ನಾವು ಸುದ್ದಿ ಮಾಧ್ಯಮಗಳಲ್ಲಿ ಎಷ್ಟೋ ಸಲ ಕೇಳ್ತೇವೆ ಚಿಕ್ಕ ವಯಸ್ಸಿನ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಎಂದು. ಅಷ್ಟೇ ಏಕೆ ನಮ್ಮ ಸುತ್ತಮುತ್ತಲೂ ಇಂತಹ ಅನೇಕ ಸಂಗತಿಗಳನ್ನು ಕೇಳುತ್ತೇವೆ. ಜೊತೆಗೆ ಕೆಲವರಂತೂ ತಪ್ಪದೆ ಜಿಮ್ ಗೆ ಹೋಗುವವರೂ, ದೈಹಿಕ ಕಸರತ್ತು ನಿಯಮಿತವಾಗಿ ಮಾಡುವವರೂ ಮರಣ ಹೊಂದಿದ್ದಾರೆ. ಹಾಗಾದರೆ ಇದರಿಂದ ಬಚಾವಾಗಲು ಬರೀ ಮೂರರಿಂದ ನಾಲ್ಕು ನಿಮಿಷದಲ್ಲಿ ಜಾಗ್ರತೆ ವಹಿಸಿದರೆ ಸಾಕು. ಡಾಕ್ಟರುಗಳ ಪ್ರಕಾರ ಯಾರು ನಸುಕಿನಲ್ಲಿ ಮತ್ತು ನಿದ್ರೆಯಿಂದ ಎದ್ದು ಮೂತ್ರ ವಿಸರ್ಜನೆಗೆ ಹೋಗುತ್ತಾರೆ ಅವರ ಸಲುವಾಗಿ ಅತೀ ಮುಖ್ಯವಾದ ಸೂಚನೆ ಇಲ್ಲಿದೆ.
ರಾತ್ರಿಯಲ್ಲಿ ನಿದ್ರೆಯಿಂದ ಮೂತ್ರ ವಿಸರ್ಜನೆ ಅಥವಾ ಯಾವುದೇ ಕಾರಣಕ್ಕೆ ಆಕಸ್ಮಿಕವಾಗಿ ಎದ್ದಾಗ ಆ ವೇಳೆಯಲ್ಲಿ ನಾವು 3 ರಿಂದ 4 ನಿಮಿಷ ಜಾಗ್ರತೆ ವಹಿಸಿದರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ಶಾರೀರಿಕ ದೃಷ್ಟಿಯಿಂದ ಸದೃಢವಾದ ವ್ಯಕ್ತಿಯೇ ರಾತ್ರಿ ಸಮಯದಲ್ಲಿ ಮರಣ ಹೊಂದಿದ್ದಾನೆ. ಇಂತಹ ವ್ಯಕ್ತಿಗಳ ಬಗ್ಗೆ ನಾವು ಎಷ್ಟೋ ಸಲ ಮಾತಾಡುತ್ತೇವೆ ಅಯ್ಯೋ ಈತನಿಗೆ ನಾನು ನಿನ್ನೆ ಮಾತಾಡಿಸಿದ್ದೇ, ನಿನ್ನೆ ಚೆನ್ನಾಗಿದ್ದ ಒಮ್ಮೆಲೇ ಏನಾಯ್ತು? ಇದು ಸಾಧ್ಯವೇ ಇಲ್ಲ. ಅಂತೆಲ್ಲ ಮಾತಾಡ್ತೇವೆ. ಇದಕ್ಕೆಲ್ಲ ಮುಖ್ಯ ಕಾರಣ ರಾತ್ರಿ ನಿದ್ರೆಯಿಂದ ಮೂತ್ರ ವಿಸರ್ಜನೆಗೆ ಲಗುಬಗೆಯಿಂದ ಎದ್ದು ಓಡುವುದು. ಗಾಢ ನಿದ್ರೆಯಿಂದ ಒಮ್ಮೆಲೇ ಏಳುವದರಿಂದ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ.
ಈಗ ಮೇಲೆ ಹೇಳಿದ ಪ್ರಕಾರ ಈ ಸಮಯದಲ್ಲಿ ನಾಲ್ಕು ನಿಮಿಷ ಬಹಳ ಪ್ರಾಮುಖ್ಯವಾಗುತ್ತದೆ. ಗಾಢ ನಿದ್ರೆಯಿಂದ ತತ್ತತಕ್ಷಣವಾಗಿ ಹಾಸಿಗೆಯಿಂದ ಏಳುವದರಿಂದ ಶರೀರದ ಇಸಿಜಿಯ ಪ್ಯಾಟರ್ನ್ ಒಮ್ಮೆಲೇ ಚೇಂಜ್ ಆಗಿಬಿಡುತ್ತದೆ. ಇದು ಅಪಾಯಕಾರಿ.
ಇದರಿಂದ ಮೆದುಳಿಗೆ ರಕ್ತ ಸಂಚಾರ ಒಮ್ಮೆಲೇ ಹರಿಯುವದಿಲ್ಲ. ಇದರಿಂದ ಹೃದಯಕ್ಕೆ ಆಘಾತವಾಗುವುದು. ಆದ್ದರಿಂದ ಬಚಾವಾಗಲು ನಾಲ್ಕು ನಿಮಿಷದ ಒಳ್ಳೆಯ ಉಪಾಯ ಮತ್ತು ರೂಢಿ ಅನುಸರಿಸಿದರೆ ತುಂಬಾ ಒಳ್ಳೆಯದು.
1) *ನಿದ್ರೆಯಿಂದ ಎಚ್ಚರವಾದಾಗ ಹಾಗೆಯೇ ಒಂದು ನಿಮಿಷ ಹಾಸಿಗೆಯಲ್ಲಿಯೇ ಮಲಗಿರಿ
2) *ಮುಂದಿನ ಅರ್ಧ ನಿಮಿಷ ಅಥವಾ ಒಂದು ನಿಮಿಷ ಹಾಸಿಗೆಯಲ್ಲಿಯೇ ಕುಳಿತುಕೊಳ್ಳಿ
3) *ಆನಂತರ ಮುಂದಿನ ಎರಡು ನಿಮಿಷ ಪಲ್ಲಂಗದ ಮೇಲಿನಿಂದ ಕಾಲುಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿ (ಸಂಗ್ರಹ ಮಾಹಿತಿ)
Published On - 8:16 pm, Mon, 5 September 22