ತಜ್ಞರ ಪ್ರಕಾರ ಹೆಚ್ಚಿನ ಜನರು ಪ್ರಾಥಮಿಕ ಲಿವರ್ ಕ್ಯಾನ್ಸರ್‍ನ ಆರಂಭಿಕ ಹಂತದಲ್ಲಿ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ತ್ವರಿತಗತಿಯಲ್ಲಿ ಬೆಳೆಯುವ ಕ್ಯಾನ್ಸರ್‍ಗಳಲ್ಲಿ ಲಿವರ್ ಕ್ಯಾನ್ಸರ್ ಕೂಡಾ ಒಂದು. ಲಿವರ್ ಕ್ಯಾನ್ಸರ್ ನಿಮ್ಮ ಲಿವರ್‍ನ ಜೀವಕೋಶಗಳಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ಆಗಿದೆ. ನಿಮ್ಮ ಲಿವರ್ ಫುಟ್‍ಬಾಲ್ ಗಾತ್ರದ ಅಂಗವಾಗಿದ್ದು, ಅದು ನಿಮ್ಮ ಹೊಟ್ಟೆಯ ಮೇಲಿನ ಬಲ ಭಾಗದಲ್ಲಿ ಮತ್ತು ಡಯಾಫ್ರಾಮ್‍ನ ಕೆಳಗೆ ಇರುತ್ತದೆ. ಲಿವರ್ ಹಲವಾರು ಕ್ಯಾನ್ಸರ್‍ಗಳನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆಯಿದೆ.
ರೋಗದ ಚಿಹ್ನೆ ಮತ್ತು ಲಕ್ಷಣಗಳು
ಹೆಚ್ಚಿನ ಜನರು ಪ್ರಾಥಮಿಕ ಲಿವರ್ ಕ್ಯಾನ್ಸರ್‍ನ ಆರಂಭಿಕ ಹಂತದಲ್ಲಿ ಯಾವುದೇ ಚಿಹ್ನೆಗಳನ್ನು ಮತ್ತು ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ಮತ್ತು ರೋಗಲಕ್ಷಣದ ಸೂಚನೆ ಕಾಣಿಸಿಕೊಂಡಾಗ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತದೆ ಎಂದರೆ,
-ತನ್ನಷ್ಟಕ್ಕೆ ದೇಹದ ತೂಕ ಕಡಿಮೆಯಾಗುವುದು
-ಸ್ವಲ್ಪ ಊಟ ಸೇವಿಸಿದರೂ ಹೊಟ್ಟೆ ತುಂಬಿದಂತಾಗುವುದು
-ವಾಕರಿಕೆ ಅಥವಾ ಅತಿಸಾರ
-ಪಕ್ಕೆಲುಬಿನ ಅಡಿಯಲ್ಲಿ ಬಲಭಾಗದ ಪೂರ್ಣತೆಯು ವಿಸ್ತರಿಸಿದ ಲಿವರ್‍ನ್ನು ಸೂಚಿಸುತ್ತದೆ.
-ಹೊಟ್ಟೆ ನೋವು ಅಥವಾ ಬಲ ಭುಜದ ಬ್ಲೇಡ್ ಹತ್ತಿರ ಅಸ್ವಸ್ಥತೆ
-ಕಿಬ್ಬೊಟ್ಟೆಯ ಊತ ಅಥವಾ ದ್ರವ ಶೇಖರಣೆ
-ತುರಿಕೆ
ಹಳದಿ ಬಣ್ಣಕ್ಕೆ ತಿರುಗಿದ ಕಣ್ಣುಗಳು ಮತ್ತು ಚರ್ಮ (ಕಾಮಾಲೆ)
ಜ್ವರ, ಹೊಟ್ಟೆಯ ಮೇಲೆ ಊದಿಕೊಂಡ ರಕ್ತನಾಳಗಳ ಗೋಚರಿಸುವಿಕೆ ಮತ್ತು ಅಸಮಾನ್ಯ ರಕ್ತಸ್ರಾವ ಹೀಗೆ ಇನ್ನೂ ಕೆಲವು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಚಿಕಿತ್ಸೆ
ಉತ್ತಮ ಜೀವನ ಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ವ್ಯಾಯಾಮ, ಆರೋಗ್ಯಕರ ತೂಕವನ್ನು ಕಪಡಿಕೊಳ್ಳುವುದು ಮತ್ತು ಕಡಿಮೆ ಆಲ್ಕೋಹಾಲ್ ಸೋವನೆಯೊಂದಿಗೆ ಸಮತೋಲಿತ ಆಹಾರವನ್ನು ಸೇವಿಸವು ಮೂಲಕ ನೀವು ಲಿವರ್ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.
ಹಾಗೂ ಹೆಪಟೈಟಿಸ್ ಬಿ ಮತ್ತು ಸಿ ವೈರಸ್‍ಗಳ ಸೋಂಕನ್ನು ತಪ್ಪಿಸಬಹುದು. ಹೆಪಟೈಟಿಸ್ ಬಿ ಸೋಂಕಿಗೆ ಚಿಕಿತ್ಸೆ ನೀಡದೆ ಬಿಟ್ಟರೆ ಮಾರಣಾಂತಿಕ, ಲಿವರ್ ವೈಫಲ್ಯ ಮತ್ತು ಸಿರೋಸಿಸ್‍ಗೆ ಕಾರಣವಾಗಬಹುದು. ಹೆಪಟೈಟಿಸ್ ಬಿ ಲಸಿಕೆಗಳನ್ನು ವಯಸ್ಕರರಿಗೆ ಮತ್ತು ಮಕ್ಕಳಿಗೆ ನೀಡಲಾಗುತ್ತದೆ.
ಆ್ಯಂಟಿ ವೈರಲ್ ಔಷಧಿಗಳು ಲಿವರ್‍ನ ಕಾಯಿಲೆಯನ್ನು ವಿಳಂಬಗೊಳಿಸುತ್ತದೆ ಮತ್ತು ಲಿವರ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಸಂಪೂರ್ಣವಾಗಿ ತೊಡೆದುಹಾಕುವುದಿಲ್ಲ. ನೀವು ದೀರ್ಘಕಾಲದ ಹೆಪಟೈಟಿಸ್ ಹೊಂದಿದ್ದರೆ ಅಲ್ಟ್ರಾ ಸೌಂಡ್, ಸಿ.ಟಿ ಸ್ಕ್ಯಾನ್ ಸ್ಕ್ಯಾನ್ ಪರೀಕ್ಷೆಗಳಿಗಾಗಿ ಆಗಾಗ ನಿಮ್ಮ ವೈದ್ಯರನ್ನು ಭೇಟಿ ಮಾಡಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Wed, 4 January 23