
ಇತ್ತೀಚಿನ ದಿನಗಳಲ್ಲಿ, ಕಿಡ್ನಿಸ್ಟೋನ್ (Kidney Stone) ಒಂದು ಪ್ರಮುಖ ಸಮಸ್ಯೆಯಾಗಿದೆ. ಮೂತ್ರಪಿಂಡದಲ್ಲಿ ಸಂಗ್ರಹವಾದ ಖನಿಜಗಳು ಸೇರಿ ಹರಳುಗಳನ್ನು ರೂಪಿಸಿದಾಗ, ಅದನ್ನು ಮೂತ್ರಪಿಂಡದ ಕಲ್ಲು ಅಥವಾ ಕಿಡ್ನಿಸ್ಟೋನ್ ಎಂದು ಕರೆಯಲಾಗುತ್ತದೆ. ಇವು ಮೂತ್ರನಾಳದ ಮೂಲಕ ಹಾದುಹೋಗುವಾಗ, ತೀವ್ರವಾದ ನೋವು, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅದರಲ್ಲಿಯೂ ಈ ರೀತಿಯ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಬಗ್ಗೆ ಡಾ. ಹಿಮಾಂಶು ಶರ್ಮಾ (Dr. Himashu Sharma) ಎಂಬುವವರು ಮಾಹಿತಿ ನೀಡಿದ್ದು, ಈ ರೀತಿಯಾಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.
ನೀರಿನ ಕೊರತೆ: ಚಳಿಗಾಲದಲ್ಲಿ, ಹೆಚ್ಚಿನವರು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಪರಿಣಾಮವಾಗಿ, ಖನಿಜಗಳು ಮತ್ತು ಲವಣಗಳು ಮೂತ್ರದಲ್ಲಿ ಸಂಗ್ರಹವಾಗಿ ಕಿಡ್ನಿಸ್ಟೋನ್ ಸಾಧ್ಯತೆ ಹೆಚ್ಚಾಗುತ್ತದೆ.
ದೈಹಿಕ ಚಟುವಟಿಕೆ: ಚಳಿಗಾಲದಲ್ಲಿ, ವ್ಯಾಯಾಮ, ನಡಿಗೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಪರಿಣಾಮವಾಗಿ, ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವು ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಮೂತ್ರಪಿಂಡಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಕಿಡ್ನಿಸ್ಟೋನ್ ರಚನೆಗೆ ಕಾರಣವಾಗುತ್ತದೆ.
ಕೊಬ್ಬಿನಾಂಶವಿರುವ ಆಹಾರಗಳು: ಚಳಿಗಾಲದಲ್ಲಿ, ಜನರು ಹೆಚ್ಚೆಚ್ಚು ಆಹಾರವನ್ನು ಸೇವಿಸುತ್ತಾರೆ. ಈ ರೀತಿ ಹುರಿದ, ಎಣ್ಣೆಯುಕ್ತ ಮತ್ತು ಉಪ್ಪಿನ ಅಂಶವಿರುವ ಆಹಾರ ಸೇವನೆಯ ಪ್ರಮಾಣ ಹೆಚ್ಚಾದಾಗ ಕಿಡ್ನಿಸ್ಟೋನ್ ಪ್ರಕರಣ ಕಂಡುಬರುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲೇಕೆ ಕ್ಯಾಪ್ಸಿಕಂ ಅನ್ನು ಹೆಚ್ಚೆಚ್ಚು ಸೇವಿಸಬೇಕು? ಇದರ ಹಿಂದಿದೆ ಮಹತ್ವದ ಕಾರಣ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ