ಕೊಳೆಯಾದ ದಿಂಬುಗಳನ್ನು ತೊಳೆಯದೆ ಕ್ಷಣಾರ್ಧದಲ್ಲಿ ಸ್ವಚ್ಛಗೊಳಿಸಲು ಈ ಸರಳ ಸಲಹೆ ಪಾಲಿಸಿ
ದಿಂಬು ಒಳ್ಳೆಯ ನಿದ್ರೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಆದ್ರೆ ಆ ದಿಂಬನ್ನು ಕ್ಲೀನ್ ಮಾಡುವುದರ ಕಡೆ ಹೆಚ್ಚಿನವರು ಗಮನವೇ ಹರಿಸುವುದಿಲ್ಲ. ಹೀಗೆ ದಿಂಬನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ ಕೊಳೆ, ಬ್ಯಾಕ್ಟೀರಿಯಾ, ಧೂಳು, ಬೆವರು ಸಂಗ್ರಹವಾಗುತ್ತದೆ. ಇದರಿಂದಾಗಿ ಆರೋಗ್ಯ ಸಮಸ್ಯೆಯ ಜೊತೆಗೆ ಮೊಡವೆಗಳಂತಹ ತ್ವಚೆ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿ ದಿಂಬನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ. ದಿಂಬನ್ನು ಕ್ಲೀನ್ ಮಾಡಲು ಈ ಸರಳ ಸಲಹೆ ಪಾಲಿಸಿ.

ಬಹುತೇಕ ಹೆಚ್ಚಿನವರು ದಿಂಬು ಕವರ್ ಹಾಗೂ ಬೆಟ್‌ಶೀಟ್‌ಗಳನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಸ್ವಚ್ಛಗೊಳಿಸುತ್ತಿರುತ್ತಾರೆ. ಆದ್ರೆ ದಿಂಬಿನ (pillow) ಸ್ವಚ್ಛತೆಯ ಕಡೆಗೆ ಗಮನವೇ ಕೊಡುವುದಿಲ್ಲ. ದಿಂಬಿನ ಕವರ್ ಕ್ಲೀನ್ ಮಾಡುವುದು ಎಷ್ಟು ಮುಖ್ಯವೋ ಅದೇ ರೀತಿ ದಿಂಬನ್ನು ಸಹ ಸ್ವಚ್ಛಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ ದಿಂಬಲ್ಲಿ ಸಂಗ್ರಹವಾಗುವ ಧೂಳು ಹಾಗೂ ಕೊಳೆಗಳ ಕಾರಣದಿಂದ ಅಲರ್ಜಿ, ಉಸಿರಾಟದ ತೊಂದರೆಗಳಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಮೊಡವೆಯ ಸಮಸ್ಯೆಗಳು ಸಹ ಹೆಚ್ಚಾಗಬಹುದು. ಹಾಗಾಗಿ ದಿಂಬನ್ನು ಸ್ವಚ್ಚಗೊಳಿಸುವುದು ಅತ್ಯಗತ್ಯ. ಇವೆಲ್ಲಾ ಸರಿ ಆದ್ರೆ ದಿಂಬನ್ನು ನೀರಿನಿಂದ ತೊಳೆಯದೆ ಹೇಗಪ್ಪಾ ಕ್ಲೀನ್ ಮಾಡೋದು ಎಂಬ ಪ್ರಶ್ನೆ ಹಲವರಲ್ಲಿ ಇದ್ದೇ ಇರುತ್ತೆ. ಅದಕ್ಕಾಗಿ ಈ ಸರಳ ಸಲಹೆಗಳನ್ನು ಅನುಸರಿಸಿದರೆ ಸಾಕು.
ದಿಂಬನ್ನು ಸ್ವಚ್ಛಗೊಳಿಸಲು ಈ ಸಲಹೆಗಳನ್ನು ಪಾಲಿಸಿ:
ವ್ಯಾಕ್ಯೂಮ್ ಕ್ಲೀನರ್ ಬಳಸಿ: ನಿಮ್ಮ ದಿಂಬುಗಳನ್ನು ತೊಳೆಯದೆಯೇ ಸ್ವಚ್ಛಗೊಳಿಸಲು ನೀವು ವ್ಯಾಕ್ಯೂಮ್ ಕ್ಲೀನರ್ ಬಳಸಬಹುದು. ಇದು ಹೆಚ್ಚು ಸಮಯ ತೆಗೆದುಕೊಳ್ಳದೆ ದಿಂಬಿನಲ್ಲಿ ಸಂಗ್ರಹವಾದ ಯಾವುದೇ ಕೊಳಕು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಇದಕ್ಕಾಗಿ ಮೊದಲು ದಿಂಬಿನ ಕವರ್‌ಗಳನ್ನು ತೆಗೆದುಹಾಕಿ ನಂತರ ವ್ಯಾಕ್ಯೂಮ್ ಕ್ಲೀನರ್‌ನ ವೇಗವನ್ನು ಕಡಿಮೆ ಇರಿಸಿ, ಇದರ ಸಹಾಯದಿಂದ ನಿಧಾನವಾಗಿ ಬಿಂಬನ್ನು ಕ್ಲೀನ್ ಮಾಡಿ.
ಕೋಲು ಬಳಸಿ: ನಿಮ್ಮ ಬಳಿ ವ್ಯಾಕ್ಯೂಮ್ ಕ್ಲೀನರ್ ಇಲ್ಲದಿದ್ದರೆ, ನೀವು ನಿಮ್ಮ ದಿಂಬುಗಳನ್ನು ಕೋಲಿನಿಂದ ಸ್ವಚ್ಛಗೊಳಿಸಬಹುದು, ಕೋಲಿನಿಂದ ದಿಂಬಿಗೆ ಹೊಡೆಯುವ ಮೂಲಕ ದಿಂಬನ್ನು ಸ್ವಚ್ಛಗೊಳಿಸಬಹುದು. ಇದು ದಿಂಬಿನ ಮೇಲಿನ ಧೂಳು, ಕೊಳೆಯನ್ನು ತೆಗೆದುಹಾಕುತ್ತದೆ.
ಅಡಿಗೆ ಸೋಡಾ: ನಿಮ್ಮ ದಿಂಬುಗಳನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾವನ್ನು ಬಳಸಬಹುದು. ದಿನಕ್ಕಾಗಿ ನೀವು ದಿಂಬಿನ ಮೇಲಿನ ಕೊಳಕು ಅಥವಾ ಕಲೆಗಳ ಮೇಲೆ 1 ಟೀ ಚಮಚ ಅಡಿಗೆ ಸೋಡಾವನ್ನು ಸಿಂಪಡಿಸಿ. ನಂತರ, ಅದನ್ನು ಬ್ರಷ್‌ನಿಂದ ಸ್ಕ್ರಬ್ ಮಾಡಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದು ಒಣಗಿದ ನಂತರ, ಅದನ್ನು ನಿಮ್ಮ ಕೈಗಳಿಂದ ಸ್ಕ್ರಬ್ ಮಾಡಿ. ಇದು ದಿಂಬನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ ವಾಸನೆಯನ್ನೂ ಹೋಗಲಾಡಿಸುತ್ತದೆ.
ಟೂತ್‌ಪೇಸ್ಟ್: ನಿಮ್ಮ ದಿಂಬನ್ನು ಸ್ವಚ್ಛಗೊಳಿಸಲು ನೀವು ಟೂತ್‌ಪೇಸ್ಟ್ ಬಳಸಬಹುದು. ಇದಕ್ಕಾಗಿ ಸ್ವಲ್ಪ ಟೂತ್‌ಪೇಸ್ಟನ್ನು ಟೂತ್‌ಬ್ರಷ್‌ಗೆ ಹಚ್ಚಿ ಅದನ್ನು ದಿಂಬಿನ ಮೇಲಿನ ಕೊಳೆಗೆ ಹಚ್ಚಿ. ನಂತರ, ಬ್ರಷ್‌ನಿಂದ ಅದನ್ನು ಸ್ಕ್ರಬ್ ಮಾಡಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಟೂತ್‌ಪೇಸ್ಟ್ ಒಣಗಿದ ನಂತರ, ಅದನ್ನು ನಿಮ್ಮ ಕೈಗಳಿಂದ ಸ್ಕ್ರಬ್ ಮಾಡಿ, ಮತ್ತು ದಿಂಬು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.
ಇದನ್ನೂ ಓದಿ: ಗ್ಯಾಸ್‌ನಲ್ಲಿಟ್ಟ ಹಾಲು ಉಕ್ಕಿ ಚೆಲ್ಲಬಾರದೆಂದರೆ ಈ ಸಿಂಪಲ್ ಸಲಹೆ ಪಾಲಿಸಿದರೆ ಸಾಕು
ಬಿಸಿಲಿನಲ್ಲಿಡಿ: ಇದು ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಸ್ವಚ್ಛತಾ ವಿಧಾನವಾಗಿದೆ. ಸೂರ್ಯನ ಬೆಳಕು ನೈಸರ್ಗಿಕ ಸೋಂಕುನಿವಾರಕವಾಗಿದ್ದು, ದಿಂಬನ್ನು ಬಿಸಿಲಿನಲ್ಲಿ ಇಡಿ ಇದರಿಂದ ತೇವಾಂಶ ಕಡಿಮೆಯಾಗುತ್ತದೆ ಮತ್ತು ಇದು ಬ್ಯಾಕ್ಟೀರಿಯಾ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 3 ರಿಂದ 4 ಗಂಟೆಗಳ ಕಾಲ ದಿಂಬನ್ನು ನೇರ ಸೂರ್ಯನ ಬೆಳಕಿನಲ್ಲಿ ಇರಿಸಿ.
ಸ್ಪಾಟ್ ಕ್ಲೀನಿಂಗ್: ದಿಂಬಿನ ಮೇಲೆ ಮೊಂಡುತನದ ಬೆವರು ಅಥವಾ ಎಣ್ಣೆಯ ಕಲೆಗಳಿದ್ದರೆ, ಇಡೀ ದಿಂಬನ್ನು ನೀರಿನಿಂದ ತೊಳೆಯುವ ಅಗತ್ಯವಿಲ್ಲ. ಅದಕ್ಕಾಗಿ ಹತ್ತಿ ಬಟ್ಟೆಯನ್ನು ವಿನೆಗರ್ ಅಥವಾ ಸೌಮ್ಯ ಸೋಪ್‌ನಲ್ಲಿ ಅದ್ದಿ, ಕಲೆಯಾದ ಪ್ರದೇಶವನ್ನು ಮಾತ್ರ ನಿಧಾನವಾಗಿ ಉಜ್ಜಿ. ನಂತರ, ದಿಂಬನ್ನು ಫ್ಯಾನ್ ಅಡಿಯಲ್ಲಿ ಒಣಗಿಸಿ.
ಸಾರಭೂತ ತೈಲ ಸ್ಪ್ರೇ: ನಿಮ್ಮ ದಿಂಬನ್ನು ಪರಿಮಳಯುಕ್ತವಾಗಿಸಲು ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿಡಲು ನೀವು ದಿಂಬಿನ ಮೇಲೆ ಸಾರಭೂತ ತೈಲವನ್ನು ಸಿಂಪಡಿಸಬಹುದು. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಕೆಲವು ಹನಿ ಟೀ ಟ್ರೀ ಎಣ್ಣೆ ಅಥವಾ ಲ್ಯಾವೆಂಡರ್ ಎಣ್ಣೆಯನ್ನು ಮಿಶ್ರಣ ಮಾಡಿ. ಅದನ್ನು ದಿಂಬಿನ ಮೇಲೆ ಲಘುವಾಗಿ ಸಿಂಪಡಿಸಿ. ಇದು ಪರಿಮಳವನ್ನು ನೀಡುವುದು ಮಾತ್ರವಲ್ಲ ಲ್ಯಾವೆಂಡರ್ ಪರಿಮಳವು ನಿಮಗೆ ಆಳವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




