AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಕಂತಲೇ ಕಾಲು ಅಲ್ಲಾಡಿಸುವುದು ದುರಭ್ಯಾಸ ಕಣ್ರೀ! ಅದೊಂದು ರೋಗ ಲಕ್ಷಣ, ಜಾಗ್ರತೆ ವಹಿಸಿ

Restless Legs Syndrome (RLS): ಕಾಲು ಅಲ್ಲಾಡಿಸಬೇಡಿ ಎಂದು ಎಚ್ಚರಿಸುವ ದೊಡ್ಡವರೂ ಸೈಲೆಂಟಾಗಿ ಕಾಲು ತೂಗುತ್ತಾ ಇರುತ್ತಾರೆ! ಈ ಅಭ್ಯಾಸವೇ ಅಂತಹುದು. ಆದರೆ ಕೆಲವರು ಕಾಲುಗಳಿಗೆ ಕಟ್ಟುಹಾಕಿಕೊಂಡವರಂತೆ ಕಟ್ಟುನಿಟ್ಟಾಗಿ, ಕದಲದೇ ಕುಳಿತಿರುತ್ತಾರೆ ಅಲ್ಲವಾ. ಏನೇ ಆಗಲಿ ಇದು ದುರಭ್ಯಾಸ ಅಂತಾ ತಜ್ಞರು ಹೇಳುತ್ತಾರೆ. ಇದೊಂದು ಮಾನಸಿಕ ರೋಗ ಎಂದು ಎಚ್ಚರಿಸುತ್ತಾರೆ. ಹೀಗೆ ಕಾಲು ಅಲ್ಲಾಡಿಸುವ ಚಟವನ್ನು ವೈದ್ಯಕೀಯ ಪರಿಭಾಷೆಯಲ್ಲಿ ರೆಸ್ಟ್‌ಲೆಸ್​​ ಲೆಗ್ಸ್‌ ಸಿಂಡ್ರೋಮ್‌ ಎಂದು ಹೆಸರಿಸುತ್ತಾರೆ.

ಬೇಕಂತಲೇ ಕಾಲು ಅಲ್ಲಾಡಿಸುವುದು ದುರಭ್ಯಾಸ ಕಣ್ರೀ! ಅದೊಂದು ರೋಗ ಲಕ್ಷಣ, ಜಾಗ್ರತೆ ವಹಿಸಿ
ಬೇಕಂತಲೇ ಕಾಲು ಅಲ್ಲಾಡಿಸುವ ಅಭ್ಯಾಸ ನಿಮಗಿದೆಯಾ? ಅದು ದುರಭ್ಯಾಸ ಕಣ್ರೀ!
Follow us
ಸಾಧು ಶ್ರೀನಾಥ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2024 | 4:06 PM

ಬೇಕು ಅಂತಾನೇ, ಕೂತ ಕಡೆಯೇ, ಮಲಗಿದ ಕಡೆಯೇ, ನಿರಂತರವಾಗಿ ಕಾಲುಗಳನ್ನು ಒಂದಾದ ಮೇಲೆ ಮತ್ತೊಂದರಂತೆ ಅಥವಾ ಎರಡನ್ನೂ ಒಟ್ಟಿಗೇ ಫಿಟ್ಸ್​ ಬಂದವರ ಹಾಗೆ ಕಾಲುಗಳನ್ನು ಅಲ್ಲಾಡಿಸುವ ಅಭ್ಯಾಸ ನಿಮಗಿದೆಯಾ? ಅದು ದುರಭ್ಯಾಸ ಕಣ್ರೀ! ಅದೊಂದು ರೋಗ ಲಕ್ಷಣ, ಜಾಗ್ರತೆ ವಹಿಸಿ, ಅದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ. ಪ್ರತಿಯೊಬ್ಬರಿಗೂ ಯಾವುದೋ ಒಂದು ಅಭ್ಯಾಸ/ ದುರಭ್ಯಾಸ (Habit) ಇರುತ್ತದೆ. ಕೆಲವರು ಉಗುರು ಕಚ್ಚುತ್ತಾ ಇರುತ್ತಾರೆ, ಇಲ್ಲಾಂದ್ರೆ ಯಾರದ್ದೋ ಕಿವಿ ಕಚ್ಚುತ್ತಾ ಇರುತ್ತಾರೆ, ಮತ್ತೆ ಕೆಲವರು ಬೆಳರುಗಳಿಂದ ನಟಿಕೆ ಮುರಿಯುತ್ತಿರುತ್ತಾರೆ. ಇಂತಹವುಗಳಲ್ಲಿ ಒಂದು.. ಕಾಲು ಅಲ್ಲಾಡಿಸುವುದು! ತುಂಬಾ ಜನರಿಗೆ ಇಂತಹ ಅಭ್ಯಾಸ ಇರುತ್ತದೆ. ವಿಶೇಷವಾಗಿ ಕುರ್ಚಿಯಲ್ಲಿ ಕುಳಿತಿರುವ ಸಮಯದಲ್ಲಿ ಹೆಚ್ಚಾಗಿ ಮಾಡುತ್ತಾ ಇರುತ್ತಾರೆ. ಕುಳಿತಾಗಲಷ್ಟೇ ಅಲ್ಲ, ಮಲಗಿರುವ ಸಮಯದಲ್ಲೂ ಕಾಲುಗಳನ್ನು ಆಡಿಸುವ ಚಟ ಅನೇಕರಿಗೆ ಇರುತ್ತದೆ (Restless Legs Syndrome -RLS).

ಹಾಗೆಲ್ಲಾ ಕಾಲು ಅಲ್ಲಾಡಿಸಬೇಡಿ ಎಂದು ಎಚ್ಚರಿಸುವ ದೊಡ್ಡವರೂ ಸೈಲೆಂಟಾಗಿ ಕಾಲು ತೂಗುತ್ತಾ ಇರುತ್ತಾರೆ! ಈ ಅಭ್ಯಾಸವೇ ಅಂತಹುದು. ಆದರೆ ಕೆಲವರು ಕಾಲುಗಳಿಗೆ ಕಟ್ಟುಹಾಕಿಕೊಂಡವರಂತೆ ಕಟ್ಟುನಿಟ್ಟಾಗಿ, ಕದಲದೇ ಕುಳಿತಿರುತ್ತಾರೆ ಅಲ್ಲವಾ. ಏನೇ ಆಗಲಿ ಇದು ದುರಭ್ಯಾಸ ಅಂತಾ ತಜ್ಞರು ಹೇಳುತ್ತಾರೆ. ಇದೊಂದು ಮಾನಸಿಕ ರೋಗ ಎಂದು ಎಚ್ಚರಿಸುತ್ತಾರೆ. ಹೀಗೆ ಕಾಲು ಅಲ್ಲಾಡಿಸುವ ಚಟವನ್ನು ವೈದ್ಯಕೀಯ ಪರಿಭಾಷೆಯಲ್ಲಿ ರೆಸ್ಟ್‌ಲೆಸ್​​ ಲೆಗ್ಸ್‌ ಸಿಂಡ್ರೋಮ್‌ ಎಂದು ಹೆಸರಿಸುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ ಸ್ತ್ರೀ, ಪುರುಷರು ಅಂತ ಯಾವುದೇ ವ್ಯತ್ಯಾಸವಿಲ್ಲದೆ, ಎಲ್ಲರಲ್ಲೂ ಈ ಸಮಸ್ಯೆ ಇದೆ ಎಂದು ತಜ್ಞರು ಹೇಳುತ್ತಾರೆ. ಏನು ಹಾಗಾದರೆ ಇದರ ಸಮಸ್ಯೆ ತಿಳಿಯೋಣ ಬನ್ನೀ!

Restless Legs Syndrome (RLS): ಈ 10 ನೈಸರ್ಗಿಕ ಪರಿಹಾರಗಳೊಂದಿಗೆ ರೆಸ್ಟ್‌ಲೆಸ್​ ಲೆಗ್ಸ್​​ ಸಿಂಡ್ರೋಮ್‌ ಗೆ ಗುಡ್​ ಬೈ ಹೇಳಿ (ಮುಂದಿನ ಸಂಚಿಕೆಯಲ್ಲಿ)

ಈ ಸಿಂಡ್ರೋಮ್ ನಿದ್ರಾಹೀನತೆ ಸಮಸ್ಯೆಗಳಿಗೆ ಮುಂಚಿತವಾಗಿ ಕಂಡುಬರುವ ಲಕ್ಷಣಗಳು ಎಂದು ಹೇಳುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲಿ ಇಂತಹ ಲಕ್ಷಣ ಕಂಡುಬರುತ್ತದೆ. ಹೆಚ್ಚು ಕಾಲ ಈ ಸಮಸ್ಯೆಯಿಂದ ಬಳಲಿದರೆ, ಅಲರ್ಟ್ ಆಗಬೇಕೆಂದು ತಜ್ಞರು ಹೇಳುತ್ತಾರೆ. ಇಷ್ಟಕ್ಕೂ ಹೀಗೆ ಕಾಲುಗಳನ್ನು ಅಲ್ಲಾಡಿಸುವ ಆಲೋಚನೆ ಏಕೆ ಬರುತ್ತದೆ ಎಂದು ವೈದ್ಯರು ಲಾಜಿಕ್ ಮೂಲಕ ಹೇಳುತ್ತಾರೆ. ಅದರ ಪ್ರಕಾರ.. ರೆಸ್ಟ್‌ಲೆಸ್​ ಲೆಗ್ಸ್​​ ಸಿಂಡ್ರೋಮ್‌ನಿಂದ ಬಳಲುತ್ತಿರುವವರು ಕುಳಿತಿರುವಾಗ ಕಾಲುಗಳಲ್ಲಿ ಆಕಸ್ಮಿಕ ನೋವು, ಚಟಪಡಿಕೆ ಆರಂಭವಾಗುತ್ತದೆ, ಈ ಸಮಯದಲ್ಲಿ ಕಾಲು ಅಲ್ಲಾಡಿಸಬೆಕು ಎಂದು ಅನಿಸುತ್ತದೆಯಂತೆ! ಕೆಲವರಿಗೆ ಇದರಿಂದ ಏಕಾಗ್ರತೆ ಹಾಳಾಗುತ್ತದೆ. ಕೆಲವರು ಟೆನ್ಶನ್​ ಹೆಚ್ಚಾದಾಗ ಕಾಲು ಅಲ್ಲಾಡಿಸುತ್ತಾ ರಿಲೀಫ್​​ ಆಗುತ್ತಾರೆ.

Also read: ಇದೂ ನನ್ನ ಕಾಲು ಅದೂ ನನ್ನ ಕಾಲು -ಎಂದು ಜಬರದಸ್ತು ಮಾಡ್ತಾ ಕಾಲಿನ ಮೇಲೆ ಕಾಲು ಹಾಕಿಕೊಳ್ಳುವ ಮುನ್ನ, ಅದರಿಂದಾಗುವ ಅಪಾಯಗಳ ಬಗ್ಗೆ ತಿಳಿಯಿರಿ

ಆದರೆ ಇದು ನಿರಂತರ ಅಭ್ಯಾಸವಾಗಿ ಬದಲಾದಾಗ ಸಮಸ್ಯೆ ತೀವ್ರವಾಗುತ್ತದೆ. ಬಿಪಿ, ಶುಗರ್, ಹಾರ್ಟ್‌ಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಏನೇ ಆಗಲಿ ಈ ಸಮಸ್ಯೆಗೆ ಇದಮಿತ್ಥಂ ಎಂದು ನಿರ್ದಿಷ್ಟ ಚಿಕಿತ್ಸೆಯನ್ನು ನಿಖರವಾಗಿ ಹೇಳಲಾಗದು. ಇನ್ನು ಕಬ್ಬಣಾಂಶ ಕಡಿಮೆಯಾಗಿ ಈ ಲೋಪ ಬರುತ್ತದೆ ಎನ್ನುತ್ತಾರೆ ಕೆಲವರು. ಫಿಜಿಯೋ ಥೆರಪಿ ಮುಂತಾದವುಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಜ್ಞರು ಉಚಿತ ಸಲಹೆ ನಿಡುತ್ತಾರೆ.

(ಸೂಚನೆ: ಮೇಲೆ ತಿಳಿಸಿದ ಅಂಶಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಮಾತ್ರ. ಆರೋಗ್ಯದ ವಿಷಯದಲ್ಲಿ ಯಾವಾಗಲೂ ವೈದ್ಯರ ಸೂಚನೆಗಳನ್ನು ಪಾಲಿಸುವುದು ಸಮಂಜಸ)

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ