ಗರ್ಭಾಶಯದಲ್ಲಿ ಕಂಡು ಬರುವ ಸೋಂಕನ್ನು ತಡೆಯುವುದು ಹೇಗೆ? ರೋಗಲಕ್ಷಣಗಳು ಹೇಗಿರುತ್ತದೆ?
ಗರ್ಭಾಶಯದ ಸೋಂಕು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಲ್ಲದೆ ಈ ಸಮಸ್ಯೆ ಮಹಿಳೆ ತಾಯಿಯಾಗುವ ಕನಸನ್ನೆ ಕಸಿದುಕೊಂಡು ಬಿಡಬಹುದು. ಏಕೆಂದರೆ ಗರ್ಭಾಶಯದ ಸೋಂಕು ನೇರವಾಗಿ ಬಂಜೆತನಕ್ಕೆ ಕಾರಣವಾಗಬಹುದು ಹಾಗಾಗಿ ಈ ಬಗ್ಗೆ ಆದಷ್ಟು ತಿಳಿದುಕೊಂಡು ಜಾಗೃತರಾಗುವುದು ತುಂಬಾ ಒಳಿತು. ಹಾಗಾದರೆ ಈ ಸೋಂಕು ಹೇಗೆ ಕಂಡುಬರುತ್ತದೆ? ಕಾರಣವೇನು? ರೋಗಲಕ್ಷಣಗಳು ಹೇಗಿರುತ್ತವೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಗರ್ಭಾಶಯದ ಸೋಂಕು ಮಹಿಳೆಯರಲ್ಲಿ ಕಂಡು ಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಈ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು ಅದರಲ್ಲಿಯೂ ಅದರ ಆರಂಭಿಕ ರೋಗಲಕ್ಷಣಗಳು ತಿಳಿದಿದಿದ್ದರೆ ತುಂಬಾ ಒಳ್ಳೆಯದು. ಏಕೆಂದರೆ ಈ ರೋಗವನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ಅದು ಗಂಭೀರ ಸ್ವರೂಪಕ್ಕೆ ಹೋಗಬಹುದು. ಜೊತೆಗೆ ಇದು ಅನೇಕ ರೀತಿಯ ಸಮಸ್ಯೆಗಳಿಗೂ ಕಾರಣವಾಗಬಹುದು. ಅದಲ್ಲದೆ ಈ ಸಮಸ್ಯೆ ಮಹಿಳೆ ತಾಯಿಯಾಗುವ ಕನಸನ್ನೆ ಕಸಿದುಕೊಂಡು ಬಿಡಬಹುದು. ಏಕೆಂದರೆ ಗರ್ಭಾಶಯದ ಸೋಂಕು ನೇರವಾಗಿ ಬಂಜೆತನಕ್ಕೆ ಕಾರಣವಾಗಬಹುದು ಹಾಗಾಗಿ ಈ ಬಗ್ಗೆ ಆದಷ್ಟು ತಿಳಿದುಕೊಂಡು ಜಾಗೃತರಾಗುವುದು ತುಂಬಾ ಒಳಿತು. ಹಾಗಾದರೆ ಈ ಸೋಂಕು ಹೇಗೆ ಕಂಡುಬರುತ್ತದೆ? ಕಾರಣವೇನು? ರೋಗಲಕ್ಷಣಗಳು ಹೇಗಿರುತ್ತವೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ತ್ರೀರೋಗತಜ್ಞೆ ಡಾ. ಚಂಚಲ್ ಶರ್ಮಾ ಅವರು ಹೇಳುವ ಪ್ರಕಾರ, ಗರ್ಭಾಶಯದ ಸೋಂಕು ನಾವು ತಿಳಿದಿರುವಂತೆ ಸಾಮಾನ್ಯ ಸಮಸ್ಯೆ ಅಲ್ಲ. ಅದಲ್ಲದೆ ಇದು ಯಾವ ಸಂದರ್ಭಗಳಲ್ಲಿ ಗಂಭೀರವಾಗುತ್ತದೆ ಎಂಬುದನ್ನು ತಿಳಿಯುವುದು ಕೂಡ ಕಷ್ಟ. ಆದ್ದರಿಂದ, ರೋಗಲಕ್ಷಣಗಳನ್ನು ಸಮಯೋಚಿತವಾಗಿ ಗುರುತಿಸುವುದು ಬಹಳ ಮುಖ್ಯವಾಗುತ್ತದೆ. ಕೆಲವು ಮಹಿಳೆಯರು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಅವರ ಸಮಸ್ಯೆ ಹೆಚ್ಚಾದಾಗ ಆಸ್ಪತ್ರೆಗೆ ಬರುತ್ತಾರೆ. ಅದು ಅವರಿಗೆ ಅಪಾಯಕಾರಿಯಾಗಬಹುದು. ಹಾಗಾಗಿ ಈ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿದ್ದರೆ, ರೋಗಲಕ್ಷಣ ಕಾಣಿಸಿಕೊಳ್ಳುವಾಗ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬಹುದು.
ಗರ್ಭಾಶಯದಲ್ಲಿ ಸೋಂಕು ಉಂಟಾಗುವುದು ಹೇಗೆ?
ದೇಹದಲ್ಲಿ ಅನೇಕ ರೀತಿಯ ಅಪಾಯಕಾರಿ ಬ್ಯಾಕ್ಟೀರಿಯಾಗಳಿವೆ ಎಂದು ಡಾ. ಚಂಚಲ್ ಹೇಳುತ್ತಾರೆ. ಬ್ಯಾಕ್ಟೀರಿಯಾವು ಮಹಿಳೆಯ ಖಾಸಗಿ ಭಾಗದ ಮೂಲಕ ಗರ್ಭಾಶಯಕ್ಕೆ ಹೋದರೆ, ಅದು ಗರ್ಭಾಶಯದಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಈ ಸೋಂಕು ನಂತರ ಬಂಜೆತನಕ್ಕೆ ಕಾರಣವಾಗಬಹುದು. ಆದ್ದರಿಂದ ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಮತ್ತು ಈ ರೋಗಲಕ್ಷಣಗಳು ಗೋಚರಿಸಿದರೆ ವೈದ್ಯರನ್ನು ಸಂಪರ್ಕಿಸಿಸುವುದನ್ನು ಮರೆಯಬೇಡಿ.
ಇದನ್ನೂ ಓದಿ: ಕಿತ್ತಳೆ ಸಿಪ್ಪೆಯನ್ನು ಎಸೆಯುವ ಬದಲು ಈ ರೀತಿ ಉಪಯೋಗಿಸಿ
ರೋಗಲಕ್ಷಣಗಳೇನು?
ಪೆಲ್ವಿಕ್ ಪ್ರದೇಶದಲ್ಲಿ ಊತ: ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಊತವಿದ್ದು ತುಂಬಾ ಸಮಯದವರೆಗೆ ಹಾಗೆಯೇ ಮುಂದುವರಿದರೆ, ಪರೀಕ್ಷೆ ಮಾಡಿಸಿಕೊಳ್ಳಿ.
ಮೂತ್ರ ವಿಸರ್ಜಿಸುವಾಗ ನೋವು ಅಥವಾ ಸುಡುವ ಸಂವೇದನೆ: ಮೂತ್ರ ಮಾಡುವಾಗ ನೋವು ಸಾಮಾನ್ಯವಾಗಿ ಯುಟಿಐನ ಲಕ್ಷಣವಾಗಿದೆ, ಆದರೆ ಇದು ಗರ್ಭಾಶಯದ ಸೋಂಕು ಕೂಡ ಆಗಿರಬಹುದು ಎಚ್ಚರಿಕೆ ವಹಿಸಿ.
ಹೊಟ್ಟೆ ನೋವು: ಹೊಟ್ಟೆಯ ಭಾಗದಲ್ಲಿ ಗ್ಯಾಸ್ ತುಂಬಿದಂತಹ ಅನುಭವ, ಮಲಬದ್ಧತೆ ಅಥವಾ ಯಾವುದೇ ರೀತಿಯ ಯಕೃತ್ತಿನ ಕಾಯಿಲೆ ಇಲ್ಲದಿದ್ದರೂ ಕೂಡ ಹೊಟ್ಟೆ ನೋವು ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು: ಋತುಚಕ್ರದ ಸಮಯದಲ್ಲಿ ಸಾಮಾನ್ಯವಾಗಿರುವುದಕ್ಕಿಂತ ಹೆಚ್ಚು ನೋವು ಕಂಡು ಬಂದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇದು ಗರ್ಭಾಶಯದ ಸೋಂಕಿನ ಲಕ್ಷಣವೂ ಆಗಿರಬಹುದು.
ಸೋಂಕನ್ನು ತಡೆಗಟ್ಟುವುದು ಹೇಗೆ?
-ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ
-ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ
-ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿ
-ಸಮತೋಲಿತ ಆಹಾರವನ್ನು ಸೇವಿಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ