Brain Health: ಅಲ್ಝೈಮರ್ ಬರದಂತೆ ತಡೆಯಲು ನಿಮ್ಮ ದೈನಂದಿನ ಅಭ್ಯಾಸದಲ್ಲಿ ಈ ಬದಲಾವಣೆ ಮಾಡಿ
ಉತ್ತಮ ಆಹಾರದ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಇದಲ್ಲದೆ ನಮ್ಮ ಮೆದುಳಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲವು ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅವು ತುಂಬಾ ಅಪಾಯಕಾರಿಯಾಗುತ್ತವೆ. ಅದರಲ್ಲಿ ಅಲ್ಝೈಮರ್ (Alzheimer’s) ಕಾಯಿಲೆಯೂ ಒಂದು. ಇದರ ಲಕ್ಷಣ ಕಂಡು ಬಂದರೆ ನಿರ್ಲಕ್ಷಿಸಬಾರದು ಎಂದು ತಜ್ಞರು ಹೇಳುತ್ತಾರೆ. ಅಲ್ಝೈಮರ್ ಮೆದುಳಿನ ಕೋಶಗಳ ಮೇಲೆ ಪರಿಣಾಮ ಬೀರುವ ತೀವ್ರವಾದ ನ್ಯೂರೋಡಿಜೆನರೇಟಿವ್ ಕಾಯಿಲೆಯಾಗಿದೆ. ಇದು ಕ್ರಮೇಣ, ಸ್ಮರಣೆ, ಆಲೋಚನಾ ಸಾಮರ್ಥ್ಯ ಮತ್ತು ನಡವಳಿಕೆಯನ್ನು ದುರ್ಬಲಗೊಳಿಸುತ್ತದೆ. ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದರು ಸಹ ನಮ್ಮ ಕೆಲವು ದೈನಂದಿನ ಅಭ್ಯಾಸಗಳು ಅಲ್ಝೈಮರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಜಂಜಾಟ ಮತ್ತು ಒತ್ತಡದ ಜೀವನ, ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪಾದ ಆಹಾರ ಪದ್ಧತಿ ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅದಕ್ಕಾಗಿಯೇ ಉತ್ತಮ ಆಹಾರದ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಇದಲ್ಲದೆ ನಮ್ಮ ಮೆದುಳಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲವು ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅವು ತುಂಬಾ ಅಪಾಯಕಾರಿಯಾಗುತ್ತವೆ. ಅದರಲ್ಲಿ ಅಲ್ಝೈಮರ್ (Alzheimer’s) ಕಾಯಿಲೆಯೂ ಒಂದು. ಇದರ ಲಕ್ಷಣ ಕಂಡು ಬಂದರೆ ನಿರ್ಲಕ್ಷಿಸಬಾರದು ಎಂದು ತಜ್ಞರು ಹೇಳುತ್ತಾರೆ. ಅಲ್ಝೈಮರ್ ಮೆದುಳಿನ ಕೋಶಗಳ ಮೇಲೆ ಪರಿಣಾಮ ಬೀರುವ ತೀವ್ರವಾದ ನ್ಯೂರೋಡಿಜೆನರೇಟಿವ್ ಕಾಯಿಲೆಯಾಗಿದೆ. ಇದು ಕ್ರಮೇಣ, ಸ್ಮರಣೆ, ಆಲೋಚನಾ ಸಾಮರ್ಥ್ಯ ಮತ್ತು ನಡವಳಿಕೆಯನ್ನು ದುರ್ಬಲಗೊಳಿಸುತ್ತದೆ. ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದರು ಸಹ ನಮ್ಮ ಕೆಲವು ದೈನಂದಿನ ಅಭ್ಯಾಸಗಳು ಅಲ್ಝೈಮರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಮೆದುಳಿಗೆ ಹಾನಿ ಮಾಡಿ ಅಲ್ಝೈಮರ್ ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಕೆಲವು ಸಾಮಾನ್ಯ ಅಭ್ಯಾಸಗಳು ಯಾವುದು?
ನಿದ್ರೆಯ ಕೊರತೆ
ಸಾಕಷ್ಟು ನಿದ್ರೆಯ ಕೊರತೆಯು ಮೆದುಳಿಗೆ ಹಾನಿ ಮಾಡುತ್ತದೆ. ನಿಯಮಿತವಾಗಿ ಕಡಿಮೆ ನಿದ್ರೆ ಮಾಡುವುದರಿಂದ ಮೆದುಳಿನಲ್ಲಿ ಜೀವಾಣುಗಳು ಸಂಗ್ರಹವಾಗಬಹುದು. ಇದು ಅಲ್ಝೈಮರ್ ಅಪಾಯವನ್ನು ಹೆಚ್ಚಿಸುತ್ತದೆ.
ಅಧಿಕ ಸಕ್ಕರೆ -ಸಂಸ್ಕರಿಸಿದ ಆಹಾರದ ಸೇವನೆ
ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವು ಮೆದುಳಿಗೆ ಹಾನಿ ಮಾಡುತ್ತದೆ. ಈ ಆಹಾರಗಳ ಅತಿಯಾದ ಸೇವನೆಯು ಮೆದುಳಿನ ಕೋಶಗಳ ನಡುವಿನ ಸಂಪರ್ಕವನ್ನು ದುರ್ಬಲಗೊಳಿಸುತ್ತದೆ. ಇದು ಮೆಮೊರಿ ಮತ್ತು ಮೆದುಳಿನ ಕಾರ್ಯಕ್ಷಮತೆಯ ಕುಸಿತಕ್ಕೆ ಕಾರಣವಾಗಬಹುದು.
ವ್ಯಾಯಾಮದ ಕೊರತೆ
ಮಾನಸಿಕ ವ್ಯಾಯಾಮವಿಲ್ಲದೆ, ಮೆದುಳು ಸಕ್ರಿಯವಾಗಿರುವುದಿಲ್ಲ. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವುದು, ಯಾವಾಗಲೂ ಕ್ರಿಯಾಶೀಲರಾಗಿರುವುದು ಮನಸ್ಸನ್ನು ನಿರಂತರವಾಗಿ ಕಾರ್ಯನಿರತವಾಗಿರಿಸುತ್ತದೆ ಅಲ್ಲದೆ ಇವು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.
ದೈಹಿಕ ಚಟುವಟಿಕೆಯ ಕೊರತೆ
ದೈಹಿಕ ವ್ಯಾಯಾಮವು ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಮುಖ್ಯವಾಗಿದೆ. ವ್ಯಾಯಾಮವು ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ನರಕೋಶದ ಕಾರ್ಯವನ್ನು ಸುಧಾರಿ, ಅಲ್ಝೈಮರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಸೂರ್ಯನ ಬೆಳಕು ಏಕೆ ಮುಖ್ಯ?
ಒಂಟಿತನ
ದೀರ್ಘಕಾಲದ ವರೆಗೆ ಸಾಮಾಜಿಕ ಸಂಬಂಧಗಳಿಂದ ದೂರವಿರುವುದು ಅಲ್ಝೈಮರ್ ಕಾಯಿಲೆಗೆ ಕಾರಣವಾಗಬಹುದು. ಅಲ್ಲದೆ ಒಂಟಿತನವು ಮೆದುಳಿನ ಚಟುವಟಿಕೆಯ ಕುಸಿತಕ್ಕೆ ಕಾರಣವಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಹಾಗಾಗಿ ಈ ಎಲ್ಲಾ ಅಭ್ಯಾಸಗಳಿಂದ ದೂರವಿರುವ ಮೂಲಕ, ನಮ್ಮ ಮೆದುಳನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿಡಲು ಸರಿಯಾದ ಕ್ರಮಗಳನ್ನು ಅನುಸರಿಸುವ ಮೂಲಕ, ಅಲ್ಝೈಮರ್ ನಂತಹ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ