Listeria Infection: ಅಮೆರಿಕದಲ್ಲಿ ಲಿಸ್ಟೇರಿಯಾ ಎಂಬ ಸೋಂಕು ಪತ್ತೆ, ಇದು ಮಾರಣಾಂತಿಕವೇ? ಯಾರಿಗೆ ಹೆಚ್ಚು ಅಪಾಯ?

| Updated By: ನಯನಾ ರಾಜೀವ್

Updated on: Nov 10, 2022 | 1:06 PM

ಅಮೆರಿಕದಲ್ಲಿ ಕೊರೊನಾವೈರಸ್, ಮಂಕಿಪಾಕ್ಸ್​ನಂತಹ ಸಾಂಕ್ರಾಮಿಕ ರೋಗಗಳ ಬಿಸಿ ಇನ್ನೂ ತಣ್ಣಗಾಗಿಲ್ಲ. ಇದೀಗ ಹೊಸ ಸೋಂಕು ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ.

Listeria Infection: ಅಮೆರಿಕದಲ್ಲಿ ಲಿಸ್ಟೇರಿಯಾ ಎಂಬ ಸೋಂಕು ಪತ್ತೆ, ಇದು ಮಾರಣಾಂತಿಕವೇ? ಯಾರಿಗೆ ಹೆಚ್ಚು ಅಪಾಯ?
Listeria Infection
Image Credit source: Moneycontrol.com
Follow us on

ಅಮೆರಿಕದಲ್ಲಿ ಕೊರೊನಾವೈರಸ್, ಮಂಕಿಪಾಕ್ಸ್​ನಂತಹ ಸಾಂಕ್ರಾಮಿಕ ರೋಗಗಳ ಬಿಸಿ ಇನ್ನೂ ತಣ್ಣಗಾಗಿಲ್ಲ. ಇದೀಗ ಹೊಸ ಸೋಂಕು ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ. ಲಿಸ್ಟೇರಿಯಾ ಎನ್ನುವ ಹೊಸ ಸೋಂಕು ಅಮೆರಿಕದಲ್ಲಿ ಹಲವು ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದೆ. ಕಲುಷಿತಗೊಂಡಿರುವ ಮಾಂಸದಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಆಹಾರದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ, ಇದರಿಂದಾಗಿ ಈ ಸೋಂಕು ಹರಡುತ್ತದೆ. ಜ್ವರ, ಅತಿಸಾರ, ಸ್ನಾಯು ಸೆಳೆತ ಉಂಟಾಗುತ್ತದೆ. 65ವಷ್ಕ್ಕಿಂತ ಮೇಲ್ಪಟ್ಟವರು ಮತ್ತು ಗರ್ಭಿಣಿಯರು ಈ ಸೋಂಕಿನ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತಾರೆ. ಇದಲ್ಲದೆ, ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರಿಗೆ ಕೂಡ ಸೋಂಕಿನ ಅಪಾಯ ಹೆಚ್ಚಿರುತ್ತದೆ.

ಅಮೆರಿಕದಲ್ಲಿ ಒಟ್ಟು 16 ಪ್ರಕರಣಗಳು ವರದಿಯಾಗಿವೆ
ಸೆಂಟರ್ಸ್​ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಪ್ರಕಾರ, ನ್ಯೂಯಾರ್ಕ್​, ಮೇರಿಲ್ಯಾಂಡ್, ನ್ಯೂಜೆರ್ಸಿ, ಇಲಿನಾಯ್ಸ್​, ಕ್ಯಾಲಿಫೋರ್ನಿಯಾ ಮತ್ತು ಮ್ಯಾಸಚೂಸೆಟ್ಸ್​ಗಳಲ್ಲಿ ನವೆಂಬರ್ 9ರ ಹೊತ್ತಿಗೆ 16 ಪ್ರಕರಣಗಳು ವರದಿಯಾಗಿದ್ದವು.

ಗರ್ಭಿಣಿಯರು ಸೇರಿದಂತೆ ಮಹಿಳೆಗೆ ಸೋಂಕು ತಗುಲಿದ ಬಳಿಕ ಆಕೆಯ ಮಗು ಸಾವನ್ನಪ್ಪಿದೆ. ಅದೇ ಸಮಯದಲ್ಲಿ ಈ ಸೋಂಕಿನಿಂದ ಇನ್ನೊಬ್ಬ ರೋಗಿಯೂ ಸಾವನ್ನಪ್ಪಿದ್ದಾರೆ. ಒಟ್ಟು 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಸೋಂಕಿತ ರೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಮಾಂಸ ಮತ್ತು ಚೀಸ್ ತಿನ್ನಬೇಡಿ
ಹೆಚ್ಚಿನ ರೋಗಿಗಳು ಚೀಸ್ ಅಥವಾ ಮಾಂಸವನ್ನು ಹೆಚ್ಚಾಗಿ ಸೇವಿಸಿದ್ದಾರೆ. ನ್ಯೂಯಾರ್ಕ್​ನಲ್ಲಿ 7 ರೋಗಿಗಳಲ್ಲಿ 5 ಮಂದಿ ಅಂತಾರಾಷ್ಟ್ರೀಯ ಆಹಾರವನ್ನು ಮಾರಾಟ ಮಾಡುವ ಸ್ಥಳಗಳಿಂದ ಆಹಾರವನ್ನು ಖರೀದಿಸಿದ್ದಾರೆ. ಹಾಗಾಗಿ ಮಾಂಸ ಹಾಗೂ ಚೀಸ್​ ಅನ್ನು ಯಾರೂ ಕೂಡ ತಿನ್ನಬೇಡಿ ಎಂದು ಸಲಹೆ ನೀಡಲಾಗಿದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ