ಜಾಸ್ತಿ ಕಾಫಿ ಕುಡಿಬೇಡಿ ಆರೋಗ್ಯ ಹಾಳಾದೀತು, ದೇಹದಲ್ಲಿ ಉಷ್ಣ ಹೆಚ್ಚಾಗುತ್ತೆ ಅಂತೆಲ್ಲಾ ಹೇಳಿರೋದು ನೀವು ಕೇಳಿರ್ತೀರ. ಆದರೆ ಅರಿಶಿನ ಕಾಫಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.ಇದು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ಯಕೃತ್ತನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ. ಇದರೊಂದಿಗೆ ದೇಹವನ್ನು ಹಲವು ರೀತಿಯ ಸಮಸ್ಯೆಗಳಿಂದ ರಕ್ಷಿಸುತ್ತದೆ.
ನೀವು ಅರಿಶಿನ ಕಾಫಿ ಮಾಡಲು ಬಯಸಿದರೆ, ಮೊದಲು ಕಾಫಿ ಪೌಡರ್ಗೆ ಸ್ವಲ್ಪ ಹಾಲು ಸೇರಿಸಿ ಬಿಸಿ ಮಾಡಿಕೊಳ್ಳಿ ನಂತರ ಅದಕ್ಕೆ ಅರಿಶಿನವನ್ನು ಬೆರೆಸಿ. ಈಗ ನೀವು ಈ ಕಾಫಿಯನ್ನು ಆರಾಮವಾಗಿ ಕುಡಿಯಬಹುದು, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
ಅರಿಶಿನ ಕಾಫಿ ಆಮ್ಲೀಯತೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಇದು ಆಮ್ಲೀಯ pH ಅನ್ನು ದುರ್ಬಲಗೊಳಿಸುತ್ತದೆ ಮತ್ತು ಆಮ್ಲೀಯತೆಯ ಸಮಸ್ಯೆಯನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಅನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದಾಗಿ, ದೇಹವು ಅರಿಶಿನದ ಪ್ರಯೋಜನಗಳನ್ನು ನೇರವಾಗಿ ಪಡೆಯಬಹುದು.
ಅರಿಶಿನದ ಕಾಫಿ ಕೂಡ ಹೊಟ್ಟೆಯ ಊತವನ್ನು ಕಡಿಮೆ ಮಾಡುತ್ತದೆ. ವಾಸ್ತವವಾಗಿ, ಕರ್ಕ್ಯುಮಿನ್ ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಜೀರ್ಣಕ್ರಿಯೆಯನ್ನು ಗುಣಪಡಿಸುತ್ತದೆ.ಇದರ ಜೊತೆಗೆ, ಇದು ಅನೇಕ ಇತರ ಕಾಯಿಲೆಗಳನ್ನು ಸಹ ತೊಡೆದುಹಾಕುತ್ತದೆ. ಕಾಫಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಮೂಳೆಗಳು ಮತ್ತು ಕೀಲುಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಮೂಳೆ ಅಥವಾ ಕೀಲುಗಳಲ್ಲಿ ನೋವು ಇರುವವರು ಕಾಫಿ ಕುಡಿಯಬೇಕು.
ಅರಿಶಿನ ಕಾಫಿಯನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ. ಈ ಎಲ್ಲಾ ಪ್ರಯೋಜನಗಳಿಗೆ ಅರಿಶಿನ ಕಾಫಿ ತುಂಬಾ ಸಹಾಯಕವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 am, Sat, 31 December 22