ಈ ಸಮಯದಲ್ಲಿ, ಏಕಕಾಲದಲ್ಲಿಯೇ ಹಲವಾರು ರೀತಿಯ ರೋಗಗಳು ಹರಡುತ್ತಿವೆ. ಕೆಲವು ಸ್ಥಳಗಳಲ್ಲಿ ಮಂಕಿಪಾಕ್ಸ್ ಭಯವಿದ್ದು, ಇದರ ಜೊತೆಗೆ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತಹ ರೋಗಗಳು ಸಹ ಹೆಚ್ಚುತ್ತಿವೆ. ಪ್ರಸ್ತುತ, ವಿಶ್ವದ ವಿವಿಧ ಭಾಗಗಳಿಂದ ಅನೇಕ ರೀತಿಯ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಇತರ ಕಡೆಗಳಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಇದೆಲ್ಲದರ ನಡುವೆ, ಜನರು ಅದರಲ್ಲಿಯೂ ಹೆಚ್ಚಾಗಿ, ಮಕ್ಕಳಲ್ಲಿ ಕೆಮ್ಮಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀವು ನಾಯಿಕೆಮ್ಮಿನ ಬಗ್ಗೆ ಕೇಳಿರಬಹುದು. ಬ್ಯಾಕ್ಟೀರಿಯಾದ ಸೋಂಕಿನಿಂದಾಗಿ ಇದು ಹರಡುತ್ತಿದೆ, ನಿರಂತರ ಕೆಮ್ಮು, ಉಬ್ಬಸ, ಕೆಮ್ಮಿನ ನಂತರ ವಾಂತಿ ಮತ್ತು ಚಿಕ್ಕ ಮಕ್ಕಳಲ್ಲಿ ನೀಲಿ ಮುಖದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೌಮ್ಯ ಪ್ರಕರಣಗಳಲ್ಲಿ, ಸೀನುವಿಕೆ, ಮೂಗು ಸೋರುವಿಕೆ, ಜ್ವರ ಮತ್ತು ಸೌಮ್ಯ ಕೆಮ್ಮಿನಂತಹ ರೋಗಲಕ್ಷಣಗಳು ಸಹ ಕಂಡುಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಈ ರೀತಿ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ.
ಅನೇಕ ದೇಶಗಳಲ್ಲಿ,ಈ ಕೆಮ್ಮು ಸಾವಿಗೆ ಸಹ ಕಾರಣವಾಗಿದೆ, ಜೊತೆಗೆ ಇದರ ಪ್ರಕರಣಗಳು ವೇಗವಾಗಿ ಹರಡುತ್ತಿವೆ. 2024 ರಲ್ಲಿ, ಇದು 5 ವಾರಗಳ ಮಗು ಮತ್ತು 65 ವರ್ಷದ ವೃದ್ಧ ಸೇರಿದಂತೆ ಇಬ್ಬರ ಸಾವಿಗೆ ಕಾರಣವಾಗಿದೆ. ಕಳೆದ ವರ್ಷದಿಂದ ಈ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಇತ್ತೀಚೆಗೆ ನಾಯಿಕೆಮ್ಮು ಯುರೋಪಿಯನ್ ದೇಶಗಳಲ್ಲಿ ಹರಡುತ್ತಿದೆ. ಅದಲ್ಲದೆ ಆಸ್ಪತ್ರೆ ಸೌಕರ್ಯಗಳು ಇಲ್ಲದ ದೇಶಗಳಲ್ಲಿ ನಾಯಿಕೆಮ್ಮು ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಮಾತ್ರವಲ್ಲ, ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ (ಇಸಿಡಿಸಿ) ಸಹ ಈ ವರ್ಷದ ಆರಂಭದಲ್ಲಿ ಇತರ ಯುರೋಪಿಯನ್ ದೇಶಗಳು ಸಹ ಅದರ ಹೆಚ್ಚುತ್ತಿರುವ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ ಎಂದು ವರದಿ ಮಾಡಿದೆ. ಹೀಗಾಗಿ, ಈ ರೋಗವು ಮುಂಬರುವ ದಿನಗಳಲ್ಲಿ ಮಕ್ಕಳು ಮತ್ತು ವೃದ್ಧರಿಗೆ ಅಪಾಯ ತರಬಹುದು ಎಂದು ಅಂದಾಜಿಸಲಾಗಿದೆ.
ಇದು ಪೆರ್ಟುಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಭಯಾನಕವಾಗಿ ಮೇಲುಸಿರುವ ಬಂದು ಕೆಮ್ಮಿದ ನಂತರ ಹೊರಡುವ ಕೂಗುಸಿರಿನಿಂದಾಗಿ ಈ ರೋಗಕ್ಕೆ ವೂಪಿಂಗ್ ಕಾಫ್ ಅಥವಾ ನಾಯಿಕೆಮ್ಮು ಎಂದು ಕರೆಯಲಾಗುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ಬ್ಯಾಕ್ಟೀರಿಯಾವು ಗಾಳಿಯ ಮೂಲಕ ಹರಡುತ್ತದೆ ಇದರಿಂದ ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕಕ್ಕೆ ಬಂದವರಿಗೆ ಇದು ಹರಡುತ್ತದೆ. ಅಲ್ಲದೆ ಇದು ನ್ಯುಮೋನಿಯಾಕ್ಕೆ ಕಾರಣವಾಗಬಹುದು ಮತ್ತು ರೋಗಿಯ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: ಅಲ್ಝೈಮರ್ ಬರದಂತೆ ತಡೆಯಲು ನಿಮ್ಮ ದೈನಂದಿನ ಅಭ್ಯಾಸದಲ್ಲಿ ಈ ಬದಲಾವಣೆ ಮಾಡಿ
– ತಡೆಗಟ್ಟುವಿಕೆಗೆ ಲಸಿಕೆ ಲಭ್ಯವಿದೆ, ಅದನ್ನು ಮಕ್ಕಳಿಗೆ ನೀಡಬಹುದು.
– ಗರ್ಭಿಣಿಯರು ತಮ್ಮ ಹುಟ್ಟಲಿರುವ ಮಗುವನ್ನು ಈ ಸೋಂಕಿನಿಂದ ರಕ್ಷಿಸಲು ಪೆರ್ಟುಸಿಸ್ ಲಸಿಕೆಯನ್ನು ಸಹ ಪಡೆಯಬೇಕು.
– ಪೋಷಕರು ಸೇರಿದಂತೆ ಸೋಂಕಿತ ಮಕ್ಕಳೊಂದಿಗೆ ಸಂಪರ್ಕದಲ್ಲಿರುವ ವಯಸ್ಕರು ಸಹ ಬೂಸ್ಟರ್ ಡೋಸ್ ಪಡೆಯಬೇಕು.
-ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಮ್ಮುವಾಗ ಸೀನುವಾಗ ಮೂಗು- ಬಾಯಿಗೆ ಮಾಸ್ಕ್ ಅಥವಾ ಬಟ್ಟೆ ಅಡ್ಡ ಹಿಡಿದರೆ ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ