
ಚಹಾ (Tea) ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ!… ಈ ಪಾನೀಯವನ್ನು ಮನಸ್ಸೋ ಇಚ್ಛೆ ಇಷ್ಟಪಡುವವರ ಸಂಖ್ಯೆ ತುಸು ಹೆಚ್ಚಿದೆ. ಕೆಲವರು ತಮ್ಮ ದಿನವನ್ನು ಒಂದು ಕಪ್ ಬಿಸಿ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಬ್ರೆಡ್, ಟೋಸ್ಟ್, ಚಪಾತಿ ಅಥವಾ ಮತ್ತಾವುದಾದರೂ ತಿಂಡಿಯ ಜೊತೆ ಚಹಾ ಕುಡಿದರೆ, ಸಂಜೆಯ ಚಹಾವನ್ನು ಬಿಸ್ಕತ್ತುಗಳ ಜೊತೆ ಸೇವನೆ ಮಾಡುತ್ತಾರೆ. ಕೆಲವರು ಇದನ್ನು ಆರೋಗ್ಯಕರ ಆಯ್ಕೆಯೆಂದು ತಿಳಿದಿರುತ್ತಾರೆ. ಆದರೆ ಈ ಸಂಯೋಜನೆ ತಂಬಾಕಿನಷ್ಟೇ ಅಪಾಯಕಾರಿ ಎಂಬುದು ಕೆಲವರಿಗೆ ತಿಳಿದಿಲ್ಲ. ಹೌದು, ಚಹಾದೊಂದಿಗೆ ಬಿಸ್ಕತ್ತು ತಿನ್ನುವುದು ಆರೋಗ್ಯಕರ ಆಯ್ಕೆಯಲ್ಲ. ನೀವು ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವುದನ್ನು ಇಷ್ಟ ಪಡುತ್ತಿದ್ದರೆ ಈ ಸ್ಟೋರಿಯನ್ನು ತಪ್ಪದೆ ಓದಿ.
ಹೆಚ್ಚಿನವರು ಬಿಸ್ಕತ್ತುಗಳನ್ನು ಚಹಾದಲ್ಲಿ ಮುಳುಗಿಸಿ ತಿನ್ನುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಬಿಸ್ಕತ್ತುಗಳು ಸಂಸ್ಕರಿಸಿದ ಹಿಟ್ಟು, ಅತಿಯಾದ ಸಕ್ಕರೆ, ಉಪ್ಪು ಮತ್ತು ಸಂರಕ್ಷಕಗಳಿಂದ ತುಂಬಿರುತ್ತವೆ. ಹಾಗಾಗಿ ಚಹಾದೊಂದಿಗೆ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯಾಗುತ್ತದೆ. ಅಷ್ಟೇ ಅಲ್ಲ, ಇನ್ನೂ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯ ತಜ್ಞರು ಕೂಡ ಆರೋಗ್ಯದ ದೃಷ್ಟಿಯಿಂದ ಚಹಾ ಮತ್ತು ಬಿಸ್ಕತ್ತುಗಳ ಸಂಯೋಜನೆಯು ತುಂಬಾ ಅಪಾಯಕಾರಿ ಎನ್ನುತ್ತಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಲೆಕ್ಕವಿಲ್ಲದಷ್ಟು ಚಹಾ ಅಥವಾ ಕಾಫಿ ಕುಡಿಯುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ
ಚಹಾದೊಂದಿಗೆ ಏನನ್ನಾದರೂ ತಿನ್ನಬೇಕೆಂದಾಗ ಮಖಾನಾ ಒಳ್ಳೆಯ ಆಯ್ಕೆ. ಪರ್ಯಾಯವಾಗಿ, ಹುರಿದ ಕಡಲೆ, ಕಡಲೆಕಾಯಿ ಅಥವಾ ಇತರ ಆರೋಗ್ಯಕರ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಪ್ರಯತ್ನಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ