Turmeric Side Effects: ಈ ಆರೋಗ್ಯ ಸಮಸ್ಯೆಗಳಿರುವವರು ಅರಿಶಿನ ಸೇವನೆ ತ್ಯಜಿಸುವುದು ಉತ್ತಮ! ಏಕೆಂದು ತಿಳಿಯಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 16, 2022 | 7:33 PM

ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ತಜ್ಞರು ಇದನ್ನು ನಿಯಮಿತವಾಗಿ ಸೇವಿಸುವಂತೆ ಸಲಹೆ ನೀಡುತ್ತಾರೆ.

Turmeric Side Effects: ಈ ಆರೋಗ್ಯ ಸಮಸ್ಯೆಗಳಿರುವವರು ಅರಿಶಿನ ಸೇವನೆ ತ್ಯಜಿಸುವುದು ಉತ್ತಮ! ಏಕೆಂದು ತಿಳಿಯಿರಿ
ಅರಿಶಿನ (ಸಂಗ್ರಹ ಚಿತ್ರ)
Follow us on

ಅರಿಶಿನ ಮುಖ್ಯವಾದ ಸಾಂಬಾರ ಬೆಳೆಗಳಲ್ಲೊಂದು. ಜಿಂಜಿಎರೇಶೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ . ಶುಂಠಿ ಬೆಳೆಯಂತೆಯೇ ಈ ಬೆಳೆಗೆ ಮತ್ತು ಭೂಮಿಯಲ್ಲಿ ಯಾವಾಗಲೂ ತೇವಾಂಶವಿರಬೇಕು. ಅರಿಶಿನ (Turmeric) ವನ್ನು ಆಹಾರ ಪದಾರ್ಥಗಳಿಗೆ ಬಣ್ಣ ಮತ್ತು ಪರಿಮಳ ಬರಿಸಲು, ಸಾಂಬಾರ ಪುಡಿ ತಯಾರಿಸಲು, ಬಟ್ಟೆ ಕಾರ್ಖಾನೆಗಳಲ್ಲಿ ಬಣ್ಣ ಹಾಕಲು, ಆಯುರ್ವೇದ ಔಷಧಿ ಹಾಗೂ ಸುಗಂಧ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಅಲ್ಲದೆ ಅರಿಶಿನ ಅಡುಗೆ ಮನೆಯ ಸಂಗಾತಿ. ದಕ್ಷಿಣ ಭಾರತದ ಅಡುಗೆಗಳಲ್ಲಂತೂ ಅರಿಶಿನವನ್ನು ಹೆಚ್ಚಾಗಿ ಬಳಸುತ್ತಾರೆ. ಬಹುತೇಕ ಎಲ್ಲಾ ತಿನಿಸುಗಳಲ್ಲೂ ಅರಿಶಿನ ಬಳಕೆ ಸಾಮಾನ್ಯ. ಅರಿಶಿನ ಆರೋಗ್ಯವೃದ್ಧಿಗೂ ಸಹ ಬಹಳಷ್ಟು ಪರಿಣಾಮಕಾರಿಯಾಗಿದೆ.

ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅರಿಶಿನದ ಔಷಧೀಯ ಗುಣಗಳಿಂದಾಗಿ, ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ ಈ ಅರಿಶಿನ ಮಸಾಲೆ ಸಾಮನ್ಯವಾಗಿ ಎಲ್ಲರಿಗೂ ಅಲ್ಲ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಅರಿಶಿನ ತಿನ್ನದಿರುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

ಹಾಗಾದರೆ ಅರಿಶಿನವನ್ನು ಯಾರೆಲ್ಲ ತಿನ್ನಬಾರದು?

  1. ಮಧುಮೇಹ: ಮಧುಮೇಹ ಇರುವವರು ಸಾಮಾನ್ಯವಾಗಿ ತಮ್ಮ ರಕ್ತವನ್ನು ತೆಳುಗೊಳಿಸಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಅವರು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬೇಕು. ಮಧುಮೇಹ ರೋಗಿಗಳು ಅಗತ್ಯಕ್ಕಿಂತ ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ಅವರ ದೇಹದಲ್ಲಿನ ರಕ್ತದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದು ದೇಹಕ್ಕೆ ಸ್ವಲ್ಪವೂ ಒಳ್ಳೆಯದಲ್ಲ.
  2. ಕಾಮಾಲೆ ಪೀಡಿತರು: ಜಾಂಡೀಸ್ ಇರುವವರು ಅರಿಶಿನ ಸೇವನೆಯಿಂದ ಆದಷ್ಟು ದೂರವಿರಬೇಕು. ನೀವು ಇನ್ನೂ ಅರಿಶಿನವನ್ನು ಸೇವಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆದು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು.
  3. ಕರಳು ಸಂಬಂಧಿ ಕಾಯಿಲೆಗಳು: ಕರುಳಿನ ಸಮಸ್ಯೆಗಳು ಬಹಳ ಸಂಕೀರ್ಣ ರೋಗವಾಗಿದ್ದು, ಈ ಸಮಸ್ಯೆಯನ್ನು ಎದುರಿಸುತ್ತಿರುವವರು ಸಾಕಷ್ಟು ನೋವನ್ನು ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅರಿಶಿನ ಸೇವನೆಯನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ.
  4. ರಕ್ತಸ್ರಾವ: ಮೂಗಿನಿಂದ ಅಥವಾ ದೇಹದ ಯಾವುದೇ ಭಾಗದಿಂದ ರಕ್ತಸ್ರಾವವಾಗುತ್ತಿರುವವರು ಅರಿಶಿನ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ರಕ್ತಸ್ರಾವ ಹೆಚ್ಚಾಗುತ್ತದೆ. ದೇಹದಿಂದ ರಕ್ತ ಕಡಿಮೆಯಾಗಬಹುದು. ಇದು ದೇಹದಲ್ಲಿ ದೌರ್ಬಲ್ಯ ಉಂಟುಮಾಡುವುದರೊಂದಿಗೆ, ಭವಿಷ್ಯದಲ್ಲಿ ಕಷ್ಟಗಳು ಎದುರಾಗಬಹುದು.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:31 pm, Sun, 16 October 22