ಬ್ರೊಕೊಲಿ vs ಹೂಕೋಸು vs ಎಲೆಕೋಸು: ಈ ಮೂರರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?
ತರಕಾರಿಗಳು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಅವು ಜೀವಸತ್ವ, ಖನಿಜ ಮತ್ತು ನಾರಿನ ಶಕ್ತಿ ಕೇಂದ್ರಗಳಾಗಿವೆ. ಇಂತಹ ತರಕಾರಿಗಳಲ್ಲಿ ಹೂಕೋಸು, ಎಲೆಕೋಸು ಮತ್ತು ಬ್ರೊಕೊಲಿ ಕೂಡ ಸೇರಿಕೊಳ್ಳುತ್ತದೆ. ಇದು ಒಂದೇ ಕುಟುಂಬಕ್ಕೆ ಸೇರಿದ್ದು ಪೌಷ್ಟಿಕಾಂಶಗಳ ಗಣಿಯಾಗಿದೆ. ಆದರೂ ಕೂಡ ಇವುಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಅನುಮಾನ ಮೂಡುತ್ತದೆ. ಹಾಗಾದರೆ, ಆರೋಗ್ಯ ತಜ್ಞರ ಪ್ರಕಾರ ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ಇವುಗಳ ಸೇವನೆಯಿಂದ ಸಿಗುವ ಲಾಭಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೂಕೋಸು (Cauliflower), ಎಲೆಕೋಸು (Cabbage) ಮತ್ತು ಬ್ರೊಕೊಲಿಗಳು (Broccoli) ಫೈಬರ್, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಮೂರು ತರಕಾರಿಗಳಾಗಿವೆ. ಹೂಕೋಸು ವಿಟಮಿನ್ ಸಿ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಎಲೆಕೋಸು ಜೀರ್ಣಕ್ರಿಯೆಗೆ ಪ್ರಯೋಜನಕಾರಿ, ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಜೊತೆಗೆ ಮಲಬದ್ಧತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇನ್ನು, ಬ್ರೊಕೊಲಿ ವಿಟಮಿನ್ ಎ, ಸಿ, ಕೆ, ಕಬ್ಬಿಣ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹೀಗೆ ಈ ಮೂರು ತರಕಾರಿಗಳು ಕೂಡ ಒಂದೇ ಕುಟುಂಬಕ್ಕೆ ಸೇರಿದ್ದು ಪೌಷ್ಟಿಕಾಂಶಗಳ ಗಣಿಯಾಗಿದ್ದರೂ ಕೂಡ ಇವುಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಅನುಮಾನ ಮೂಡುತ್ತದೆ. ಹಾಗಾದರೆ ಆರೋಗ್ಯ ತಜ್ಞರ ಪ್ರಕಾರ ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆರೋಗ್ಯವಾಗಿರುವುದು ಎಂದರೆ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಬದಲಾಗಿ ಅನಾರೋಗ್ಯವನ್ನು ತಡೆಗಟ್ಟುವ ಮೂಲಕ ಆರೋಗ್ಯವಾಗಿರುವುದು ಕೂಡ. ಹಾಗಾಗಿ ಈ ಮೂರು ತರಕಾರಿಗಳು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹೂಕೋಸು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಎಲೆಕೋಸು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬ್ರೊಕೊಲಿಯು ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ವಿಶೇಷ ಸಂಯುಕ್ತಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ: ಮಹಿಳೆಯರೇ… ಬ್ರೊಕೊಲಿಯನ್ನು ಇಷ್ಟಪಟ್ಟು ತಿಂತೀರಾ? ಹಾಗಿದ್ರೆ ಈ ಸಮಸ್ಯೆ ಹೆಚ್ಚಾಗುತ್ತೆ ಎಚ್ಚರ
ನಿಮ್ಮ ದೈನಂದಿನ ಆಹಾರಕ್ರಮಕ್ಕೆ ಯಾವುದು ಒಳ್ಳೆಯದು?
ಹೂಕೋಸು, ಎಲೆಕೋಸು ಅಥವಾ ಬ್ರೊಕೊಲಿಗಳಲ್ಲಿ ಯಾವುದು ಉತ್ತಮ ಎಂದು ತಿಳಿಯಲು ಅವುಗಳ ರುಚಿ, ಬೆಲೆ ಮತ್ತು ಲಭ್ಯತೆಯನ್ನು ಪರಿಗಣಿಸಬೇಕಾಗುತ್ತದೆ. ಹೂಕೋಸು ಸುಲಭವಾಗಿ ಲಭ್ಯವಿದ್ದು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಬಹುದು. ಮತ್ತೊಂದೆಡೆ, ಎಲೆಕೋಸು ಗರಿಗರಿಯಾಗಿದ್ದು ಸಲಾಡ್‌ಗಳಿಂದ ಕರಿಗಳವರೆಗೆ ವಿಭಿನ್ನ ರೀತಿಯಲ್ಲಿ ತಿನ್ನಬಹುದು. ಆದರೆ ಬ್ರೊಕೊಲಿ ಸ್ವಲ್ಪ ದುಬಾರಿ. ಅಷ್ಟಾದರೂ ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೂ ಕೂಡ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಆದ್ದರಿಂದ, ಈ ಮೂರನ್ನೂ ಪರ್ಯಾಯವಾಗಿ ತಿನ್ನುವುದು ಉತ್ತಮ ಆಯ್ಕೆಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




