Polluted Water: ಕಲುಷಿತ ನೀರು ಎಂದರೇನು? ಅದರಲ್ಲಿರುವ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ

| Updated By: ನಯನಾ ರಾಜೀವ್

Updated on: Dec 01, 2022 | 9:42 AM

ಸಾಮಾನ್ಯವಾಗಿ ನಿಮ್ಮ ದೈನಂದಿನ ಬದುಕಿನಲ್ಲಿ, ಉತ್ತಮ ನೀರು, ಕಲುಷಿತ ನೀರಿನ ಬಗ್ಗೆ ಕೇಳಿರುತ್ತೀರಿ. ಹಾಗಾದರೆ ಕಲುಷಿತ ನೀರು ಎಂದರೇನು? ಅದರಲ್ಲಿರುವ ಅಂಶಗಳು ಯಾವುವು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ?

Polluted Water: ಕಲುಷಿತ ನೀರು ಎಂದರೇನು? ಅದರಲ್ಲಿರುವ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ
Polluted Water
Follow us on

ಸಾಮಾನ್ಯವಾಗಿ ನಿಮ್ಮ ದೈನಂದಿನ ಬದುಕಿನಲ್ಲಿ, ಉತ್ತಮ ನೀರು, ಕಲುಷಿತ ನೀರಿನ ಬಗ್ಗೆ ಕೇಳಿರುತ್ತೀರಿ. ಹಾಗಾದರೆ ಕಲುಷಿತ ನೀರು ಎಂದರೇನು? ಅದರಲ್ಲಿರುವ ಅಂಶಗಳು ಯಾವುವು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ?

ಸಾಮಾನ್ಯವಾಗಿ ನೀರು ಎರಡು ರೀತಿಯಿಂದ ಕಲುಷಿತಗೊಳ್ಳುತ್ತದೆ
1.ಕರಗಿದಂತಹ ಒಟ್ಟು ಘನ ವಸ್ತುಗಳಿಂದ TDS

2.ನೀರು ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಕಲುಷಿತಗೂಳ್ಳುತ್ತದೆ.

TDS (ಒಟ್ಟು ಕರಗಿದ ಘನವಸ್ತುಗಳು) ಎಂದರೇನು?
TDS ಎಂದರೆ ಒಟ್ಟು ಕರಗಿದ ಘನವಸ್ತುಗಳು. ಖನಿಜಗಳು, ಲವಣಗಳು ಅಥವಾ ಕರಗಿದ ಲೋಹಗಳಾದ ಕ್ಯಾಲ್ಸಿಯಂ, ಕ್ಲೋರೈಡ್, ನೈಟ್ರೇಟ್, ಕಬ್ಬಿಣ, ಸಲ್ಫರ್ ಮತ್ತು ನೀರಿನಲ್ಲಿ ಕರಗುವ ಕೆಲವು ಸಾವಯವ ಪದಾರ್ಥಗಳನ್ನು ಸಾಮಾನ್ಯವಾಗಿ TDS ಎಂದು ಕರೆಯಲಾಗುತ್ತದೆ.

ನೀರಿನಲ್ಲಿ ಟಿಡಿಎಸ್ ಇರುವುದು ನೀರಿನ ರುಚಿಯ ಮೇಲೆ ಪರಿಣಾಮ ಬೀರುತ್ತದೆ. 500 mg/l ಗಿಂತ ಹೆಚ್ಚಿನ TDS ಇರುವ ನೀರು ಬಳಕೆ ಸೂಕ್ತ ಅಲ್ಲ. TDS ಅನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ಬಳಸುವ ಶುದ್ಧೀಕರಣ ವ್ಯವಸ್ಥೆಯು ರಿವರ್ಸ್ ಆಸ್ಮೋಸಿಸ್ (RO) ವಾಟರ್ ಪ್ಯೂರಿಫೈಯರ್ ಆಗಿದೆ.

ಕುಡಿಯುವ ನೀರಿನಲ್ಲಿ ಸುರಕ್ಷಿತ ಟಿಡಿಎಸ್ ಮಟ್ಟ ಹೇಗಿರಬೇಕು?
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಗದಿಪಡಿಸಿದ ಕುಡಿಯುವ ನೀರಿನಲ್ಲಿ TDS ಮಟ್ಟದ ಮೇಲಿನ ಮಿತಿಯು 500 ppm (ಪ್ರತಿ ಲೀಟರ್‌ಗೆ 500 ಮಿಲಿಗ್ರಾಂ) ಆಗಿದೆ.

ಅತ್ಯಂತ ಕಡಿಮೆ ಟಿಡಿಎಸ್ ಸಹ ಸ್ವೀಕಾರಾರ್ಹವಲ್ಲದ ಕಾರಣ ಅದು ನೀರಿನ ರುಚಿಯ ಮೇಲೆ ನೇರ ಪರಿಣಾಮ ಬೀರುತ್ತದೆ. 150-300 ppm ನಡುವಿನ ಟಿಡಿಎಸ್ ಮೌಲ್ಯವನ್ನು ಹೊಂದಿರುವ ನೀರನ್ನು ಮೃದುವಾದ ನೀರು( soft water)ಎಂದು ಪರಿಗಣಿಸಲಾಗುತ್ತದೆ, ಆದರೆ 500 ppm ಗಿಂತ ಹೆಚ್ಚಿನ TDS ಮೌಲ್ಯವನ್ನು ಹೊಂದಿರುವ ನೀರನ್ನು ಗಡಸು ನೀರು( hard water)ಎಂದು ಪರಿಗಣಿಸಲಾಗುತ್ತದೆ.

-300 mg/ಲೀಟರ್‌ಗಿಂತ ಕಡಿಮೆ- ಅತ್ಯುತ್ತಮ

-300-500 – ಒಳ್ಳೆಯದು

-500-900- ಸರಾಸರಿ

-900-1200- ಕಳಪೆ

-1200 ಕ್ಕಿಂತ ಹೆಚ್ಚು – ಸ್ವೀಕಾರಾರ್ಹವಲ್ಲ

ಟಿಡಿಎಸ್ ಮತ್ತು ಅದರ ಪರಿಣಾಮ
ಹಲವು ಕಡೆಯ ನೀರು ಪಾತ್ರೆಗಳ ಒಳಭಾಗದಲ್ಲಿ, ಪ್ಲಾಸ್ಟಿಕ್ ಬಕೆಟ್ ನ ಒಳಭಾಗದಲ್ಲಿ ಒಂದು ರೀತಿಯ ಬಿಳಿ ಪದರವನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಗಡಸು ನೀರು ಅಥವಾ ಟಿಡಿಎಸ್ ಹೆಚ್ಚು ಇರುವ ನೀರು ಎಂದರ್ಥ.

ಹೆಚ್ಚಿನ ಟಿಡಿಎಸ್ ನೀರಿನ ರುಚಿ (ಉಪ್ಪು) ಮತ್ತು ನೀರಿನ ಪೈಪ್‌ಗಳು, ವಾಟರ್ ಹೀಟರ್‌ಗಳು ಮತ್ತು ಗೃಹೋಪಯೋಗಿ ಉಪಕರಣಗಳಾದ ಕೆಟಲ್‌ಗಳು ಗಳಲ್ಲಿ ಅತಿಯಾದ ಸ್ಕೇಲಿಂಗ್ ಪರಿಣಾಮ ಬೀರುತ್ತದೆ.

ಅಂತಹ ಸ್ಕೇಲಿಂಗ್ ಈ ಉಪಕರಣಗಳ ಬಾಳಿಕೆ ಅವಧಿ ಕಡಿಮೆ ಮಾಡುತ್ತದೆ. ಟಿಡಿಎಸ್‌ನ ಅತ್ಯಂತ ಕಡಿಮೆ ಸಾಂದ್ರತೆಯಿರುವ ನೀರು ಅದರ ಅಸ್ಪಷ್ಟ ರುಚಿಯಿಂದಾಗಿ ಸ್ವೀಕಾರಾರ್ಹವಲ್ಲ.

2 ಈ ರೀತಿಯಲ್ಲಿ ಕಲುಷಿತಗೊಂಡ ನೀರು ಅದರಲ್ಲಿ ಇರುವ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ರೋಗ ರುಜಿನಗಳಿಗೆ ಕಾರಣವಾಗುತ್ತದೆ.

ಮಾಹಿತಿ: ಡಾ. ರವಿಕಿರಣ ಪಟವರ್ಧನ, ಶಿರಸಿ, ಆಯುರ್ವೇದ ವೈದ್ಯರು

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ