ಚುರುಕಾದ ನಡಿಗೆ ಎಂದರೇನು? ದಿನಕ್ಕೆ 2 ಕಿ.ಮೀ ನಡಿಗೆ ಮಾಡಿದರೆ ಏನಾಗುತ್ತದೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 29, 2024 | 5:42 PM

ಕೆಟ್ಟ ಜೀವನಶೈಲಿಯಿಂದ ಹೊರಬರಲು ಹಸಿರು ತರಕಾರಿ ಅಥವಾ ಹಣ್ಣುಗಳನ್ನು ಸೇವನೆ ಮಾಡುವುದರ ಜೊತೆಗೆ ಸ್ವಲ್ಪ ಸಮಯದ ವರೆಗೆ ದೈಹಿಕ ಚಟುವಟಿಕೆ ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ಇದರ ಜೊತೆಗೆ ನೀವು, ಚುರುಕಾದ ನಡಿಗೆಯ ಬಗ್ಗೆ ಕೇಳಿರಬಹುದು. ಪ್ರತಿದಿನ ಕೇವಲ 2 ಕಿಲೋಮೀಟರ್ ನಡೆದರೆ, ಅದು ದೇಹಕ್ಕೆ ದುಪ್ಪಟ್ಟು ಪ್ರಯೋಜನವನ್ನು ನೀಡುತ್ತದೆ. ಹೃದ್ರೋಗಿಗಳು ತಜ್ಞರ ಸಲಹೆಯ ಮೇರೆಗೆ ಈ ರೀತಿಯ ನಡಿಗೆಯನ್ನು ಮಾಡಬಹುದು. ಪ್ರತಿದಿನ 2 ಕಿಲೋಮೀಟರ್ ನಡೆಯುವುದರಿಂದ ದೇಹಕ್ಕೆ ಏನು ಪ್ರಯೋಜನವಿದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಚುರುಕಾದ ನಡಿಗೆ ಎಂದರೇನು? ದಿನಕ್ಕೆ 2 ಕಿ.ಮೀ ನಡಿಗೆ ಮಾಡಿದರೆ ಏನಾಗುತ್ತದೆ?
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಹೃದ್ರೋಗ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಜನರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಒತ್ತಡದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ಅದಲ್ಲದೆ ಹೆಚ್ಚು ಕರಿದ ಆಹಾರ ಸೇವನೆ ಮಾಡುವುದು, ವ್ಯಾಯಾಮ ಮಾಡದಿರುವುದು ಮತ್ತು ಧೂಮಪಾನದಂತಹ ಕೆಟ್ಟ ಅಭ್ಯಾಸಗಳನ್ನು ಮೈಗೂಡಿಸಿಕೊಂಡಿರುವುದು ಇದಕ್ಕೆಲ್ಲಾ ಕಾರಣವಾಗಿದೆ. ಇಂತಹ ಜೀವನಶೈಲಿಯಿಂದ ಹೊರಬರಲು ಹಸಿರು ತರಕಾರಿ ಅಥವಾ ಹಣ್ಣುಗಳನ್ನು ಸೇವನೆ ಮಾಡುವುದರ ಜೊತೆಗೆ ಸ್ವಲ್ಪ ಸಮಯದ ವರೆಗೆ ದೈಹಿಕ ಚಟುವಟಿಕೆ ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ಇದರ ಜೊತೆಗೆ ನೀವು, ಚುರುಕಾದ ನಡಿಗೆಯ ಬಗ್ಗೆ ಕೇಳಿರಬಹುದು. ಪ್ರತಿದಿನ ಕೇವಲ 2 ಕಿಲೋಮೀಟರ್ ನಡೆದರೆ, ಅದು ದೇಹಕ್ಕೆ ದುಪ್ಪಟ್ಟು ಪ್ರಯೋಜನವನ್ನು ನೀಡುತ್ತದೆ. ಹೃದ್ರೋಗಿಗಳು ತಜ್ಞರ ಸಲಹೆಯ ಮೇರೆಗೆ ಈ ರೀತಿಯ ನಡಿಗೆಯನ್ನು ಮಾಡಬಹುದು. ಪ್ರತಿದಿನ 2 ಕಿಲೋಮೀಟರ್ ನಡೆಯುವುದರಿಂದ ದೇಹಕ್ಕೆ ಏನು ಪ್ರಯೋಜನವಿದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಚುರುಕಾದ ನಡಿಗೆ ಎಂದರೇನು?

ಈ ರೀತಿಯ ನಡಿಗೆಯಲ್ಲಿ, ನಾವು ಸಾಮಾನ್ಯ ನಡಿಗೆಗಿಂತ ಸ್ವಲ್ಪ ವೇಗವಾಗಿ ನಡೆಯಬೇಕು. ಆದರೆ ಓಡಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ಇದರಲ್ಲಿ, ಒಬ್ಬ ವ್ಯಕ್ತಿಯು ಒಂದು ಗಂಟೆಯಲ್ಲಿ 3 ಮೈಲಿ ನಡೆಯಬೇಕು ಅಥವಾ ಪ್ರತಿ ನಿಮಿಷಕ್ಕೆ 100 ಹೆಜ್ಜೆಗಳನ್ನು ನಡೆಯಬೇಕು. ಈ ಸಮಯದಲ್ಲಿ, ನಮ್ಮ ಹೃದಯ ಬಡಿತವು ನಿಮಿಷಕ್ಕೆ 110 ರಿಂದ 120ಕ್ಕೆ ಹೋಗುತ್ತದೆ.

ಪ್ರತಿದಿನ 2 ಕಿಲೋಮೀಟರ್ ನಡೆಯುವುದರಿಂದ ದೇಹಕ್ಕೆ ಸಿಗುವ ಪ್ರಯೋಜನವೇನು?

*ಹೃದಯ ಮತ್ತು ಶ್ವಾಸಕೋಶಗಳಿಗೆ ಉತ್ತಮ ಪ್ರಯೋಜನ ಸಿಗುತ್ತದೆ

*ಪ್ರತಿದಿನ ನೀವು ಚುರುಕಾದ ನಡಿಗೆ ಮಾಡಿದರೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಹಾಗಾಗಿ ಕನಿಷ್ಠ 2 ಕಿ.ಮೀ ನಡೆಯಬೇಕು. ಆದರೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಯು ಆರೋಗ್ಯ ತಜ್ಞರ ಸಲಹೆಯ ಮೇರೆಗೆ ಮಾತ್ರ ಈ ರೀತಿಯ ವಾಕಿಂಗ್ ದಿನಚರಿಯನ್ನು ಪ್ರಾರಂಭಿಸಬೇಕು.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಈ ರೀತಿ ನಡಿಗೆ ಮಾಡುವುದರಿಂದ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದು ಸರಿಯಾದ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ವೇಗದ ನಡಿಗೆ ಮಾಡುವ ದಿನಚರಿಯನ್ನು ಅಳವಡಿಸಿಕೊಂಡರೆ ನಾವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಸೋರಿಯಾಸಿಸ್ ಸಮಸ್ಯೆಗೆ ಕಾರಣವೇನು? ಇದರಿಂದ ಮುಕ್ತಿ ಪಡೆಯುವುದು ಹೇಗೆ?

ಕೀಲುಗಳಿಗೆ ಪ್ರಯೋಜನಗಳು

ಇತ್ತೀಚಿನ ದಿನಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಹೆಚ್ಚಿದ ಯೂರಿಕ್ ಆಮ್ಲ ಅಥವಾ ಸಂಧಿವಾತ ಸೇರಿದಂತೆ ಇತರ ಸಮಸ್ಯೆಗಳಿಂದಾಗಿರಬಹುದು. ಹಾಗಾಗಿ ಇದರಿಂದ ಪರಿಹಾರ ಪಡೆಯಲು, ಒಬ್ಬ ವ್ಯಕ್ತಿ ಪ್ರತಿದಿನ ಚುರುಕಾದ ನಡಿಗೆಯನ್ನು ಪ್ರಾರಂಭಿಸುವುದು ಒಳ್ಳೆಯದು.

ತೂಕ ನಿಯಂತ್ರಿಸುತ್ತದೆ

ನೀವು ವಾರಕ್ಕೆ 5 ಬಾರಿ 30 ನಿಮಿಷಗಳ ಚುರುಕಾದ ವಾಕಿಂಗ್ ಮಾಡಿದರೆ, ಅದು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಈ ರೀತಿ ವಾಕಿಂಗ್ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ಹಾಗಾಗಿ ನೀವು ತೂಕ ನಿಯಂತ್ರಣ ಮಾಡಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ;

ನಡೆಯಲು ಪ್ರಾರಂಭಿಸುವ ಮೊದಲು ನೀವು ಧರಿಸಿರುವ ಪಾದರಕ್ಷೆಗಳು ಆರಾಮವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಿ. ಏಕೆಂದರೆ ಯಾವುದಾದರೂ ಶೂ ಧರಿಸುವುದು ಪ್ರಯೋಜನಕಾರಿಗಿಂತ ಹಾನಿಕಾರಕವಾಗಿದೆ. ಇದರಲ್ಲಿ ಪಾದರಕ್ಷೆಗಳ ಆಯ್ಕೆ ಬಹಳ ಮುಖ್ಯವಾಗಿದೆ. ಇಲ್ಲವಾದಲ್ಲಿ ಇದು ದಿನವಿಡೀ ಆಯಾಸ ಅಥವಾ ಕಾಲು ನೋವಿಗೆ ಕಾರಣವಾಗಬಹುದು.

ಇತ್ತೀಚಿನ ವರ್ಷಗಳಲ್ಲಿ ಗಾಳಿಯಲ್ಲಿ ಮಾಲಿನ್ಯ ಹೆಚ್ಚಾಗಿದೆ, ಆದ್ದರಿಂದ ಉಸಿರಾಟದ ಸಮಸ್ಯೆಗಳನ್ನು ತಪ್ಪಿಸಲು ಸುರಕ್ಷತಾ ಕಾಳಜಿ ವಹಿಸುವುದು ಅವಶ್ಯಕ. ನೀವು ಹೊರಗೆ ಹೋದರೆ, ಮಾಸ್ಕ್ ಧರಿಸಲು ಮರೆಯಬೇಡಿ. ಇದಲ್ಲದೆ ಹೃದಯ ಸಂಬಂಧಿತ ಸಮಸ್ಯೆಗಳನ್ನು ಇದು ಇನ್ನಷ್ಟು ಹದಗೆಡಿಸಬಹುದು. ಅದಲ್ಲದೆ ಕೆಲವರು ಹೆಚ್ಚು ಪ್ರಯೋಜನಗಳನ್ನು ಪಡೆಯಲು ನಡೆಯುವಾಗ ದೇಹದ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕುತ್ತಾರೆ. ಆದರೆ ಅದು ತಪ್ಪು. ದೇಹಕ್ಕೆ ವಿಶ್ರಾಂತಿ ಅಗತ್ಯವಿರುವಾಗ ಅದಕ್ಕೆ ಮತ್ತಷ್ಟು ಆಯಾಸ ನೀಡಬೇಡಿ.

ಸೂಚನೆ: ಆರೋಗ್ಯಕ್ಕೆ ಸಂಬಂಧಿಸಿದ ಯಾವುದಾದರೂ ವಿಷಯಗಳನ್ನು ಅನುಸರಿಸುವ ಮೊದಲು, ನಿಮ್ಮ ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ