AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ 30 ನಿಮಿಷ ಸೈಕ್ಲಿಂಗ್ ಮಾಡಿದ್ರೆ ಸಿಗುತ್ತೆ ಊಹಿಸಲು ಸಾಧ್ಯವಾಗದ ಪ್ರಯೋಜನ!

ಸೈಕ್ಲಿಂಗ್ ಮಾಡುವುದರಿಂದ ಸಿಗುವ ಪ್ರಯೋಜನ ಯಾವುದೇ ಜಿಮ್ ಗಳಿಗೆ ಹೋದರೂ ಸಿಗುವುದಿಲ್ಲ. ಸೈಕ್ಲಿಂಗ್ ಕೇವಲ ಒಂದು ವ್ಯಾಯಾಮವಲ್ಲ, ಇದೊಂದು ಚಿಕಿತ್ಸೆ. ವೈದ್ಯರು ಸಹ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಈ ಆರೋಗ್ಯಕರ ಅಭ್ಯಾಸದಿಂದ ಸಾಕಷ್ಟು ಲಾಭಗಳಿವೆ. ಹೌದು, ಪ್ರತಿದಿನ ಕೇವಲ 30 ನಿಮಿಷ ಸೈಕ್ಲಿಂಗ್ ಮಾಡುವುದರಿಂದ ನೀವು ಊಹಿಸಲೂ ಸಾಧ್ಯವಾಗದಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ, ಸೈಕ್ಲಿಂಗ್ ಮಾಡುವುದರಿಂದ ಸಿಗುವ ಲಾಭಗಳೇನು, ಯಾಕಾಗಿ ಈ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ಪ್ರತಿದಿನ 30 ನಿಮಿಷ ಸೈಕ್ಲಿಂಗ್ ಮಾಡಿದ್ರೆ ಸಿಗುತ್ತೆ ಊಹಿಸಲು ಸಾಧ್ಯವಾಗದ ಪ್ರಯೋಜನ!
ಪ್ರತಿದಿನ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ಸಿಗುವ ಪ್ರಯೋಜನ
ಪ್ರೀತಿ ಭಟ್​, ಗುಣವಂತೆ
|

Updated on: Nov 27, 2025 | 6:50 PM

Share

ಬೆಳಿಗ್ಗೆ ಸೈಕ್ಲಿಂಗ್ ಮಾಡುವುದರಿಂದ ಸಿಗುವ ಪ್ರಯೋಜನ ಯಾವುದೇ ಜಿಮ್ ಗಳಿಗೆ ಹೋದರೂ ಸಿಗುವುದಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಸೈಕ್ಲಿಂಗ್ (Cycling) ಕೇವಲ ವ್ಯಾಯಾಮವಲ್ಲ ಅದೊಂದು ಚಿಕಿತ್ಸೆ ಎಂದು ವೈದ್ಯರು ಹೇಳುತ್ತಾರೆ. ಸೈಕಲ್ ಸವಾರಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಸುಳ್ಳಲ್ಲ. ಈ ಒಂದು ಅಭ್ಯಾಸದಿಂದ ದೇಹದಲ್ಲಿನ ಸ್ನಾಯುಗಳು ಬಲಗೊಳ್ಳುತ್ತವೆ, ಅಡ್ರಿನಾಲಿನ್ ಮಟ್ಟಗಳು ಸುಧಾರಿಸುತ್ತವೆ ಅಷ್ಟೇ ಅಲ್ಲ, ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಹಾಗಾದರೆ, ಪ್ರತಿದಿನ 30 ನಿಮಿಷಗಳ ಕಾಲ ಸೈಕ್ಲಿಂಗ್ (30 Minute Daily Cycling) ಮಾಡುವುದು ದೇಹಕ್ಕೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಪ್ರತಿದಿನ 30 ನಿಮಿಷ ಸೈಕ್ಲಿಂಗ್ ಮಾಡುವುದರಿಂದ ವಾರಕ್ಕೆ 1500 -2000 ಕ್ಯಾಲೊರಿ ಬರ್ನ್ ಆಗುತ್ತದೆ. ಅಷ್ಟೇ ಅಲ್ಲ, ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ, ಜಾಗಿಂಗ್‌ಗೆ ಹೋಲಿಸಿದರೆ ಮೊಣಕಾಲಿನ ಒತ್ತಡ 70% ಕಡಿಮೆ ಇರುತ್ತದೆ, ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆಯಾಗುತ್ತದೆ. ಹಾರ್ವರ್ಡ್ ಸಂಶೋಧನೆಯ ಪ್ರಕಾರ, ಇದು ಮಧುಮೇಹದ ಅಪಾಯವನ್ನು 40% ವರೆಗೆ ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಇದೊಂದು ಉತ್ತಮ ಅಭ್ಯಾಸವಾಗಿದೆ.

ಇದನ್ನೂ ಓದಿ: ಊಟ ಮಾಡಿ ಒಂದು ಸಣ್ಣ ವಾಕ್ ಹೋಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಸೈಕ್ಲಿಂಗ್ ಮಾಡುವವರು ಖಿನ್ನತೆಯಿಂದ ದೂರವಿರುತ್ತಾರೆ!

ನಿಮಗೆ ಗೊತ್ತಾ? ಸೈಕ್ಲಿಂಗ್ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಸೈಕ್ಲಿಂಗ್ ಮಾಡುವಾಗ ಸಂತೋಷದ ಹಾರ್ಮೋನುಗಳಾದ ಎಂಡಾರ್ಫಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ. ಒತ್ತಡ ಮತ್ತು ಆತಂಕವು 50% ರಷ್ಟು ಕಡಿಮೆಯಾಗುತ್ತದೆ. ಅದರಲ್ಲಿಯೂ ಹೊರಾಂಗಣದಲ್ಲಿ ಸೈಕ್ಲಿಂಗ್ ಮಾಡುವುದರಿಂದ ಸಾಕಷ್ಟು ವಿಟಮಿನ್ ಡಿ ಕೂಡ ಸಿಗುತ್ತದೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ, ಮನಸ್ಥಿತಿ ಸುಧಾರಿಸುತ್ತದೆ. ನಿದ್ರೆಯೂ ಚೆನ್ನಾಗಿ ಬರುತ್ತದೆ. ಅಷ್ಟೇ ಅಲ್ಲ, ಮೆದುಳು ಕೂಡ ಚುರುಕಾಗಿ ಕೆಲಸ ಮಾಡುತ್ತದೆ. ಡ್ಯಾನಿಶ್ ಅಧ್ಯಯನದ ಪ್ರಕಾರ, ಪ್ರತಿದಿನ ಸೈಕ್ಲಿಂಗ್ ಮಾಡುವವರು ಖಿನ್ನತೆಯಿಂದ ಬಳಲುವ ಸಾಧ್ಯತೆ 20% ನಷ್ಟು ಕಡಿಮೆ ಎಂಬುದು ಸಾಬೀತು ಪಡಿಸಿದೆ. ಹಾಗಾಗಿ ಸೈಕ್ಲಿಂಗ್‌ನಂತಹ ಲಾಭದಾಯಕ ವ್ಯಾಯಾಮ ಇನ್ನೊಂದಿಲ್ಲ. ಹಾಗಾದರೆ ನೀವು ಕೂಡ ನಾಳೆಯಿಂದಲೇ ಸೈಕ್ಲಿಂಗ್ ಪ್ರಾರಂಭಿಸಿ!, ಆರೋಗ್ಯವಾಗಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ