ಟ್ರಾವೆಲ್ ಮಾಡುವಾಗ ಮಲಬದ್ಧತೆ ಸಮಸ್ಯೆ ಕಂಡುಬರುತ್ತಾ? ಹಾಗಿದ್ರೆ ಈ ರೀತಿ ಮಾಡುವುದನ್ನು ಮರೆಯಬೇಡಿ

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆಯನ್ನು ಹೆಚ್ಚಿನವರು ಎದುರಿಸುತ್ತಿದ್ದು, ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗುತ್ತಿದೆ. ಅದರಲ್ಲಿಯೂ ಕೆಲವರಿಗೆ ಈ ಸಮಸ್ಯೆ ಪ್ರಯಾಣ ಮಾಡುವಾಗ ಕಂಡುಬರುತ್ತದೆ. ಹಾಗಾಗಿ ಅತಿಯಾಗಿ ಪ್ರಯಾಣ ಮಾಡುವವರು ಮತ್ತು ಟ್ರಿಪ್ ಹೋಗುವ ಸಮಯದಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಈ ರೀತಿ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಟ್ರಾವೆಲ್ ಮಾಡುವಾಗ ಮಲಬದ್ಧತೆ ಸಮಸ್ಯೆ ಕಂಡುಬರುತ್ತಾ? ಹಾಗಿದ್ರೆ ಈ ರೀತಿ ಮಾಡುವುದನ್ನು ಮರೆಯಬೇಡಿ
Travel Constipation
Image Credit source: Getty Images

Updated on: Jun 12, 2026 | 5:57 PM

ಪ್ರಯಾಣ (Travel) ಮಾಡುವುದು ಎಲ್ಲರಿಗೂ ಇಷ್ಟ. ಆದರೆ ದೂರ ದೂರದ ಪ್ರಯಾಣ, ಆಹಾರದ ಬದಲಾವಣೆ, ನಿದ್ರೆಯ ಸಮಯದಲ್ಲಿ ವ್ಯತ್ಯಾಸ ಹಾಗೂ ನೀರಿನ ಕೊರತೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹಲವರಿಗೆ ಪ್ರಯಾಣದ ಸಮಯದಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನೇ “ಟ್ರಾವೆಲ್ ಕಾಂಸ್ಟಿಪೇಶನ್” ಎಂದು ಕರೆಯಲಾಗುತ್ತದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಪ್ರಯಾಣದ ವೇಳೆ ದಿನಚರಿಯಲ್ಲಿ ಆಗುವಂತಹ ಬದಲಾವಣೆಗಳಿಂದ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಪ್ರವಾಸ ಮಾಡುವಾಗ ಇರಬೇಕಾದ ಸಂತೋಷ, ಉತ್ಸಾಹ ಎಲ್ಲವೂ ಕಡಿಮೆಯಾಗಬಹುದು. ಅದಕ್ಕಾಗಿಯೇ ಅತಿಯಾಗಿ ಪ್ರಯಾಣ ಮಾಡುವವರು ಮತ್ತು ಟ್ರಿಪ್ ಹೋಗುವ ಸಮಯದಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಈ ರೀತಿ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಪ್ರಯಾಣದ ವೇಳೆ ಮಲಬದ್ಧತೆ ಏಕೆ ಕಂಡುಬರುತ್ತದೆ?

ನೀರಿನ ಕೊರತೆ: ಗಂಟೆಗಳ ಕಾಲ ಬಸ್, ಕಾರು ಅಥವಾ ವಿಮಾನದಲ್ಲಿ ಪ್ರಯಾಣಿಸುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮಲ ಗಟ್ಟಿಯಾಗಿ ಹೊರಬರಲು ಕಷ್ಟವಾಗುತ್ತದೆ.

ದೈಹಿಕ ಚಟುವಟಿಕೆ ಕಡಿಮೆಯಾಗುವುದು: ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಹೆಚ್ಚಾಗಿ ದೈಹಿಕ ಚಟುವಟಿಕೆ ಇರುವುದಿಲ್ಲ. ಇದರಿಂದ ಮಲಬದ್ಧತೆ ಸಮಸ್ಯೆ ಕಂಡುಬರಬಹುದು.

ಆಹಾರ ಪದ್ಧತಿಯಲ್ಲಿ ಬದಲಾವಣೆ: ಪ್ರಯಾಣದ ವೇಳೆ ಹೊರಗಿನ ಆಹಾರ, ಫಾಸ್ಟ್ ಫುಡ್ ಅಥವಾ ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಜೀರ್ಣಕ್ರಿಯೆಯನ್ನು ಹಾಳು ಮಾಡಬಹುದು.

ಮಲವಿಸರ್ಜನೆಗೆ ಹೋಗದಿರುವುದು: ಸರಿಯಾದ ಟಾಯ್ಲೆಟ್ ಸೌಲಭ್ಯ ಇಲ್ಲದಿರುವುದು ಅಥವಾ ಹೊಸ ಸ್ಥಳದಲ್ಲಿ ಅಸೌಕರ್ಯ ಅನುಭವಿಸುವುದರಿಂದ ಹಲವರು ಮಲವಿಸರ್ಜನೆಯನ್ನು ತಡೆಹಿಡಿಯುತ್ತಾರೆ. ಇದು ಮಲಬದ್ಧತೆಗೆ ಪ್ರಮುಖ ಕಾರಣ.

ಲಕ್ಷಣಗಳು ಹೇಗಿರುತ್ತವೆ?

  • ವಾರದಲ್ಲಿ ತುಂಬಾ ಕಡಿಮೆ ಬಾರಿ ಮಲವಿಸರ್ಜನೆ ಆಗುವುದು
  • ಮಲ ಗಟ್ಟಿಯಾಗಿ ಹೊರಬರುವುದು
  • ಹೊಟ್ಟೆ ಉಬ್ಬರ ಮತ್ತು ನೋವು
  • ಮಲವಿಸರ್ಜನೆ ವೇಳೆ ಹೆಚ್ಚು ಒತ್ತಡ ಹಾಕಬೇಕಾಗುವುದು
  • ಹೊಟ್ಟೆ ಸಂಪೂರ್ಣ ಖಾಲಿಯಾಗದ ಭಾವನೆ

ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ವೈದ್ಯರು ಹೇಳುವ ಈ ಸರಳ ಸಲಹೆಗಳನ್ನು ಪಾಲಿಸಿ

ಈ ಸರಳ ಸಲಹೆಗಳನ್ನು ಅನುಸರಿಸಿ:

ಸಾಕಷ್ಟು ನೀರು ಕುಡಿಯಿರಿ: ಪ್ರಯಾಣದ ವೇಳೆ ಹೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸುವುದು ಮುಖ್ಯ.

ಫೈಬರ್ ಅಂಶವಿರುವ ಆಹಾರ ಸೇವಿಸಿ: ಹಣ್ಣು, ತರಕಾರಿ, ಧಾನ್ಯಗಳು ಹಾಗೂ ನಟ್ಸ್‌ಗಳಲ್ಲಿ ಇರುವ ಫೈಬರ್ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

ಬಿಡುವಿದ್ದಾಗ ವಾಕಿಂಗ್ ಮಾಡಿ: ದೀರ್ಘ ಪ್ರಯಾಣದ ವೇಳೆ ಸ್ವಲ್ಪ ಹೊತ್ತು ನಡೆದು ದೇಹಕ್ಕೆ ಚಲನೆ ನೀಡುವುದು ಒಳ್ಳೆಯದು.

ಸಮಯಕ್ಕೆ ಸರಿಯಾಗಿ ಊಟ ಮಾಡಿ: ಸರಿಯಾದ ಸಮಯದಲ್ಲಿ ಊಟ ಮಾಡದಿದ್ದಾಗ ಇದು ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಿಸುತ್ತದೆ.

ಮಲವಿಸರ್ಜನೆಯನ್ನು ತಡೆಯಬೇಡಿ: ಅವಶ್ಯಕತೆ ಬಂದಾಗ ತಕ್ಷಣ ಟಾಯ್ಲೆಟ್‌ಗೆ ಹೋಗುವ ಅಭ್ಯಾಸ ಮಾಡಿಕೊಳ್ಳಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಪ್ರಯಾಣ ಮುಗಿದ ನಂತರವೂ ಮಲಬದ್ಧತೆ ಕಡಿಮೆಯಾಗದಿದ್ದರೆ ಅಥವಾ ಹೊಟ್ಟೆ ನೋವು, ವಾಂತಿ, ಮಲದಲ್ಲಿ ರಕ್ತ, ತೂಕ ಏಕಾಏಕಿ ಕಡಿಮೆಯಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us