ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಜನರು ಹೆಚ್ಚಿನ ಗಮನವಹಿಸುತ್ತಾರೆ. ದೇಹದಲ್ಲಿನ ಹೆಚ್ಚಿನ ಕ್ಯಾಲೋರಿ ಕರಗಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಅತಿ ವೇಗದಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಮುಂದಾದಾಗ ಕೆಲವು ಆರೋಗ್ಯ ತೊಂದರೆಗಳೂ ಸಹ ಎದುರಾಗಬಹುದು. ಹಾಗಾಗಿ ಒಂದೇ ಬಾರಿಗೆ ತೂಕ ಇಳಿಸಿಕೊಳ್ಳಬೇಕು ಎನ್ನುವ ಆತುರದಲ್ಲಿ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳಬೇಡಿ. ಇದು ಚಯಾಪಚಯಕ್ಕೆ ಒಳ್ಳೆಯದಲ್ಲ. ಜತೆಗೆ ಪೌಷ್ಟಿಕಾಂಶದ ಕೊರತೆಯನ್ನು ಉಂಟು ಮಾಡುತ್ತದೆ. ವೇಗದಲ್ಲಿ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ತಕ್ಷಣದಲ್ಲಿ ಪರಿಣಾಮ ಕಂಡರೂ ಸಹ ಭವಿಷ್ಯದಲ್ಲಿ ಅದು ಆರೋಗ್ಯ ತೊಂದರೆಗಳನ್ನು ಉಂಟು ಮಾಡುತ್ತದೆ.
ಹಸಿವು ಹೆಚ್ಚಾಗುತ್ತದೆ
ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದಾಗ ಕೆಲವು ಬಾರಿ ನೀವು ಅಗತ್ಯಕ್ಕಿಂತ ಹೆಚ್ಚಿನದನ್ನು ಸೇವಿಸುತ್ತೀರಿ. ಏಕೆಂದರೆ ಹಸಿವಾಗುವುದರಿಂದ ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಸೇವಿಸುತ್ತೀರಿ. ಆಗ ದೀರ್ಘ ಅವಧಿಯ ಆರೋಗ್ಯ ತೊಂದರೆಗಳನ್ನು ನೀವು ಎದುರಿಸಬಹುದಾದ ಸಾಧ್ಯತೆಗಳು ಹೆಚ್ಚಿರುತ್ತದೆ.
ಪೌಷ್ಠಿಕಾಂಶದ ಕೊರತೆ
ನೀವು ತೂಕವನ್ನು ಇಳಿಸಿಕೊಳ್ಳುವ ದೃಷ್ಟಿಯಿಂದ ಒಂದೇ ಬಾರಿಗೆ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತೀರಿ, ಇಲ್ಲವೇ ಕೆಲವರಂತೂ ಒಂದು ಹೊತ್ತಿನ ಆಹಾರವನ್ನೇ ತ್ಯಜಿಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ದೇಹಕ್ಕೆ ಸಿಗುವುದಿಲ್ಲ. ಇದರಿಂದ ಪೋಷಕಾಂಶದ ಕೊರತೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ತೀವ್ರವಾದ ಆಯಾಸದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮನಸ್ಥಿತಿ ಹದಗೆಡುವುದು
ಕೆಲವು ಬಾರಿ ಸಮಸ್ಯೆಗಳು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಬಹುದು. ಇದರಿಂದ ಮನಸ್ಥಿತಿ ಬದಲಾವಣೆ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಇದರಿಂದ ನಿಮ್ಮ ಆಲೋಚನೆಗಳು ಸಂಪೂರ್ಣವಾಗಿ ಬದಲಾಗುತ್ತವೆ. ಮನಸ್ಥಿತಿ ಹದಗೆಡಲು ಕಾರಣವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಇದನ್ನೂ ಓದಿ:
Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ
Health Tips: ಶೀತ, ಕೆಮ್ಮಿನ ಸಮಸ್ಯೆಗಳ ಪರಿಹಾರಕ್ಕಾಗಿ ಸಲಹೆಗಳು ಇಲ್ಲಿವೆ