Hyponatremia: ಹೆಚ್ಚು ನೀರು ಕುಡಿಯುವುದರಿಂದ ಉಂಟಾಗುವ ಈ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು?
ನೀರು(Water) ಕುಡಿಯುವುದರಿಂದ ದೇಹವನ್ನು ಆರೋಗ್ಯಕರವಾಗಿ ಹಾಗೂ ನಿರ್ವಿಷಗೊಳಿಸಲು ಸಾಧ್ಯವಾಗುತ್ತದೆ ಎಂಬುದು ತಿಳಿದಿದೆ. ಹೆಚ್ಚು ನೀರು ಕುಡಿದರೆ ಸಾಯಬಹುದು ಎಂದು ನಿಮಗೆ ತಿಳಿದಿದೆಯೇ?
ನೀರು(Water) ಕುಡಿಯುವುದರಿಂದ ದೇಹವನ್ನು ಆರೋಗ್ಯಕರವಾಗಿ ಹಾಗೂ ನಿರ್ವಿಷಗೊಳಿಸಲು ಸಾಧ್ಯವಾಗುತ್ತದೆ ಎಂಬುದು ತಿಳಿದಿದೆ. ಹೆಚ್ಚು ನೀರು ಕುಡಿದರೆ ಸಾಯಬಹುದು ಎಂದು ನಿಮಗೆ ತಿಳಿದಿದೆಯೇ? ಬ್ರೂಸ್ಲಿ ಎಲ್ಲರಿಗೂ ಗೊತ್ತಿರುವ ವ್ಯಕ್ತಿತ್ವ, ಅವರು ತಮ್ಮ 32ನೇ ವಯಸ್ಸಿಗೆ 20 ಜುಲೈ 1973 ರಂದು ನಿಧನರಾದರು, ಅವರು ಮೃತಪಟ್ಟು 49 ವರ್ಷಗಳ ಬಳಿಕ ಇದೀಗ ಅವರ ಸಾವಿಗೆ ಕಾರಣವನ್ನು ಕಂಡುಹಿಡಿಯಲಾಗಿದೆ.
ಆದರೆ ಕೇವಲ 32 ನೇ ವಯಸ್ಸಿನಲ್ಲಿ ಅವರು ವಿಜ್ಞಾನಿಗಳು ಅವರ ಸಾವಿಗೆ ಹೆಚ್ಚು ನೀರು ಕುಡಿಯುವುದೇ ಕಾರಣ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೈಪೋನೆಟ್ರೀಮಿಯಾ ಎಂದು ಕರೆಯಲಾಗುತ್ತದೆ.
ಇಲ್ಲಿಯವರೆಗೆ, ಬ್ರೂಸ್ ಲೀ ಅವರ ಸಾವಿಗೆ ಹೆಚ್ಚು ನೋವು ನಿವಾರಕಗಳನ್ನು ತೆಗೆದುಕೊಂಡ ಕಾರಣ ಸೆರೆಬ್ರಲ್ ಎಡಿಮಾ (ಮೆದುಳಿನ ಊತ) ಆಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ಬಹಿರಂಗಗೊಂಡ ಅಧ್ಯಯನದಲ್ಲಿ, ಅವರ ಸಾವಿಗೆ ಕಾರಣ ಸಂಪೂರ್ಣವಾಗಿ ಭಿನ್ನವಾಗಿದೆ. ತಮ್ಮ ಅಧ್ಯಯನವೊಂದರಲ್ಲಿ ಸಂಶೋಧಕರ ಗುಂಪು ಬ್ರೂಸ್ ಲೀ ಅವರ ಸಾವಿಗೆ ಹೈಪೋನೆಟ್ರೀಮಿಯಾ ಕಾರಣವಾಗಿದೆ. ಇದು ಹೆಚ್ಚು ನೀರು ಕುಡಿಯುವುದರಿಂದ ಉಂಟಾಗುವ ಸ್ಥಿತಿ ಎಂದು ಹೇಳಲಾಗಿದೆ.
ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕೆಲವರು ಹೇಳಿದ್ದರೆ, ಅವರ ಗೆಳತಿ ವಿಷ ನೀಡಿದ್ದಳು ಎಂದೂ ಹೇಳಲಾಗಿತ್ತು. ಕೆಲವರು ಅವರ ಸಾವಿಗೆ ಪಾರ್ಶ್ವವಾಯು ಕಾರಣ ಎಂದು ಹೇಳಿದ್ದರು. ಆದರೆ ಆ ಊಹಾಪೋಹಗಳಿಗೆಲ್ಲಾ ತೆರೆ ಬಿದ್ದಿದೆ. ಇಲ್ಲಿ ಹೊಸ ರೀತಿಯ ಸಮಸ್ಯೆಯತ್ತ ಗಮನ ಹರಿಸಲಾಗಿದೆ.
ಹೈಪೋನೆಟ್ರೇಮಿಯಾ ಎಂದರೇನು? ಸೋಡಿಯಂ ದೇಹಕ್ಕೆ ಅತ್ಯಗತ್ಯ ಅಂಶವಾಗಿದೆ. ಇದು ಹೃದಯ, ಜೀವಕೋಶಗಳು ಮತ್ತು ಮೂತ್ರಪಿಂಡಗಳ ಕಾರ್ಯವನ್ನು ಸರಾಗವಾಗಿ ನಿರ್ವಹಿಸಲು ಕೆಲಸ ಮಾಡುತ್ತದೆ. ಸೋಡಿಯಂ ನಮ್ಮ ದೇಹದ ಜೀವಕೋಶಗಳ ಸುತ್ತ ಒಂದು ವೃತ್ತವನ್ನು ರೂಪಿಸುತ್ತದೆ. ಇದು ಜೀವಕೋಶಗಳ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
ನಾವು ಅಗತ್ಯಕ್ಕಿಂತ ಹೆಚ್ಚು ನೀರನ್ನು ಸೇವಿಸಿದಾಗ, ಸೋಡಿಯಂ ಹೆಚ್ಚುವರಿ ನೀರಿನಿಂದ ಕರಗುತ್ತದೆ ಮತ್ತು ಮೂತ್ರಪಿಂಡಗಳ ಮೂಲಕ ಹಾದುಹೋಗುತ್ತದೆ. ಇದು ದೀರ್ಘಕಾಲದವರೆಗೆ ಸಂಭವಿಸಿದರೆ, ನಂತರ ದೇಹದಲ್ಲಿ ಸೋಡಿಯಂ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ದೇಹವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ವ್ಯಕ್ತಿಯ ಸಾವಿಗೆ ಕಾರಣವಾಗಬಹುದು.
ಬ್ರೂಸ್ ಲೀ ನಿಜವಾಗಿಯೂ ಹೆಚ್ಚು ನೀರು ಕುಡಿದು ಪ್ರಾಣ ಕಳೆದುಕೊಂಡರೇ? ವಿಜ್ಞಾನಿಗಳ ಪ್ರಕಾರ, ಬ್ರೂಸ್ ಲೀ ಅವರ ಸಾವಿಗೆ ಕಾರಣವಾಗಿರುವುದು ಹೈಪೋನೆಟ್ರೀಮಿಯಾ. ಅಧಿಕ ದ್ರವವನ್ನು ಸೇವಿಸಿದಾಗ ಹೈಪೋನಾಟ್ರೀಮಿಯಾ ಸಮಸ್ಯೆ ಉಂಟಾಗುತ್ತದೆ. ಇದು ದೇಹದಲ್ಲಿ ಕಡಿಮೆ ಸೋಡಿಯಂ ಮಟ್ಟವನ್ನು ಉಂಟುಮಾಡುತ್ತದೆ ಮತ್ತು ಉರಿಯೂತವನ್ನು ಉಂಟುಮಾಡುವ ಜೀವಕೋಶಗಳಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ, ವಿಶೇಷವಾಗಿ ಮೆದುಳಿನ ಜೀವಕೋಶಗಳಲ್ಲಿ. ಬ್ರೂಸ್ ಲೀ ಹೈಪೋನೆಟ್ರೀಮಿಯಾವನ್ನು ಹೊಂದಲು ಹಲವಾರು ಕಾರಣಗಳಿವೆ.
ಏಕೆಂದರೆ ಅವರು ಹೆಚ್ಚು ದ್ರವಗಳನ್ನು ಸೇವಿಸುತ್ತಿದ್ದರು ಮತ್ತು ಕೆಲವು ದ್ರವಗಳು ನಿಮ್ಮ ಬಾಯಾರಿಕೆಯನ್ನು ಹೆಚ್ಚಿಸಬಹುದು. ವಿಜ್ಞಾನಿಗಳ ಪ್ರಕಾರ, ಲೀ ಅವರು ಗಾಂಜಾ ಮತ್ತು ಗಾಂಜಾ ಮಿಶ್ರಿತ ದ್ರವಗಳನ್ನು ಸೇವಿಸಿರಬಹುದು, ಇದು ಹೈಪೋನೆಟ್ರೀಮಿಯಾವನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು ಎಂದು ಸಂಶೋಧಕರು ಹೇಳಿದ್ದಾರೆ.
ಹೆಚ್ಚು ನೀರು ಕುಡಿಯುವುದರಿಂದ ದೇಹಕ್ಕೆ ಹೇಗೆ ಹಾನಿಯಾಗುತ್ತದೆ ಹೈಪೋನೆಟ್ರೀಮಿಯಾವು ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ನೀರನ್ನು ಹೊರಹಾಕುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡಿತು, ಇದು ಬ್ರೂಸ್ ಲೀಯ ಸಾವಿಗೆ ಕಾರಣವಾಯಿತು. ಇದಲ್ಲದೇ ಅತಿಯಾದ ಡ್ರಗ್ಸ್ ಮತ್ತು ಆಲ್ಕೋಹಾಲ್ ಸೇವನೆಯೂ ಕಾರಣವಾಗಿದೆ. ಬ್ರೂಸ್ ಲೀ ಅವರ ಸಾವು ಮೆದುಳಿನ ಊತದಿಂದಾಗಿ ಸಂಭವಿಸಬಹುದು ಎಂದು ವಿಜ್ಞಾನಿಗಳು ತೀರ್ಮಾನಿಸಿದರು.
ಏಕೆಂದರೆ ಈ ಸಮಸ್ಯೆಯು ಕೆಲವೇ ಗಂಟೆಗಳಲ್ಲಿ ಸಾವಿಗೆ ಕಾರಣವಾಗಬಹುದು. ಸೇವಿಸಿದ ಪಾನೀಯದ ಪ್ರಮಾಣವು ದೇಹದಿಂದ ಹೊರಬರದಿದ್ದರೆ, ಅದು ಸಾವಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ