟ ಮಾಡುವಾಗ ಕೆಲವರಿಗೆ ಬೆವರು (Sweating) ಬರುವುದನ್ನು ನೀವು ಗಮನಿಸಿರಬಹುದು. ಕೆಲವರಿಗೆ ಇದು ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿದರೆ ಇನ್ನು ಕೆಲವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ಹಣೆಯ ಮೇಲೆ ಬೆವರುವ ಪ್ರಮಾಣ ಅಧಿಕವಾಗಿರುತ್ತದೆ. ಬಿಸಿ ಆಹಾರ ಸೇವನೆ ಮಾಡುವುದರಿಂದ ಈ ರೀತಿಯ ಸಮಸ್ಯೆಯಾಗುತ್ತದೆ. ಆದರೆ ಪ್ರತಿ ಬಾರಿ ಒಟ್ಟ ಮಾಡುವಾಗ ಅಥವಾ ತಣಿದ ಆಹಾರ ಸೇವನೆ ಮಾಡುವಾಗಲೂ ಈ ರೀತಿ ಆಗುತ್ತಿದ್ದರೆ ಅಥವಾ ಚಳಿಯ ವಾತಾವರಣದಲ್ಲಿಯೂ ಈ ರೀತಿ ಬೆವರುತ್ತಿದ್ದರೆ ಅದು ಸಾಮಾನ್ಯವಲ್ಲ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ಇದು ಯಾವುದಾದರೂ ಕಾಯಿಲೆಯೇ ಸಂಕೇತವೇ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿ ಏಮ್ಸ್‌ನ ಡಾ. ಹಿಮಾಂಶು ಭದಾನಿ ಹೇಳುವ ಪ್ರಕಾರ, ಊಟ ಮಾಡುವಾಗ ಬೆವರುವ ಸಮಸ್ಯೆಯನ್ನು ವೈದ್ಯಕೀಯವಾಗಿ ಗಸ್ಟೇಟರಿ ಸ್ವೆಟಿಂಗ್ ಎಂದು ಕರೆಯಲಾಗುತ್ತದೆ. ತುಂಬಾ ಮಸಾಲೆಯುಕ್ತ ಆಹಾರ ಸೇವಿಸಿದಾಗ ದೇಹ ಬೆವರಲು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ದೇಹ ಬೆಚ್ಚಗಿರುವವರಲ್ಲಿ ಇದು ಕಂಡುಬರುತ್ತದೆ. ಊಟ ಮಾಡುವಾಗ ಬೆವರುವುದು ಕೆಲವರಿಗೆ ಸಾಮಾನ್ಯ, ಆದರೆ ಇತರರಿಗೆ ಇದು ಹಲವಾರು ಕಾಯಿಲೆಗಳ ಲಕ್ಷಣವಾಗಿರಬಹುದು.

ಊಟ ಮಾಡುವಾಗ ಬೆವರುವುದು ಮಧುಮೇಹದ ಲಕ್ಷಣವೇ?

ಡಾ. ಹಿಮಾಂಶು ಅವರು, ಊಟ ಮಾಡುವಾಗ ಬೆವರುವುದು ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಯಾರಿಗಾದರೂ ಮಧುಮೇಹವಿದ್ದರೆ, ಅದು ನರಗಳ ಹಾನಿಗೆ ಕಾರಣವಾಗಬಹುದು, ಹಾಗಾಗಿ ಇದು ಊಟ ಮಾಡುವಾಗ ಬೆವರುವಿಕೆಗೆ ಕಾರಣವಾಗುತ್ತದೆ, ಆದರೆ ಇದು ಎಲ್ಲಾ ಸಂದರ್ಭಗಳಲ್ಲಿಯೂ ಕಂಡುಬರುವುದಿಲ್ಲ. ಕೆಲವರಿಗೆ ಥೈರಾಯ್ಡ್ ಅಥವಾ ಹಾರ್ಮೋನುಗಳ ಬದಲಾವಣೆಗಳಿಂದಲೂ ಈ ರೀತಿ ಆಗಬಹುದು.

ಇದನ್ನೂ ಓದಿ: ಪದೇ ಪದೇ ಸಿಹಿತಿಂಡಿ ತಿನ್ನಬೇಕು ಅನಿಸುತ್ತಾ? ಹಾಗಿದ್ರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು!

ಮಕ್ಕಳಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆಯೇ?

ಸಾಮಾನ್ಯವಾಗಿ ದೊಡ್ಡವರಂತೆ ಮಕ್ಕಳು ಕೂಡ ಊಟ ಮಾಡುವಾಗ ಬೆವರಬಹುದು. ಮಕ್ಕಳು ಮಸಾಲೆಯುಕ್ತ ಆಹಾರ ಸೇವಿಸಿದಾಗ, ಅದನ್ನು ಜೀರ್ಣಿಸಿಕೊಳ್ಳಲು ದೇಹದ ಉಷ್ಣತೆಯು ಹೆಚ್ಚಾಗುತ್ತದೆ, ಇದು ಬೆವರುವಿಕೆಗೆ ಕಾರಣವಾಗುತ್ತದೆ. ಆದರೆ ಸಾಮಾನ್ಯ ಆಹಾರ ಸೇವಿಸುವಾಗಲೂ ಕೂಡ ಮಗು ಬೆವರುತ್ತಿದ್ದರೆ ಅಥವಾ ತೂಕ ವೇಗವಾಗಿ ಕಡಿಮೆಯಾಗುತ್ತಿದ್ದರೆ ಜೊತೆಗೆ ಆಹಾರ ಸೇವಿಸುವಾಗ ಹೃದಯ ಬಡಿತ ವೇಗವಾಗದರೆ ಇಂತಹ ಸಂದರ್ಭಗಳಲ್ಲಿ, ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಊಟ ಮಾಡುವಾಗ ಬೆವರುವುದನ್ನು ತಡೆಯಲು ಸಲಹೆಗಳು:

  • ತುಂಬಾ ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ.
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
  • ದಿನಕ್ಕೆ ಕನಿಷ್ಠ 7 ಗ್ಲಾಸ್ ನೀರು ಕುಡಿಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us