ಪ್ರತಿ ವರ್ಷ 25ಲಕ್ಷ ಜನರು ಲೈಂಗಿಕ ಸಂಪರ್ಕದಿಂದ ಹರಡುವ ರೋಗಕ್ಕೆ ಬಲಿ
ವಿಶ್ವ ಆರೋಗ್ಯ ಸಂಸ್ಥೆಯ (WHO) ಹೊಸ ವರದಿಯ ಪ್ರಕಾರ ಪ್ರತಿ ವರ್ಷ ಸರಾಸರಿ 2.5 ಮಿಲಿಯನ್ ಅಂದರೆ 25ಲಕ್ಷ ಜನರು HIV, ವೈರಲ್ ಹೆಪಟೈಟಿಸ್ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳಂತಹ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ.
ಅಮೆರಿಕ ಮತ್ತು ಆಫ್ರಿಕಾದಲ್ಲಿ ಸಿಫಿಲಿಸ್ (ಲೈಂಗಿಕವಾಗಿ ಹರಡುವ ಸೋಂಕು) ವೇಗವಾಗಿ ಹರಡುತ್ತಿದೆ ಎಂದು WHO ವರದಿ ತಿಳಿಸಿದೆ. “ಸಿಫಿಲಿಸ್‌ನ ಹೆಚ್ಚುತ್ತಿರುವ ಸಂಭವವು ಪ್ರಮುಖ ಕಳವಳವನ್ನು ಉಂಟುಮಾಡುತ್ತಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಸೂಚಿಸಿರುವಂತೆ ಲೈಂಗಿಕವಾಗಿ ಹರಡುವ ರೋಗಗಳು:
- STIಗಳು (ಸೆಕ್ಷುವಲಿ ಟ್ರಾನ್ಸ್ಮಿಟೆಡ್ ಇಂಫೆಕ್ಷನ್ಸ್) : ನಾಲ್ಕು ಸಾಮಾನ್ಯ STI ಗಳು (ಸಿಫಿಲಿಸ್, ಗೊನೊರಿಯಾ, ಕ್ಲಮೈಡಿಯ ಮತ್ತು ಟ್ರೈಕೊಮೋನಿಯಾಸಿಸ್) ತ್ವರಿತವಾಗಿ ಹರಡುತ್ತಿವೆ, ಇದು ಪ್ರತಿದಿನ 1 ಮಿಲಿಯನ್ ಹೊಸ ಸೋಂಕುಗಳಿಗೆ ಕಾರಣವಾಗುತ್ತದೆ. ಅವೆಲ್ಲವೂ ಚಿಕಿತ್ಸೆಯಿಂದ ಗುಣವಾಗಬಲ್ಲವು ಎಂದು ತಿಳಿದುಬಂದಿದೆ.
- ಸಿಫಿಲಿಸ್: ಸಿಫಿಲಿಸ್ ಒಂದು ಲೈಂಗಿಕವಾಗಿ ಹರಡುವ ಸೋಂಕು. ಟ್ರೆಪೋನೆಮ ಪಾಲಿಡೆಮ್ ಎಂಬ ಬ್ಯಾಕ್ಟೀರಿಯಂ, ಸಿಫಿಲಿಸ್ ಸೋಂಕನ್ನು ಉಂಟುಮಾಡುತ್ತದೆ. COVID-19 ಸಾಂಕ್ರಾಮಿಕ ರೋಗದ ನಂತ ಸಿಫಿಲಿಸ್ ಪ್ರಕರಣಗಳು ಹೆಚ್ಚಾಗಿವೆ ಎಂದು ವರದಿಯಾಗಿದೆ.
- ವೈರಲ್ ಹೆಪಟೈಟಿಸ್: ಚಿಕಿತ್ಸೆಗಳು ಲಭ್ಯವಿದ್ದರೂ, ಹೆಪಟೈಟಿಸ್ ಬಿ ಮತ್ತು ಸಿ ಯ ಹೊಸ ಪ್ರಕರಣಗಳು ಹೆಚ್ಚಾಗಿರುತ್ತವೆ. ವೈರಲ್ ಹೆಪಟೈಟಿಸ್‌ನಿಂದ ಸಾವು ಕೂಡ ಹೆಚ್ಚುತ್ತಿದೆ.
- ಎಚ್ಐವಿ: ಹೊಸ ಎಚ್ಐವಿ ಸೋಂಕುಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದ್ದರೂ, ವೀರ್ಯ ಮತ್ತು ಯೋನಿ ದ್ರವಗಳು, ರಕ್ತ ಮತ್ತು ಎದೆ ಹಾಲಿನಿಂದ ಹರಡುವ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಷ್ಟು ಸುಲಭವಲ್ಲ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ