ಸುಂದರವಾಗಿ ಕಾಣಬೇಕೆಂಬ ಹಂಬಲ ಎಲ್ಲರಲ್ಲಿರುವುದು ಸಾಮಾನ್ಯ ಆದರೆ ಹೆಣ್ಣುಮಕ್ಕಳದಲ್ಲಿ ತುಸು ಹೆಚ್ಚೇ ಇರುತ್ತೆ, ಅದಕ್ಕೆ ಆರಿಸಿಕೊಳ್ಳುವ ದಾರಿ ಉತ್ತಮವಾಗಿರಬೇಕಷ್ಟೆ. ಫ್ಯಾಟ್ ರಿಮೂವಲ್ ಸರ್ಜರಿ( Fat Removal Surgery) ಎಂಬುದು ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಹಾಗಾದರೆ ಈ ಫ್ಯಾಟ್ ರಿಮೂವಲ್ ಸರ್ಜರಿ ಎಂದರೇನು?, ಅದರ ವಿಧಗಳಾವುವು, ಅದರಿಂದಾಗುವ ಅಪಾಯವೇನು, ಮುನ್ನೆಚ್ಚರಿಕಾ ಕ್ರಮಗಳೇನು? ಎಂಬುದರ ಬಗ್ಗೆ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ. ಗಿರೀಶ್ ಎ.ಸಿ ನೀಡಿರುವ ಮಾಹಿತಿ ಇಲ್ಲಿದೆ.
ಫ್ಯಾಟ್ ರಿಮೂವಲ್ ಸರ್ಜರಿ ಎಂದರೇನು?
ಹೊಟ್ಟೆ, ಬೆನ್ನು, ತೊಡೆ, ತೋಳಿನ ಭಾಗ, ಮುಖ, ಕುತ್ತಿಗೆ ಭಾಗ ಹೀಗೆ ದೇಹದ ಯಾವುದೇ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗಿದ್ದಾಗ ಹೆಚ್ಚಿನ ಕೊಬ್ಬಿನಾಂಶವನ್ನು ತೆಗೆದು ಸಹಜ ಕೊಬ್ಬನ್ನು ಉಳಿಸುವಂತಹ ಪ್ರಕ್ರಿಯೆಯೆ ಫ್ಯಾಟ್ ರಿಮೂವಲ್ ಸರ್ಜರಿ ಅಥವಾ ಲೈಪೊಸೆಕ್ಷನ್ ಎಂದು ಹೇಳಲಾಗುತ್ತದೆ.
ಲೈಪೊಸೆಕ್ಷನ್(Liposuction) ಸರ್ಜರಿ ಎಂಬುದು ಸುರಕ್ಷಿತ ಸರ್ಜರಿಯಾಗಿದ್ದು, ವಿಶ್ವಾದ್ಯಂತ ಯಾವುದೇ ಪ್ಲಾಸ್ಟಿಕ್ ಸರ್ಜನ್ ಮಾಡಬಹುದಂತಹ ಶಸ್ತ್ರ ಚಿಕಿತ್ಸೆ ಇದಾಗಿದೆ. ಇತಿಹಾಸವನ್ನು ನೋಡಿದಾಗ 1980ಯಿಂದ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತಂತ್ರಜ್ಞಾನ, ತಂತ್ರಾಂಶದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿವೆ.
ಮೊದಲು ನಾವು ಸ್ಟಾಂಡರ್ಡ್ ಲೈಪೊಸೆಕ್ಷನ್ ಎಂದು ಮಾಡುತ್ತಿದ್ದೆವು ಆದರೆ 2000 ಇಸವಿಯಲ್ಲಿ ಪವರ್ ಅಸಿಸ್ಟೆಡ್ ಲೈಪೊಸೆಕ್ಷನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಯಿತು. ಅದಾದ ಬಳಿಕ ವೇಸರ್ ಅಥವಾ ಅಲ್ಟ್ರಾಸೋನಿಕ್ ಲೈಪೊಸೆಕ್ಷನ್ ಎಂಬುದು ಕೂಡ ಬಂದಿದ್ದು, ತಂತ್ರಾಂಶ ಕೂಡ ಅಡ್ವಾನ್ಸ್ಡ್ ಆಗಿದೆ. ಈ ಸೇಫ್ಟಿ ಪೀಚರ್ಸ್ ಕೂಡ ಅಡ್ವಾನ್ಸ್ ಆಗಿದೆ. ಎಷ್ಟರ ಮಟ್ಟಿಗೆ ಇದ್ದರೂ ಕೂಡ ಲೈಪೊಸೆಕ್ಸನ್ ಮೂಲಕ ರಿಮೂವ್
ಮಾಡಬಹುದಾಗಿದೆ ಎಂದು ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ. ಗಿರೀಶ್ ಎಸಿ ಹೇಳಿದ್ದಾರೆ.ಯಾವ ಭಾಗದಲ್ಲಿ ಕೊಬ್ಬು ಹೆಚ್ಚು ಶೇಖರಣೆಯಾಗಿರುತ್ತದೋ ಅದನ್ನು ಕಡಿಮೆ ಮಾಡಿ, ದೇಹಕ್ಕೆ ಅನುಗುಣವಾಗಿ ಶೇಪ್ ಕೊಡಲಾಗುತ್ತದೆ.
ಫ್ಯಾಟ್ ರಿಮೂವಲ್ ಸರ್ಜರಿ ಯಾರಿಗೆ ಸೂಕ್ತ
ನಾವು ಬಾಡಿ ಮಾಸ್ ಇಂಡೆಕ್ಸ್ ರೆಫರೆನ್ಸ್ ಆಗಿ ತೆಗೆದುಕೊಂಡು ಬಾಡಿ ಮಾಸ್ ಇಂಡೆಕ್ಸ್ 35ಕ್ಕಿಂತಲೂ ಕಡಿಮೆ ಇರುತ್ತದೆಯೋ, ಯಾರಿಗೆ ಹೆಚ್ಚು ರಕ್ತದೊತ್ತಡ, ಹೆಚ್ಚು ಮಧುಮೇಹ ಇರುವವರಿಗೆ ಬೆರಿಯಾಟ್ರಿಕ್ ಸರ್ಜರಿ ಎಂಬುದು ಸೂಕ್ತವಾಗಿರುತ್ತದೆ. ಬೆರಿಯಾಟ್ರಿಕ್(Bariatric) ಸರ್ಜರಿಯಲ್ಲಿ ಫ್ಯಾಟ್ ರಿಮೂವ್ ಮಾಡುವುದಿಲ್ಲ ಹೊಟ್ಟೆಯ ಭಾಗವನ್ನು ಕಿರಿದಾಗಿ ಮಾಡುತ್ತಾರೆ. ಅಥವಾ ಹೊಟ್ಟೆಯನ್ನು ಕರುಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಬೈಪಾಸ್ ಮಾಡುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ಮೆಟಾಬಾಲಿಕ್ ಸರ್ಜರಿ, ಅಥವಾ ವೇಟ್ ಲಾಸ್ ಸರ್ಜರಿ ಎಂದು ಕೂಡ ಹೇಳುತ್ತೇವೆ.
ಯಾವ್ಯಾವ ಸರ್ಜರಿಗಳಿವೆ
ಫ್ಯಾಟ್ ರಿಮೂವ್ ಮಾಡುವುದು ಲೈಪೋಸೆಕ್ಷನ್ , ವೇಟ್ ಲಾಸ್ ವೇಟ್ ಬೆರಿಯಾಟ್ರಿಕ್ ಸರ್ಜರಿ. ಲೈಪೊಸೆಕ್ಷನ್ ಕೊಬ್ಬು, ಅದನ್ನು ತೆಗೆದು ಹಾಕುವುದು, ಅವರಿಗೆ ಅನುಕೂಲಕ್ಕೆ ತಕ್ಕ ಹಾಗೆ ಸಾಮಾನ್ಯ ಫಾಟ್ ಬಿಟ್ಟು ಉತ್ತಮ ಶೇಪ್ ಕೊಡುವ ಉದ್ದೇಶವಿರುತ್ತದೆ.
ಯಾವ ಆಧಾರದ ಮೇಲೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ? ಮುನ್ನೆಚ್ಚರಿಕಾ ಕ್ರಮಗಳೇನು?
ಸಾಮಾನ್ಯ ಲೈಪೊಸೆಕ್ಷನ್ ಸರ್ಜರಿಯನ್ನು ಬಾಡಿ ಮಾಸ್ ಇಂಡೆಕ್ಸ್ ಅಂದರೆ ಅವರ ತೂಕ ಮತ್ತು ಎತ್ತರ ಎರಡರ ಫಾರ್ಮುಲಾ ದಲ್ಲಿ ಕ್ಯಾಲ್ಕ್ಯುಲೇಷನ್ ಮಾಡಿ ನೋಡಲಾಗುತ್ತದೆ. ದೇಹದ ಯಾವುದೇ ಒಂದು ಭಾಗದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚಿನ ಕೊಬ್ಬಿನಾಂಶ ಸಂಗ್ರಹವಾಗಿದ್ದರೆ ಒಂದೇ ಸಮಯದಲ್ಲಿ ಸರ್ಜರಿ ಮಾಡಬಹುದೇ ಅಥವಾ ಹಂತ ಹಂತವಾಗಿ ಸರ್ಜರಿ ಮಾಡಬಹುದೇ ಎಂಬುದನ್ನು ರೋಗಿಗಳು ಹಾಗೂ ಇತರೆ ತಜ್ಞರ ಬಳಿ ಮಾತನಾಡಿ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸರ್ಜರಿಗೂ ಮುನ್ನ ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿ, ಅದರ ವರದಿ ಆಧಾರದ ಮೇಲೆ ಮುಂದುವರೆಯಿರಿ. ನಾಲ್ಕೈದು ತಜ್ಱರ ಅಭಿಪ್ರಾಯವನ್ನು ಕೇಳಿ, ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ.
ಸರ್ಜರಿಗೂ ಮುನ್ನ ಮಾಡುವ ಪರೀಕ್ಷೆಗಳಾವುವು?
ಬೇಸಿಕ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹಿಮೋಗ್ರಾಮ್, ಥೈರಾಯ್ಡ್, ಮಧುಮೇಹ, ಲಿವರ್ ಫಂಕ್ಷನ್ ಟೆಸ್ಟ್ ಹೀಗೆ ಸಾಮಾನ್ಯವಾಗಿ ಎಲ್ಲಾ ಪರೀಕ್ಷೆಯನ್ನು ಮಾಡಿಸಲಾಗುತ್ತದೆ. ಕೆಲವರಿಗೆ ರಿಪೋರ್ಟ್ ನಾರ್ಮಲ್ ಬಂದರೆ ಇನ್ನೂ ಕೆಲಸವರಲ್ಲಿ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಗೋಚರಿಸುತ್ತವೆ. ಹಾಗಿದ್ದಾಗ ಅಂತವರಿಗೆ ಹೆಚ್ಚಿನ ಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಫಿಸಿಶಿಯನ್ಮ ಕಾರ್ಡಿಯಾಲಾಜಿಸ್ಟ್, ಗೈನಕಾಲಜಿಸ್ಟ್ ಹೀಗೆ ಆ ಸಮಸ್ಯೆಗೆ ತಕ್ಕಂತೆ ತಜ್ಞರ ಸಲಹೆ ಪಡೆದು ದೇಹ ಸ್ಟೇಬಲ್ ಆದ ಮೇಲಷ್ಟೇ ಸರ್ಜರಿ ಮಾಡಲಾಗುತ್ತದೆ.
ವೈದ್ಯರು ಹಾಗೂ ರೋಗಿಗಳ ನಡುವೆ ಸಂಬಂಧ ಹೇಗಿರುತ್ತೆ?
ಯಾವುದೇ ಸರ್ಜರಿಯಲ್ಲಾದರೂ ಸಾಮಾನ್ಯ ಅಡ್ಡಪರಿಣಾಮಗಳು ಇದ್ದೇ ಇರುತ್ತದೆ. ಆ ಮಾಹಿತಿಗಳ ಬಗ್ಗೆ ವೈದ್ಯರು ರೋಗಿಗಳ ಬಳಿ ಕುಳಿತು ಎಲ್ಲವನ್ನೂ ವಿವರಿಸುತ್ತಾರೆ. ಅಂತಿಮವಾಗಿ ಸರ್ಜರಿ ಮಾಡಿಸಬೇಕೋ ಬೇಡವೋ ಎಂಬ ತೀರ್ಮಾನವನ್ನು ರೋಗಿಗಳಿಗೆ ಬಿಡಲಾಗುತ್ತದೆ. ಯಾವುದೇ ಸಂದೇಹಗಳಿದ್ದರೂ ಬೇರೆ ವೈದ್ಯರ ಸಲಹೆಗಳನ್ನು ಪಡೆಯಲು ಸಮಯವನ್ನು ನೀಡಲಾಗುತ್ತದೆ. ತಕ್ಷಣವೇ ಎಲ್ಲಿಯೂ ಸರ್ಜರಿಯನ್ನು ಮಾಡಲಾಗುವುದಿಲ್ಲ.
ವೈದ್ಯರ ಮೂಲ ಉದ್ದೇಶವೇನು?
ಯಾವುದೇ ಸರ್ಜನ್ ಆಗಿರಲಿ ಮೊದಲು ಶಸ್ತ್ರಚಿಕಿತ್ಸೆ ಯಾವುದೇ ತೊಂದರೆಯಾಗದೆ ನಡೆಯಬೇಕು ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ನಿರೀಕ್ಷೆಗೂ ಮೀರಿ ಕೆಲವು ಅಡ್ಡಪರಿಣಾಮಗಳಾಗುತ್ತವೆ. ಶೇ.100 ರಲ್ಲಿ ಶೇ.1ರಷ್ಟು ಪ್ರಕರಣಗಳಲ್ಲಿ ಈ ರೀತಿಯ ಅಡ್ಡಪರಿಣಾಮಗಳುಂಟಾಗುತ್ತವೆ.
ಮೆಡಿಸಿನ್ ಈಸ್ ಆಲ್ವೇಸ್ ಮಿಸ್ಟರಿ
ಮೆಡಿಸಿನ್ ಈಸ್ ಆಲ್ವೇಸ್ ಮಿಸ್ಟರಿ ಎನ್ನುವ ಹಾಗೆ ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕದ್ದಾಗಿವೆ, ಸಾಮಾನ್ಯವಾಗಿ ಎಲ್ಲಾ ಮಾತ್ರೆಗಳು, ಔಷಧಿಗಳು, ಕಾರ್ಡಿಯೋ, ಪೀಡಿಯಾಟ್ರಿಕ್, ಆರ್ಥ್ರೋಪಿಡಿಕ್, ಗೈನಾಕಾಲಜಿ, ಇಂಜೆಕ್ಷನ್, ಸರ್ಜರಿ ಹೀಗೆ ಎಲ್ಲದರಲ್ಲೂ ಅಡ್ಡ ಪರಿಣಾಮಗಳಿವೆ ಹಾಗೆಂದ ಮಾತ್ರಕ್ಕೆ ಅವುಗಳ ಬಳಕೆ ಬಿಟ್ಟುಬಿಡುತ್ತೇವೆಯೇ, ಅವರ ದೇಹದ ಅವಶ್ಯಕತೆಗೆ ಅನುಗುಣವಾಗಿ ಸಂದರ್ಭಕ್ಕೆ ತಕ್ಕಂತೆ ಅದನ್ನು ಬಳಕೆ ಮಾಡಲೇಬೇಕಿದೆ.
ವೈದ್ಯರನ್ನೇ ದೂಷಿಸುವುದು ಸರಿಯಲ್ಲ ಎಂದು ಡಾ. ಗಿರೀಶ್ ಹೇಳುತ್ತಾರೆ.
ಪ್ರಸ್ತುತ, ನಟಿ ಚೇತನಾ ಅವರ ಸಾವಿನ ಘಟನೆಯನ್ನೇ ತೆಗೆದುಕೊಳ್ಳುವುದಾದರೆ, ವೈದ್ಯರನ್ನು ದೂಷಿಸುವುದು ಸರಿಯಲ್ಲ, ಘಟನೆ ಗಮನಿಸಿದಾಗ ಆ ಸರ್ಜನ್ ಇಲ್ಲಿಯವರೆಗೆ 2ರಿಂದ 3 ಸಾವಿರ ಸರ್ಜರಿಯನ್ನು ಮಾಡಿರಬಹುದು, ಅದರಲ್ಲಿ ಯಶಸ್ವಿ ಕೂಡ ಆಗಿರುತ್ತಾರೆ. ಆದರೆ ಯಾರೂ ತಿಳಿಯದ ಸತ್ಯಗಳು ವೈದ್ಯಕೀಯ ಕ್ಷೇತ್ರದಲ್ಲಿವೆ. ಹೀಗಾದಾಗ ಕಾರಣ ಏನೆಂಬುದನ್ನು ಗಮನಿಸಿದರೆ ವೈದ್ಯರಿಗೆ ಇನ್ನೂ ತಿಳಿಯದ ಸಾಕಷ್ಟು ವಿಷಯಗಳು ಬೆಳಕಿಗೆ ಬರುತ್ತವೆ ಎಂದು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Wed, 18 May 22