AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲು ನೋವಿಗೆ ಐಸ್ ವಾಟರ್ ಬಾಟಲ್ ರೋಲಿಂಗ್; ಇದು ನಿಜವಾಗಿಯೂ ಪರಿಹಾರ ನೀಡುತ್ತಾ?

ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ, ನಮ್ಮ ಪಾದಗಳು ನಮ್ಮ ಇಡೀ ದೇಹದ ತೂಕವನ್ನು ಹೊತ್ತುಕೊಳ್ಳುತ್ತವೆ. ಅತಿಯಾದ ಕೆಲಸ, ದೀರ್ಘಕಾಲ ನಿಲ್ಲುವುದು ಅಥವಾ ಸರಿಯಾದ ಪಾದರಕ್ಷೆಗಳನ್ನು ಧರಿಸದಿರುವುದರಿಂದ ರಾತ್ರಿಯಾಗುವಷ್ಟು ಹೊತ್ತಿಗೆ ಪಾದಗಳಲ್ಲಿ ನೋವು, ಉರಿ ಅಥವಾ ಆಯಾಸ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ನೀವು ಪಾರ್ಲರ್‌ಗೆ ಹೋಗಬೇಕಾಗಿಲ್ಲ. ಬದಲಾಗಿ ಮನೆಯಲ್ಲಿರುವ ಐಸ್ ಬಾಟಲಿಯಿಂದ ಪರಿಹಾರ ಕಂಡುಕೊಳ್ಳಬಹುದು. ಹೇಗೆ ಗೊತ್ತಾ? ಈ ಸ್ಟೋರಿ ಓದಿ.

ಕಾಲು ನೋವಿಗೆ ಐಸ್ ವಾಟರ್ ಬಾಟಲ್ ರೋಲಿಂಗ್; ಇದು ನಿಜವಾಗಿಯೂ ಪರಿಹಾರ ನೀಡುತ್ತಾ?
Foot Pain Relief At HomeImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 15, 2026 | 9:37 PM

Share

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಐಸ್ ನೀರಿನಿಂದ ತುಂಬಿದ ಬಾಟಲಿಯನ್ನು ಕಾಲಿನ ಕೆಳಗೆ ಇಟ್ಟು ರೋಲ್ ಮಾಡಿದರೆ ಕಾಲು ನೋವು ಅಥವಾ ಪಾದದ ನೋವು (Foot Pain) ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ವೈದ್ಯರು ಹೇಳುವ ಪ್ರಕಾರ, ಇದು “ಕೋಲ್ಡ್ ಥೆರಪಿ” ಮತ್ತು ಮಸಾಜ್‌, ಎರಡರ ಸಂಯೋಜನೆಯಂತೆ ಕೆಲಸ ಮಾಡುತ್ತದೆ. ಐಸ್‌ನ ತಂಪು ಕಾಲಿಗೆ ತಾಗಿದಾಗ ಆ ಭಾಗದ ರಕ್ತನಾಳಗಳು ತಾತ್ಕಾಲಿಕವಾಗಿ ಸಂಕೋಚಗೊಳ್ಳುತ್ತವೆ. ಇದರಿಂದ ಊತ ಮತ್ತು ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ತಂಪಿನಿಂದ ನರಗಳು ಸ್ವಲ್ಪ ಕೂಲ್ ಆಗುವುದರಿಂದ ನೋವಿನ ಸಂದೇಶಗಳು ಮೆದುಳಿಗೆ ಕಡಿಮೆ ಪ್ರಮಾಣದಲ್ಲಿ ಸಾಗುತ್ತವೆ. ಪರಿಣಾಮವಾಗಿ ತಕ್ಷಣದ ಆರಾಮ ಸಿಗಬಹುದು. ಆದರೆ ಯಾವ ರೀತಿ ನೋವಿದ್ದವರಿಗೆ ಉಪಯುಕ್ತ, ಎಲ್ಲರೂ ಬಳಸಬಹುದೇ, ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಶೇಷವಾಗಿ ಪ್ಲಾಂಟರ್ ಫ್ಯಾಸಿಯಾಟಿಸ್ (Plantar Fasciitis) ಅಥವಾ ಪಾದದ ತಳಭಾಗದ ನೋವಿನಿಂದ ಬಳಲುವವರಿಗೆ ಈ ವಿಧಾನ ಉಪಯುಕ್ತವಾಗಬಹುದು. ಬಾಟಲಿಯ ಗೋಲಾದ ಆಕಾರವು ಪಾದದ ಸ್ನಾಯುಗಳನ್ನು ಮೃದುವಾಗಿ ಸ್ಟ್ರೆಚ್ ಮಾಡುವಲ್ಲಿ ಸಹಕಾರಿ. ದಿನಪೂರ್ತಿ ನಿಂತು ಕೆಲಸ ಮಾಡುವವರು ಅಥವಾ ಹೆಚ್ಚು ನಡೆಯುವವರಿಗೂ ಇದು ಸ್ವಲ್ಪ ಮಟ್ಟಿನ ಪರಿಹಾರ ನೀಡಬಹುದು.

ಯಾರಿಗೆ ಅಪಾಯಕಾರಿ?

ಈ ವಿಧಾನ ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. ಐಸ್ ಬಾಟಲಿಯನ್ನು ನೇರವಾಗಿ ಚರ್ಮದ ಮೇಲೆ ರೋಲ್ ಮಾಡಿದರೆ “ಫ್ರಾಸ್ಟ್ ಬೈಟ್” ಅಥವಾ ಚರ್ಮ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಕ್ಸ್ ಧರಿಸುವುದು ಅಥವಾ ಬಾಟಲಿಗೆ ಸಣ್ಣ ಬಟ್ಟೆ ಸುತ್ತುವುದು ಉತ್ತಮ. ಒಂದೇ ಬಾರಿ 10 ರಿಂದ 15 ನಿಮಿಷಕ್ಕಿಂತ ಹೆಚ್ಚು ಕಾಲ ಈ ವಿಧಾನವನ್ನು ಬಳಸಬಾರದು. ಮಧುಮೇಹ, ನರಗಳ ದುರ್ಬಲತೆ ಅಥವಾ ರಕ್ತಪ್ರಸರಣ ಸಮಸ್ಯೆ (Peripheral Artery Disease) ಇರುವವರು ವೈದ್ಯರ ಸಲಹೆಯಿಲ್ಲದೆ ಇದನ್ನು ಪ್ರಯತ್ನಿಸಬಾರದು. ಏಕೆಂದರೆ ಇವರಿಗೆ ತಂಪಿನ ಪರಿಣಾಮ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಒಟ್ಟಾರೆ, ಐಸ್ ವಾಟರ್ ಬಾಟಲ್ ರೋಲಿಂಗ್ ಸಾಮಾನ್ಯ ಕಾಲು ನೋವು ಮತ್ತು ದಣಿವಿಗೆ ತಾತ್ಕಾಲಿಕ ಪರಿಹಾರ ನೀಡುವ ಸರಳ ವಿಧಾನವಾಗಿದೆ. ಆದರೆ ನೋವು ಹಲವು ದಿನಗಳವರೆಗೆ ಮುಂದುವರಿದರೆ ಅಥವಾ ತೀವ್ರವಾಗಿದ್ದರೆ, ಫಿಸಿಯೋಥೆರಪಿಸ್ಟ್ ಸಂಪರ್ಕಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ